Crime Reports: CEN Crime PS Mangaluru City
ಪಿರ್ಯಾದಿದಾರರು ಈ ಹಿಂದೆ ಫೇಸ್ ಬುಕ್ ನ ಮಾರ್ಕೆಟಿಂಗ್ ಪೇಜಿನಲ್ಲಿ FANOVA.IN ನಲ್ಲಿ ಕುರ್ತಾ ವೊಂದನ್ನು ಆರ್ಡರ್ ಮಾಡಿದ್ದು ಅದು ದಿನಾಂಕ 04-05-2023 ರಂದು ಮನೆಗೆ ಬಂದಿದ್ದು ಪಿರ್ಯಾದಿದಾರರು ಸದ್ರಿ ಆರ್ಡರ್ ನ್ನು ಪರಿಶೀಲಿಸಿದಲ್ಲಿ ತಾನು ಆರ್ಡರ್ ಮಾಡಿರುವ ಕುರ್ತಾದ ಬದಲು ಬೇರೆ ಯಾವುದೋ ಕುರ್ತಾವನ್ನು ಕಳುಹಿಸಿದ್ದರಿಂದ ಸದ್ರಿ ಆರ್ಡರ್ ನ್ನು ವಾಪಾಸು ಕಳುಹಿಸುವರೇ ಪಿರ್ಯಾದಿದಾರರು ಮಧ್ಯಾಹ್ನ 1.30 ಗಂಟೆಗೆ ಸದ್ರಿ ವೆಬ್ ಸೈಟ್ ನಲ್ಲಿ ನಮೂದಿಸಿರುವ ಕಸ್ಟಮರ್ ಕೇರ್ ನಂಬ್ರ 7735136892ನೇ ದಕ್ಕೆ ಕರೆ ಮಾಡಿದ್ದು ಕರೆಯಲ್ಲಿ ಮಾತನಾಡಿದ ವ್ಯಕ್ತಿಯು ತಾನು ಹಣವನ್ನು ರೀಫಂಡ್ ಮಾಡುತ್ತೇನೆ ನಾವು ಲಿಂಕ್ ಒಂದನ್ನು ಕಳುಹಿಸುತ್ತೇವೆ ಅದನ್ನು ಕ್ಲಿಕ್ ಮಾಡಿ ವಿವರಗಳನ್ನು ಹಾಕಿ ಕಳುಹಿಸುವಂತೆ ಪಿರ್ಯಾದಿದಾರರಲ್ಲಿ ತಿಳಿಸಿದ್ದು ಅಂತೆಯೇ ಪಿರ್ಯಾದಿದಾರರು ಸದ್ರಿ ವ್ಯಕ್ತಿಯು ಕಳುಹಿಸಿದ ಲಿಂಕನ್ನು ಕ್ಲಿಕ್ ಮಾಡಿ ಯು.ಪಿ.ಐ ಐ.ಡಿ ವಿವರವನ್ನು ನೀಡಿದ್ದು ಪಿರ್ಯಾದಿದಾರರ ಖಾತೆಯಿಂದ ರೂ.1/- ಡೆಬಿಟ್ ಆಗಿರುತ್ತದೆ.ಮರುದಿನ ದಿನಾಂಕ 05-05-2023 ರಂದು ಸಂಜೆ ಸಮಯ ಸುಮಾರು 17.00 ಗಂಟೆಗೆ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ನೇ ದರಿಂದ ಹಂತ ಹಂತವಾಗಿ ಒಟ್ಟು ರೂ. 99,980/- ಡೆಬಿಟ್ ಆದ ಬಗ್ಗೆ ಸಂದೇಶ ಬಂದಿರುತ್ತದೆ. ಹೀಗೆ ತನಗೆ ಯಾರೋ ಅಪರಿಚಿತರು ಆರ್ಡರನ್ನು ಹಿಂದಕ್ಕೆ ಪಡೆದು ಹಣವನ್ನು ರೀಫಂಡ್ ಮಾಡುವುದಾಗಿ ನಂಬಿಸಿ ತನ್ನ ಯು.ಪಿ.ಐ ಐ.ಡಿ ವಿವರವನ್ನು ಪಡೆದು ತನ್ನ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ. 99980/- ಹಣವನ್ನು ಬೇರೆ ಬೇರೆ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.
CEN Crime PS Mangaluru City
ಪಿರ್ಯಾದಿ ಕೊಟಾಕ್ ಮಹೀಂದ್ರಾ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ನಂ: ನ್ನು ಉಪಯೋಗಿಸುತ್ತಿದ್ದು ಸದ್ರಿ ಕ್ರೆಡಿಟ್ ಕಾರ್ಡ್ ನಿಂದ ಯಾರೋ ಅಪರಿಚಿತ ವ್ಯಕ್ತಿಗಳು ದಿನಾಂಕ: 15/01/2023 ರಿಂದ ದಿನಾಂಕ 16/01/2023 ರ ಮಧ್ಯಾವದಿಯಲ್ಲಿ ಹಂತ ಹಂತವಾಗಿ ಒಟ್ಟು ರೂ 1,33,713/- ಗಳನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸಮಾಡಿರುತ್ತಾರೆ, ಈ ಬಗ್ಗೆ ಕೊಟಾಕ್ ಮಹೀಂದ್ರ ಬ್ಯಾಂಕ್ ಗೆ ದೂರು ನೀಡಿದ್ದು ಅವರು ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.
CEN Crime PS Mangaluru City
ದಿನಾಂಕ 30-04-2023 ರಂದು ಪಿರ್ಯಾದಿದಾರರಿಗೆ Happen (online dating platform) ನಲ್ಲಿ ನಿಶಾ ಅಗರ್ ವಾಲ್ ಎಂಬವರ ಪರಿಚಯವಾಗಿದ್ದು ಆಕೆಯು ತನ್ನ ವಾಟ್ಸಪ್ ನಂಬ್ರ 9620403891 ನೇ ದನ್ನು ಪಿರ್ಯಾದಿದಾರರಿಗೆ ನೀಡಿದಂತೆ ಪಿರ್ಯಾದಿದಾರರು ಆಕೆಯೊಂದಿಗೆ ವಾಟ್ಸಪ್ ನಲ್ಲಿ ಸಂಪರ್ಕದಲ್ಲಿದ್ದು ಅದೇ ದಿನ ಆಕೆಯು ಪಿರ್ಯಾದಿದಾರರಿಗೆ ವಿಡಿಯೋ ಕಾಲೊಂದನ್ನು ಮಾಡಿದ್ದು ಆ ವೇಳೆ ತನ್ನ ಉಡುಪನ್ನು ಕಳಚಿದ್ದು ಪಿರ್ಯಾದಿದಾರರಿಗು ತನ್ನ ಖಾಸಗಿ ಅಂಗವನ್ನು ತೋರಿಸುವಂತೆ ತಿಳಿಸಿದ್ದು ಪಿರ್ಯಾದಿದಾರರು ನಿಶಾ ಅಗರ್ ವಾಲ್ ಳು ಹೇಳಿದ ಹಾಗೆ ಮಾಡಿರುತ್ತಾರೆ. ನಂತರ ಆಕೆಯು ಪಿರ್ಯಾದಿದಾರರಿಗೆ ಕರೆ ಮಾಡಿ ಸದ್ರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ತಿಳಿಸಿ ಹಣದ ಬೇಡಿಕೆ ಇಟ್ಟು ಅದರಂತೆ ಅದೇ ದಿನ ಪಿರ್ಯಾದಿದಾರರು ರೂ 15000/- ವನ್ನು ತನ್ನ ಬಾಬ್ತು ಹೆಚ್.ಡಿ.ಎಫ್.ಸಿ ಖಾತೆ ಸಂಖ್ಯೆ ನೇ ದರಿಂದ ಪ್ರಥಮವಾಗಿ ವರ್ಗಾಯಿಸಿ ನಂತರ ದಿನಾಂಕ 02-05-2023 ರಂದು 11.00 ಗಂಟೆಗೆ 8638960264ನೇ ನಂಬ್ರದಿಂದ ಕರೆ ಮಾಡಿದ ವ್ಯಕ್ತಿಯು ತನ್ನ ಹೆಸರು ಪ್ರಮೋದ್ ರಾಥೋಡ್ ತಾನು ದೆಹಲಿ ಪೊಲೀಸ್ ಸೈಬರ್ ಸೆಲ್ ನಿಂದ ಮಾತನಾಡುವುದಾಗಿ ತಿಳಿಸಿ ಪಿರ್ಯಾದಿದಾರರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದು ಹಾಗೂ 9465741938ನೇ ನಂಬ್ರದಿಂದ ಕರೆ ಮಾಡಿ ಸಂಜಯ್ ಸಿಂಗ್ ತಾನು ಯೂಟ್ಯೂಬ್ ಕಸ್ಟಮರ್ ಕೇರ್ ನಿಂದ ಮಾತನಾಡುವುದಾಗಿ ಕರೆ ಮಾಡಿ ಯೂ ಟ್ಯೂಬ್ ನಲ್ಲಿರುವ ಪಿರ್ಯಾದಿದಾರರ ಅಶ್ಲೀಲ ವಿಡಿಯೋ ಡಿಲೀಟ್ ಮಾಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು ರೂ. 96,450/- ನೇ ದನ್ನು ತನ್ನ ಹಲವಾರು ಖಾತೆಗಳಿಗೆ ವರ್ಗಾಯಿಸಿರುವುದಾಗಿದೆ. ಈ ರೀತಿ ಡೇಟಿಂಗ್ ಆಪ್ ಮೂಲಕ ತನ್ನನ್ನು ಪರಿಚಯಿಸಿಕೊಂಡು ಪಿರ್ಯಾದಿದಾರರ ಅನುಮತಿಯಿಲ್ಲದೇ ಅವರ ಖಾಸಗಿ ವಿಡಿಯೋ ವನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.
Bajpe PS
ಪಿರ್ಯಾದಿ Karamuthulla Ismail Gafoor ದಿನಾಂಕ: 05-05-2023 ರಂದು ಸ್ಕೂಟರ್ ಕೆಎ 19 ಇಎಲ್ 9682 ನೇದರಲ್ಲಿ ಕೈಕಂಬ ಮಾರ್ಕೆಟ್ ಗೆ ಹೋಗಿ ವಾಪಾಸು ತನ್ನ ಮನೆಯ ಕಡೆಗೆ ಮಂಗಳೂರು- ಮೂಡಬಿದ್ರಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಬೆಳಿಗ್ಗೆ 10-00 ಗಂಟೆಗೆ ಮಂಗಳೂರು ತಾಲೂಕಿನ, ಕಂದಾವರ ಗ್ರಾಮದ ಕೈಕಂಬ ಜಂಕ್ಷನ್ ತಲುಪಿದಾಗ, ಫಿರ್ಯಾದಿದಾರರ ಹಿಂದಿನಿಂದ , ಅಂದರೆ ಪೊಳಲಿ ದ್ವಾರದ ಕಡೆಯಿಂದ ಮೂಡಬಿದ್ರಿ ಕಡೆಗೆ ಟಿಪ್ಪರ್ ಲಾರಿ ನಂ: ಕೆಎ 19 ಡಿ 8294 ನೇದ್ದನ್ನು ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಅವರ ಬಲಕಾಲಿನ ಮೂಳೆ ಮುರಿತಗೊಂಡಿದ್ದು, ಎದೆಗೆ ಗುದ್ದಿದ ಜಖಂ ಆಗಿರುತ್ತದೆ. ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ
Crime Reports: Mangalore West Traffic PS
ದಿನಾಂಕ 27-04-2023 ರಂದು ಪಿರ್ಯಾದಿ VENU MADHURI ಗಂಡ ಶ್ರೀ ವರದರಾಜ ಸುರೇಶ ಕರಣಮ್ ರವರು ಅವರ ಬಾಬ್ತು KA19-Q-1559 ನೇ ಮೋಟಾರು ಸೈಕಲ್ ನಲ್ಲಿ ಸ್ವಂತ ಕೆಲಸಕ್ಕಾಗಿ ಮಂಗಳೂರಿಗೆ ಬಂದವರು ವಾಪಸ್ಸು ಕೊಟ್ಟಾರ ಕ್ರಾಸ್ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-45 ಗಂಟೆಗೆ ಕೊಟ್ಟಾರ ಇನ್ಪೊಸಿಸ್ ಜಂಕ್ಷನ್ ತಲುಪುತ್ತಿದ್ದಂತೆ ಕೊಟ್ಟಾರ ಚೌಕಿ ಕಡೆಯಿಂದ ಉರ್ವ ಸ್ಟೋರ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ KA19-P-2841 ನೇ ಓಮಿನಿ ಕಾರನ್ನು ಅದರ ಚಾಲಕ ಪಾಲರಾಜ್ ರವರು ನಿರ್ಲಕ್ಷ್ಯತನದಿಂದ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಗಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಪ್ರವೀಣ್ ಕುಮಾರ್ ಎಂಬುವವರು ಉಪಚರಿಸಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ದಿನಾಂಕ 04-05-2023 ರಂದು ಪಿರ್ಯಾದಿದಾರರ ಗಂಡ ವೈಧ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿರುತ್ತಾರೆ ಎಂಬಿತ್ಯಾದಿ
Urva PS
ಪಿರ್ಯಾದಿದಾರರಾದ ಭರತ್ ಕುಮಾರ್ ಪ್ರಾಯ 33 ವರ್ಷ ರವರು MFAR ಕನ್ಸ್ಟ್ರಕ್ಷನ್ಸ್ ಕಂಪನಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 13-04-2023 ರಂದು ರಾತ್ರಿ ಸುಮಾರು 09-30 ಗಂಟೆಗೆ ಪಿರ್ಯಾದಿದಾರರ ಮಾಲಕತ್ವದ ಕೆಎ-19-ಇ ಎಲ್-9304 ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ಏಕ್ಟಿವಾ ಹೊಂಡಾ ಸ್ಕೂಟರನ್ನು ಇಂಜಿನ್ ಸೀಜ್ ಆಗಿದ್ದರಿಂದ ಅದನ್ನು ಕೋಡಿಕಲ್ 2ನೇ ಕ್ರಾಸ್ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿ ಹೋಗಿದ್ದು, ದಿನಾಂಕ 15-04-2023 ರಂದು ರಾತ್ರಿ ಸುಮಾರು 10-00 ಗಂಟೆಗೆ ವಾಪಸ್ಸು ಬಂದು ನೋಡಿದಾಗ ಪಿರ್ಯಾದಿದಾರರ ಸ್ಕೂಟರನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಿರ್ಯಾದಿದಾರರು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸ್ಕೂಟರ್ ಪತ್ತೆಯಾಗದ ಕಾರಣ ಕಳವಾದ ಸ್ಕೂಟರ್ ನ್ನು ಪತ್ತೆ ಮಾಡಬೇಕಾಗಿ ಹಾಗೂ ಸ್ಕೂಟರ್ ಅಂದಾಜು ಮೌಲ್ಯ ಸುಮಾರು 20,000/- ರೂಪಾಯಿಗಳಷ್ಟು ಆಗಿರುತ್ತದೆ ಎಂಬಿತ್ಯಾದಿ.
Traffic South Police Station
ಪಿರ್ಯಾದಿದಾರರಾದ ಶ್ರೀಮತಿ ಬೇಬಿ ( 56 ವರ್ಷ)ರವರು ಬೀಡಿ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದು, ದಿನಾಂಕ 05-05-2023 ರಂದು ಬೀಡಿ ಕಟ್ಟನ್ನು ಅರ್ಕುಳದ ಮಸೀದಿ ಹತ್ತಿರ ಇರುವ ಬೀಡಿ ಬ್ರಾಂಚ್ ಗೆ ಕೊಟ್ಟು ವಾಪಸ್ಸು ಅವರ ಮನೆ ಕಡೆಗೆ ನಡೆದುಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 09.00 ಗಂಟೆಗೆ ಅರ್ಕುಳ ಯಶಸ್ವಿ ಹಾಲ್ ಬಳಿ ತಲುಪಿದಾಗ ಮನೆ ಕಡೆಗೆ ಹೋಗಲು ಮಂಗಳೂರು ಕಡೆಯಿಂದ ಬಿ ಸಿ ರೋಡ್ ಕಡೆಗೆ ಹಾದು ಹೋಗಿರುವ ರಾ.ಹೆ 73 ರ ರಸ್ತೆಯನ್ನು ದಾಟಿ ನಂತರ ರಸ್ತೆ ಮದ್ಯದ ಡಿವೈಡರಿನಿಂದ ಬಿ ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾ.ಹೆ 73 ರ ರಸ್ತೆಯನ್ನು ದಾಟುತ್ತಿರುವಾಗ ಅದೇ ರಸ್ತೆಯಲ್ಲಿ ಮೋಟಾರ್ ಸೈಕಲ್ ನಂಬ್ರ KA-21-U-2792 ನೇದನ್ನು ಅದರ ಸವಾರ ಅನನ್ಯ ರಾಮ್ ಭಾರದ್ವಾಜ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಹಣೆಗೆ ರಕ್ತಗಾಯ, ಎಡಗಾಲಿಗೆ ಮೂಳೆ ಮುರಿತದ ಗಾಯ, ಕೆಳ ತುಟಿಗೆ ರಕ್ತಗಾಯ ಹಾಗೂ ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಎಡಗಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ನಂತರ ಅಲ್ಲಿ ಸೇರಿದ ಜನರು ಕಾರೊಂದರಲ್ಲಿ ಇಬ್ಬರನ್ನು ಚಿಕಿತ್ಸೆ ಬಗ್ಗೆ ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ
Ullal PS
ದಿನಾಂಕ.5-5-2023 ರಂದು ಬೆಳಿಗ್ಗೆ 04-00 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ವಿವೇಕಾನಂದ ನಗರದ ತಚ್ಚಣಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಸುಮಾರು 10 ಮಂದಿ ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟುಕೊಂಡು ಉಳಾಯಿ-ಪಿದಾಯಿ ಎಂಬ ನಸೀಬಿನ ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಫಿರ್ಯಾದಿದಾರರಾದ ಸಂತೋಷ್ ಕುಮಾರ್.ಡಿ. ಪಿಎಸ್ಐ ಉಳ್ಳಾಲ ಠಾಣೆ ರವರು ಸಿಬ್ಬಂದಿಯವರ ಜೊತೆಯಲ್ಲಿ ಬೆಳಿಗ್ಗೆ 04-15 ಗಂಟೆಗೆ ಸ್ಥಳಕ್ಕೆ ಹೋಗಿ ಗುಪ್ತವಾಗಿ ವೀಕ್ಷಿಸಿಕೊಂಡು ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಗಳ ಬಗ್ಗೆ ಖಚಿತ ಪಡಿಸಿಕೊಂಡು ಸದ್ರಿ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಸದ್ರಿ ಸ್ಥಳಕ್ಕೆ ಧಾಳಿ ನಡೆಸುವ ಬಗ್ಗೆ ನೀಡಿದ ದೂರನ್ನು ಠಾಣೆಯಲ್ಲಿ ಸ್ವೀಕರಿಸಿಕೊಂಡು ದಾಖಲಿಸಿದ ಪ್ರಕರಣದ ಸಾರಾಂಶ.
Ullal PS
ದಿನಾಂಕ.5-5-2023 ರಂದು ಸಂಜೆ 6-00 ಗಂಟೆಯ ಸಮಯಕ್ಕೆ ಪೆರ್ಮನ್ನೂರು ಗ್ರಾಮದ ಕಲ್ಲಾಪು ಪೆಟ್ರೋಲ್ ಪಂಪ್ ಬಳಿ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೊಹಮ್ಮದ್ ಮುಝಾಮಿಲ್ ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ ಸಂತೋಷಕುಮಾರ್.ಡಿ. ರವರು ಸಿಬ್ಬಂದಿಯವರ ಜೊತೆಯಲ್ಲಿ ಪತ್ತೆ ಮಾಡಿ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿ ಮೊಹಮ್ಮದ್ ಮುಝಾಮಿಲ್ನು Amphetamines ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ (ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್) ನೀಡಿರುವುದರಿಂದ ಮೊಹಮ್ಮದ್ ಮುಝಾಮಿಲ್ನಭ ವಿರುದ್ಧ ದಿನಾಂಕ.5-5-2023 ರಂದು ದಾಖಲಿಸಿದ ಪ್ರಕರಣದ ಸಾರಾಂಶ.