ಅಭಿಪ್ರಾಯ / ಸಲಹೆಗಳು

Crime Report in  : Mangalore Rural PS

ದಿನಾಂಕ: 06-11-2023 ರಂದು ಅಪರಾಹ್ನ 12.00 ಗಂಟೆಗೆ ಮಂಗಳೂರು ತಾಲೂಕು ಮಲ್ಲೂರು ಗ್ರಾಮ ಬದ್ರಿಯಾನಗರ  ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ  ಮುಸ್ತಾಫ @ ಕೆಪ್ಪೆ ಮುಸ್ತಾಫ(45) ವರ್ಷ, ವಾಸ-1-140,ಉದ್ದಬೆಟ್ಟು ಮಲ್ಲೂರು ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

Bajpe PS

ಪಿರ್ಯಾದಿ Nithin ದಾರರು ಅವರ ಸಂಬಂಧಿಕರಾದ ಜೀವನ್ ರವರು ನಿನ್ನೆ ದಿನಾಂಕ 05.11.2023 ಅವರವರ ಬೈಕ್ ನಲ್ಲಿ ನಲ್ಲಿಮುಚ್ಚೂರಿನಿಂದ ಕೈಕಂಬ ಕಡೆಗೆ ಬರುತ್ತಿರುವಾಗ ಜೀವನ್ ರವರು ಚಲಾಯಿಸುತ್ತಿದ್ದ KA19 HA3954 ಬೈಕ್ ಕುಕ್ಕದಕಟ್ಟೆ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಸಮಯ ಸುಮಾರು 14.20 ಗಂಟೆಗೆ KA04 MH1658 ನೇ ನಂಬ್ರದ ಬೊಲೆರೋ ಜೀಪು ಚಾಲಕನು ಎದುರುಗಡೆಯಿಂದ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಜೀಪನ್ನು ಚಲಾಯಿಸಿಕೊಂಡು ಬಂದು ಜೀವನ್ ರವರ ಬೈಕಿಗೆ ಡಿಕ್ಕಿ ಪಡಿಸಿದ್ದು, ಇದರಿಂದ ಜೀವನ್ ರವರು ಬೈಕ್ ಸಮೇತ ದಾಂಬಾರ್ ರಸ್ತೆಗೆ ಬಿದ್ದಿದ್ದು, ಅವರ ತಲೆಯ ಹಿಂದುಗಡೆ ಗುದ್ದಿದ ಗಾಯ, ಹಣೆಗೆ ಗುದ್ದಿದ ಗಾಯ ಹಾಗೂ ಎಡಕೈ ಮಣಗಂಟಿನ ಬಳಿ ಮೂಳೆ ಮುರಿತದ ಗಂಭೀರ ಗಾಯವಾಗಿರುತ್ತದೆ ಹಾಗೂ ಬೈಕಿ ಮುಂಭಾಗದ ಡೂಮ್, ಹ್ಯಾಂಡಲ್, ಪೆಟ್ರೋಲ್ ಟ್ಯಾಂಕ್ ಜಖಂಗೊಂಡಿರುತ್ತವೆ. ಗಾಯಗೊಂಡ ಜೀವನ್ ರವರಿಗೆ  ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ  ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ A J ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.

Moodabidre PS    

ದಿನಾಂಕ 11.10.2023 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ 12.10.2023 ರಂದು ಬೆಳಿಗ್ಗೆ 08.00 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿ Ellappa ದಾರರ ಬಾಬ್ತು ಕೆ.ಎ-19-ಇ.ಯು-0009 ನಂಬರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರು ಸೈಕಲ್‌ನ್ನು ಪಿರ್ಯಾದಿದಾರರು ವಾಸವಿರುವ ಮೂಡಬಿದ್ರೆ ತಾಲೂಕಿನ ಮಾರ್ಪಾಡಿ ಗ್ರಾಮದ ಎವರ್ ಶೈನ್ ರೆಸಿಡೆನ್ಸಿಯ ನೆಲಮಹಡಿಯ ಪಾರ್ಕಿಂಗ್ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಮತ್ತು ಅವರ ಮಗ ಎಲ್ಲಾ ಕಡೆ ಹುಡುಕಾಡಿದ್ದು, ಮೋಟಾರು ಸೈಕಲ್ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ

 

Barke PS

ಪಿರ್ಯಾದಿದಾರರಾದ ಸುರೇಶ್ ಕುಮಾರ್ ರವರು ತಮ್ಮ ಕುಟುಂಬ ಹಾಗೂ ತಾಯಿಯವರಾದ ಭಾಗೀರಥಿರವರ ಜೊತೆಯಲ್ಲಿ ದಿನಾಂಕ:04.11.2023 ರಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವನ್ನು ನೋಡಿ ಅಲ್ಲೇ ವಾಸ್ಥವ್ಯ ಹೂಡಿದ್ದರು ಪಿರ್ಯಾದದಾರರ ತಾಯಿ ಭಾಗೀರಥಿರವರು ಮನೆಯಿಂದ ಬರುವ ಸಮಯ ಅವರ 4 ಪವನ್ ತೂಕದ ಬಂಗಾರದ ಕರಿಮಣಿ ಸರವನ್ನು ತನ್ನ ಕೊರಳಲ್ಲಿ ಧರಿಸಿಕೊಂಡು ಬಂದಿದ್ದರು. ಈ ದಿನ ಬೆಳಿಗ್ಗೆ ದಿನಾಂಕ:05.11.2023 ರಂದು ಬೆಳಿಗ್ಗೆ 10.00 ಗಂಟೆಗೆ ಕೊಲ್ಲೂರಿನಿಂದ ಮಂಗಳೂರಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಎಲ್ಲರು ಹೊರಟು ಮಧ್ಯಾಹ್ನ 1.15 ಗಂಟೆಗೆ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿನ ಮೈತ್ರಿ ಎಂಬ ಹೋಟೆಲ್ ನಲ್ಲಿ ಎಲ್ಲರು ಊಟ ಮಾಡಿಕೊಂಡು ಪಿರ್ಯಾದದಿದಾರರ ಊರಾದ ಕಡಬಕ್ಕೆ ತೆರಳುವ ಕೆಎ19ಎಫ್ 1297ನೇ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಹತ್ತಿ ಬಸ್ ನಲ್ಲಿ ಪಿರ್ಯಾದಿದಾರರ ತಾಯಿ ಕುಳಿತುಕೊಂಡಿರುವ ಸಮಯ ಯಾರೋ ಮೂರು ಜನ ಮಹಿಳೆಯರಲ್ಲಿ ಒಬ್ಬರು ಪಿರ್ಯಾದುದಾರರ ತಾಯಿಯ ಬಳಿ ಕುಳಿತುಕೊಂಡಿದ್ದವರು ಹಣವನ್ನು ಕೆಳಗೆ ಬೀಳಿಸಿ ಪಿರ್ಯಾದಿದಾರರ ತಾಯಿಗೆ ಹಣ ಬಿದ್ದಿದೆ ಎಂದು ಅವರ ಗಮನವನ್ನು ಬೇರೆ ಕಡೆ ಸೆಳೆದು ಪಿರ್ಯಾದಿದಾರರ ತಾಯಿಯ ಗಮನಕ್ಕೆ ಬಾರದೆ ಅವರ ಕುತ್ತಿಗೆಯಲ್ಲಿದ್ದ ಸುಮಾರು 4 ಪವನ್ ತೂಕದ ಸುಮಾರು 1,28,000/- ರೂಪಾಯಿ ಬೆಲೆ ಬಾಳುವ ಕರಿಮಣಿ ಸರವನ್ನು ಪಿರ್ಯಾದಿದಾರರ ತಾಯಿಗೆ ಗೊತ್ತಿಲ್ಲದೆ ಕದ್ದುಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

CEN Crime PS

ಪಿರ್ಯಾದಿದಾರರಿಗೆ ವಾಟ್ಸ್ ಆಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡಿರುತ್ತಾರೆ,ಸದ್ರಿ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳು 8585881384,8961046894, 9800342648, 7542034477, 7602328395 ಮತ್ತು 7584083038 ಆಗಿರುತ್ತದೆ. ನಂತರದ ದಿನಗಳಲ್ಲಿ ಪಿರ್ಯಾದಿದಾರರು ಸದ್ರಿ ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸ್ ಆಪ್ ಮುಖಾಂತರ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಸದ್ರಿ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ  ಲಾಟರಿ ಹಣ ಬಂದಿರುವುದಾಗಿ ತಿಳಿಸಿ ಹಾಗೂ ಸದ್ರಿ ಹಣವನ್ನು ಪಿರ್ಯಾದಿದಾರರ ಖಾತೆಗೆ ಜಮಾ ಮಾಡುವುದಾಗಿಯೂ ಹಾಗೂ ಸದ್ರಿ ಹಣವನ್ನು ಪಾವತಿ ಮಾಡಲು ಅಪರಿಚಿತ ವ್ಯಕ್ತಿಯ ದೂರವಾಣಿ  ಸಂಖ್ಯೆ-9038910423ನೇದನ್ನು ಪಿರ್ಯಾದಿದಾರರ ಬಾಬ್ತು ಖಾತೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವಂತೆ ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ,ಅದರಂತೆ ಪಿರ್ಯಾದಿದಾರರು ಸದ್ರಿ ಮೊಬೈಲ್ ನಂಬ್ರ  9038910423 ನೇದನ್ನು ಅವರ ಬಾಬ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಆರ್ಯ ಸಮಾಜ ರೋಡ್ ಬ್ರಾಂಚ್,ಖಾತೆ ನಂಬ್ರ- ಮತ್ತು ಇಂಡಿಯನ್ ಬ್ಯಾಂಕ್,ಬಿಜೈ ಶಾಖೆ,ಖಾತೆ ನಂಬ್ರ- ನೇದಕ್ಕೂ ಲಿಂಕ್ ಮಾಡಿಸಿರುತ್ತಾರೆ. ಇದಾದ ನಂತರ ಪಿರ್ಯಾದಿದಾರರಿಗೆ ನಿವೃತ್ತಿಯಿಂದ ಬರಬೇಕಾದ ಹಣ ಪಿರ್ಯಾದಿದಾರರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ದಿನಾಂಕ 26-10-2023 ರಂದು 50,55,118/- ರೂಗಳು ಮತ್ತು ದಿನಾಂಕ 31-10-2023 ರಂದು ಇಂಡಿಯನ್ ಬ್ಯಾಂಕ್ ಖಾತೆಗೆ 22,31,798/- ರೂಗಳು ಬಂದಿರುತ್ತದೆ.ನಂತರ ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಗಮನಕ್ಕೆ ಬಾರದೆ  ಒಟ್ಟು 72,86,916 /- ರೂಗಳನ್ನು ದಿನಾಂಕ 26-10-2023 ರಿಂದ 02-11-2023 ರವರೆಗೆ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿರುತ್ತಾರೆ ಸದ್ರಿ ವಿಷಯವು ಪಿರ್ಯಾದಿದಾರರು ಬ್ಯಾಂಕ್ ನಲ್ಲಿ ಹೋಗಿ ವಿಚಾರಿಸಿದಾಗ ಅವರ ಗಮನಕ್ಕೆ ಬಂದಿರುತ್ತದೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮುಖಾಂತರ ಒಟ್ಟು 72,86,916/-ರೂಗಳನ್ನು  ಮೋಸದಿಂದ ವರ್ಗಾಹಿಸಿಕೊಂಡು ಪಿರ್ಯಾದಿದಾರರಿಗೆ ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ

Ullal PS

ದಿನಾಂಕ.05-11-2023 ರಂದು ಸಂಜೆ 17-40 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಬೀಚ್ ಎಂಬ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿರಾಜ್, ಪ್ರಾಯ: 30 ವರ್ಷ, ವಾಸ: ಡೋರ್ ನಂಬ್ರ 12/30 ಕಕ್ಕೆತೋಟ ಹೌಸ್ ಅಲೇಕಳ, ಉಳ್ಳಾಲ ಗ್ರಾಮ ಮತ್ತು ಉಳ್ಳಾಲ ತಾಲೂಕು ಎಂಬಾತನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ ಕೃಷ್ಣ ಕೆ ಹೆಚ್ ರವರು ಸಿಬ್ಬಂದಿಯವರ ಜೊತೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿ ಸಿರಾಜ್ ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ (ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್) ನೀಡಿರುವುದರಿಂದ ಸಿರಾಜ್  ವಿರುದ್ಧ ದಿನಾಂಕ.05-11-2023 ರಂದು ದಾಖಲಿಸಿದ ಪ್ರಕರಣದ ಸಾರಾಂಶ.

Panambur PS

 ದಿನಾಂಕ: 05-11-2023 ರಂದು ಪಣಂಬೂರು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಜ್ಞಾನಶೇಖರವರು ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯ ಮಾಡುತ್ತ ಇದ್ದ ಸಮಯ ಮಂಗಳೂರು ತಾಲೂಕು, ಪಣಂಬೂರು ಗ್ರಾಮದ, ಪಣಂಬೂರು ಎನ್.ಎಂ.ಪಿ.ಎ. ಅಡ್ಮಿನ್ ಆಫೀಸ್ ರಸ್ತೆಯಲ್ಲಿ ಕೆಲವು ಯುವಕರು ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬರುತ್ತಿರುವುದಾಗಿ ಬಾತ್ಮೀದಾರರೊಬ್ಬರು ನೀಡಿದ ಮಾಹಿತಿಯನ್ನಾಧರಿಸಿಕೊಂಡು ಠಾಣಾ ಸಿಬ್ಬಂದಿಗಳೊಂದಿಗೆ ಸಂಜೆ 4-00 ಗಂಟೆಗೆ ಸ್ಥಳಕ್ಕೆ ಹೋದಾಗ ಅಲ್ಲಿನಿಂತುಕೊಂಡಿದ್ದ ಯುವಕರುಗಳಾದ 1) ಶತ್ರುಘ್ನ ಕುಮಾರ್ ಪ್ರಾಯ: 20 ವರ್ಷ,  ವಾಸ: ಯಾದವ್ ತೋಲಿ, ರಜ್ದನ್ ಪುರ್, ಬಕುಟಿ ಬರ್ಹಾಣ್, ಪೂರ್ನಿಯಾ ಜಿಲ್ಲೆ, ಬಿಹಾರ ರಾಜ್ಯ.2) ಬಿಯಾಸ್ ಕುಮಾರ್, ಪ್ರಾಯ: 26 ವರ್ಷ,  ವಾಸ: ಪಸ್ರರಃ ಗಾಂವ್, ಕಗರಿಯಾ ತಾಲೂಕು, ಕಗರಿಯಾ ಜಿಲ್ಲೆ, ಬಿಹಾರ್ ರಾಜ್ಯ ಇವರುಗಳು ಯಾವುದೋ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ಅವರನ್ನು ಕರೆದು ವಿಚಾರಿಸಿದ ಸಮಯ ಅವರುಗಳ ಬಾಯಿಂದ ಘಾಟು ವಾಸನೆ ಬರುತ್ತಿದ್ದುದರಿಂದ, ಸದ್ರಿಯವರುಗಳನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಧೃಡಪಡಿಸುವರೇ ವೈದ್ಯಾಧಿಕಾರಿಗಳು ಎ.ಜೆ.ಆಸ್ಪತ್ರೆ, ಮಂಗಳೂರುರವರ ಮುಂದೆ ಹಾಜರುಪಡಿಸಿ ಪರೀಕ್ಷಾವರದಿಯ ಪ್ರತಿಯನ್ನುಪಡೆಯಲಾಗಿ “TETRAHYDRACANNABINOID (MARIJUANA) is Positive” ಎಂದು ವರದಿ ಬಂದಿರುವುದರಿಂದ ಸದ್ರಿ ಆಪಾದತರ ವಿರುದ್ದ) ಎನ್.ಡಿ.ಪಿ.ಎಸ್ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುವುದಾಗಿದೆ ಎಂಬಿತ್ಯಾದಿ.

Mangalore North PS

ಪಿರ್ಯಾದಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ದಿನಾಂಕ: 04.11.2023 ರಂದು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ  ಸುಮಾರು 21-20 ಗಂಟೆಗೆ ಠಾಣಾ ವ್ಯಾಪ್ತಿಯ ಉತ್ತರ ದಕ್ಕೆ ಬಳಿ ಒಬ್ಬಾತನು ಅಮಲುಕೋರನಾಗಿ ತೂರಾಡುತ್ತಿದ್ದು ಆತನನ್ನು ಕಂಡು ವಿಚಾರಿಸಿದಾಗ ಆತನು  ತನ್ನ ಹೆಸರು ಮೊಹಮ್ಮದ್ ನಿಝಾಮುದ್ದಿನ್ ಬಿ (32), ವಾಸ- ಎಮ್.ಜೆ.ಎಮ್ ನಂಬ್ರ:897, ಬ್ಲಾಕ್ ನಂಬ್ರ 25-5ಬಿ, ಶಿಫಾನ್ ಮಂಝೀಲ್ ಕಸಬಾ ಬೆಂಗ್ರೆ ಮಂಗಳೂರು ಎಂಬುದಾಗಿ ತಿಳಿಸಿದ್ದು ನಂತರ ಮೊಹಮ್ಮದ್ ನಿಝಾಮುದ್ದಿನ್ ಬಿ ನನ್ನು ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು,ಎ.ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಮೊಹಮ್ಮದ್ ನಿಝಾಮುದ್ದಿನ್ ಬಿ ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯ ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುತ್ತಾರೆ. ಮೊಹಮ್ಮದ್ ನಿಝಾಮುದ್ದಿನ್ ಬಿ ನ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿತ್ತೆನೆ ಎಂಬಿತ್ಯಾದಿ ಸಾರಾಂಶ.

ಇತ್ತೀಚಿನ ನವೀಕರಣ​ : 06-11-2023 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080