Crime Reported in: Mangalore Traffic West ps
ದಿನಾಂಕ 06-08-2022 ರಂದು ಪಿರ್ಯಾದು DEVIPRASAD ರವರು ಮಂಗಳೂರು ನಗರದ ಲೋವರ್ ಕಾರ್ ಸ್ಟ್ರೀಟ್ ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು 10.27 ಗಂಟೆಗೆ ಲೋವರ್ ಕಾರ್ ಸ್ಟ್ರೀಟ್ ನಿಂದ ಬಾಲಾಜಿ ಜಂಕ್ಷನ್ ಕಡೆಗೆ KA-19-EZ-2258 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ
Crime Reported in: Mangalore Traffic East ps
ಪಿರ್ಯಾದಿದಾರರಾದ ಶಿವಪ್ರಸಾದ್ ಎಂಬುವರು ಮಂಗಳೂರು ನಗರದ ಪಾಂಡೇಶ್ವರ ಫೋರಂ ಮಾಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ; 05/08/2022 ರಂದು ಮಧ್ಯಾಹ್ನ ಊಟದ ಬಳಿಕ ತಮ್ಮ ಮನೆಯಿಂದ ನಡೆದುಕೊಂಡು ಪೋರಂ ಮಾಲ್ ಕಡೆಗೆ ಹೋಗುತ್ತಾ ಸಮಯ ಸುಮಾರು 02-45 ಗಂಟೆಗೆ ಫೋರಂ ಮಾಲ್ ಬಳಿಯ ಸ್ಮಾರ್ಟ್ ಲುಕ್ ಕಟ್ಟಿಂಗ್ ಶಾಪ್ ಎದುರು ಎ.ಬಿ ಶೆಟ್ಟಿ ಜಂಕ್ಷನ್ ಕಡೆಯಿಂದ ಪಾಂಡೇಶ್ವರ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯನ್ನು ದಾಟುತ್ತಿರುವಾಗ ಎ.ಬಿ ಶೆಟ್ಟಿ ಜಂಕ್ಷನ್ ಕಡೆಯಿಂದ ಪಾಂಡೇಶ್ವರದ ಕಡೆಗೆ ಸ್ಕೂಟರ್ ನೊಂದಣಿ ಸಂಖ್ಯೆ: KA-19-HG-0198 ನೇಯದನ್ನು ಅದರ ಸವಾರ ಪುಂಡಲೀಕ ಎಂಬಾತನು ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಬಲ ಕಾಲಿಗೆ ಮೂಳೆ ಮುರಿತದಂತಾಗಿ ನೇತಾಡಿಕೊಂಡಿದ್ದು ಹಾಗೂ ತಲೆಗೆ ತರಚಿದ ಗಾಯವುಂಟಾಗಿದ್ದು ಅಲ್ಲಿದ್ದ ಸಾರ್ವಜನಿಕರು ಹಾಗೂ ಢಿಕ್ಕಿ ಪಡಿಸಿದ ಸ್ಕೂಟರ್ ಸವಾರನು ಸೇರಿಕೊಂಡು ಗಾಯಾಳುವನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.
2) ದಿನಾಂಕ: 05-08-2022 ರಂದು ಪಿರ್ಯಾದಿದಾರರಾದ ಕಾರ್ತಿಕ್ ರವರು ಸಂಜೆ 7-20 ಗಂಟೆಗೆ ತನ್ನೊಂದಿಗೆ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದ ಸ್ನೇಹಿತ ಆತೀಶ್ ರವರು ಜಿಮ್ ಗೆ ಬಾರದೇ ಇರುವುದನ್ನು ಕಂಡು ಆತನ ಮೊಬೈಲ್ ಸಂಖ್ಯೆಗೆ ಕರೆ ಮಾಡಲಾಗಿ ಕರೆಯನ್ನು ಸ್ವೀಕರಿಸಿದ ಎ.ಜೆ ಆಸ್ಪತ್ರೆಯ ಸಿಬ್ಬಂದಿಯವರು ಆತೀಶ್ ರವರಿಗೆ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರಲ್ಲಿ ಅಪಘಾತದ ಬಗ್ಗೆ ವಿಚಾರಿಸಲಾಗಿ ದಿನಾಂಕ: 05-08-2022 ರಂದು ಸಂಜೆ ಸುಮಾರು 6-45 ಗಂಟೆಗೆ ಸ್ನೇಹಿತ ಆತೀಶ್ ರವರು KA-19-HC-3372 ನಂಬ್ರದ ಸ್ಕೂಟರಿನಲ್ಲಿ ಸವಾರನಾಗಿ ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 73ನೇ ಡಾಮಾರು ರಸ್ತೆಯಲ್ಲಿ ಬರುತ್ತಾ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ತಲುಪುದಕ್ಕಿಂತ ಸ್ವಲ್ಪ ಮೊದಲು ಸಿಗುವ ಮರಿಯನ್ ಪ್ಯಾರಡೈಸ್ ಅವೆನ್ಯೂ ಕಮರ್ಷಿಯಲ್ ಕಟ್ಟಡದ ಎದುರುಗಡೆ ತಲುಪುತ್ತಿದ್ದಂತೆ ತೀವ್ರ ಮಳೆಯಿಂದಾಗಿ ರಸ್ತೆಯ ಡಿವೈಡರ್ ಪಕ್ಕದಲ್ಲಿದ್ದ ಹೊಂಡವನ್ನು ಗಮನಿಸದೇ ಕೊನೆಯ ಕ್ಷಣದಲ್ಲಿ ಹೊಂಡವನ್ನು ತಪ್ಪಿಸಲು ಹೋಗಿ ಸ್ಕೂಟರ್ ನಿಯಂತ್ರಿಸಲಾಗದೇ ರಸ್ತೆಯ ಮಧ್ಯದ ಡಿವೈಡರಿಗೆ ತಾಗಿಕೊಂಡು ಹೋಗುತ್ತಾ ಸುಮಾರು 50 ಅಡಿ ದೂರಗಳಷ್ಟು ಮುಂದಕ್ಕೆ ಹೋಗಿ ಡಿವೈಡರ್ ಮೇಲೆ ಸ್ಕೂಟರ್ ಸಮೇತ ಮಗುಚಿ ಬಿದ್ದ ವೇಳೆ ಸ್ನೇಹಿತ ಆತೀಶ್ ನು ಡಿವೈಡರ್ ಮಧ್ಯೆ ಅಳವಡಿಸಿದ ರಿಫ್ಲೆಕ್ಟರ್ ಕಬ್ಬಿಣದ ಕಂಬಕ್ಕೆ ಬಡಿದು ತಲೆಯ ಬಲಬದಿಗೆ ಮತ್ತು ಬಲಕಿವಿಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ರಕ್ತಗಾಯವಾದವರನ್ನು ದಾರಿಯಲ್ಲಿ ಬರುತ್ತಿದ್ದ ಕಾರೊಂದರಲ್ಲಿ ಎ.ಜೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಬಂದಿದ್ದು, ಪರಿಶೀಲಿಸಿದ ವೈದ್ಯರು ಆತೀಶ್ ರವರು ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆಯೇ ಮೃತಪಟ್ಟಿರುವುದಾಗಿ ಸಂಜೆ 7-33 ಗಂಟೆಗೆ ಘೋಷಿಸಿರುವುದಾಗಿ ತಿಳಿದು ಬಂದಿರುವುದಾಗಿದೆ ಎಂಬಿತ್ಯಾದಿ.
Crime Reported in: Mulki PS
“ದಿನಾಂಕ 06-08- 2022 ರಂದು ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಮಾರುತಿ ಪಿ ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಹಳೆಯಂಗಡಿ ಜಂಕ್ಷನ್ ನಲ್ಲಿದ್ದ ಸಮಯ 11.30 ಗಂಟೆಗೆ Original Choice Deluxe whisky ಎಂಬ ಹೆಸರಿನ 90 ಎಂ.ಎಲ್. ಮದ್ಯ ತುಂಬಿದ ಸ್ಯಾಚೆಟ್ ಗಳು -48 ಮತ್ತು Old Tavern Whisky ಎಂಬ ಹೆಸರಿನ 90 ಎಂ.ಎಲ್. ಮದ್ಯ ತುಂಬಿದ ಸ್ಯಾಚೆಟ್ ಗಳು -31 ನ್ನು ಅಕ್ಟಿವಾ ಸ್ಕೂಟರ್ ನಂಬ್ರ KA-19-HB-4249 ನೇದರಲ್ಲಿ ಮೂವರು ಯುವಕರುಗಳು ಮುಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ಮಾರಾಟ ಮಾಡುವ ಸಲುವಾಗಿ ಸ್ಕೂಟರಿನಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in: Mangalore Rural ps
ಪಿರ್ಯಾದಿದಾರ G Muralidhar Pai ರವರು ಆರೋಪಿಗಳಾದ ಪ್ರಶಾಂತ್ ರಸ್ಕಿನಾ ಮತ್ತು ಅವರ ಪತ್ನಿ ಶ್ರೀಮತಿ ಜಾಯ್ಸ್ ರೀನಾ ರಸ್ಕಿನಾರವರು ತಮ್ಮ ಬಾಬ್ತು ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ಕೆ.ಎಂ.ಎಫ್ ಕಂಪನಿಯ ಬಳಿಯಿರುವ ರೆಡ್ ರಾಕ್ ಹೈಟ್ಸ್ ಅಪಾರ್ಟ್ಮೆಂಟಿನಲ್ಲಿರುವ ಪ್ಲಾಟ್ ನ್ನು ಪಿರ್ಯಾದಿದಾರರ ಹೆಸರಿಗೆ ಮಂಗಳೂರು ತಾಲೂಕು ಉಪ ನೋಂದಾವಣಾಧಿಕಾರಿಯವರ ಕಛೇರಿಯಲ್ಲಿ ನೋಂದಾಯಿಸಲ್ಪಟ್ಟ ಕರಾರು ಪತ್ರದಂತೆ ಮಾರಾಟ ಮಾಡಲು ಆರೋಪಿಗಳು ಒಪ್ಪಿಕೊಂಡು ಪ್ಲಾಟ್ ರ ಬಾಬ್ತು ಒಟ್ಟು ರೂ: 4,50,000-00 ನಗದನ್ನು ಪಿರ್ಯಾದಿದಾರರು ತನ್ನ ಬಾಬ್ತು ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ (ಲಿ) ಉಡುಪಿ ಶಾಖೆಯ ಚೆಕ್ ನ್ನು ದಿನಾಂಕ: 19-01-2016 ರಂದು ಆರೋಪಿತೆಯಾದ ಶ್ರೀಮತಿ ಜಾಯ್ಸ್ ರೀನಾ ರಸ್ಕಿನಾರವರಿಗೆ ಪಾವತಿಸಿದ್ದು, ನಂತರ ಸದ್ರಿ ಪ್ಲಾಟನ್ನು ಸೇಲ್ ಡೀಡ್ ನೋಂದಣಿ ಮಾಡಿಕೊಡುವಂತೆ ಆರೋಪಿಗಳ ಬಳಿ ಪಿರ್ಯಾದಿದಾರರು ಪದೇ ಪದೇ ಕೇಳಿಕೊಂಡರೂ ಅವರು ಫಾರ್ಮ್ ನಂ: 09 ಮತ್ತು 11 ರ ನೆಪವೊಡ್ಡಿ ಪಿರ್ಯಾದಿದಾರರು ಆರೋಪಿಗಳಿಂದ ಖರೀದಿಸಿದ ಪ್ಲಾಟನ್ನು ಪಿರ್ಯಾದಿದಾರರಿಗೆ ನೀಡದೇ ಸದ್ರಿ ಪ್ಲಾಟನ್ನು ಶಶಿಕಲಾ ದೇವಾಡಿಗ ಎಂಬವರ ಹೆಸರಿಗೆ ಮಾರಾಟ ಮಾಡಿ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹವೆಸಗಿ ವಂಚಿಸಿ ಮೋಸ ಮಾಡಿರುವುದು ಎಂಬಿತ್ಯಾದಿ.
Crime Reported in: Mangalore Traffic North Ps
ಪಿರ್ಯಾದಿದಾರ Vishwanatha N ದಿನಾಂಕ: 05-08-2022 ರಂದು 5ನೇ ಬ್ಲಾಕ್ ಕೃಷ್ಣಾಪುರದಲ್ಲಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಸಮಯ ರಾತ್ರಿ 9:50 ಗಂಟೆಗೆ KA-21-W-6245ನಂಬ್ರದ ಮೋಟಾರ್ ಸೈಕಲಿನಲ್ಲಿ ಅದರ ಸವಾರನು ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಪಿರ್ಯಾದಿದಾರರು ನಿಲ್ಲಿಸಲು ಸೂಚನೆ ನೀಡಿದರು ಪಿರ್ಯಾದಿದಾರರ ಸೂಚನೆಯನ್ನು ದಿಕ್ಕರಿಸಿ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿದ್ದು ಸದ್ರಿಯವರ ಮೇಲೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
2) ದಿನಾಂಕ 06.08.2022 ರಂದು ಪಿರ್ಯಾದಿದಾರ Vishwanath N ಹೊನ್ನಕಟ್ಟೆ ಬಳಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎದುರು ಹಾಗೂ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಚಾಸಿಸ್ ನಂಬ್ರ ME4JF919FNG079248 ಹಾಗೂ ಇಂಜಿನ್ ನಂಬ್ರ JF91EG6078813 ನಂಬ್ರದ ಹೊಂಡಾ ಆಕ್ಟಿವಾ ಕಂಪೆನಿಗೆ ಸಂಬಂದಿಸಿದ 6ಜಿ ಸ್ಕೂಟರಿನಲ್ಲಿ ಸಯ್ಯದ್ ರವೂಫ್ ಎಂಬಾತನು ಹಿಂಬದಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸದ ಮೊಹಮ್ಮದ್ ಅನ್ಸಾರ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿ ನಿರ್ಲಕ್ಷ್ಯತನ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದಿರುತ್ತಾರೆ ಎಂಬಿತ್ಯಾದಿ.
3) ಪಿರ್ಯಾದಿದಾರ Vishwanath N ರವರು ಮುಕ್ಕ ಜಂಕ್ಷನಿನಲ್ಲಿ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 09.25 ಗಂಟೆಗೆ KL-14-D-1815 ನಂಬ್ರದ YAMAHA RX ಮೋಟಾರ್ ಸೈಕಲಿನಲ್ಲಿ ಅದರ ಸವಾರನು ಹಿಂಬದಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು NITK ಕಡೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಪಿರ್ಯಾದಿದಾರರು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಪಿರ್ಯಾದಿದಾರರ ಸೂಚನೆಯನ್ನು ಧಿಕ್ಕರಿಸಿ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿದ್ದು ಸದ್ರಿವಯರ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
4) ಪಿರ್ಯಾದಿದಾರ Vishwanath N ದಿನಾಂಕ: 06-08-2022 ರಂದು ಮುಕ್ಕ ಜಂಕ್ಷನಿನಲ್ಲಿ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 10.06 ಗಂಟೆಗೆ KL-13-Y-6622 ನಂಬ್ರದ HONDA CBZ ಮೋಟಾರ್ ಸೈಕಲಿನಲ್ಲಿ ಅದರ ಸವಾರನು ಹಿಂಬದಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು NITK ಕಡೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಪಿರ್ಯಾದಿದಾರರು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದರೂ ಪಿರ್ಯಾದಿದಾರರ ಸೂಚನೆಯನ್ನು ದಿಕ್ಕರಿಸಿ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿದ್ದು ಸದ್ರಿವಯರ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
Crime Reported in: Mangalore Traffic south Ps
ದಿನಾಂಕ:03-08-2022 ರಂದು ಪಿರ್ಯಾದಿದಾರ RANGANATH ಅವರ ಸ್ನೇಹಿತನ ಯಮನಪ್ಪನವರ ಬಾಬ್ತು ಸ್ಕೂಟರ್ ನಂಬ್ರ KA-19-EY-5278 ನೇದರಲ್ಲಿ ಪಿರ್ಯಾದಿದಾರರು ಸವಾರರಾಗಿ ಅವರ ಸ್ನೇಹಿತ ಯಮನಪ್ಪನವರನ್ನು ಸಹ ಸವಾರರನ್ನಾಗಿ ಕುಳ್ಳರಿಸಿಕೊಂಡು ಪದವಿನಂಗಡಿಯಿಂದ ವಾಮಂಜೂರು ಕಡೆಗೆ ರಾ.ಹೆ-169 ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 11:45 ಗಂಟೆಗೆ ವಾಮಂಜೂರು ಜಂಕ್ಷನ್ ಬಳಿಯ ವಿದ್ಯಾಜ್ಯೋತಿ ಶಾಲೆಯ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮಂಗಳ ಜ್ಯೋತಿ ಕಡೆಯಿಂದ ವಾಮಂಜೂರು ಕಡೆಗೆ ಬರುತ್ತಿದ್ದ ಬಸ್ಸು ನಂಬ್ರ KA-19-AA-0679 ನೇದರ ಚಾಲಕ ಸಲ್ಮಾನ್ ಎಂಬಾತನು ಓವರ್ ಟೇಕ್ ಮಾಡುವ ಬರದಲ್ಲಿ ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಗೈ ತೋಳಿಗೆ ಮೂಳೆ ಮುರಿತದ ಗಾಯ ಹಾಗೂ ಬಲಗಾಲಿಗೆ ತರಚಿದ ರಕ್ತಗಾಯವಾಗಿದ್ದು ಹಾಗೂ ಸಹಸವಾರರಿಗೆ ಬಲಗಾಲಿನ ಪಾದಕ್ಕೆ ಗುದ್ದಿದ ರೀತಿಯ ಗಾಯವಾಗಿರುತ್ತದೆ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಅಪಘಾತ ಪಡಿಸಿದ ಬಸ್ಸಿನ ಚಾಲಕನು ಉಪಚರಿಸಿ ಅದೇ ಬಸ್ಸಿನಲ್ಲಿ ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ತಂದು ದಾಖಲಿಸಿದ್ದು ಅಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಹೋಗಿದ್ದು ನಂತರ ಪಿರ್ಯಾದಿದಾರರಿಗೆ ತೀವ್ರತರದ ನೋವು ಕಾಣಿಸಿದ ಪರಿಣಾಮ ದಿನಾಂಕ:05-08-2022 ರಂದು ಸುರತ್ಕಲ್ ಅಥರ್ವ ಆರ್ಥೋ ಕೇರ್ ಆಸ್ಪತ್ರೆಗೆ ಬಂದು ದಾಖಲಾಗಿರುವುದಾಗಿದೆ,ಎಂಬಿತ್ಯಾದಿ
2) ದಿನಾಂಕ 06.08.2022 ರಂದು ಪಿರ್ಯಾದಿದಾರ SANTHOSH PADIL ಸಮವಸ್ತ್ರದಲ್ಲಿ ಸಮಯ ಸುಮಾರು ಬೆಳಿಗ್ಗೆ 07-43 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ಬಳಿಯ ವೈನ್ & ಸ್ಪಿರಿಟ್ ಅಂಗಡಿ ಎದುರು ಕರ್ತವ್ಯದಲ್ಲಿರುವಾಗ ತೊಕ್ಕೊಟ್ಟು ಬಸ್ಸ್ ಸ್ಟ್ಯಾಂಡ್ ಕಡೆಯಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಗೆ ಸ್ಕೂಟರ್ ನಂಬ್ರ KA-19-HD-1121 ನೇದನ್ನು ಅದರ ಸವಾರ ಮೊಬೈಲ್ ಪೋನಿನಲ್ಲಿ ಮಾತನಾಡುತ್ತಾ ಒಂದು ಕೈಯಲ್ಲಿ ಸ್ಕೂಟರ್ ಹಿಡಿದುಕೊಂಡು ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿರುವುದನ್ನು ಗಮನಿಸಿದ ಪಿರ್ಯಾದಿದಾರರು ಸ್ಕೂಟರ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಸ್ಕೂಟರ್ ನಿಲ್ಲಿಸದೇ ಹೋಗಿದ್ದು ಸದ್ರಿವಯರ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
3) ದಿನಾಂಕ 06.08.2022 ರಂದು ಪಿರ್ಯಾದಿದಾರ SANTHOSH PADIL ಸಮವಸ್ತ್ರದಲ್ಲಿ ಸಮಯ ಸುಮಾರು ಬೆಳಿಗ್ಗೆ 07-47 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ಬಳಿಯ ವೈನ್ & ಸ್ಪಿರಿಟ್ ಅಂಗಡಿ ಎದುರು ಕರ್ತವ್ಯದಲ್ಲಿರುವಾಗ ತೊಕ್ಕೊಟ್ಟು ಬಸ್ಸ್ ಸ್ಟ್ಯಾಂಡ್ ಕಡೆಯಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಗೆ ಸ್ಕೂಟರ್ ನಂಬ್ರ KA-19-HC-7135 ನೇದನ್ನು ಅದರ ಸವಾರ ಮೊಬೈಲ್ ಪೋನಿನಲ್ಲಿ ಮಾತನಾಡುತ್ತಾ ಒಂದು ಕೈಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದು, ಇದನ್ನು ಗಮನಿಸಿದ ಪಿರ್ಯಾದಿದಾರರು ಸ್ಕೂಟರ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಸ್ಕೂಟರ್ ನ್ನು ನಿಲ್ಲಿಸದೆ ಹೋಗಿದ್ದು ಸದ್ರಿವಯರ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
4) ದಿನಾಂಕ 06.08.2022 ರಂದು ಪಿರ್ಯಾದಿದಾರ SANTHOSH PADIL ಸಮವಸ್ತ್ರದಲ್ಲಿ ಸಮಯ ಸುಮಾರು ಬೆಳಿಗ್ಗೆ 08.03 ಗಂಟೆಗೆ ಉಳ್ಳಾಲಬೈಲ್ ಬಳಿ ಕರ್ತವ್ಯದಲ್ಲಿರುವಾಗ ಮಾಸ್ತಿಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಮೋಟಾರ್ ಸೈಕಲ್ ನಂಬ್ರ KA-19-EN-7587 ನೇದನ್ನು ಅದರ ಸವಾರ ಮೋಟಾರ್ ಸೈಕಲಿಗೆ ಸೈಡ್ ಮೀರರ್ ಹಾಕದೇ ಸವಾರ ಮತ್ತು ಸಹಸವಾರರಿಬ್ಬರೂ ತಲೆಗೆ ಹೆಲ್ಮೆಟ್ ಧರಿಸದೇ , ಸವಾರ ಮೊಬೈಲ್ ಪೋನಿನಲ್ಲಿ ಮಾತನಾಡುತ್ತಾ ಒಂದು ಕೈಯಲ್ಲಿ ಮೋಟಾರ್ ಸೈಕಲನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿದ್ದು ಸದ್ರಿವಯರ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
Crime Reported in : Bajpe PS
ಪಿರ್ಯಾದಿದಾರ Mohammed Zhaid ಅಕ್ಕ ಶ್ರೀಮತಿ ಸೌದ ಅವರ ಮಗನಾದ ಮಹಮ್ಮದ್ ಆದೀಶ್ ನು ದಿನಾಂಕ 03.08.2022 ರಂದು ಮದ್ಯಾಹ್ನ 15.20 ಗಂಟೆಗೆ ತನ್ನ ಸ್ಕೂಟರ್ ನಂ KA19ET1466 ನೇ ದರಲ್ಲಿ ಸಹ ಸವಾರನಾಗಿ ರಾಯಿಝ್ ಎಂಬುವನ್ನು ಕೂರಿಸಿಕೊಂಡು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಪೊಳಲಿ ದ್ವಾರದ ಬಳಿ ತಲುಪುತಿದ್ದಂತೆ ಪೊಳಲಿ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ನಂಬ್ರ KA 33 7254 ನೇದರ ಚಾಲಕನಾದ ಸೂರಜ್ ಎಂಬಾತನು ಟಿಪ್ಪರ್ ನ್ನು NH 169 ರಸ್ತೆಯಲ್ಲಿ ಒಮ್ಮೇಲೆ ಕೈಕಂಬ ಕಡೆಗೆ ಚಾಲಾಯಿಸಿದ್ದರಿಂದ ಟಿಪ್ಪರ್ ಲಾರಿ ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸಮೇತ ಪಿರ್ಯಾದಿದಾರರ ಅಕ್ಕನ ಮಗ ಮತ್ತು ಸಹ ಸವಾರ ರಸ್ತೆಗೆ ಬಿದ್ದರಿಂದ ಪಿರ್ಯಾದಿದಾರರ ಅಕ್ಕನ ಮಗನಿಗೆ ತಲೆಗೆ ,ಬಲಕಾಲಿಗೆ ,ಕೈಗಳಿಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿರುತ್ತದೆ.ಹಾಗೂ ಸಹ ಸವಾರ ರಾಯಿಝ್ ನ ಮುಖಕ್ಕೂ ರಕ್ತಗಾಯವಾಗಿರುತ್ತದೆ ಎಂಬಿತ್ಯಾದಿ