ಅಭಿಪ್ರಾಯ / ಸಲಹೆಗಳು

Crime report in Barke PS

ದಿನಾಂಕ: 06-07-2023 ರಂದು 14-15 ಗಂಟೆಗೆ ಮಂಗಳೂರು ನಗರದ ಮಠದಕಣಿ ಸಿಂಡಿಕೇಟ್ ಬ್ಯಾಂಕ್ ಬಳಿ ತ್ರಿಶೂಲ್ ಪ್ರಾಯ 21 ವರ್ಷ ವಾಸ: ಕುಂದ ಹೌಸ್, ಬೊಕ್ಕಪಟ್ಟಣ, ಅಯ್ಯಪ್ಪ ದೇವಸ್ಥಾನದ ಬಳಿ, ಮಂಗಳೂರು ಎಂಬಾತನು ಮಾದಕವಸ್ತು ಗಾಂಜಾ ಸೇವನೆಮಾಡಿರುವವನನ್ನು ವಶಕ್ಕೆ ಪಡೆದು  ಏ.ಜೆ ಆಸ್ಪತ್ರೆಯ ವೈಧ್ಯರಿಮದ  ವೈಧ್ಯಕೀಯ ತಪಾಸಣೆಯನ್ನು ಮಾಡಿದಲ್ಲಿ ವೈದ್ಯರು “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿರುತ್ತಾರೆ. ಸದ್ರಿ ಆಪಾದಿತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆಪಾದಿತನ ವಿರುದ್ದ  ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ

Traffic North Police Station                                

 ಪಿರ್ಯಾದಿ Raghu ದಾರರ ತಾಯಿ ಶ್ರೀಮತಿ ಪಳನಿಯಮ್ಮ ಪ್ರಾಯ 72 ವರ್ಷ ಎಂಬುವರು ದಿನಾಂಕ 05-07-2023 ರಂದು ಮನೆಯಿಂದ ಕಿನ್ನಗೊಳಿ ಕಡೆಗೆ ಹೋಗುವರೇ ಸಂಜೆ ಸುಮಾರು 6-50 ಗಂಟೆಗೆ ಪದ್ಮನೂರಿನ ಶೇರ್ ಇಟ್  ಹೊಟೇಲ್ ಸಮೀಪ ಮುಲ್ಕಿ ಕಿನ್ನಿಗೊಳಿ ರಸ್ತೆಯನ್ನು ದಾಟಲೆಂದು ರಸ್ತೆ ಬದಿಯಲ್ಲಿ ನಿಂತು ಕೊಂಡಿದಾಗ ಕಿನ್ನಿಗೊಳಿ ಕಡೆಯಿಂದ ಬಿಳಿ ಬಣ್ಣದ ದ್ವಿ ಚಕ್ರ ಸ್ಕೂಟರ್ ನ್ನು ಅದರ ಸವಾರ ತೀರ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಾಯಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಎಡಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಾಯವಾಗಿದ್ದು, ಈ ಬಗ್ಗೆ ಕಿನ್ನಿಗೊಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತದೆ. ಎಂಬಿತ್ಯಾದಿ

Traffic South Police Station

 ಫಿರ್ಯಾದಿ MOHAMMAD RAFEEK ABOOBAKKAR ದಾರರು ದಿನಾಂಕ: 05-07-2023 ರಂದು KA-19-P-5906 ನಂಬ್ರದ ಕಾರನ್ನು ಚಲಾಯಿಸಿಕೊಂಡು ಎಲ್ಯಾರ್ ಪದವಿನಿಂದ ಮಂಗಳೂರು ಕಡೆಗೆ ಬರುತ್ತಾ ಸಂಜೆ ಸಮಯ ಸುಮಾರು 7-40 ಗಂಟೆಗೆ ಬರುವ ಮಸೀದಿ ರಸ್ತೆಯ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಫಿರ್ಯಾದಿದಾರರ ಎಡಬದಿಯಿಂದ KA-19-D-4533 ನೇದರ ಆಟೋರಿಕ್ಷಾ ಚಾಲಕ ಅಶ್ರಫ್ ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಓವರ್ ಟೇಕ್ ಮಾಡಲು ಪ್ರಯತ್ನಿಸಿ ಫಿರ್ಯಾದಿದಾರರ ಕಾರಿನ ಎಡಬದಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಎಡಬದಿಯ ಬಂಪರ್, ಹೆಡ್ ಲೈಟ್,  PANDER LINE, STARING RACK, RACK, STARING ASSEMBLY, BEARING, LINKING ROD, ARM, SUSPENSION ಜಖಂಗೊಂಡಿರುತ್ತದೆ. ಎಂಬಿತ್ಯಾದಿ

Mangalore East Traffic PS           

ಪಿರ್ಯಾದಿ MOHAMMED RIZWAN ದಾರರು ದಿನಾಂಕ: 30-06-2023 ರಂದು ರಾತ್ರಿ ತನ್ನ ಬಾಬ್ತು KA-19-ER-3577 ನೇ ಮೋಟಾರು ಸೈಕಲ್ ನಲ್ಲಿ ಸವಾರನಾಗಿ ತನ್ನ ಮಗ ಮೊಹಮ್ಮದ್ ಹಾಸಿಲ್ ಎಂಬಾತನನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಅತ್ತಾವರದಿಂದ ನನ್ನ ಮನೆಯಾದ ನಂದಿಗುಡ್ಡೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಅತ್ತಾವರ ಡಿ ಮಾರ್ಟ್ ನ ಎದುರುಗಡೆ ತಲುಪುತ್ತಿದ್ದಂತೆ ರಾತ್ರಿ ಸಮಯ ಸಮಾರು 10:00 ಗಂಟೆಗೆ ನಂದಿಗುಡ್ಡೆ ಕಡೆಯಿಂದ KA-19-Z-6641 ನೇ ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ನ ಮುಂಭಾಗಕ್ಕೆ ಡಿಕ್ಕಿಪಡಿಸಿದ್ದು,  ಡಿಕ್ಕಿಯ  ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಮಗ ಮೊಹಮ್ಮದ್ ಹಾಸಿಲ್ ರವರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಪಿರ್ಯಾದಿದಾರರ ಮಗನಿಗೆ ಬಲಕೈಯ ಮಣಿಗಂಟಿಗೆ, ಹಿಂಬದಿ ಬೆನ್ನಿಗೆ, ಎಡಕಾಲಿಗೆ ರಕ್ತ ಗಾಯಗಳಾಗಿದ್ದು. ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ಅಪಘಾತಪಡಿಸಿದ ಕಾರಿನ ಚಾಲಕನು ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಆದ್ದರಿಂದ  KA-19-Z-6641 ನಂಬ್ರದ  ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 02:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080