Feedback / Suggestions

Traffic North Police Station   

ಪಿರ್ಯಾದಿ Narendra Muttappa Suvarna ದಿನಾಂಕ 06-03-2023 ರಂದು ತನ್ನ ಬಾಬ್ತು KA-19-HE-2564 ನಂಬ್ರದ ಮೋಟಾರು ಸೈಕಲಿನಲ್ಲಿ ಬೆಳಿಗ್ಗೆ ಕೆಲಸದ ನಿಮಿತ್ತ ಸುರತ್ಕಲ್ ಗುಡ್ಡೆಕೊಪ್ಪಲಕ್ಕೆ ಹೋಗಿದವರು ಅಲ್ಲಿಂದ ವಾಪಾಸು ಮಧ್ಯಾಹ್ನ ತನ್ನ ಮನೆಗೆ ಊಟ ಮಾಡಿ ಬರುವ ಸಲುವಾಗಿ ಸದ್ರಿ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು 1:30 ಗಂಟೆಗೆ ರಾ.ಹೆ.66 ರಲ್ಲಿ ಸುರತ್ಕಲ್ ಜಂಕ್ಷನಿನಿಂದ ಸ್ವಲ್ಪ ಮುಂದೆ ಶಿಶಿರ್ ಮೆಡಿಕಲ್ ಬಳಿ ತಲುಪಿದಾಗ, ಮಂಗಳೂರು ಕಡೆಯಿಂದ KA-19-MB-8547 ನೇ ನಂಬ್ರದ ಕಾರನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ, ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಬಲಕಾಲಿನ ಹಿಮ್ಮಡಿಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ, ಬಲಕೈ ಮೊಣಗಂಟಿಗೆ, ಹಣೆಯ ಎಡಭಾಗದಲ್ಲಿ, ಎಡಕಾಲಿನ ಮೀನಖಂಡದ ಬಳಿ ತರಚಿದ ಗಾಯವಾಗಿದ್ದು, ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.         

Traffic North Police Station       

ಪಿರ್ಯಾದಿ Manoj K S ಸ್ನೇಹಿತರಾದ ಶಶಾಂಕ್ (20 ವರ್ಷ) ಹಾಗೂ ಚೇತನ್ (21 ವರ್ಷ) ರವರು ದಿನಾಂಕ: 07-03-2023 ರಂದು ಬೆಳಗಿನ ಜಾವ ಸಮಯ ಸುಮಾರು 00:30 ಘಂಟೆಗೆ ಕರಂಬಾರು ಗ್ಯಾಸ್ ಸ್ಟೇಶನ್ ಹತ್ತಿರದಲ್ಲಿರುವ ದಿವಾನ್ ಹೈಟ್ಸ್ ನಲ್ಲಿರುವ ಬಾಡಿಗೆ ಮನೆಯಿಂದ ಪಡುಬಿದ್ರೆ ಕಡೆಗೆ KA-05-KY-7237 ನಂಬ್ರದ ಮೋಟಾರ್ ಸೈಕಲಿನಲ್ಲಿ ಚೇತನ್ ಸವಾರನಾಗಿಯೂ ಮತ್ತು ಶಶಾಂಕ್ ರವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಕಾವೂರು ಕೂಳೂರು ಮಾರ್ಗವಾಗಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಾಹೆ 66ರ ಡಾಮಾರು ರಸ್ತೆಯಲ್ಲಿ ಪಡುಬಿದ್ರೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 1:00 ಘಂಟೆಗೆ ಸುರತ್ಕಲಿನ NITK TOLL GATE ಹತ್ತಿರ ಸಮೀಪಿಸುತ್ತಿದ್ದಂತೆ ಡಾಮಾರು ರಸ್ತೆಯಲ್ಲಿರುವ ಹಂಪ್ಸ್ ನ್ನು ಗಮನಿಸದೇ ನಿರ್ಲಕ್ಷ್ಯತನ ಮತ್ತು ದುಡುಕುತನದಿಂದ ಅಪಾಯಾಕಾರಿ ರೀತಿಯಲ್ಲಿ ಮೋಟಾರ್ ಸೈಕಲನ್ನು ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನು ತನ್ನ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಜಾರಿಕೊಂಡು ಬಿದ್ದಿರುತ್ತಾರೆ, ಈ ಅಪಘಾತದಿಂದ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತಿದ್ದ ಶಶಾಂಕನಿಗೆ ಹಣೆಯ ಮೇಲೆ ಚರ್ಮ ಹರಿದ ರೀತಿಯ ರಕ್ತಗಾಯ, ತಲೆಯ ಹಿಂಬದಿ ರಕ್ತಗಾಯ, ಬಲಕೈ ನ  ಬೆರಳುಗಳಿಗೆ ಚರ್ಮ ತರಚಿದ ರಕ್ತಗಾಯ ಹಾಗೂ ಎರಡೂ ಕಾಲಿನ ಬೆರಳಿಗಳಿಗೆ ಮತ್ತು ಎರಡೂ ಕಾಲಿನ ಮೊಣಗಂಟಿಗೆ ಚರ್ಮ ಹರಿದ ರೀತಿಯ ರಕ್ತಗಾಯವಾಗಿದ್ದು ಮೋಟಾರ್ ಸೈಕಲ್ ಸವಾರನಾದ ಚೇತನ್ ನಿಗೆ ಬಲಕಣ್ಣಿನ ಹುಬ್ಬಿನ ಹತ್ತಿರ ಚರ್ಮ ತರಚಿದ ರೀತಿಯ ಗಾಯ, ಬಲಕಾಲಿನ ಮೊಣಗಂಟಿಗೆ ಹಾಗೂ ಎರಡೂ ಕೈ ಮೂಂಗೈಗಳಿಗೆ ಚರ್ಮ ತರಚಿದ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹಸವಾರ ಶಶಾಂಕನು ಚಿಕಿತ್ಸೆ ಸ್ಪಂದಿಸದೇ ಬೆಳಗಿನ ಜಾವ ಸಮಯ ಸುಮಾರು 3:06 ಘಂಟೆಗೆ ಮೃತ ಪಟ್ಟಿರುವುದಾಗಿದೆ ಎಂಬಿತ್ಯಾದಿ.       

Bajpe PS

ಪಿರ್ಯಾದಿ Smt Shalini ಗಂಡ ದಿನಾಂಕ 06.03.2023 ರಂದು ಬೆಳಗ್ಗೆ ತಮ್ಮ ಸ್ಕೂಟರ್ ನಂಬ್ರ KA19 HG 9986 ನೇದರಲ್ಲಿ ಕೆಲಸಕ್ಕೆ ಮಂಗಳೂರಿಗೆ ಹೋಗುವ ಸಮಯ ಬೆಳಗ್ಗೆ ಸುಮಾರು 09.00 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಸೇತುವೆ ಬಳಿ ಹೋಗುತಿದ್ದಾಗ ಹಿಂದಿನಿಂದ ಬಂದ KA19 AA 180 ನೇ ರೇಷ್ಮಾ ಎಂಬ ಹೆಸರಿನ ಬಸ್ಸ ಚಾಲಕನಾದ ಪ್ರವೀಣ್ ಎಂಬಾತನು ಬಸ್ಸನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಗಂಡ ಚಲಾಯಿಸುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡನಾದ ಶಶಿಕಾಂತ(55 ವರ್ಷ) ರವರಿಗೆ ಬಲಕೈನ ಮುಂಗೈಗೆ ಮೂಳೆ ಮುರಿತದ ಗಾಯವಾಗಿದ್ದು ಗಾಯಾಳವನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು ಸ್ಕೂಟರ್ ನೋಡಲಾಗಿ ಜಖಂಗೊಂಡಿರುತ್ತದೆ ಎಂಬಿತ್ಯಾದಿಯಾಗಿದೆ

Mangalore North PS

ದಿನಾಂಕ 07.03.2023 ರಂದು ಬೆಳಗ್ಗೆ 10:00 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ರಾವ್ ಆಂಡ್ ರಾವ್ ಸರ್ಕಲ್ ಬಳಿ ಸಲ್ಮಾನ್ (25), ವಾಸ: ಕಲ್ವಾಲಿ ಭೋಜ್ಪುರ ಗೇಟ್ ಕೋಲಿ ಅಲೀಗರ್, ಉತ್ತರ ಪ್ರದೇಶ  ಅಮಲಿನಲ್ಲಿರುವುದನ್ನು ಕಂಡು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ  ಒಪ್ಪಿಕೊಂಡಿರುತ್ತಾನೆ.  ಸದ್ರಿಯವನನ್ನು ವೈದ್ಯರ ಮುಂದೆ ಹಾಜರುಪಡಿಸಿದ್ದಲ್ಲಿ ವೈದ್ಯರು ಪರೀಕ್ಷಿಸಿ ಸಲ್ಮಾನ್ (25) ಎಂಬಾತನು Tetrahydracannabinoid (Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವೈದ್ಯಕೀಯ ದೃಡಪತ್ರವನ್ನು ನೀಡಿರುತ್ತಾರೆ. ಸಲ್ಮಾನ್ ಎಂಬುವನ ವಿರುದ್ದ ಪ್ರಕರಣ ದಾಖಲಿಸಿ   ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತೇನೆ.    ಎಂಬಿತ್ಯಾದಿ

                                   

 Mulki PS

ಪಿರ್ಯಾದಿ  Mahammad Fayaz ಕಾರ್ನಾಡಿನ ಲತೀಫ್ ರವರ ಮಗ ಇಮ್ರಾಜ್ ಎಂಬಾತನಿಂದ RITZ ಕಾರನ್ನು ಹಡಮಾನವಿರಿಸಿದ ವಿಚಾರವಾಗಿ ಹಣವನ್ನು ವಾಪಸ್ ಪಡೆಯುವ ವಿಚಾರವಾಗಿ ದಿನಾಂಕ 06-03-2023 ರಾತ್ರಿ 09.35 ಗಂಟೆಗೆ ಇಮ್ರಾಜ್ ನು ಮೊಬೈಲ್ ನಲ್ಲಿ ಕರೆಮಾಡಿ ಕಾರಿನ ಮಾಲೀಕರು ಬಂದಿದ್ದಾರೆ  ಕಾರ್ನಾಡಿನ ಗಾಂಧಿ ಮೈದಾನಕ್ಕೆ ಬಾ ಎಂದು ತಿಳಿಸಿದಂತೆ ಪಿರ್ಯಾದಿದಾರರು ಗಾಂಧಿ ಮೈದಾನಕ್ಕೆ ಹೋದ ಸಂದರ್ಭದಲ್ಲಿ ರಾತ್ರಿ 10.00 ಗಂಟೆಗೆ   ಆರೋಪಿತರಾದ ಇಮ್ರಾಜ್ ಕೊಲ್ನಾಡಿನ ಅನೀಶ್, ಲತೀಫ್, ಇಮ್ರಾನ್ ಮತ್ತು ರಿಜ್ವಾನ್ ರವರು ದೊಂಬಿ ನಡೆಸುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಪಿರ್ಯಾದಿದಾರರನ್ನು  ಅಕ್ರಮವಾಗಿ ತಡೆದು ನಿಲ್ಲಿಸಿ ನಾಯಿಂಡ ಮೊನೆ, ಬೇವರ್ಷಿ ಎಂದು ಅವ್ಯಾಚ ಶಬ್ದಗಳಿಂದ ಬೈದು ಲತೀಫ್ ನು ಹಿಡಿದುಕೊಂಡಿದ್ದ ರಾಡಿನಿಂದ ಪಿರ್ಯಾದಿದಾರರ  ಸೊಂಟದ ಎಡಬದಿಗೆ ಹೊಡೆದು ಇತರರು  ಪಿರ್ಯಾದಿದಾರರ ಕೈಗಳ ತೊಳಿಗೆ ಹೊಡೆದಿರುತ್ತಾರೆ, ಇಮ್ರಾನ್ ನು ಪಿರ್ಯಾದಿದಾರರ ಎಡ ಕೈಯಿಗೆ ಕಚ್ಚಿರುತ್ತಾನೆ ಹಾಗೂ ಇಮ್ರಾಜ್ ನು ನಿನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ” ಎಂಬಿತ್ಯಾದಿ.

Mangalore East Traffic PS                

ಪಿರ್ಯಾದಿ ಶ್ರೀಮತಿ ಸ್ರೀಲೇಖ.ಟಿ.ವಿ ಪ್ರಾಯ-48 ವರ್ಷ ಎಂಬವರು ಮನೆಯಲ್ಲಿದ್ದ ವೇಳೆ ಪಿರ್ಯಾದಿದಾರರ ಗಂಡ ರಾಘವೇಂದ್ರ ರವರಿಗೆ ಅಪಘಾತ ಸಂಭವಿಸಿದ ವಿಚಾರವನ್ನು ತಿಳಿದು ಸಿಟಿ ಆಸ್ಪತ್ರೆಗೆ ತೆರಳಿ ತನ್ನ ಗಂಡನಲ್ಲಿ ಅಪಘಾತದ ಬಗ್ಗೆ ವಿಚಾರಿಸಲಾಗಿ ಈ ದಿನ ದಿನಾಂಕ: 06-03-2023 ರಂದು 17:50 ಗಂಟೆಗೆ ಪಿರ್ಯಾದಿದಾರರ ಗಂಡ ರಾಘವೇಂದ್ರ ರವರು ಶಿವಭಾಗ್ ಹಾಪ್ ಕಾಮ್ಸ್ ನಿಂದ ಹಣ್ಣು ಹಂಪಲು ಖರೀದಿಸಲು ಮನೆಯಿಂದ ಹೊರಟು ನಂತೂರು ಮೂಲಕ ಶಿವಭಾಗ್ ಕಡೆಗೆ ಫೂಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಾ ಕದ್ರಿ ಟೋಲ್ ಗೇಟ್ ಬಳಿ ಇರುವ ಚೆಫ್ಸ್ ಎದುರುಗಡೆ ತಲುಪಿದಾಗ KA-19-D-4707 ನಂಬ್ರದ ರೂಟ್ ನಂಬ್ರ; 3Bನೇ ಖಾಸಗೀ ಸಿಟಿ ಬಸ್ಸನ್ನು ಅದರ ಚಾಲಕ ಮಣಿಕಂಠ ಎಂಬಾತನು ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ತಿರುವು ಪ್ರದೇಶದಲ್ಲಿ ಅತೀ ವೇಗವಾಗಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ನಿಯಂತ್ರಿಸಲಾಗದೇ ಚೆಫ್ಸ್ ಮುಂಭಾಗ ರಸ್ತೆ ಬದಿಯಲ್ಲಿ ನಿಂತಿದ್ದ  KA-19-EV-2709 ನಂಬ್ರದ ಚೆಫ್ಸ್ ನ ಮೋಟಾರು ಸೈಕಲಿಗೆ ಢಿಕ್ಕಿಪಡಿಸಿದ್ದು, ಬಳಿಕ ಮುಂದುವರಿದು ಅದರ ಪಕ್ಕದಲ್ಲಿದ್ದ KA-19-ML-8975 ನಂಬ್ರದ ಕಾರಿನ ಎಡಬದಿಯ ಹಿಂಭಾಗಕ್ಕೆ ಢಿಕ್ಕಿಪಡಿಸಿ ಮುಂದಕ್ಕೆ ತಳ್ಳಿಕೊಂಡು ಫೂಟ್ ಪಾತ್ ಮೇಲೆ ಹೋದ ವೇಳೆ ಫೂಟ್ ಪಾತ್ ಮೇಲೆ ನಡೆಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಗಂಡ ರಾಘವೇಂದ್ರ ರವರಿಗೆ ಢಿಕ್ಕಿಯಾಗಿದ್ದು, ಢಿಕ್ಕಿಯ ಪರಿಣಾಮ ಪಾದಾಚಾರಿ ರಾಘವೇಂದ್ರ ರವರು ಚೆಫ್ಸ್ ಮುಂಭಾಗ ಕಾಂಕ್ರೀಟ್ ನೆಲಕ್ಕೆ ಬಿದ್ದು, ಬಲಕೆನ್ನೆಯ ಬಳಿ ಮತ್ತು ಬಲಕೈ ಕಿರುಬೆರಳಿಗೆ ಮೂಳೆ ಮುರಿದ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹಣೆಯ ಎಡಬದಿಗೆ ಚರ್ಮ ಹರಿದ ರಕ್ತ ಗಾಯ, ಬಲ ಕೆನ್ನೆಗೆ ತರಚಿದ ಮತ್ತು ಊದಿಕೊಂಡ ಗಾಯ, ಎರಡೂ ಮೊಣಕಾಲುಗಳಿಗೆ ಮತ್ತು ಎಡ ಮೊಣಕೈಗೆ ತರಚಿದ ಗಾಯಗಳಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಅಪಘಾತ ಪಡಿಸಿದ ಬಸ್ಸು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Traffic North Police Station                             

ಪಿರ್ಯಾದಿ Smt. Sumangala C Kotian  ದಿನಾಂಕ 05-03-2023 ರಂದು ಅವರ ನೆರೆಮನೆಯ ವಿನಯ್ ಮಾನೆ ಮತ್ತು ಮನೋಜ್ ಹಾಗೂ ಇತರರೊಂದಿಗೆ ಪಿಕ್ ನಿಕ್ ಹೋದವರು ಮರಳಿ ತನ್ನ ಸ್ಕೂಟರ್ ನಂಬ್ರ KA-19_EG-3111 ನೇದರಲ್ಲಿ ವಿನಯ್ ರವರನ್ನು ಸಹಸವಾರರಾಗಿ ಹಾಗೂ ಮತ್ತೊಂದು ಗಾಡಿಯಲ್ಲಿ ಮನೋಜ್ ಕುಮಾರ್ ರವರು ಕೂಳೂರಿನಿಂದ ಹೊರಟು ಕೋಡಿಕಲ್ ಕ್ರಾಸ್ ಬಳಿ ತಲುಪಿದಾಗ ರಾತ್ರಿ ಸಮಯ ಸುಮಾರು 07:30 ಗಂಟೆಗೆ ಎದುರುಗಡೆ ಹೋಗುತ್ತಿದ್ದ ಮನೋಜ್ ಕುಮಾರ್ ಗಾಡಿಯಿಂದ ಇಳಿದು ರಸ್ತೆಯ ಆಚೆ ನಿಂತುಕೊಂಡಿದ್ದು, ಪಿರ್ಯಾದಿದಾರರು ತನ್ನ ಸ್ಕೂಟರಿನಲ್ಲಿ ಮಂಗಳೂರು ಉಡುಪಿ ರಸ್ತೆಯನ್ನು ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಕಾರ್ ನಂಬ್ರ KA-20-ME-5808 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಮುಂದೆ ಚಲಿಸಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಮನೋಜನಿಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು ಮತ್ತು ಸಹಸವಾರ ವಿನಯ್ ಮಾನೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಹಾಗೂ ಮನೋಜ್ ಕೂಡ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಗೈ ಮೊಣಗಂಟಿನ ಬಳಿ ಹಾಗೂ ಎಡ ತೊಡೆಯ ಬಳಿ ಗುದ್ದಿದ ರೀತಿಯ ಗಾಯ, ವಿನಯ್ ಮಾನೆಗೆ ಎಡಗೈ ರಿಸ್ಟ್ ಬಳಿ ಮೂಳೆ ಮುರಿತದ ಗಾಯವಾಗಿದ್ದು ಹಾಗೂ ಮನೋಜನಿಗೆ ಎಡಕಾಲಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಅಪಘಾತ ಪಡಿಸಿದ ಕಾರು ಚಾಲಕನು ಗಾಡಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಅವರ ಹೆಸರು ಗೊತ್ತಿರುವುದಿಲ್ಲ ಹಾಗೂ ಅಪಘಾತದಿಂದ ಗಾಯಗೊಂಡವರು ಎ ಜೆ ಆಸ್ಪತ್ರೆ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

Ullal PS   

ಪಿರ್ಯಾದಿ Shashikanth Dikshith ಮಗ ಉತ್ತಮ್ ದೀಕ್ಷಿತ್ ರವರಿಗೆ ಎಂಬಿಬಿಎಸ್ ಸೀಟ್ ಬಗ್ಗೆ ದಿನಾಂಕ.16-12-2022 ರಂದು 14:44 ಗಂಟೆಗೆ 8527625115 ನೇ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ.  ನೇಯದಕ್ಕೆ ಕರೆ ಮಾಡಿದ ಮಹಿಳೆಯೊಬ್ಬರು ಕೌನ್ಸಿಲಿಂಗ್ ಮೆನೆಜ್ಮೆಂಟ್ ಕೋಟಾದಲ್ಲಿ ಮೆಡಿಕಲ್ ಸೀಟ್  ಮಾಡಿಕೊಡುವುದಾಗಿ ತಿಳಿಸಿದಾಗ ರೂ.50 ಲಕ್ಷದ ಒಳಗಾದರೆ ಮೆಡಿಕಲ್ ಸೀಟ್ ಬೇಕಾಗಿರುತ್ತದೆ ಎಂದು ಪಿರ್ಯಾದಿದಾರರು ತಿಳಿಸಿದಾಗ ಸ್ವಲ್ಪ ಹೊತ್ತಿನ ಬಳಿಕ ಸಂಜೆ 6:00 ಗಂಟೆಗೆ 9355273847 ನೇ ನಂಬ್ರದಿಂದ ನೇಹ ಎಂಬ ಮಹಿಳೆ ಪಿರ್ಯಾದಿದಾರರಿಗೆ ಕರೆ ಮಾಡಿ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ದೇರಳಕಟ್ಟೆ ಮಂಗಳೂರು ಎಂಬಲ್ಲಿ ಸೀಟ್ ಇದೆ, ಇದಕ್ಕೆ ರೂ.15 ಲಕ್ಷ ಕ್ಯಾಪಿಟೇಶನ್ ಫೀಸ್ ಮತ್ತು ರೂ.7.5 ಲಕ್ಷ ಹಣ ಫಸ್ಟ್ ಈಯರ್ ಫೀಸ್ ಕೊಡಬೇಕು, ಒಂದು ವರ್ಷದ ಹಾಸ್ಟೇಲ್ ಫೀಸ್ ಉಚಿತವಾಗಿ ಕೊಡುತ್ತೇವೆ, ದಾಖಲಾತಿಗಳನ್ನು ವಾಟ್ಸ್ ಆ್ಯಪ್ ಮಾಡಿ ಎಂದು ಮಾಹಿತಿ ತಿಳಿಸಿದ್ದು, ದಿನಾಂಕ. 17-12-2022 ರಂದು ಪಿರ್ಯಾದಿದಾರರು ಕೆನರ ಬ್ಯಾಂಕ್, ಚಿಟ್ಟ ರೋಡ್ ಬೀದರ್ ಶಾಖೆಯಲ್ಲಿ ಹೊಂದಿರುವ ತನ್ನ ಪತ್ನಿ ಶೈಲಜ ದೀಕ್ಷಿತ್ ರವರ ಖಾತೆ ನಂಬ್ರ.  ದಿಂದ. ರೂ.7,50,000/- ಮೌಲ್ಯದ ಡಿಮಾಂಡ್ ಡ್ರಾಫ್ಟ್ ನಂ. ನ್ನು ಪಡೆದುಕೊಂಡು ಅದರ ಪೊಟೊವನ್ನು ವಾಟ್ಸ್ ಆ್ಯಪ್ ಮೂಲಕ ನೇಹರವರ ಮೊಬೈಲ್ ನಂಬ್ರ. 9355273847 ಕ್ಕೆ ರವಾನಿಸಿದ್ದು, ನಂತರ ದಿನಾಂಕ. 18-12-2022 ರಂದು ಪಿರ್ಯಾದಿದಾರರ ಮಗನ ದಾಖಲಾತಿಗಳ ಪೊಟೋವನ್ನು ನೇಹರವರಿಗೆ ರವಾನಿಸಿದ್ದು, ನಂತರ ದಿನಾಂಕ. 20-12-2022 ರಂದು ಪಿರ್ಯಾದಿದಾರರ ಮಗ ಉತ್ತಮ್ದೀಕ್ಷಿತ್ನ ಮೆಡಿಕಲ್ ಸೀಟ್ಗೆ ಸಂಬಂಧಪಟ್ಟಂತೆ 9205481751 ನೇ ನಂಬ್ರದಿಂದ ಪಾಯಲ್ (ಸೀನಿಯರ್ ಎಕ್ಸ್ಕ್ಯೂಟಿವ್) ರವರು ಪಿರ್ಯಾದಿದಾರರಿಗೆ ಕರೆ ಮಾಡಿ ಮೆಡಿಕಲ್ ಸೀಟ್ ಕನ್ಫರ್ಮ್ ಇದೆ, ದಿನಾಂಕ. 21-12-2022 ರಂದು ದೇರಳಕಟ್ಟೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಎಂಬಲ್ಲಿಗೆ ಬರುವಂತೆ ತಿಳಿಸಿ ಅಲ್ಲಿ ಯಶ್ ಎಂಬ ವ್ಯಕ್ತಿಯು ಭೇಟಿ ಮಾಡುತ್ತಾರೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಮತ್ತು ಅವರ ಮಗ ದೀಕ್ಷಿತ್ ದಿನಾಂಕ.21-12-2022 ರಂದು ದೇರಳಕಟ್ಟೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಗೆ ಬೆಳಿಗ್ಗೆ 11-15 ಗಂಟೆಗೆ ಎಡ್ಮಿನ್ಸ್ಟ್ರೇಶನ್ ವಿಭಾಗಕ್ಕೆ ಬಂದಿದ್ದು, ನಂತರ ಯಶ್ ಎಂಬ ವ್ಯಕ್ತಿಯ ಮೊಬೈಲ್ ನಂಬರ್ 7304082371 ಪಿರ್ಯಾದಿದಾರರು ಕರೆ ಮಾಡಿದಾಗ ಪಿರ್ಯಾದಿದಾರರನ್ನು ಮತ್ತು ಅವರ ಮಗನನ್ನು ಕಾಲೇಜ್ ಮೈನ್ ಗೇಟ್ ಬಳಿ ಬರಮಾಡಿಸಿಕೊಂಡು ಅಲ್ಲಿ 7304082371 ನೇ ನಂಬ್ರದಿಂದ ರಾಹುಲ್ ಎಂಬವರು ಪಿರ್ಯಾದಿಗೆ ಕರೆ ಮಾಡಿ ಸಂಪರ್ಕಿಸಿಕೊಂಡು ಆಸ್ಪತ್ರೆಯ ಪಾರ್ಕಿಂಗ್ ಏರಿಯಾದ ಬಳಿ ಇರುವ ಸದ್ರಿ ವಿದ್ಯಾಸಂಸ್ಥೆಯ ಮುಖ್ಯಸ್ಥರ ಚೇಂಬರ್ಗೆ ಹೋಗುವಾಗ ಅವರ ಚೇಂಬರ್ನಿಂದ ಇಫ್ತಿಕಾರ್ ಅಹಮ್ಮದ್ ಎಂಬ ವ್ಯಕ್ತಿ ಹೊರಗೆ ಬಂದು ಮೆಡಿಕಲ್ ಸೀಟ್ ಕನ್ಫರ್ಮ್ ಆಗಿದೆ. ಇದಕ್ಕೆ ಸಂಬಂಧಪಟ್ಟ ಫಾರ್ಮ್ ಭರ್ತಿಮಾಡಿಕೊಡಬೇಕು, ಹಣದ ವ್ಯವಸ್ಥೆ ಮಾಡಿರುತ್ತೀರಾ ಎಂದು ತಿಳಿಸಿ ರಾಹುಲ್ ಎಂಬ ವ್ಯಕ್ತಿಯು ಪಿರ್ಯಾದಿ ಮತ್ತು ಅವರ ಮಗನನ್ನು ಅಲ್ಲಿಯ ಸಮೀಪದ ಹೊಟೇಲ್ಗೆ ಕರೆದುಕೊಂಡು ಹೋಗಿ ರಾಹುಲ್ ಫಾರ್ಮ್ ಭರ್ತಿ ಮಾಡಿ, ಇವರ ರುಜು ಮಾಡಿ ಉತ್ತಮ್ ದೀಕ್ಷಿತ್ನ ಭಾವಚಿತ್ರವನ್ನು ಅಂಟಿಸಿ ಅದೇ ಫಾರ್ಮ್ಗೆ ರೂ.7,50,000/- ಮೌಲ್ಯದ ಡಿ.ಡಿ. ಲಗ್ತೀಕರಿಸಿ ಈ ಎಲ್ಲಾ ದಾಖಲಾತಿಗಳನ್ನು ರಾಹುಲ್ ರವರು ತೆಗೆದುಕೊಂಡು  ಕಾಲೇಜ್ ಕ್ಯಾಂಪಸ್ನ ಪಾರ್ಕಿಂಗ್ ಏರಿಯಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಇಫ್ತಿಕಾರ್ ಅಹಮ್ಮದ್ ಅವರ ಕೈಯಲ್ಲಿದ್ದ ಮೆಡಿಕಲ್ ಸೀಟ್ನ ಅಡ್ಮಿಷನ್ ಲೆಟರ್ ಕೊಟ್ಟು , ಬಳಿಕ ಇಫ್ತಿಕಾರ್ ಅಹಮ್ಮದ್ ರವರು ಫಿರ್ಯಾದಿದಾರರಿಂದ ರೂ.15,00,000/- ನಗದು ಹಣ ಪಡೆದುಕೊಂಡು ಬಳಿಕ ಒಂದು ಗಂಟೆಯ ಬಳಿಕ ಅಡ್ಮಿಷನ್ ಅರ್ಡರ್ನ ಪೊಟೋವನ್ನು 7304082371 ನೇ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬರ್ಗೆ ವಾಟ್ಸ್ಆ್ಯಪ್ ಮೂಲಕ ರವಾನಿಸಿರುತ್ತಾರೆ. ನಂತರ 27-12-2022 ರಂದು 7304082371 ನಿಂದ ಇಫ್ತಿಕಾರ್ ಅಹಮ್ಮದ್ ರವರು ಪಿರ್ಯಾದಿದಾರರ ಮೊಬೈಲ್ ಗೆ ಕರೆ ಮಾಡಿ ಉತ್ತಮ್ ದೀಕ್ಷಿತ್ನ 2022-23 ನೇ ಸಾಲಿನ ಮೆಡಿಕಲ್ ಸೀಟ್ ಆಗಿದೆ, ದಿನಾಂಕ. 6-1-2023 ರಂದು ಕ್ಲಾಸ್ ಪ್ರಾರಂಭ ಆಗುತ್ತದೆ, ಆದರೆ ಡಿಮಾಂಡ್ ಡ್ರಾಪ್ಟ್ ಕ್ಲೀಯರ್ ಇಲ್ಲದ ಕಾರಣ ಡಿಡಿ ಯನ್ನು ಕ್ಯಾನ್ಸಲ್ ಮಾಡಿ ಮೊದಲನೇ ವರ್ಷದ ಟ್ಯೂಶನ್ ಫೀಸ್ ರೂ.7,50,000/- ಹಣವನ್ನು ನಗದು ರೂಪದಲ್ಲಿ ಕೊಡಬೇಕು ಆ ಹಣವನ್ನು ಹೈದರಬಾದ್ ಏರ್ಪೋರ್ಟ್ಗೆ ಬಂದು ಅಲ್ಲಿ ಒಬ್ಬ ವ್ಯಕ್ತಿಯ ಕೈಯಲ್ಲಿ ಕೊಡಬೇಕು ಎಂದು ತಿಳಿಸಿದಂತೆ ದಿನಾಂಕ.28-12-2022 ರಂದು ಪಿರ್ಯಾದಿದಾರರು ಡಿಡಿ ಕ್ಯಾನ್ಸಲ್ ಮಾಡಿದ್ದು, ದಿನಾಂಕ. 29-12-2022 ರಂದು ಪಿರ್ಯಾದಿದಾರರು ಮತ್ತು ಅವರ ಮಗ ಉತ್ತಮ್ದೀಕ್ಷಿತ್ ಹೈದರಬಾದ್ ಏರ್ಪೋರ್ಟ್ಗೆ ಹೋಗಿ ಅಲ್ಲಿ ಕಾದು ಸಂಜೆ ತನಕ ಯಾರೂ ಬಾರದೇ ಇದ್ದ ಕಾರಣ ಅಲ್ಲಿಂದ ವಾಪಾಸು ಮನೆಗೆ ಹೋಗಲು ಹೈದರಬಾದ್ ಏರ್ಪೋರ್ಟ್ನಿಂದ ಬೀದರ್ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಹೋಗುತ್ತ ಹೈದರಬಾದ್ ಏರ್ಪೋರ್ಟ್ ಪಟ್ಟಂಚೂರು ಎಂಬಲ್ಲಿಗೆ ತಲುಪುವಾಗ ಸಂಜೆ 7:15 ಗಂಟೆಗೆ 8954046967 ನೇ ನಂಬ್ರದಿಂದ ಅಶೋಕ್ ಸಿಂಗ್ ಎಂಬ ವ್ಯಕ್ತಿ ಪಿರ್ಯಾದಿಗೆ ಕರೆ ಮಾಡಿ ಅಲ್ಲಿ ಭೇಟಿ ಮಾಡಿ ರೂ.7,50,000/- ನಗದು ಹಣವನ್ನು ಅಶೋಕ್ ಸಿಂಗ್ ಪಡೆದುಕೊಂಡು ಇಫ್ತಿಕಾರ್ ಅಹಮ್ಮದ್ ರವರಿಗೆ ವಿಷಯ ತಿಳಿಸಿರುತ್ತಾರೆ. ನಂತರ ದಿನಾಂಕ.5-1-2023 ರಂದು ಉತ್ತಮ್ ದೀಕ್ಷಿತ್ ರವರು ದೇರಳಕಟ್ಟೆ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ನ ಅಡ್ಮಿಷನ್ ವಿಭಾಗಕ್ಕೆ ಹೋಗಿ ಅಲ್ಲಿ ಅಡ್ಮಿಷನ್ ಆರ್ಡರ್ ತೋರಿಸಿ ವಿಚಾರಿಸುವಾಗ ಸದ್ರಿ ವಿದ್ಯಾಸಂಸ್ಥೆಯವರು ಅಂತಹ ಆದೇಶವನ್ನು ನೀಡಿರುವುದಿಲ್ಲವಾಗಿ ತಿಳಿಸಿರುವ ವಿಚಾರದಿಂದ ಆರೋಪಿಗಳೆಲ್ಲರೂ ಪಿರ್ಯಾದಿದಾರರ ಮಗನಿಗೆ ಮೆಡಿಕಲ್ ಸೀಟ್ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣ ಸಾರಾಂಶ.

 

Last Updated: 07-03-2023 06:10 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080