ಅಭಿಪ್ರಾಯ / ಸಲಹೆಗಳು

Crime report in Mangalore North PS

 ದಿನಾಂಕ: 06.06.2023 ರಂದು ಬೆಳಿಗ್ಗೆ 09:30 ಗಂಟೆಗೆ ಮೊಹಮ್ಮದ್ ಸಮದ್ @ ಚಮ್ಮು (48) ವಾಸ: 8-10-786/3(7) ಅಲಾಮಿನ್ ನಗರ ಕರ್ಬಾಲಾ ರೋಡ್ ಕುದ್ರೋಳಿ ಮಂಗಳೂರು ಎಂಬಾತನು  ಗಾಂಜಾ ಸೇವನೆ ಮಾಡಿರುವವನನ್ನು  ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಎ.ಜೆ. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಮೊಹಮ್ಮದ್ ಸಮದ್ @ ಚಮ್ಮು ಎಂಬಾತನು Tetrahydracannabinoid(Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುವ ಮೇರೆಗೆ ಆತನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

Traffic South Police Station

ಪಿರ್ಯಾದಿ ಶ್ರೀ ರಿತೇಶ್ ಡಿಸೋಜ (43 ವರ್ಷ) ರವರು ದಿನಾಂಕ:05-06-2023 ರಂದು ಆಡಂಕುದ್ರು ಬಳಿ ಇರುವ ಗ್ಯಾವಿನ ರವರ ಮನೆಗೆ ಹೋಗಲು ರಾ ಹೆ -66ರ ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 8-00 ಗಂಟೆಗೆ ಮಂಗಳೂರಿನಿಂದ ತೊಕ್ಕೊಟ್ಟಿಗೆ ಹೋಗುವ ರಸ್ತೆಯನ್ನು ದಾಟಿ ಡಿವೈಡರ್ ಬಳಿ ನಿಂತು ವಾಪ್ಪಾಸ್ಸು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿರುವಾಗ ತಲಪಾಡಿ ಕಡೆಯಿಂದ ಬರುತ್ತಿದ್ದ ಕಪ್ಪು ಬಣ್ಣದ ಮೋಟಾರ್ ಸೈಕಲ್ ಸವಾರನು ತೀರ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದರು  ಬೈಕ್ ಸವಾರನು ನಿಲ್ಲಿಸದೇ ಪರಾರಿಯಾಗಿರುತ್ತಾನೆ ಈ ಅಪಘಾತದಿಂದ ಪಿರ್ಯಾದಿದಾರರ ತಲೆಗೆ ಮತ್ತು ಎಡಕಾಲಿಗೆ ತೀವ್ರವಾದ ರಕ್ತಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಸಹರಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ.

Mangalore West Traffic PS

ಪಿರ್ಯಾದಿ B GANESH ದಿನಾಂಕ 04-06-2023 ರಂದು ತಮ್ಮ ಸೈಕಲ್ ನಲ್ಲಿ   ಸ್ವಂತ ಕೆಲಸದ ನಿಮಿತ್ತ ಹಂಪನಕಟ್ಟೆಗೆ   ಹೋಗಿ ವಾಪಾಸ್ಸು ಮನೆ ಕಡೆ ಹೋಗುವರೇ ಹಂಪನಕಟ್ಟೆಯಿಂದಾಗಿ ಕೆ.ಎಸ್ ರಾವ್ ಜಂಕ್ಷನ್ ರಸ್ತೆಯಲ್ಲಿ   ಹೋಗುತ್ತಿರುವ ಸಮಯ ಸುಮಾರು ಮಧ್ಯಾಹ್ನ 04-00 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಸಿಟಿ ಸೆಂಟರ್ ನಿಂದ ಕೆ ಎಸ್ ಆರ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ KA-19-AC-6961 ನಂಬ್ರದ   ಆಟೋ ರಿಕ್ಷಾ  ವೊಂದನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿ.ಎಂ ರಾವ್  ರೋಡ್ ಗೆ ತಿರುಗಿಸುವ ಸಲುವಾಗಿ ಆಟೋ ರಿಕ್ಷಾ ಚಾಲಕನು ಒಮ್ಮೇಲೆ ಬ್ರೇಕ್ ಹಾಕಿದಾಗ ಆಟೋ ರಿಕ್ಷಾವು ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಆಟೋ  ಚಾಲಕನಾದ ಮೊಹಮ್ಮದ್ ಮನ್ಸೂರ್ ರವರಿಗೆ ಸೊಂಟಕ್ಕೆ ಮೂಳೆ ಮುರಿತ ಹಾಗೂ ಎಡಗಾಲಿಗೆ ತರಚಿದ ಗಾಯವಾದವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಹೋಗಿರುತ್ತಾರೆ ಎಂಬಿತ್ಯಾದಿ.

Mangalore East Traffic PS  

ಪಿರ್ಯಾದಿ AKHILESH ದಿನಾಂಕ: 05-06-2023 ರಂದು KA-19-HL-6353 ನಂಬ್ರದ ಸ್ಕೂಟರ್ ನ್ನು  ಸವಾರಿ ಮಾಡಿಕೊಂಡು ಪಂಪ್ ವೆಲ್ ನಂತೂರು ಮೂಲಕ ಪದುವಾ ಜಂಕ್ಷನ್ ದಾಟಿ ಕೆಪಿಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಕದ್ರಿ ದೂರವಾಣಿ ಕೇಂದ್ರದ ಎದುರುಗಡೆ ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ ತಲುಪಿದಾಗ ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟರ್ ನ್ನು ಅದೇ ರಸ್ತೆಯಲ್ಲಿ ಅಂದರೆ ಪದುವಾ ಕಡೆಯಿಂದ ಕೆಪಿಟಿ ಕಡೆಗೆ  KA-14-A-9280  ನಂಬ್ರದ ಗೂಡ್ಸ್ ವಾಹನವನ್ನು ಅದರ ಚಾಲಕ ವಿಶ್ವನಾಥ ಎಂಬಾತನು ಅತೀ ವೇಗವಾಗಿ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಲಬದಿಯಿಂದ ಒವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಸ್ಕೂಟರಿನ ಬಲಬದಿಗೆ ಢಿಕ್ಕಿ ಪಡಿಸಿದ ವೇಳೆ ಸ್ಕೂಟರಿನ ಬಲಬದಿಯ ಹ್ಯಾಂಡಲ್ ಗೂಡ್ಸ್ ವಾಹನದ ಬಾಡಿಗೆ ಸಿಲುಕಿ ಸುಮಾರು 30 ಅಡಿಗಳಷ್ಟು ಮುಂದಕ್ಕೆ ಎಳೆದುಕೊಂಡು ಹೋದ ಪರಿಣಾಮ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪಿರ್ಯಾದಿದಾರರಿಗೆ ಕೈಕಾಲುಗಳಿಗೆ ರಕ್ತ ಗಾಯಗೊಂಡವರನ್ನು ಅಪಘಾತ ಪಡಿಸಿದ ಗೂಡ್ಸ್ ವಾಹನದ ಚಾಲಕ ತನ್ನ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಟೋರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಎಡಕೈ ಮಣಿಗಂಟಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Mangalore East PS

ಪಿರ್ಯಾದಿ Mohammed Nafeez ದಿನಾಂಕ: 04-06-2023 ರಂದು ರಾತ್ರಿ ಸುಮಾರು 11-30 ಗಂಟೆಗೆ ತನ್ನ ರೂಮ್ ನಲ್ಲಿದ್ದಾಗ ಶಹವತ್ ಅಲಿ ಮತ್ತು ಆತನ ಸ್ನೇಹಿತ ಸೇರಿ ಪಿರ್ಯಾದಿದಾರರ ರೂಮ್ ಗೆ ಬಂದು ಪಿರ್ಯಾದಿದಾರರಿಗೆ ಮತ್ತು ಸ್ನೇಹಿತ ಜಾವೇಧ್ ರವರಿಗೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ದಿನಾಂಕ: 05-06-2023 ರಂದು ಪಿರ್ಯಾದಿದಾರರ ಸ್ನೇಹಿತನ ಮೊಬೈಲ್ ಗೆ ಪೋನ್ ಮಾಡಿ ದೂರು ನೀಡಿದರೆ ಕೊಲ್ಲುವುದಾಗಿ ಜೀವ ಬೆದರಿಕೆಯನ್ನು ಹಾಕಿರುವುದಾಗಿದೆ. ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದು ಎಡಕಾಲಿನ ಪಾದಕ್ಕೆ ರಕ್ತಗಾಯ ಉಂಟಾಗಿದ್ದು ಎಂಬಿತ್ಯಾದಿಯಾಗಿರುತ್ತದೆ.

Mangalore North PS

ದಿನಾಂಕ: 05.06.2023 ರಂದು ಬೆಳಿಗ್ಗೆ 11:00 ಗಂಟೆಗೆ ಮಹಮ್ಮದ್ ಇಸ್ಮಾಯಿಲ್ (29) ವಾಸ:#203, ನೂರ್ ಪ್ಲಾಜಾ ಬಿಲ್ಡಿಂಗ್ ಕಂಡತ್ತ್ ಪಳ್ಳಿ ಮಂಡಿ ಕುದ್ರೋಳಿ ಮಂಗಳೂರು  ಎಂಬಾತನು ಗಾಂಜಾ ಸೇವನೆ ಮಾಡಿ ತೂರಾಡಿಕೊಂಡಿರುವವನನ್ನು ವಶಕ್ಕೆ ಪಡೆದು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಪರೀಕ್ಷೆಗೊಳಪಡಿಸಿದ್ದಲ್ಲಿ  ಇಸ್ಮಾಯಿಲ್ ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುವ ಮೇರೆಗೆ ಆತನ ವಿರುದ್ದು    ಎನ್.ಡಿ.ಪಿ.ಎಸ್. ಕಾಯ್ದೆ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

 

CEN Crime PS

ದಿನಾಂಕ: 25-07-2022 ರಂದು ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಪಿರ್ಯಾದಿದಾರರಿಗೆ ಟೆಲಿಗ್ರಾಮ್ ಲಿಂಕ್ ಕಳುಹಿಸಿ   ದಂತೆ ಫಿರ್ಯಾದುದಾರರು ಅಪರಿಚಿತ ವ್ಯಕ್ತಿಯ ಮಾತು ನಂಬಿ  ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ನೀಡಿದ ಟಾಸ್ಕ್ ನಂತೆ ದಿನಾಂಕ 05-08-2022 ರಿಂದ ದಿನಾಂಕ 10-08-2022 ವರೆಗ ಕ್ರಮವಾಗಿ 5,000/-, 11,940/-, 38,295/-, 19,726/- ಮತ್ತು 31709/- ಹಣವನ್ನು ತನ್ನ ಕರ್ನಾಟಕ ಬ್ಯಾಂಕ್ ಖಾತೆ ನಂಬ್ರ  ನೇದರಿಂದ ಕಳುಹಿಸಿರುತ್ತಾರೆ.  ನಂತರ ಫಿರ್ಯಾದುದಾರರ ತನ್ನ ಸಂಬಂಧಿಯವರು ಬೆಂಗಳೂರಿನಲ್ಲಿ ಅಸೌಖ್ಯದಿಂದ ಇದ್ದ ಕಾರಣ ಬೆಂಗಳೂರಿಗೆ ಹೋಗಿ ವಾಸ್ತವ್ಯವಿದ್ದ ಕಾರಣ ದೂರು ನೀಡಲು ವಿಳಂಬವಾಗಿದ್ದು, ದಿನಾಂಕ 04-06-2023 ರಂದು ಸೈಬರ್ ಪೋರ್ಟರ್ ನಲ್ಲಿ ದೂರು ದಾಖಲಿಸಿ ದಿನಾಂಕ 05-06-2023 ರಂದು ತಾನು ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ  ಟೆಲಿಗ್ರಾಂ ಆಪ್ ನ ಲಿಂಕ್  ಮೂಲಕ ಪಾರ್ಟ್ ಟೈಂ ಜಾಬ್ ಗಾಗಿ ಒಟ್ಟು 1,06,670-00 ರೂಪಾಯಿ ಹಣವನ್ನು ವರ್ಗಾಯಿಸಿಕೊಂಡು   ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ .

Mangalore North PS

ದಿನಾಂಕ: 05.06.2023 ರಂದು 12:00 ಗಂಟೆಗೆ ಶ್ರವಣ್ ಕೆ ಶೆಟ್ಟಿ (18) ವಾಸ: ಸ್ವಾಮಿ ಪ್ರಸಾದ್ ಹೌಸ್ ಪ್ರೀತಿ ನಗರ ಶಕ್ತಿ ನಗರ ಮಂಗಳೂರು  ಎಂಬಾತನು ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದವನನ್ನು ವಶಕ್ಕೆ ಪಡೆದು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಲ್ಲಿ  ಶ್ರವಣ್ ಕೆ ಶೆಟ್ಟಿ ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುವ ಮೇರಗೆ ಆತನ ವಿರುದ್ದ  ಎನ್.ಡಿ.ಪಿ.ಎಸ್. ಕಾಯ್ದೆ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

 

Traffic South Police Station

ಪಿರ್ಯಾದಿದಾರರಾದ ರವೀಂದ್ರ (31 ವರ್ಷ) ರವರ ತಮ್ಮನಾದ ತೇಜಸ್ ರವರು ದಿನಾಂಕ:05-06-2023 ರಂದು ಮೋಟರ್ ಸೈಕಲ್ ನಂಬ್ರ KA-19-EX-5153 ನೇದರಲ್ಲಿ ಕೋಟೆಕಾರು ಕಡೆಯಿಂದ ಉಚ್ಚಿಲ ಕಡೆಗೆ ರಾ.ಹೆ-66 ರ ಡಾಮಾರು ರಸ್ತೆಯಲ್ಲಿ ಸವಾರಿಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮುಂಜಾನೆ 00:20 ಗಂಟೆಗೆ ಸಂಕೊಳಿಗೆ ಶ್ರೀ ಕೃಷ್ಣ ಮ್ಯಾರೇಜ್ ಹಾಲ್ ನ ಮುಂಭಾಗ ರಾ.ಹೆ-66 ರಲ್ಲಿ ತಲುಪಿದಾಗ ತೇಜಸ್ ಸವಾರಿ ಮಾಡುತ್ತಿದ್ದ ಮೋಟರ್ ಸೈಕಲ್ ನ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ KL ನೊಂದಣಿ ಸಂಖ್ಯೆಯ ನಂಬರ್ ತಿಳಿಯದ ಅಪರಿಚಿತ ಕಾರೊಂದರ ಚಾಲಕನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ತೇಜಸ್ ರವರು ಸವಾರಿ ಮಾಡುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೆ ತಲಪಾಡಿ ಕಡೆಗೆ ಪರಾರಿಯಾಗಿದ್ದು, ಈ ಅಪಘಾತದಿಂದ ತೇಜಸ್ ರವರು ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ತೇಜಸ್ ರವರನ್ನು ಉಪಚರಿಸಿ ಕಾರೊಂದರಲ್ಲಿ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ,ಎಂಬಿತ್ಯಾದಿ.

Moodabidre PS  

ದಿನಾಂಕ 05-06-2023 ರಂದು ಪಿರ್ಯಾದಿದಾರರಾದ ಹರ್ಷನಂದನ್ ರವರು ಅವರ ಸಹ ಪಾಠಿ ಯಾದ ಕಾರ್ತಿಕ್ ರವರೊಂದಿಗೆ  ಸಂಜೆ ಆಳ್ವಾಸ್ ಕಾಲೇಜಿನಿಂದ ಕಾಲೇಜು ಮುಗಿಸಿ ಮನೆ ಕಡೆಗೆ KA-21-S-7532 ನಂಬ್ರ ಮೋಟಾರು ಸೈಕಲ್ ನಲ್ಲಿ ಕಾರ್ತಿಕ್ ರವರು  ಸವಾರರಾಗಿ ಪಿರ್ಯಾದಿದಾರರು ಸಹ ಸವಾರರಾಗಿ ವಿಧ್ಯಾಗಿರಿಯಿಂದ ಹೊರಟು ಸಂಜೆ 5.05 ಗಂಟೆಯ ಸಮಯಕ್ಕೆ ಮೈಟ್ ಕಾಲೇಜು ಕ್ರಾಸ್ ಬಳಿ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ KA-19-AB-3569 ನಂಬ್ರ ಬಸ್ಸನ್ನು ಅದರ ಚಾಲಕ ಪ್ರಶಾಂತ ಎಂಬಾತನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ಬಲ ಬದಿಗೆ ಚಾಲಾಯಿಸಿಕೊಂಡು ಬಂದು ಬಸ್ಸಿನ ಬಲ ಬದಿಯನ್ನು ಮೋಟಾರು ಸೈಕಲ್ಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಸವಾರ ಕಾರ್ತಿಕ್ ನು ರಸ್ತೆಯ ಬಲ ಬದಿಗೆ ಬಿದ್ದ ಪರಿಣಾಮ ಆತನ ಹೆಲ್ಮೆಟ್ ಕಳಚಿಬಿದ್ದು, ತಲೆಗೆ ಗಂಬೀರವಾದ ಗಾಯ ಮತ್ತು ಹರ್ಷನಂದನ್ ರಸ್ತೆಯ ಎಡ ಬದಿಗೆ ಬಿದ್ದು ಆತನ ಬಲ ಕಾಲಿನ ಮೊಣಗಂಟಿಗೆ ಹಾಗೂ ಬಲ ಭುಜಕ್ಕೆ ಸಮಾನ್ಯ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ಇಬ್ಬರನ್ನು ಕರೆತಂದಿದ್ದು, ಕಾರ್ತಿಕ್ ನನ್ನು ಪರಿಕ್ಷೀಸಿದ ವೈದ್ಯರು ಆತನು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿ ಸಾರಂಶವಾಗಿದೆ.

ಇತ್ತೀಚಿನ ನವೀಕರಣ​ : 21-08-2023 01:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080