ಅಭಿಪ್ರಾಯ / ಸಲಹೆಗಳು

Crime Report in : Urva PS

ಪಿರ್ಯಾದಿ B SHAKUNTHALA ದಿನಾಂಕ 05-12-2023 ರಂದು ಬೆಳಿಗ್ಗೆ ಉರ್ವ ಸ್ಟೋರ್ ನ ಕೃಷ್ಣ ವಿಲಾಸ ಹೊಟೇಲ್ ನಿಂದ ಮನೆಗೆ ತಿಂಡಿಯನ್ನು ತೆಗೆದುಕೊಂಡು ತನ್ನ ಮನೆಯಾದ ದಡ್ಡಲಕಾಡ್ ಹೈವೆ ರೋಡ್ ಕಡೆಗೆ ನಡೆದುಕೊಂಡು, ಹೋಗುತ್ತಿರುವಾಗ ದಡ್ಡಲಕಾಡ್ ನಿಂದ ಹೈವೆಗೆ ಹೋಗುವ ಅಡ್ಡರಸ್ತೆಗೆ ತಲುಪಿದಾಗ ಸಮಯ ಸುಮಾರು 12-00 ವೇಳೆಗೆ ಪಿರ್ಯಾದಿಯ ಸಂಬಂಧಿಯಾದ ದಶರಥನು  ಆತನ ಮನೆಯ ಬಳಿ ನಿಂತು, ಪಿರ್ಯಾದಿದಾರರನ್ನು ಗುರಾಯಿಸಿ, ನೋಡುತ್ತಿದ್ದು, ಆಗ ಪಿರ್ಯಾದಿದಾರರು  “ನೀನು ಯಾಕೆ ಹಾಗೆ ನೋಡುತ್ತಿ” ಎಂದು ಕೇಳಿ ತನ್ನ ಪಾಡಿಗೆ ನಡೆಯುತ್ತಾ ಹೋದಾಗ ಆತನು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು  ಪಿರ್ಯಾದಿದಾರರ ತಲೆ ಕೂದಲಿನ ಜಡೆಯನ್ನು ಹಿಡಿದು, ಎಳೆದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಕೈಯಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದು, ರಸ್ತೆಗೆ ತಳ್ಳಿ, ನೆಲದ ಮೇಲೆ ಬಿದ್ದ ಪಿರ್ಯಾದಿದಾರರ ಸೊಂಟಕ್ಕೆ ಕಾಲಿನಿಂದ ತುಳಿದಿರುತ್ತಾನೆ. ಆಗ ಪಿರ್ಯಾದಿದಾರರು ನೋವಿನಿಂದ ಜೋರಾಗಿ ಬೊಬ್ಬೆ ಹೊಡೆದಾಗ, ಬೊಬ್ಬೆ ಕೇಳಿ ಅಲ್ಲಿನ ಹತ್ತಿರದ ಮನೆಯವರು ಬರುವುದನ್ನು ನೋಡಿದ ಆತನು “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂಬುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿದೆ ಎಂಬಿತ್ಯಾದಿ.

Urva PS

ಪಿರ್ಯಾದಿ ಹರೀಶ್ ಹೆಚ್.ವಿ, ಪೊಲೀಸ್ ಉಪ ನಿರೀಕ್ಷಕರು ಉರ್ವಾ ಪೊಲೀಸ್ ಠಾಣೆ ರವರು ದಿನಾಂಕ: 05-12-2023 ರಂದು ಸಂಜೆ ಸಮಯ ಇಲಾಖಾ ವಾಹನದಲ್ಲಿ ಠಾಣಾ ಸಿಬ್ಬಂದಿಗಳನ್ನು  ಜೊತೆಯಲ್ಲಿ  ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿದ್ದಾಗ  ಠಾಣಾ ವ್ಯಾಪ್ತಿಯ ಕೋಟೆಕಣಿ ಬಳಿ ಸಮಯ ಸುಮಾರು ಮದ್ಯಾಹ್ನ 07-00 ರ ವೇಳೆಗೆ  ತಲುಪಿದಾಗ ಅಲ್ಲಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ಯುವಕನೊಬ್ಬನು  ಸೀಗರೇಟ್ ಸೇದುತ್ತಾ ನಿಂತಿದ್ದು,  ಸಂಶಯಗೊಂಡ ಪಿರ್ಯಾದಿದಾರರು ಆತನ ಬಳಿ ಹೋಗಿ ವಿಚಾರಿಸಿದಾಗ ಆತನು ತನ್ನ ಹೆಸರು ಹರೀಶ್ , ಪ್ರಾಯ 21 ವರ್ಷ,  ವಾಸ ತೋಡ್ಲಮಜಲು ಮನೆ, ಕುಂಜತ್ತಬೈಲ್, ಕಾವೂರು, ಮಂಗಳೂರು ಎಂಬುದಾಗಿ ನುಡಿದಿದ್ದು, ಆತನ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದುದರಿಂದ ಆತನನ್ನು ವಶಕ್ಕೆ ಪಡೆದು ಗಾಂಜ ಸೇವನೆ ಮಾಡಿರುವ ಬಗ್ಗೆ ವೈಧ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯರು ಆತನು ಗಾಂಜ ಸೇವನೆ ಮಾಡಿರುವುದಾಗಿ ದೃಢಪಡಿಸಿ ವರದಿ ನೀಡಿರುವುದಾಗಿದೆ ಎಂಬಿತ್ಯಾದಿ.

 

Traffic North Police Station   

ಪಿರ್ಯಾದಿ Atiar Rahaman ಅಳಿಯ ರಹಿದ್ದುಲ್ ಎಸ್.ಕೆ (20 ವರ್ಷ) ರವರು ಈ ದಿನ ದಿನಾಂಕ 05-12-2023 ರಂದು ಬೆಳಿಗ್ಗೆ ಸಮಯ ಕೆಲಸಕ್ಕೆಂದು ತನ್ನ ಬಾಬ್ತು ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಕೂಳೂರಿನಿಂದ ಕೆ.ಐ.ಓ.ಸಿ.ಎಲ್ ಕಡೆಗೆ ಹೋಗುತ್ತಾ ಕೂಳೂರಿನಿಂದ ಸ್ವಲ್ಪ ಮುಂದೆ ಇರುವ ಬ್ರಿಡ್ಜನ್ನು ಕ್ರಾಸ್ ಮಾಡಿದ ನಂತರ KIOCL ಬಳಿ ಸೈಕಲನ್ನು  ಬಲಕ್ಕೆ ತಿರುಗಿಸಿ KIOCL ಜಂಕ್ಷನ್ ಬಳಿ ಬೆಳಿಗ್ಗೆ ಸಮಯ ಸುಮಾರು 08:30 ನಿಲ್ಲಿಸಿದಾಗ ಹಿಂದಿನಿಂದ ಅಂದರೇ MRPL ಸರ್ವಿಸ್ ರೋಡ್ ಕಡೆಯಿಂದ KA-51-AF-5501 ನಂಬ್ರದ ಕಂಟೈನರ್ ಲಾರಿಯ ಚಾಲಕ ಮುಯಿದ್ ಕುಂಞಿ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಸವಾರನಿಗೆ ಡಿಕ್ಕಿಪಡಿಸಿದ್ದ ಪರಿಣಾಮ ಸವಾರನು ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೊಣಗಂಟಿಗೆ ಬಳಿ ಮೂಳೆ ಮುರಿತದ ಗಾಯ,  ಬಲ ಕೈ ಮತ್ತು ಬಲಕಾಲಿನ ಮೊಣಗಂಟಿಗೆ ತರಚಿದ ಗಾಯಗಳಾಗಿದ್ದು, ಗಾಯಾಳು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore East PS

V4 DIGITAL INFOTECH ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಬಲ್ ಒಪರೇಟರ್ ಗಳಿಗೆ DIGITAL CABLE SIGNAL ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅವರು SERVER ಕನೆಕ್ಷನ್ ಗಾಗಿ  ಈ ಹಿಂದೆ 2014 ರಿಂದ SERVER ಸೌಲಭ್ಯ ಒದಗಿಸುತ್ತಿದ್ದ ITP SOFTWARE PVT LIMITED HYDERABAD ಇದರ ಉದ್ಯೋಗಿ ರಾಜೇಶ್ ಎಂಬವರ ಶಿಪಾರಸ್ತು ಮೇರೆಗೆ SVECHHA IT WORLD HYDERABAD ಇದರ NAVEEN PATIBANDLA ಎಂಬುವರ ಮೂಲಕ ITP SOFTWARE PVT LIMITED HYDERABAD ಇದರೊಂದಿಗೆ ಸಂಪರ್ಕ ಸಾಧಿಸಿ ದಿನಾಂಕ: 22-09-2023 ರಂದು SERVER ಸೇವೆಯ ಬಗ್ಗೆ SVECHHA IT WORLD HYDERABAD ನಿಂದ ನೀಡಿದ ರೂಪಾಯಿ 4,20,800/- ಮೊತ್ತದ ಕೊಟೇಷನ್ ಬಗ್ಗೆ ಪಿರ್ಯಾಧಿದಾರರ ಸಂಸ್ಥೆಯು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಆರೋಪಿತರ ಬ್ಯಾಂಕ್ ಖಾತೆ ಇರುವ AXIS ಬ್ಯಾಂಕಿನ ಖಾತೆ ನಂಬ್ರ 920020031374067 ಗೆ ದಿನಾಂಕ: 03-10-2023 ರಂದು ರೂಪಾಯಿ 2,00,000/- ಹಾಗೂ ದಿನಾಂಕ: 06-10-2023 ರಂದು ರೂಪಾಯಿ 2,20,800/- ರೂಪಾಯಿಯನ್ನು RTGS ಮುಖಾಂತರ ವರ್ಗಾಯಿಸಿದ್ದು, ಹಣ ಸ್ವೀಕರಿಸಿದ SVECHHA IT WORLD HYDERABAD ಸಂಸ್ಥೆಯವರು ಮೊಬೈಲ್ ನೋಟ್ ರಿಚೆಬಲ್ ಅಥವಾ ಸ್ವೀಚ್ಅಫ್ ಮಾಡಿ SERVER ಸೇವೆ ಒದಗಿಸದೇ ಅಥವಾ ಹಣ ಹಿಂತಿರುಗಿಸದೇ ವಂಚಿಸಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ.

 

Traffic South Police Station              

ದಿನಾಂಕ:04-12-2023 ರಂದು ಪಿರ್ಯಾದಿ U K BASHEER ಮಗ ಶಾಲೆಗೆ ತೆರಳಿದ್ದು, ಬೆಳಿಗ್ಗೆ ಸಮಯ ಸುಮಾರು 09.00 ಗಂಟೆಗೆ  ದಾರಿ ಮದ್ಯೆ ಇರುವ ಉರುಮನೆ ಮಂಗಳಾ ನಗರ ಮಸೀದಿ ಹತ್ತಿರ, ಶಾಲೆಗೆ ತೆರಳುವ ಬಗ್ಗೆ ರಸ್ತೆ ದಾಟುತ್ತಿದ್ದಾಗ,ನಾಟೆಕಲ್ ಕಡೆಯಿಂದ ಉರುಮನೆ ಕಡೆಗೆ ಅಲ್ ಮದೀನ ಶಾಲೆಯ ಬಸ್ಸನ್ನು ಅದರ ಚಾಲಕನು ದುಡುಕುತನ ಮತ್ತು ನಿರ್ಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಮಗ ಅಬ್ದುಲ್ ಖಾದರ್ ಮಿದ್ಲಾಜ್ (10) ನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಗು ರಸ್ತೆಗೆ ಎಸೆಯಲ್ಪಟ್ಟು, ಮಗುವಿನ ಬಲ ಹಣೆಗೆ ಗುದ್ದಿದ ರಕ್ತಗಾಯ,ಬಲ ಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಹಿಮ್ಮಡಿಗೆ ಗುದ್ದಿದ ಮತ್ತು ತರಚಿದ ಗಾಯಗಳು ಉಂಟಾಗಿರುತ್ತದೆ.ಅಪಘಾತದ ಸಮಯ ಅಲ್ಲಿ ಸೇರಿದವರು ಮಗುವನ್ನು ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು,ಪಿರ್ಯಾದಿದಾರರು ಸದ್ರಿ ಆಸ್ಪತ್ರೆಗೆ ಬಂದು ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಈ ಅಪಘಾತಕ್ಕೆ ಅಲ್-ಮದೀನ ಶಾಲೆಯ ಕೆಎ-1 9-ಸಿ-7540 ನೇ ಬಸ್ಸಿನ ಚಾಲಕನಾದ ಕೆ.ಎಂ.ಇಸ್ಮಾಯಿಲ್ ರವರ ದುಡುಕುತನ ಮತ್ತು ನಿರ್ಲಕ್ಷತನದ ಚಾಲನೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

Bajpe PS

ದಿನಾಂಕ: 04.12.2023 ರಂದು ಪಿರ್ಯಾದಿ Suresh ಮಾವ ಬಾಲಕೃಷ್ಣ ಎಂಬವರು ಕಟೀಲಿನಿಂದ ಕಾವೂರು ಕಡೆಗೆ KA19 EB 2389 ನೇ ನಂಬ್ರದ ಸ್ಕೂಟರ್ ನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 08.45 ಗಂಟೆಗೆ ಬಜಪೆ ಆಂತೋನಿ ಕಡೆ ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಬಜಪೆ ಕಡೆಗೆ KA19 D5868 ನೇ ನಂಬ್ರದ ರಾಮದೇವ ಹೆಸರಿನ ಬಸ್ಸನ್ನು ಸಂಪತ್ ಎಂಬ ಚಾಲಕನು ಅತೀವೇಗ ಮತ್ತು ದುಡುಕುತನದಿಂದ ಬಸ್ಸನ್ನು ಚಲಾಯಿಸಿಕೊಂಡ ಬಂದು ಬಾಲಕೃಷ್ಣ ರವರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕೃಷ್ಣರವರು ಬೈಕ್ ಸಮೇತ ಬಿದ್ದು, ಅವರ ಬಲ ಕೈ ಮತ್ತು ಬಲಕಾಲಿಗೆ ರಕ್ತಗಾಯವಾಗಿದ್ದು, ಬಸ್ಸಿನ ಕಂಡಕ್ಟರ್ ಸುರೇಶ್ ಹಾಗೂ ಸ್ಥಳೀಯರಾದ ಚಂದ್ರ ಎಂಬವರು ಗಾಯಗೊಂಡ ಬಾಲಕೃಷ್ಣ ರವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Kankanady Town PS

ಪಿರ್ಯಾದು Mohammada Ashraf  ತಮ್ಮ ಜೈನುದ್ದೀನ್ ಅಬ್ದುಲ್ ರೆಹಮಾನ್ ಎಂಬವರು ಪೈಂಟಿಂಗ್ ಕೆಲಸ ಮಾಡಿಕೊಂಡು ಬಂಟ್ವಾಳ ತಾಲೂಕಿನ ಪರಂಗಿಪೇಟೆಯ ಅರ್ಕುಳ ಚಳಚ್ಚಿಲ್ ವಾಸವಾಗಿದ್ದವರು ದಿನಾಂಕ: 04.12.2023 ರಂದು ಮಂಗಳೂರಿನ ಅಳಪೆ ಗ್ರಾಮದ ಶಿರ್ಲ ಪಡ್ಪು ಎಂಬಲ್ಲಿ ಹೆನ್ರಿ ಡಿಸೋಜಾ ರವರ ಮಾಲಿಕತ್ವದ ಮನೆಯಲ್ಲಿ ಮನೆಯ ಮೇಲ್ಚಾವಣೆಯ ಹತ್ತಿರ ಕಬ್ಬಿಣದ ಏಣೆ ಮೇಲೆ ನಿಂತುಕೊಂಡು ಪೈಂಟಿಂಗ್ ಕೆಲಸ ಮಾಡುತ್ತಿರುವ ಸಮಯ ಪಕ್ಕದಲ್ಲಿರುವ ಹೈಟೆನ್ಶನ್ ವೈರ್ ನಲ್ಲಿರುವ ವಿದ್ಯುತ್ ಏಣಿಗೆ ತಾಗಿ ಆತನ ದೇಹದಲ್ಲಿ ವಿದ್ಯುತ್ ಹರಿದು, ಆತನು ಮನೆಯ 2ನೇ ಮಹಡಿಯ ಮೇಲಿಂದ ಕೆಳಗೆ ಸ್ಥಳದಲ್ಲಿಯೇ ಕುಸಿದು ಬಿದ್ದವನನ್ನು ಕೂಡಲೇ ಖಾಸಗಿ ಅಂಬುಲೆನ್ಸ್ ಮುಖಾಂತರ ಅವನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಬಾಲಕೃಷ್ಣ ರವರುಗಳು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಚಿಕಿತ್ಸೆ ನೀಡಿದ ವೈದ್ಯರು ಪಿರ್ಯಾದಯದಾರರ ತಮ್ಮ ಜೈನ್ನುದ್ದೀನ್ ಅಬ್ದುಲ್ ರೆಹಮನ್ (47), ತಂದೆ: ಅಬ್ದುಲ್ ರೆಹಮನ್ ವಾಸ: ಅರ್ಕುಳ ವಳಚಿಲ, ಪದವು ಗ್ರಾಮ, ಫರಂಗಿಪೆಟೆ ಅಂಚೆ, ಬಂಟವಾಳ ತಾಲೂಕು, ದ.ಕ ಜಿಲ್ಲೆ ರವರು ದಿನಾಂಕ: 05.12.2023 ರಂದು ಬೆಳಿಗ್ಗೆ 7:40 ಗಂಟೆಗೆ ಮೃತಪಟ್ಟಿದ್ದು, ಸದ್ರಿ ಮನೆಯ ಮಾಲಿಕರಾದ ಹೆನ್ರಿ ಡಿಸೋಜಾ ರವರು ಪೈಂಟಿಂಗ್ ಕೆಲಸಕ್ಕೆ ನೇಮಿಸಿದ್ದು, ಈ ಸಮಯ ಕೆಲಸಗಾರರಿಗೆ ಯಾವುದೇ ರೀತಿಯ ಸುರಕ್ಷತಾ ಸಾಮಗ್ರಿಗಳನ್ನು ನೀಡದೆ ಕೆಸಲ ಮಾಡಿಸುತ್ತಿದ್ದ ಸಮಯ ಪಿರ್ಯಾದಯದಾರರ ತಮ್ಮ ಜೈನ್ನುದ್ದೀನ್ ಅಬ್ದುಲ್ ರೆಹಮನ್ ರವರಿಗೆ ಆಕಸ್ಮಿಕವಾಗಿ ಕೈಯಲ್ಲಿರುವ ಏಣಿ ಹೈಟೆಶನ್ ವೈರ್ ಗೆ ತಾಗಿ ಈ ಘಟನೆ ಸಂಭಂವಿಸಿದ್ದಾಗಿದ್ದು,          ತನ್ನ ಮನೆಯಲ್ಲಿ ಪೈಂಟಿಂಗ್ ಕೆಲಸ ಮಾಡಿಸುತ್ತಿದ್ದ ಮನೆಯ ಮಾಲಿಕರಾದ ಹೆನ್ರಿ ಡಿಸೋಜಾ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮೃತ ದೇಹವನ್ನು ಮುಂದಿನ ಅಂತ್ಯಕ್ರಿಯೆಯ ಬಗ್ಗೆ ಬಿಟ್ಟು ಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

Mangalore West Traffic PS

ಪಿರ್ಯಾದಿ PUNEETH ಕೆಲಸದ ನಿಮಿತ್ಯ ಚಿಕ್ಕಮಗಳೂರಿಗೆ ತೆರಳಿದ್ದು ದಿನಾಂಕ 04-12-2023 ರಂದು ಕೆಲಸ ಮುಗಿಸಿ KA-02-MF-3703  ನೇ ಕಾರನ್ನು ಮನೆಕಡೆಗೆ ನಂತೂರು,ಕೆಪಿಟಿ ಮಾರ್ಗವಾಗಿ ಹಳೆಯಂಗಡಿ ಕಡೆಗೆ  ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಕುಂಟಿಕಾನದ ಡಿ-ಮಾರ್ಟ್ ಸಮೀಪ ತಲುಪುತ್ತಿದ್ದಂತೆ ಸಮಯ ಸುಮಾರು 17:30 ಗಂಟೆಗೆ ಅದೇ ಮಾರ್ಗವಾಗಿ ಬಂದ KA-01-AL-9949 ನೇದರ ಲಾರಿ ಚಾಲಕ ಸಜೀವ ರಾಜನ್ ಎಂಬುವರು ಪಿರ್ಯಾದಿದಾರರ ಕಾರಿನ ಬಲಬದಿಗೆ  ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಕಾರು ಡಿವೈಡರ್ ಗೆ ಹೊಡೆದು ಸಂಪೂರ್ಣ ಜಖಂಗೊಂಡಿರುತ್ತದೆ. ಎಂಬಿತ್ಯಾದಿ

Kavoor PS

ದಿನಾಂಕ 04-12-2023 ರಂದು ಸಂಜೆ 19-30 ಗಂಟೆಗೆ ಮಂಗಳೂರು ನಗರದ ಕೂಳೂರು ಗ್ರಾಮದ ಕೂಳೂರು ಜಂಕ್ಷಣ್ ನ ಸಾರ್ವಜನಿಕ ಸ್ಥಳದಲ್ಲಿ ದೀಪ್ ನಾರಾಯಣ್ (30) ವರ್ಷ ವಾಸ: ಕೂಳರು ರಾಯಿಕಟ್ಟೆ ಮಂಗಳೂರು  ಖಾಯಂ ವಿಳಾಸ: ಜಂಗಲ್ ಪೀಪರಾ ಗ್ರಾಮ ರುದ್ರಪುರ್ ಹೋಬಳಿ ಮತ್ತು ಠಾಣಾ ದೇವೇರಿಯಾ ಜಿಲ್ಲೆ ಉತ್ತರಪ್ರದೇಶ ರಾಜ್ಯ ಮಾದಕ ವಸ್ತುವನ್ನು ಸೇವನೆ ಮಾಡಿರುವುದನ್ನು ವಶಕ್ಕೆ ಪಡೆದುಕೊಂಡು  ನಂತರ ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ಪಡೆದು ಆಪಾದಿತನ ವಿರುದ್ದ  ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿರುತ್ತಾರೆ, ಎಂಬಿತ್ಯಾದಿ.

Traffic North Police Station               

ದಿನಾಂಕ 04-12-2023 ರಂದು ಪಿರ್ಯಾದಿ Vinod Manjunath Naik  ತಮ್ಮ ಬಾಬ್ತು KA-47-A-1752 ನೇ ಕಾರಿನಲ್ಲಿ ಹೊನ್ನಾವರದಿಂದ ಅವರ ಮಾವನನ್ನು ಹೆಲ್ತ್ ಚಕಪ್ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದು ಕೊಂಡು ಬಂದು ವಾಪಾಸು ಮಂಗಳೂರಿನಿಂದ ಹೊನ್ನಾವರಕ್ಕೆ NH 66 ರಲ್ಲಿ ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗುವ ಸಮಯ ಸುಮಾರು ರಾತ್ರಿ 7.00 ಗಂಟೆಗೆ ಮಂಗಳೂರು ಉಡುಪಿ ರಸ್ತೆಯ ಪಣಂಬೂರು MCF ರೈಲ್ವೆ ಗೇಟ್ ತಲುಪುತ್ತಿದ್ದಂತೆ ಹೆದ್ದಾರಿಯ ರೈಲ್ವೆ ಗೇಟನ್ನು ಮುಚ್ಚಿದ್ದು ಆ ಸಮಯ ತನ್ನ ಮುಂದಿದ್ದ ಈಚರ್ ಹಾಲಿನ ಲಾರಿಯನ್ನು ನಿಲ್ಲಿಸಿದಾಗ ಪಿರ್ಯಾದಿದಾರರು ಕೂಡ ಅದರ ಹಿಂದಿನಿಂದ ಸ್ವಲ್ಪ ಸ್ಥಳಾವಕಾಶ ಬಿಟ್ಟು  ತನ್ನ ಕಾರನ್ನು ನಿಲ್ಲಿಸಿದ್ದು ಈ ಸಮಯ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ನಂದಿನಿ ಹಾಲಿನ ಉತ್ಪನ್ನ ಸಾಗಿಸುವ KA-19-C-9175 ನಂಬ್ರದ ಈಚರ್ ಟೆಂಪೊವನ್ನು ಅದರ ಚಾಲಕ ಮೆಲ್ವಿನ್ ಪಿರೆರಾ ಎಂಬಾತನು ತೀರಾ ದುಡುಕುತನ ಹಾಗೂ ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬಂದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರನ್ನು ಸದ್ರಿ ಟೆಂಪೊ ದೂಡಿಕೊಂಡು ಬಂದು ಮುಂದಿದ್ದ ಇಚರ್ ಲಾರಿಯ ಹಿಂಬದಿಗೆ ತಾಗಿ ಕಾರು ನಿಂತಿರುತ್ತದೆ .ಈ ಅಪಘಾತದಿಂದ ಪಿರ್ಯಾದಿದಾರರ ಕಾರಿನ ಹಿಂದಿನ ಭಾಗಗಳು ಸಂಪೂರ್ಣ ಜಖಂ ಗೊಂಡಿದ್ದು ಅಲ್ಲದೆ ಟೆಂಪೋ ಕಾರನ್ನು ದೂಡಿಕೊಂಡು ಬಂದು ಮುಂದಿದ್ದ ಈಚರ್ ಲಾರಿಗೆ  ಕಾರು ತಾಗಿದ ಪರಿಣಾಮ ಕಾರಿನ ಮುಂದಿನ ಭಾಗಗಳು ಕೂಡ ಸಂಪೂರ್ಣ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 06-12-2023 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080