ಅಭಿಪ್ರಾಯ / ಸಲಹೆಗಳು

Crime Report in Urva PS

ದಿನಾಂಕ: 06-09-2023 ರಂದು ಬೆಳಿಗ್ಗೆ 04.15 ರ ವೇಳೆಗೆ ಕುಂಟಿಕಾನ ಜಂಕ್ಷನ್ ಬಳಿ ಮೊಹಮ್ಮದ್ ಅಫ್ಜಲ್ (22), ವಾಸ: ಕುನಿಲ್ ಫ್ಲಾಟ್, ಫ್ಲಾಟ್ ನಂಬ್ರ: 304, ನೆಲ್ಲಿಕಾಯಿ ರಸ್ತೆ, ಬಂದರ್, ಮಂಗಳೂರು  ಎಂಬಾತನು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಸಂಶಯಗೊಂಡು  ವಿಚಾರಿಸಿದಲ್ಲಿ  ಮೆತಂಫೆಟಮಿನ್ ನನ್ನು ಮೂಗಿನ ಮೂಲಕ ಸೇರಿಸಿರುವುದಾಗಿ ಒಪ್ಪಿಕೊಂಡ ಮೇರೆಗೆ ಆತನನ್ನು  ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಖೇನ ಪರೀಕ್ಷೆಗೊಳಪಡಿಸಿದಲ್ಲಿ   ವೈಧ್ಯರು ಆತನು ಮಾದಕ ದ್ರವ್ಯ Methamphetamine ಸೇವನೆ ಮಾಡಿರುವುದಾಗಿ ದೃಢಪತ್ರವನ್ನು ನೀಡಿದ್ದು ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Traffic North Police Station                             

ಪಿರ್ಯಾದಿ Vidhyadhra Bhaktha ದಾರರು ದಿನಾಂಕ 05.09.2023 ರಂದು ತನ್ನ  ಬಾಬ್ತು ಕಾರು ನಂಬ್ರ KA-19MN-5600 ನೇದರಲ್ಲಿ ಮನೆಯವರನ್ನು ಕುಳ್ಳಿರಿಸಿಕೊಂಡು ಶಿರಾಳಿ ಬಟ್ಕಳ ದಿಂದ ಮನೆಯ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ರಾತ್ರಿ ಸಮಯ ಸುಮಾರು 11:15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು NH 66,ಜೋಕಟ್ಟೆ ಕ್ರಾಸ್ ಬಳಿ ತಲುಪುತ್ತಿದ್ದಂತೆಯೇ ಹಿಂದುಗಡೆಯಿಂದ  ಕಾರ್ ನಂಬ್ರ KA-19MK-4502  ನೇಯದನ್ನು ಅದರ ಚಾಲಕ ಆರೋಪಿ ಪುನೀತ್ ಎಂಬವರು ದುಡುಕುತನ, ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಾಲಯಿಸಿಕೊಂಡು ಬಂದು ಹಿಂಬದಿಗೆ ಢಿಕ್ಕಿ ಪಡಿಸಿದರಿಂದ ಪಿರ್ಯಾದಿದಾರರ ಕಾರು ರಸ್ತೆಯ ಬಲ ಬದಿಯ ಮಣ್ಣು ದಿನ್ನೆಗೆ ಗುದ್ದಿದ್ದು ,ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ ಕಾರು ಸುಮಾರು 100 ಮೀಟರ್ ಮುಂದಕ್ಕೆ ಚಲಿಸಿ NH 66 ರ ರಸ್ತೆಯ ಮಧ್ಯದ ಡಿವೈಡರ್ನಲ್ಲಿ ಅಳವಡಿಸಿದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ,ಮುಂದಕ್ಕೆ ಚಲಿಸಿ ಪಣಂಬೂರು ಕಡೆಯಿಂದ ಬೈಕಂಪಾಡಿ ಕಡೆಗೆ ಬರುವ NH 66 ರಸ್ತೆಯಲ್ಲಿ  ಮಗುಚಿ ಬಿದ್ದಿರುತ್ತದೆ,ಈ ಅಪಘಾತದಿಂದ ಪಿರ್ಯಾದಿದಾರರ ಹೆಂಡತಿ ವಿದ್ಯಾಲಕ್ಷಿ ಭಕ್ತ ರವರಿಗೆ ಎದೆಗೆ ಹಾಗೂ ಬೆನ್ನಿಗೆ ಗುದ್ದಿದ ಗಾಯ ಹಾಗೂ ತಲೆಯ ಹಿಂಬದಿ ಗುದ್ದಿದ ರೀತಿ ನೋವಾಗಿರುತ್ತದೆ ಹಾಗೂ ಪಿರ್ಯಾದಿದಾರರ ಮಗಳು ವೈಶಾಲಿ ಭಕ್ತಲಿಗೆ ಹೊಟ್ಟೆಗೆ ಗುದ್ದಿದ ರೀತಿಯ ನೋವಾಗಿರುತ್ತದೆ,ಅಪಘಾತ ಪಡಿಸಿದ ಕಾರಿನಲ್ಲಿದ ಅಜಯ್ ಎಂಬುವರಿಗೆ ತಲೆಯ ಮೇಲೆ (ನೆತ್ತಿ) ಗಂಭೀರ ಸ್ವರೂಪದ ರಕ್ತ ಗಾಯ ಹಾಗೂ ಹೊಟ್ಟೆಗೆ ಗುದ್ದಿದ ರೀತಿಯ ನೋವಾಗಿರುತ್ತದೆ ಹಾಗೂ ಸಂತೋಷ ಎಂಬುವರಿಗೆ ಕುತ್ತಿಗೆ ಹಿಂಬಾಗ ಮೂಳೆ ಮುರಿತದ ಗಾಯ,ಎರಡು ಕಣ್ಣಿನ ಕೆಲಗಡೆ ಗುದ್ದಿದ ರೀತಿಯ ಗಾಯ,ಮೇಲ್ತುಟಿ ಹಾಗೂ ಹಣೆಗೆ ರಕ್ತ ಗಾಯವಾಗಿದ್ದು,ಗಾಯಗೊಂಡವರನ್ನು ಅಲ್ಲಿದ ಸಾರ್ವಜನಿಕರು  ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುವುದಾಗಿದೆ  ಎಂಬಿತ್ಯಾದಿ.

Traffic North Police Station               

ದಿನಾಂಕ 05-09-2023 ರಂದು ಪಿರ್ಯಾದಿ Ramesh Poojari ದಾರರು ತನ್ನ ಮಗ ಶಿವರಾಂ ನ ಬಾಬ್ತು KA-19-EL-5529 ನಂಬ್ರದ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಮಂಗಳೂರು ಮಹಾನಗರ ಪಾಲಿಕೆಗೆ ಹೋದವರು ವಾಪಾಸು ಮನೆ ಕಡೆಗೆ ಬರುತ್ತಿದ್ದ ಸಮಯ ಸುಮಾರು ಸಂಜೆ 4:15 ಗಂಟೆಗೆ ಪಚ್ಚನಾಡಿ ಕ್ರಾಸ್ ಬಳಿ ಬಲಕ್ಕೆ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದ ಸಮಯ ಅದೇ ರಸ್ತೆಯಲ್ಲಿ ಪದವಿನಂಗಡಿ ಕಡೆಯಿಂದ ಬೊಂದೆಲ್ ಕಡೆಗೆ KA-21-S-0889 ನಂಬ್ರದ ಬೈಕ್ ನ್ನು ಅದರ ಸವಾರ ಶರತ್ ಎಂಬುವರು ದುಡುಕತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದಿದ್ದು, ಇದರ ಪರಿಣಾಮ ಪಿರ್ಯಾದಿದಾರರಿಗೆ ಬಲ ಕಣ್ಣಿನ ಬಳಿ, ಬಲ ಕೈ ಮೊಣಗಂಟಿನ ಬಳಿ, ಕಿರು ಬೆರಳಿನ ಬಳಿ, ಬಲ ಕಾಲಿನ ಪಾದದ ಬಳಿ ತರಚಿದ ರೀತಿಯ ರಕ್ತಗಾಯ, ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ವಿಜಯ ಕ್ಲಿನಿಕ್ ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಲ್ಲದೇ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ ಎಂಬಿತ್ಯಾದಿ.

Mangalore East PS

ಪಿರ್ಯಾದಿ KAMALA H N ದಾರರರು ಅಬಕಾರಿ ನಿರೀಕ್ಷಕರಾಗಿದ್ದು. ದಿನಾಂಕ: 01.09.2023 ರಂದು ಬೆಳಿಗ್ಗೆ ಸುಮಾರು 6.54  ಗಂಟೆಯ ಸಮಯದಲ್ಲಿ ಅಬಕಾರಿ ಉಪ ಆಯುಕ್ತರ ಕಛೇರಿಯ ಅಬಕಾರಿ ಅಧೀಕ್ಷಕರು ಆದ ಶ್ರೀ ಅಮರ್ನಾಥ ಭಂಡಾರಿ ಇವರು ಗಣೇಶ್ ಮೆಡಿಕಲ್ ಸ್ಟೋರ್ ಪಂಪ್ವೆಲ್ ಇಲ್ಲಿ ಔಷಧಿಗಳನ್ನು ಖರೀದಿ ಮಾಡಲು ಸದ್ರಿ ಮೆಡಿಕಲ್ ಸ್ಟೋರ್ಗೆ ಹೋಗಿದ್ದಾಗ ಅಲ್ಲಿ ಒಬ್ಬಳು ಯುವತಿಯು ಅಕ್ರಮಣಕಾರಿ ವರ್ತನೆ ಹಾಗೂ ಅಸಾಮಾನ್ಯ ವರ್ತನೆ   ಮಾಡುತ್ತಿರುವುದು ಕಂಡು ಬಂದಿದ್ದು. ಅವರು ದೂರವಾಣಿ ಮೂಲಕ ಪಿರ್ಯಾದಿದಾರರಿಗೆ ನಿಮ್ಮ ವ್ಯಾಪ್ತಿಯ ಪಂಪ್ವೆಲ್ ಹತ್ತಿರ ಇರುವ ಗಣೇಶ್ ಮೆಡಿಕಲ್ ಸ್ಟೋರ್ ಹತ್ತಿರ ಒಬ್ಬ ಮಹಿಳೆ ಅಸಭ್ಯವಾಗಿ ವರ್ತಿಸುತ್ತಿದ್ದು ಬಹುಶ: ಮಾದಕ ವಸ್ತುಗಳ ಸೇವನೆ  ಮಾಡಿ ಹೀಗೆ ಮಾಡುತ್ತಿರಬಹುದು,ಆದ್ದರಿಂದ ಸ್ಥಳಕ್ಕೆ ತಕ್ಷಣ ಆಗಮಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಿರುತ್ತಾರೆ. ಪಿರ್ಯಾದಿದಾರರರು ಸದ್ರಿ ಸ್ಥಳಕ್ಕೆ ಹೋದಾಗ ಅಬಕಾರಿ ಉಪ ಆಯುಕ್ತರ ಕಛೇರಿಯ ಅಬಕಾರಿ ಅಧೀಕ್ಷಕರು ಆದ ಶ್ರೀ ಅಮರ್ನಾಥ ಭಂಡಾರಿ ಅವರು ಸ್ಥಳದಲ್ಲಿಯೇ ಇದ್ದು. ಯುವತಿಯು ಪಿರ್ಯಾದಿದಾರರು ಮತ್ತು ಇತರ ಅಧಿಕಾರಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ನೀವು ಯಾರೂ ಕೇಳಿದಾಗ ಪಿರ್ಯಾದಿದಾರರರು ಅಬಕಾರಿ ಇಲಾಖೆಯ ನಿರೀಕ್ಷಕರು ಎಂದು ತಿಳಿಸಿ, ನಿಮ್ಮನ್ನು ವೈಧ್ಯಕೀಯ ತಪಾಸಣೆ ನಡೆಸುವ ಅವಶ್ಯಕವಿದ್ದು ನಮ್ಮೊಂದಿಗೆ ಬರಲು ಸೂಚಿಸಿದಾಗ ನಾನೇಕೆ ನಿಮ್ಮೊಂದಿಗೆ ಬರಬೇಕು ನಾನು ನಿಮ್ಮೊಂದಿಗೆ ಬರುವುದಿಲ್ಲ ಎಂದು ಹೇಳಿ ಪಿರ್ಯಾದಿದಾರರು ಮತ್ತು ಇತರ ಅಧಿಕಾರಿಗಳ ಮಾತನ್ನು ಕೇಳದಿದ್ದಾಗ ಪಿರ್ಯಾದಿದಾರರು ಅವಳನ್ನು   ಕೈ ಹಿಡಿದು ಇಲಾಖಾ ವಾಹನ ಜೀಪು ಹತ್ತಿಸಲು ಪ್ರಯತ್ನಿಸಿದಾಗ ಆಕೆಯು ಪಿರ್ಯಾದಿದಾರರನ್ನು  ಜೋರಾಗಿ ತಳ್ಳಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಹಾಗೂ ಅಸಭ್ಯವಾಗಿ ವರ್ತನೆ ಮಾಡಿದ್ದು. ಅಲ್ಲದೇ ಸಾರ್ವಜನಿಕ ನೌಕರಳಾದ ಪಿರ್ಯಾದಿದಾರರಿಗೆ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಯನ್ನುಂಟು ಮಾಡಿರುತ್ತಾರೆ.ಈ ಬಗ್ಗೆ  ಸೂಕ್ತ ಕಾನೂನು ಕ್ರಮ ಕೈಗೊಳಬೇಕಾಗಿ ನೀಡಿದ ದೂರಿನ ಸಾರಾಂಶ.

Traffic South Police Station              

ಪಿರ್ಯಾದಿ PRAKASH ದಾರರು ದಿನಾಂಕ 05-09-2023 ರಂದು ಪಿರ್ಯಾದಿ ಗೆಳೆಯನ KA-19-HH-3265 ನಂಬ್ರದ ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ತಮ್ಮ ದಿನೇಶ್ (ಪ್ರಾಯ:31 ವರ್ಷ) ರವರನ್ನು ಕುಳ್ಳಿರಿಸಿಕೊಂಡು ಹೊರಟು ಕೊಡೆಕಲ್ ರೈಸ್ ಮೀಲ್ ಎದುರು ತಿಂಡಿಯನ್ನು ಖರೀದಿಸಿ ಮನೆಗೆ ತೆರಳುವ ಸಮಯದಲ್ಲಿ ಅಲ್ಲಿ ಸಮೀಪ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಪಿರ್ಯಾದಿ ತನ್ನ ತಮ್ಮನನ್ನು ಅಲ್ಲಿಯೇ ನಿಲ್ಲಲು ಸೂಚಿಸಿ  ಸ್ವಲ್ಪ ದೂರ ತೆರಳಿದ್ದಾಗ ಸಮಯ ಸುಮಾರು ರಾತ್ರಿ 09.00 ರಿಂದ 09.10 ರ ಮಧ್ಯೆ ಕಣ್ಣುರು ಕಡೆಯಿಂದ ಕೊಡೆಕಲ್ ಕಡೆಗೆ ಬರುತ್ತಿದ್ದ ಕಾರು ನಂಬ್ರ KA-19-MM-6325  ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಆತೀ ವೇಗದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ನಿಲ್ಲಿಸಿದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದು,ಈ ಅಪಘಾತದಿಂದ ಅಲ್ಲಿಯೇ ಇದ್ದ ಪಿರ್ಯಾದಿ ತಮ್ಮ ದಿನೇಶ್ ಸ್ಕೂಟರ್ ಸಮೇತ ರಸ್ತೆ ಬದಿಯ ಮಣ್ಣಿನ ನೆಲಕ್ಕೆ ಬಿದಿದ್ದು, ನಂತರ ಪಿರ್ಯಾದಿ ಹಾಗೂ ಅಪಘಾತ ಪಡಿಸಿದ ಕಾರಿನಲ್ಲಿದ ಇಬ್ಬರು ದಿನೇಶ್ ನನ್ನು ಎತ್ತಿ ಸಮೀಪದ ಪಸ್ಟ್ ನ್ಯೂರೊ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಈ ಅಪಘಾತದಿಂದ ಪಿರ್ಯಾದಿ ತಮ್ಮನಿಗೆ ತಲೆಗೆ ಗುದ್ದಿದ ಗಾಯ,ಬಲಭೂಜಕ್ಕೆ,ತುಟಿ,ಹಣೆಗೆ,ಕಣ್ಣಿನ ಬದಿ,ಎರಡು ಬದಿ ಕೆಪ್ಪೆಗೆ, ಎರಡು ಕೈಗೆ, ಮೂಗಿಗೆ ರಕ್ತಗಾಯವಾಗಿದ್ದು, ಈ ಅಪಘಾತಕ್ಕೆ ಕಾರಣವಾಗಿದ್ದ ಕಾರಿನ ಚಾಲಕನ ಹೆಸರು ಮೊಹಮ್ಮದ್ ಸಿನಾನ್ ಎಂದು ನಂತರ ತಿಳಿದು ಬಂದಿರುತ್ತದೆ,ಎಂಬಿತ್ಯಾದಿ.

Mangalore North PS

ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ಪೊಂಪೈ ವಿವ್ಯೂ ಪಾಯಿಂಟ್ ಎಂಬ ಕಮರ್ಷಿಯಲ್ ವಾಣಿಜ್ಯ ಕಟ್ಟಡ ಸಂಖ್ಯೆ 4 ಡೋರ್ ನಂಬ್ರ 8/178/1ಡಿ ನ್ನು 1 ನೇ ಆರೋಪಿತ ರೋಲ್ವಿನ್ ಪೀಟರ್ ರೋಡ್ರಿಗಸ್ ಎಂಬಾತನು ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿಮಿಟೆಡ್ ಕಾರ್ ಸ್ಟ್ರೀಟ್ ಶಾಖೆ ,ಕಾರ್ ಸ್ಟ್ರೀಟ್ ಇಲ್ಲಿ ಬ್ಯಾಂಕಿಗೆ ಭದ್ರತೆಯಾಗಿ ರೂ 70,0000/- ನ್ನು ದಿನಾಂಕ: 14.12.2021 ರಂದು ಅಡಮಾನ ಿಟ್ಟು ಸಾಲ ಪಡೆದಿದ್ದು ಈ ಬಗ್ಗೆ ಸಬ್ ರಿಜಿಸ್ಟರ್ ಕಛೇರಿಯಲ್ಲಿ ದಾಖಲೆ ನಂಬ್ರ 2021-22 ರಂತೆ ದಿನಾಂಕ:14.12.2021 ರಂದು ನೋಂದಣಿಯಾಗಿದ್ದು ಆನಂತರ ಸದ್ರಿ ಕಟ್ಟಡವನ್ನು ಬ್ರಿಯಾನ್ ಜಾಯ್ ಡಿಸೋಜಾ ಮತ್ತು ಲೀನಾ ಡಿಸೋಜಾರವರಿಗೆ ದಿನಾಂಕ:28.12.2017 ರಂದು ಮಾರಾಟ ಮಾಡಿ ಸದ್ರಿ ಕ್ರಯ ಪತ್ರವನ್ನು ಮಂಗಳೂರು ತಾಲೂಕು ಸಬ್ ರಿಜಿಸ್ಟರ್ ಕಛೇರಿಯಲ್ಲಿ MGT-1-/2017-18 ರಂತೆ ನೋಂದಣಿ ಮಾಡಿ ಬ್ಯಾಂಕಿಗೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುವುದಲ್ಲದೇ 1 ನೇ ಆರೋಪಿತನು 2 ನೇ ಆರೋಪಿ ವಿಕ್ಟರ್ ಡಿಸೋಜಾ ಮತ್ತು 3 ನೇ ಆರೋಪಿ ಮಹಮ್ಮದ್ ಆಸೀಫ್ ರವರೊಂದಿಗೆ ಸೇರಿ ತೆಂಕುಳಿಪಾಡಿ ಗ್ರಾಮದ ಪೊಂಪೈ ವಿವ್ಯೂ ಪಾಯಿಂಟ್ ನಲ್ಲಿರುವ ಫ್ಲಾಟ್ ನಂಬ್ರ 102 ಮತ್ತು 201 ನ್ನು ಕ್ರಮವಾಗಿ 1 ಮತ್ತು 2 ನೇ ಆರೋಪಿತರುಗಳಿಗೆ ಮಾರಾಟ ಮಾಡಿ ಈ ಬಗ್ಗೆ ಬೇರೆ ಬ್ಯಾಂಕಿನಲ್ಲಿ ಗೃಹ ಸಾಲ ಪಡೆದುಕೊಂಡು ಇದೇ ಫ್ಲಾಟ್ ಗಳ ದಾಖಲಾತಿಗಳನ್ನು ಕೂಡಾ ಪಿರ್ಯಾದಿದಾರರ ಬ್ಯಾಂಕಿನಲ್ಲಿ   ರೂ 70,0000/- ಸಾಲಕ್ಕೆ ಅಡಮಾನ ಇಟ್ಟು ಬ್ಯಾಂಕಿಗೆ 2 ಮತ್ತು 3 ನೇ ಆರೋಪಿಗಳ ಸಹಕಾರದಿಂದ ಸಾಲ ಪಡೆದು ನಂಬಿಕೆದ್ರೋಹ ಹಾಗೂ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Surathkal PS    

ದಿನಾಂಕ : 18-08-2023 ರಂದು ಪಿರ್ಯಾದಿದಾರರು ಉಪಯೋಗಿಸುತ್ತಿರುವ ಟೆಲಿಗ್ರಾಮ್ ಆಪ್ ಗೆ ಬಂದ ಸಂದೇಶದಲ್ಲಿ Work from Purpose ಅಡಿಯಲ್ಲಿ ಕೆಲಸಮಾಡಿ ಹಣ ಹೂಡುವಂತೆ ಮಾಹಿತಿ ನೀಡಿದ ಮೇರೆಗೆ ಅದರಂತೆ ಕೆಲಸವನ್ನು ಪ್ರಾರಂಭಿಸಿದಾಗ ರೂ 10,000/-ಹಣವನ್ನು ಸಂಪಾದಿಸಿದ್ದಾಗಿರುತ್ತದೆ ಆ ಬಳಿಕ ಪಿರ್ಯಾದಿದಾರರಿಗೆ www.krakennz.com ವೆಬ್ ಸೈಟ್ ಗೆ ಲಾಗ್ ಇನ್ ಆಗಲು ಹಾಗೂ ಅದರಲ್ಲಿ ನೋಂದಾಯಿಸಿ 9,000/- ರೂ ಹೂಡಿಕೆ ಮಾಡಿದರೆ ರೂ.12,500/- ಸಿಗುತ್ತದೆ ಎಂದು ಟ್ರೇಡಿಂಗ್ ಮಾಡಲು ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣಕ್ಕೆ ಮರು ಸಂದಾಯವಾಗದೇ ಇದ್ದು ವಿಚಾರಿಸಿದಾಗ ಸರಿಯಾದ ರೀತಿಯ ಕ್ರಮಗಳನ್ನು ಅನುಸರಿಸುವಂತೆ ಮಾಹಿತಿ ನೀಡಿದ್ದಾಗಿರುತ್ತದೆ ಅದರಂತೆ ಪಿರ್ಯಾದಿದಾರರು ಗೂಗಲ್ ಲಿಂಕ್ ಮುಖೇನ18,750/- ರೂ ಹಣವನ್ನು ಗೂಗಲ್ ಪೇ ಲಿಂಕ್ ಮುಖೇನ 65,800/- ರೂ ಹೂಡಿಕೆ ಮಾಡಿದ್ದಾಗಿರುತ್ತದೆ ಆ ಬಳಿಕ ಪಿರ್ಯಾದಿದಾರರ ICICI ಬ್ಯಾಂಕ್ ಖಾತೆಯಿಂದ HDFC ಸಿಕಂದರ್ ಬಾದ್ ಶಾಖೆಯ ಮಯಾಂಕ್ ಗೌತಮ್ ಎಂಬ ಹೆಸರಿಗೆ ಖಾತೆ ಸಂಖ್ಯೆ 50100638710549 ಗೆ ರೂ.66,500/- ಬಳಿಕ ಪಿರ್ಯಾದಿದಾರರ ಖಾತೆಯಿಂದ ICICI ಬ್ಯಾಂಕ್ ಪುಣೆ, ಚಿಂಚಿವಾಡ್, ಮಹೇಶ್ ಎಂಟರ್ಪ್ರೈಸಸ್ ಹೆಸರಿನ ಖಾತೆಗೆ ರೂ.1,00,000/- ಹಣ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಲನ್ ವಾಲಿ ಶಾಖೆಗೆ ನೆಹರೂ ಟ್ರೇಡಿಂಗ್ ಕಂಪನಿಯ ಹೆಸರಿಗೆ ರೂ.1,00,000/- ಹಣವನ್ನು ಹೂಡಿಕೆ ಮಾಡಿದ್ದು ಹೀಗೆ ಒಟ್ಟು ಪಿರ್ಯಾದಿದಾರರ ಉಳಿತಾಯ ಖಾತೆಯಿಂದ ರೂ.3,60,250/- ಹಣವನ್ನು ಹೂಡಿಕೆ ಮಾಡಿದರೂ ಯಾವುದೇ ಮರು ಸಂದಾಯವಾಗಿರುವುದಿಲ್ಲ ಆರೋಪಿಗಳು ವಂಚನೆ ಮಾಡುವ ಉದ್ದೇಶದಿಂದಲೇ ಮೇಲ್ಕಾಣಿಸಿದ ಟ್ರೇಡಿಂಗ್ ಗೆ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಹಣ ಸಿಗುತ್ತದೆ ಎಂದು ನಂಬಿಸಿ ನಂಬಿಕೆ ದ್ರೋಹ ಎಸಗಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 06-09-2023 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080