ಅಭಿಪ್ರಾಯ / ಸಲಹೆಗಳು

Mangalore  East  Traffic PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 03-01-2024 ರಂದು ಪಿರ್ಯಾದಿದಾರರಾದ ಇಸ್ಮಾಯಿಲ್ ಝೈನುಲ್ ಅಬಿದ್ ರವರು ತನ್ನ ತಂಗಿ ಸಪ್ರೀನ ಪ್ರಾಯ: 21 ವರ್ಷ ಎಂಬವರನ್ನು ತನ್ನ ಬಾಬ್ತು KA-19-HH-2666 ನಂಬ್ರದ  ಸ್ಕೂಟರಿನಲ್ಲಿ ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಮದರ್ ತೆರೇಸಾ ರಸ್ತೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸೈಂಟ್ ಮೇರಿಸ್ ಶಾಲೆಯ ಬಳಿಯ ಕುವೆಲ್ಲೊ ರಸ್ತೆಯಲ್ಲಿರುವ ಗೂಡಂಗಡಿಯ ಬಳಿ ತಲುಪುವಾಗ ಸಂಜೆ 6:30 ಗಂಟೆಗೆ  KA-19-EZ-0945 ನಂಬ್ರದ ಸ್ಕೂಟರನ್ನು ಅದರ ಸವಾರ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ತಾಗಿಸಿಕೊಂಡು ಹೋದ ಪರಿಣಾಮ ಸಪ್ರೀನ ರವರ ಬಲಕಾಲಿನ ಕಿರುಬೆರಳಿಗೆ ರಕ್ತಗಾಯವಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತಪಡಿಸಿದ ಸ್ಕೂಟರ್ ಸವಾರನು ಅಪಘಾತ ಸ್ಥಳದಲ್ಲಿ ಸ್ಕೂಟರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಮರುದಿನ ಸ್ಕೂಟರ್ ಸವಾರನು ಹೈಲ್ಯಾಂಡ್ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು, ನಂತರ ನಿರಾಕರಿಸಿದ್ದರಿಂದ ಈ ದಿನ ಠಾಣೆಗೆ ಬಂದು ತಡವಾಗಿ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Ummar Farooq ರವರಮಗ ಮೊಹಮ್ಮದ್ ಪರ್ಹಾನ್ (18 ವರ್ಷ) ಎಂಬಾತನು ಈ ದಿನ ದಿನಾಂಕ 06.01.2024 ರಂದು ಮುಂಜಾನೆ ತನ್ನ ಸ್ನೇಹಿತ ಅಬ್ದುಲ್ ವಹಾಬ್ ಎಂಬಾತನ ಬಾಬ್ತು ಸ್ಕೂಟರ್ ನಂಬ್ರ KA-19HJ-6359 ರಲ್ಲಿ ಸಹಸವಾರನಾಗಿ ಕುಳಿತುಕೊಂಡು ಅಬ್ದುಲ್ ವಹಾಬನು ಸ್ಕೂಟರನ್ನು ಸವಾರಿ ಮಾಡುತ್ತಾ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುರತ್ಕಲ್ ನಿಂದ ಮುಕ್ಕ ಕಡೆಗೆ ಹೋಗುತ್ತಾ ಮುಂಜಾನೆ ಸಮಯ ಸುಮಾರು 00:50 ಗಂಟೆಗೆ ಎನ್.ಐ.ಟಿ.ಕೆ. ಟೋಲ್ ಗೇಟಿನಿಂದ ಮುಕ್ಕ ಜಂಕ್ಷನ್ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ಶ್ರೀನಿವಾಸ ಡೆಂಟಲ್ ಕಾಲೇಜಿನ ಎದುರುಗಡೆ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಮುಕ್ಕ ಜಂಕ್ಷನ್ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KL-57F-0093 ನೇಯದನ್ನು ಅದರ ಸವಾರ ಅಮಲ್ ರಾಜೇಶ್ ಎಂಬಾತನು ಮೊಹಮ್ಮದ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮೋಟಾರ್ ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ನನ್ನ ಮಗ ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ  ಎರಡೂ ವಾಹನ ಸವಾರರು ತಮ್ಮ ತಮ್ಮ ವಾಹನಗಳ ಸಮೇತ ರಸ್ತೆಗೆ ಬಿದ್ದು, ಮೊಹಮ್ಮದ್ ಫರ್ಹಾನನ ಎಡಕಾಲಿನ ಕೋಲು ಕಾಲಿಗೆ, ಪಾದಕ್ಕೆ ಮೂಳೆ ಮುರಿತದ ಗಾಯ, ಅಬ್ದುಲ್ ವಹಾಬನ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಹಣೆಯ ಎಡಬದಿ ರಕ್ತ ಗಾಯ, ಸೊಂಟದ ಎಡಬದಿಗೆ ಗುದ್ದಿದ  ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ಅಮಲ್ ರಾಜೇಶನ ಎಡಕಾಲಿನ ಪಾದಕ್ಕೆ ಚರ್ಮ ಹರಿದ ಗಾಯ, ಮೂಗಿನಿಂದ ರಕ್ತ ಬಂದಿದ್ದು, ಮುಖಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು ಅಮಲ್ ರಾಜೇಶನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Mangalore North PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ, ಈ ದಿನ ದಿನಾಂಕ: 06-01-2024 ರಂದು  ಪಿರ್ಯಾದಿ VINAYAK TORAGAL  ರವರು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಈ ದಿನ ಸಂಜೆ 17.30 ಗಂಟೆಗೆ ಬಾವುಟಗುಡ್ಡೆ ಬಳಿ ತಲುಪಿದಾಗ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಅಬಿನ್ ರಾಜ್  ಟಿ. ಕೆ, ಪ್ರಾಯ 24 ವರ್ಷ, ತಂದೆ: ಅಶೋಕನ್. ಟಿ.ಕೆ, ವಾಸ: ತನಿಕುಜಿಯಿಲ್, ನನ್ಮಂದಾ, ಕೋಜಿಕೊಡ್, ಕೇರಳ ರಾಜ್ಯ ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ಮಂಗಳೂರು  ಕುಂಟಿಕಾನದ ಎ ಜೆ ಆಸ್ಪತ್ರೆಗೆ  ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ, ಅಬಿನ್ ರಾಜ್  ಟಿ. ಕೆ ಎಂಬಾತನು  Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ ನಂತರ ಠಾಣೆಗೆ ಕರೆತಂದು ಅಬಿನ್ ರಾಜ್  ಟಿ. ಕೆ  ನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಂಬಿತ್ಯಾದಿ ನೀಡಿದ ದೂರಿನ ಸಾರಾಂಶ

 

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:06-01-2024 ರಂದು ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಮಧ್ಯಾಹ್ನ 2.30 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಎಂಬಲ್ಲಿ   ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಸೊನಾಲ್, ಪ್ರಾಯ: 25 ವರ್ಷ, ತಂದೆ: ಸುಚೀಂದ್ರ, ವಾಸ: ಡೋರ್ ನಂ: 23-6-448, ರಾಮಚಂದ್ರ ಎಂಬವರ ಬಾಡಿಗೆ ಮನೆ, ಫೇರಿ ರಸ್ತೆ, ಮಂಗಳನಗರ, ಮಂಗಳದೇವಿ, ಮಂಗಳೂರು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿದ್ದು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು TETRAHYDROCANNABINOL ಎಂಬ ಗಾಂಜ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

 

Mangalore East PS

ಈ ಪ್ರಕರಣದ ಸಾರಂಶವೇನೆಂದರೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ನಿರೀಕ್ಷಕಿ ಶ್ರೀಮತಿ ರೋಸಮ್ಮ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 18-45 ಗಂಟೆ ವೇಳೆಗೆ ಮಂಗಳೂರು ನಗರದ ಕೆಪಿಟಿ ಸಪ್ತಗಿರಿ ಪೆಟ್ರೋಲ್ ಬಂಕ್ ಬಳಿಯಲ್ಲಿ  ಓರ್ವ ವ್ಯಕ್ತಿಯು ಮಾದಕ ವಸ್ತುವನ್ನು ಸೇವಿಸಿ ನಶೆಯಲ್ಲಿದ್ದಂತೆ ಕಂಡು ಬಂದ ಅಭಿಜೀತ್ ಕೆ.ಪಿ ಪ್ರಾಯ 20 ವರ್ಷ ತಂದೆ: ಶ್ರೀಜು ಕೆ.ಪಿ, ವಾಸ: ಕುನ್ನಾಂಪರಮ್ ಬಾತ್ ವೆಂಗೇರಿ,ಕೊಝಿಕೊಡ್, ಕೇರಳ ರಾಜ್ಯ ಎಂಬುದಾಗಿ ಮುಂದಿನ ಕ್ರಮದ ಬಗ್ಗೆ  ಈತನನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಈತನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಿರುತ್ತೇನೆ, ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) ಪಾಸಿಟಿವ್ ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ 27(ಬಿ) NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ

 

Ullal PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ  ಪಿರ್ಯಾದಿ Santhosh Kumar D ಈ ದಿನ ದಿನಾಂಕ.06-01-2024 ರಂದು ಸಿಬ್ಬಂದಿರವರ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ನಿರತನಾಗಿರುವ ಸಮಯ ಠಾಣಾ ಸರಹದ್ದಿನ ಉಳ್ಳಾಲ ತಾಲೂಕು, ಮೂನ್ನೂರು ಗ್ರಾಮದ ಡೆಕ್ಕನ್ ರೆಸಾರ್ಟ್ ನ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ತುಫೈಲ್ (28) ತಂದೆ ಅಬ್ದುಲ್ ರೆಹಮಾನ್  ವಾಸ: ರಹೀಮ್ ಮಂಜಿಲ್ , ಮದನಿ ನಗರ ಕುತ್ತಾರು ಮುನ್ನೂರು ಗ್ರಾಮ ಉಳ್ಳಾಲ ತಾಲೂಕು ಮುಂದಿನ ಕ್ರಮದ ಬಗ್ಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು, ಸಿಬ್ಬಂದಿಯವರ ಮುಖೇನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಗಾಂಜಾ ಸೇವನೆಯ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ತುಫೈಲ್  ನು ಮಾದಕ ವಸ್ತು ‘TETRAHYDROCANNABINOL’ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿದಂತೆ ಈ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ MAHAMMAD HANEEF ರವರು ದಿನಾಂಕ: 02-01-2023 ರಂದು ತನ್ನ ಬಾಬ್ತು KA-19-HN-5063 ನೇ ಮೊಟಾರು ಸೈಕಲ್ ನಲ್ಲಿ ತನ್ನ ಮನೆಯಿಂದ ವಿಟ್ಲ ಕಡೆಗೆ ಹೊರಟು ಸಾಂಬರ್ ತೋಟ ಮಾರ್ಗವಾಗಿ ಕಾಯರ್ ಗೋಳಿ ಜಂಕ್ಷನ್,  ಸೂರ್ಯ ಇಂಟರ್ ನ್ಯಾಶನಲ್ ಎದುರಿನ ಡಿವೈಡರ್ ತಲುಪಿದಾಗ ಸಮಯ ಸುಮಾರು  09-15 ಗಂಟೆಗೆ  ಮುಡಿಪು ಕಡೆಯಿಂದ ಬರುತ್ತಿದ್ದ  KA-20-MA-2307 ನೇ ಕಾರಿನ ಚಾಲಕ ನವೀನ್ ಎಂಬಾತನು ಬೋಳಿಯರು ಕಡೆಗೆ ಹೋಗಲು ಡಿವೈಡರ್ ಬಳಿ ಒಮ್ಮೆಲೆ ಬಲಕ್ಕೆ ತಿರುಗಿದ ಪರಿಣಾಮ ಕಾರು ಫಿರ್ಯಾದಿದಾರರ ಬೂಕಿನ ಮುಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಎಡಭಾಗದ ಮುಂದಿನ ಮೇಲ್ಭಾದ ಪಟ್ಟಿ ಅಥವಾ ಅಂಚು ಫಿರ್ಯಾದಿದಾರ ಮುಖಕ್ಕೆ ಅಪ್ಪಳಿಸಿದ್ದು ಫಿರ್ಯಾದಿದಾರರು ಸ್ಕೂಟಾರು ಸಮೇತ ರಸ್ತೆ ಬಿದ್ದ ಪರಿಣಾಮ ಫಿರ್ಯಾದಿದಾದದ ಮುಖದ ಎಡ ಕೆನ್ನೆ, ಎಡ ಕಣ್ಣಿಗೆ ತರಚಿದ ರಕ್ತಗಾಯ, ತುಟಿ ಮತ್ತು ಮೂಗಿಗೆ ಚರ್ಮ ಹರಿದ ರಕ್ತಗಾಯ ಉಂಟಾದವರನ್ನು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಮತ್ತು ಕಾರು ಚಾಲಕ ಉಪಚರಿಸಿ ಅದೇ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

 

Ullal PS            

ಪಿರ್ಯಾದಿ Santhosh Kumar D ರವರು ಈ ದಿನ ದಿನಾಂಕ.06-01-2024 ರಂದು ಸಿಬ್ಬಂದಿರವರ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಸಮಯ ಠಾಣಾ ಸರಹದ್ದಿನ ಉಳ್ಳಾಲ ತಾಲೂಕು, ಪೆರ್ಮಾನ್ನೂರು ಗ್ರಾಮದ ಕಲ್ಲಾಪು ಮಾರ್ಕೆಟ್ ನ ಸಾರ್ವಜನಿಕ ಸ್ಥಳದಲ್ಲಿ ನಶೆಯಲ್ಲಿದ್ದಂತೆ ಕಂಡು ಬಂದ ಮೃಣಾಲ್ ಸಾಲ್ಯಾನ (22) ತಂದೆ ಅಮೀತಾ ಕಾಂಚನ್  ವಾಸ: 21-4-392 ಪಿಂಟೋ ಕಂಪೌಂಡ್ ಹೊಯ್ಗೆ ಬಜಾರ ಮಂಗಳೂರು ಇವರನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು, ಸಿಬ್ಬಂದಿಯವರ ಮುಖೇನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಗಾಂಜಾ ಸೇವನೆಯ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ಮೃಣಾಲ್ ಸಾಲ್ಯಾನ ನು ಮಾದಕ ವಸ್ತು ‘TETRAHYDROCANNABINOL’ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿದಂತೆ ಈ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ. 

 

 

Kankanady Town PS

ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಫಾಝೀಜ್.ಎಸ್ ರವರು ಅವರ ಸ್ನೇಹಿತನ ಕೆಎ-19-ಹೆಚ್ ಎಫ್.6393ನೇ Dio DLX Gray ಕಲರ್ ಸ್ಕೂಟಿಯನ್ನು ಉಪಯೋಗಿಸಿಕೊಂಡಿದ್ದು,ಈ ಸ್ಕೂಟಿಯನ್ನುಪಿರ್ಯಾದಿದಾರರು ಉಪಯೋಗಿಸುತ್ತಿದ್ದು ಪ್ರತಿ ದಿನ ತಾನು ವಾಸ್ತವ್ಯವಿರುವ ಕ್ರೀಕ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಪಂಪ್ ವೆಲ್ ಇಲ್ಲಿ  ಹೊರಗೆ ಪಾರ್ಕ್ ಮಾಡುತ್ತಿರುತ್ತಾರೆ.ದಿನಾಂಕ 18-12-2023 ರಂದು ಅಪಾರ್ಟ್ ಮೆಂಟ್ ನ ಹೊರಗೆ ಪಾರ್ಕ್ ಮಾಡಿ ಸಂಬಂಧಿಕರ ಮದುವೆ ನಿಮಿತ್ತ ಕಾಸರಗೋಡಿಗೆ ಹೋಗಿದ್ದು ದಿನಾಂಕ:22-12-2023 ರಂದು ರಾತ್ರಿ ಸಮಯ ಸುಮಾರು 7.00 ಗಂಟೆಗೆ ಬಂದು ನೋಡಿದಾಗ ಸ್ಕೂಟಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈದ್ವಿಚಕ್ರ ವಾಹನದಇಂಜಿನ್ ನಂ:JF98EW1057216,CHASSIS NO:ME4JF984KLW046739ಬಣ್ಣ:Gray, ಮೌಲ್ಯ:40000/-ಆಗಬಹುದು, ಈ ದ್ವಿಚಕ್ರ ವಾಹನವನ್ನು ಪಿರ್ಯಾದಿದಾರರು ನಗರದ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದ ಕಾರಣ ಠಾಣೆಗೆ ತಡವಾಗಿ ಬಂದು ದೂರು ನೀಡಿರುವುದಾಗಿದೆ

ಇತ್ತೀಚಿನ ನವೀಕರಣ​ : 06-01-2024 09:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080