ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                 

ಪಿರ್ಯಾದಿದಾರರಾದ ಅನುಷ್ ಕುಮಾರ್ (22 ವರ್ಷ) ರವರು ದಿನಾಂಕ 06-02-2023 ರಂದು ಸಂಜೆ ತನ್ನ ಬಾಬ್ತು KA-19-EX-5012  ನೊಂದಣಿ ನಂಬ್ರದ ಸ್ಕೂಟರನ್ನು ಚಲಾಯಿಸಿಕೊಂಡು ಮಂಗಳಾದೇವಿ ಕಡೆಯಿಂದ ಮಾರ್ನಮಿಕಟ್ಟೆ ಮಾರ್ಗವಾಗಿ ನಂದಿಗುಡ್ಡೆ ಕಡೆಗೆ ಹೋಗುತ್ತಾ ಸಮಯ ಸುಮಾರು 7.20 ಗಂಟೆಗೆ ಮಾರ್ನಮಿಕಟ್ಟೆ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ನಂದಿಗುಡ್ಡೆ ಕಡೆಯಿಂದ KL-11-AG-0349 ನೊಂದಣಿ ನಂಬ್ರದ ಕಾರನ್ನು ಅದರ ಚಾಲಕ ದುಡುಕುತನ, ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದು ವಾಹನಗಳನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ರಭಸಕ್ಕೆ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬಲ ಕಾಲಿನ ತೊಡೆಗೆ ಚರ್ಮ ಸುಲಿದ ರಕ್ತಗಾಯಗಳು, ತಲೆಗೆ ಊದಿಕೊಂಡ ಗಾಯ ಹಾಗೂ ಕೈಗಳಿಗೆ ತರಚಿದ ಗಾಯಗಳಾಗಿದ್ದು, ಅವರ ನೆರೆಕರೆಯ ಅರುಣ್ ಎಂಬುವರು ಹಾಗೂ ಅಪಘಾತಪಡಿಸಿದ ಕಾರು ಚಾಲಕರು  ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.                             

Crime Reported in : Kavoor PS

ದಿನಾಂಕ 06-02-2023 ರಂದು ಪಿರ್ಯಾದಿದಾರರ  ಕುಂಜತ್ ಬೈಲ್ ನಿವಾಸದ ಮನೆಯ ಚಿಲಕವನ್ನು ಯಾರೋ ಕಳ್ಳರು ಒಡೆದು ಬಾಗಿಲು ತೆರೆದು ಒಳ ಪ್ರವೇಶ ಮಾಡಿ ಬೆಡ್ ರೂಮುನಲ್ಲಿದ್ದ ಕಬ್ಬಿಣ ಕಪಾಟ್ ನ್ನು ಕೂಡ ಒಡೆದು ಕಪಾಡಿನ ಬಟ್ಟೆಗಳ ನಡುವೆ ಹೆಂಡತಿ ಇರಿಸಿದ ಹೆಂಡತಿಯ ಬಾಬ್ತು ಚಿನ್ನಭರಣಗಳಾದ 1)  ಚಿನ್ನದ ಸರ-1  ಇದು ಸುಮಾರು 4 ಪವನ್ ತೂಕವಿದ್ದು ದಪ್ಪ ಪಟ್ಟಿ ಇರುವ ಸರವಾಗಿದೆ ಇದರ ಅಂದಾಜು ಮೌಲ್ಯ ರೂ 80.000/- ಆಗಬಹುದು.  2) ಜೋಮಾಲೆ -1 ಇದು ಸುಮಾರು  3 ಪವನ್ ತೂಕವಿದ್ದು ಪೆಡೆಂಡ್ ನಲ್ಲಿ ಕೆಂಪು ಸ್ಟೋನ್ ಇರುತ್ತದೆ ಇದರ ಅಂದಾಜು ಮೌಲ್ಯ ರೂ 60.000/- ಆಗಬಹುದು.  ಈ ಸ್ವತ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.   ಈ ಕಳ್ಳತನವನ್ನು ಪಿರ್ಯಾದಿದಾರರು ಯಾರು ಮನೆಯಲ್ಲಿ ಇಲ್ಲದ ಸಮಯ ಸುಮಾರು ಬೆಳಿಗ್ಗೆ 8-30 ಗಂಟೆಯಿಂದ ಸಂಜೆ 6-30 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಬಲವಾಗಿ ದೂಡಿ ತೆರೆದು ಒಳಪ್ರವೇಶ ಮಾಡಿರುವುದು ಕಂಡುಬರುತ್ತದೆ  ಕಳ್ಳರು ಹಿಂಬಾಗಿಲನ್ನು ದೂಡಿ ತೆರೆದು  ಮನೆಯ ಒಳ ಪ್ರವೇಶ ಮಾಡಿ ಮನೆಯ ಬೆಡ್ ರೂಮನ ಬಾಗಿಲ ಬೀಗ ಮುರಿದು ಬೆಡ್ ರೂಮುನ ಒಳಗಡೆಯಲ್ಲಿರುವ  ಕಪಾಟನ್ನು ಕೂಡ ಒಡೆದು ತೆರೆದು ಒಳಗಿದ್ದ ಈ ಮೇಲಿನ ಚಿನ್ನಭರಣ ಮತ್ತು ನಗದನ್ನು ಕಳವು ಮಾಡಿರುವುದಾಗಿದೆ  ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 1,40,000/- ಆಗಬಹುದು.

Crime Reported in : Moodabidre PS

ದಿನಾಂಕ 03-02-2023 ರಂದು 13.15 ಗಂಟೆಗೆ ಪಿರ್ಯಾದುದಾರರಾದ ರೋಹಿತ್ ಎಸ್ ಪುತ್ರನ್(43) ರವರು ಕೆಲಸ ಮುಗಿಸಿ ಮನೆಯ ಕಡೆಗೆ ತನ್ನ ಬಾಬ್ತು KA-19-Y-0462 ನಂಬರಿನ ಮೋಟಾರು ಸೈಕಲ್ ನಲ್ಲಿ ಕಲ್ಲಮುಂಡ್ಕೂರು ಗ್ರಾಮದ ಹೊನ್ನಕಟ್ಟೆ ಎಂಬ ತಿರುವು ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಅಂದರೆ ಏಳಿಂಜೆ ಕಡೆಯಿಂದ ಕುದ್ರಿಪದವು ಜಂಕ್ಷನ್ ಕಡೆಗೆ KA-19-EC-4316 ನಂಬರಿನ ಮೋಟಾರು ಸೈಕಲ್ ನ್ನು  ಅದರ ಸವಾರ ಸುನಿಲ್ ಎಂಬಾತನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಆತನ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕೈಗೆ, ಬಲಕಾಲಿನ ಪಾದಕ್ಕೆ ರಕ್ತ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Crime Reported in : Mangalore Rural PS  

ಪಿರ್ಯಾದಿದಾರರು ANNABATTULA PRASADH ಎನ್.ಹೆಚ್.-169 ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳವವರಾಗಿದ್ದು,ಸದ್ರಿ ಕಾಮಗಾರಿಯಲ್ಲಿ ಉಪಯೋಗಿಸುವ ಸಾಮಗ್ರಿಗಳನ್ನು ತಿರುವೈಲ್ ಗ್ರಾಮದ ಪರಾರಿಯಲ್ಲಿರುವ ಶೆಡ್ ನಲ್ಲಿರಿಸಿ, ಶೆಡ್ ಗೆ ಬೀಗ ಹಾಕಿ ಭದ್ರಪಡಿಸಲಾಗಿದ್ದು ದಿನಾಂಕ 06-02-2023 ರಂದು ಮುಂಜಾನೆ 02.30 ಗಂಟೆಯ ಹೊತ್ತಿನಲ್ಲಿ ಮೂವರು ಕಳ್ಳರು ಸದ್ರಿ ಶೆಡ್ ನ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು,ಶೆಡ್ ನಲ್ಲಿದ್ದ ಸುಮಾರು 20,000/- ರೂಪಾಯಿ ಮೌಲ್ಯದ ಕಬ್ಬಿಣದ ಸಾಮಗ್ರಿಗಳನ್ನು ಕಳುವುಮಾಡಿಕೊಂಡು ಹೋಗುತ್ತಿದ್ದನ್ನು, ಕೆಲಸಗಾರರು ನೋಡಿ ಬೊಬ್ಬೆ ಹಾಕಿದಾಗ ಇಬ್ಬರು ಆರೋಪಿಗಳು KA 53 J 1373 ನೇ ಬೈಕನಲ್ಲಿ ಕಳುವು ಮಾಡಿದ ಕಬ್ಬಿಣದ ಸಾಮಗ್ರಿಗಳ ಸಮೇತ ಪರಾರಿಯಾಗಿದ್ದು,ಇನ್ನೊಬ್ಬನು ಕತ್ತಲಿನಲ್ಲಿ ಓಡಿ ತಪ್ಪಿಸಿಕೊಂಡಿರುತ್ತಾನೆ. ಸದ್ರಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿಯ ಸಾರಾಂಶವಾಗಿರುತ್ತದೆ ಎಂಬಿತ್ಯಾದಿ.                 

Crime Reported in :  Traffic North Police Station                               

ಪಿರ್ಯಾದಿದಾರರು Sourav Bhavish Monthero  ದಿನಾಂಕ 06.02.2023 ರಂದು ತನ್ನ ಗೆಳೆಯ ಪವನ್ ಎಂಬವರ ಜೊತೆ ಮೋಟಾರ್ ಸೈಕಲ್ ನಂಬ್ರ KA-19HK-0033 ನೇಯದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಕೊಟ್ಟಾರ ಕಡೆಯಿಂದ ಕೂಳುರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಸಂಜೆ ಸುಮಾರು 16:50 ಗಂಟೆಗೆ ಮಂಗಳೂರು ತಾಲೂಕು, ಬಂಗ್ರ ಕೂಳೂರು Royal Enfield Show Room ನ ಸ್ವಲ್ಪ ಮುಂದೆ ಬಂಗ್ರ ಕೂಳೂರು ಬ್ರಿಡ್ಜ್ ಮೇಲೆ ಮೋಟಾರ್ ಸೈಕಲನ್ನು ಪವನನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ರಸ್ತೆಯ ಎಡಗಡೆಯಿಂದ ಸ್ಕೂಟರ್ ನಂಬ್ರ KA-19HL-2916 ನೇಯದನ್ನು ಅದರ ಸವಾರ ರಮೇಶ್ ಎಂಬವರು ರಸ್ತೆಯ ಇನ್ನೊಂದು ಬದಿಗೆ ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷತನದಿಂದ ರಸ್ತೆಗೆ ಅಡ್ಡವಾಗಿ ಒಮ್ಮೆಲೇ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದು, ಅಲ್ಲದೇ ಸ್ಕೂಟರ್ ಸವಾರ ರಮೇಶ್ ಕೂಡಾ ಸ್ಕೂಟರ್ ಸಮೇತ ರಸ್ತೆ ಬಿದ್ದಿದ್ದು ಇದರ ಪರಿಣಾಮ ಫಿರ್ಯಾದಿದಾರರ ಎಡಕೈ ಮೊಣಗಂಟಿನ ಬಳಿ, ಬಲಕೈ ತಟ್ಟಿನ ಬಳಿ ತರಚಿದ ಗಾಯ, ಎಡಕೋಲು ಕಾಲಿಗೆ ಮತ್ತು ಎಡಕಾಲು ಪಾದಕ್ಕೆ ಗುದ್ದಿದ ರೀತಿಯ ಗಾಯ, ಮೋಟಾರ್ ಸೈಕಲ್ ಸವಾರ ಪವನನಿಗೆ ಎಡಕಾಲಿನ ಪಾದಕ್ಕೆ ಮೂಳೆ ಮುರಿತದ ಹಾಗೂ ಜಜ್ಜಿದ ಗಾಯ, ಎಡಕೋಲು ಕಾಲಿಗೆ, ಎಡಭುಜಕ್ಕೆ ತರಚಿದ ಗಾಯ ಮತ್ತು ಸ್ಕೂಟರ್ ಸವಾರ ರಮೇಶರವರ ತಲೆಯ ಎಡ ಭಾಗದಲ್ಲಿ ಗಂಭೀರ ಸ್ವರೂಪದ ರಕ್ತಗಾಯ, ಬಲಕೈ ಮಣಿಗಂಟಿಗೆ, ಎಡಭುಜಕ್ಕೆ, ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯ, ಹಾಗೂ ಎರಡೂ ಕೈಗಳಲ್ಲಿ ಎರಡೂ ಕಾಲುಗಳಲ್ಲಿ ತರಚಿದ ಗಾಯವಾಗಿದ್ದು, ಗಾಯಾಳುಗಳು ಚಿಕಿತ್ಸೆ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in :  Ullal PS

ದಿನಾಂಕ 02-02-2023 ರಂದು ಬೆಳಿಗ್ಗೆ 11-40 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಕೋಟೆಕಾರ್ ಗ್ರಾಮದ ಮಾಡೂರು ಸೊವುರ್ ಎಂಬಲ್ಲಿ ವಿಜಿ ಫ್ಯಾಕ್ಟ್ರಿಯಲ್ಲಿ ಇರುವಾಗ ಫಿರ್ಯಾದಿಯ ಮೊ ನಂ  ನೇಯದಕ್ಕೆ ಹರ್ಶಿತ್ ಎಂಬಾತನು ಮೊನಂ 8762784788 ರಿಂದ ಕರೆ ಮಾಡಿ ತಾನು ಸೂರತ್ಕಲ್ ನಲ್ಲಿ ಫಾಸಿಲ್ ಎಂಬವನನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಜಾಮಿನಿನಲ್ಲಿ ಹೊರ ಬಂದಿದ್ದು ನನಗೆ ಮತ್ತು ಜೈಲಿನ ಳಗೆ ಇರುವವರಿಗೆ ನೀವು  ಹಣದ ಸಹಾಯ ಮಾಡಬೇಕು ಎಂದು ಹೇಳಿದಾಗ ಪಿರ್ಯಾದಿದಾರರು ಆತನಲ್ಲಿ ಅದಕ್ಕೆಲ್ಲ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಪೋನ್ ಕಟ್ ಮಾಡಿದ್ದು ನಂತರ ದಿನಾಂಕ 05/02/2023 ರಂದು ಸಂಜೆ 3-33 ಗಂಟೆಗೆ ಅದೆ ವ್ಯಕ್ತಿಯು ಪಿರ್ಯಾದಿದಾರರಿಗೆ  ಅದೆ ನಂಬ್ರಿಂದ ಕರೆ ಮಾಡಿ ಹಣ ಕೋಡುವಂತೆ ಕೇಳಿದಾಗ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಕ್ಕೆ ಮುಂದೆ ಸಮಸ್ಯೆ ಯಾದರೆ ನಮ್ಮನ್ನು ದೂರ ಬೇಡಿ ಎಂದು ಹೆದರಿಸಿದ್ದು ಸದ್ರಿ ವ್ಯಕ್ತಿಯು ಪದೆ ಪದೆ ಕರೆಮಾಡಿ ಹೆದರಿಸಿ ಮಾನಸಿಕವಾಗಿ ಹಿಂಸೆಕೊಟ್ಟು ಮುಂದೆ ಕೂಡ  ಆತನು ತೊಂದರೆಕೊಡುವ ಸಾಧ್ಯತೆ ಇರುವುದರಿಂದ ಆತನ ವಿರುಧ್ದ ಸೂಕ್ತ ಕ್ರಮಕ್ಕಾಗಿ ದಿನಾಂಕ 06-02-2023 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ  ಸಾರಾಂಶ.

Crime Reported in : Mangalore South PS

ದಿನಾಂಕ 31-01-2023  ರಂದು 00-30 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯು ಆಯುಧವನ್ನು ಹಿಡಿದುಕೊಂಡು,  ಹಲ್ಲೆ ಮಾಡುವ ಉದ್ದೇಶದಿಂದ, ಪಿರ್ಯಾದಿದಾರರು ವಾಸವಿರುವ ಮಂಗಳೂರು ನಗರದ ಮಂಗಳಾದೇವಿಯ ದೇವರಾಜ ಕಂಪೌಂಡ್ ನಲ್ಲಿರುವ ಡೋರ್ ನಂಬ್ರ 12-14-1721/1 ನೇ ಭಗಿರಥಿ ಎಂಬ ವಾಸದ ಮನೆಯ ಕಂಪೌಂಡ್ ಆವರಣದ ಒಳಗೆ ಅಕ್ರಮ ಪ್ರವೇಶ ಮಾಡಿ, ಸೊತ್ತು ಹಾನಿ ಮಾಡಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-02-2023 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080