ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Traffic North Police Station

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ 07.03.2024 ರಂದು ತಾನು ಕೆಲಸ ಮಾಡಿಕೊಂಡಿರುವ ಇನೋವಾ ಕಾರು ನಂಬ್ರ KA-20-B-0230 ರಲ್ಲಿ ತನ್ನ ಸಹೋದರಿ ದೀಪಿಕಾರವರನ್ನು ಸಹ ಪ್ರಯಾಣಿಕೆಯಾಗಿ ಕುಳ್ಳಿರಿಸಿಕೊಂಡು ಸೂರಿಂಜೆಯಿಂದ ಶಿಬರೂರು ಮಾರ್ಗವಾಗಿ ಚಲಾಯಿಸಿಕೊಂಡು ಬರುತ್ತಾ ಮದ್ಯಾಹ್ನ ಸಮಯ ಸುಮಾರು 12:45 ಗಂಟೆಗೆ ಕಯ್ಯೂರು ರಾಘವೇಂದ್ರ ಭಜನಾ ಮಂದಿರದ ಸುಮಾರು 200 ಮೀಟರ್ ಹಿಂದೆ ತಲುಪಿದಾಗ ಮುಂದಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಸೂರಿಂಜೆ ಕಡೆಗೆ ಕಾರು ನಂಬ್ರ KA-20-P-9418 ನೇಯದನ್ನು ಅದರ ಚಾಲಕ ಎಂ.ಕೆ. ರಫೀಕ್ ಎಂಬವರು ಎಂ.ಹೆಚ್.ಇಬ್ರಾಹಿಂ ಎಂಬವರನ್ನು ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡು ಅಪಘಾತ ಪಡಿಸಿದ ಕಾರು ಚಾಲಕ ಎಂ.ಕೆ. ರಫೀಕ್ ರವರ ತಲೆಗೆ ರಕ್ತಗಾಯವಾಗಿದ್ದು, ಸಹ ಪ್ರಯಾಣಿಕ ಎಂ.ಹೆಚ್.ಇಬ್ರಾಹಿಂರವರ ಎದೆಗೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಕಟೀಲು ಕಡೆಗೆ ಕಳುಹಿಸಿಕೊಟ್ಟಿದ್ದು, ಅಪಘಾತದಿಂದ ಪಿರ್ಯಾದಿದಾರರಿಗೆ ಗಲ್ಲಕ್ಕೆ ಗುದ್ದಿದ ರೀತಿಯ ಗಾಯ ಮತ್ತು ಸಹೋದರಿ ದೀಪಿಕಾರವರಿಗೆ ಹಣೆಗೆ ಸಣ್ಣ ರಕ್ತಗಾಯವಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಎಂಬಿತ್ಯಾದಿ

 

Traffic South Police Station                                 

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 07-03-2024 ರಂದು ಪಿರ್ಯಾದಿದಾರರಾದ ಮುಹಮ್ಮದ್ ಸವಾದ್ ಹುಸೇನ್ (37 ವರ್ಷ) ರವರು ಮೊಟಾರು ಸೈಕಲ್ ನಂಬರ್ KA-19-EC-1173 ನೇದನ್ನು ಸವಾರಿ ಮಾಡಿಕೊಂಡು ವಲಚ್ಚಿಲ್ ಕಡೆಗೆ ಹೋಗುತ್ತಿದ್ದ ಸಮಯ ಸುಮಾರು 14-30 ಗಂಟೆಗೆ  ಅಡ್ಯಾರ್ ಸೋಮನಾಥ ಕಟ್ಟೆಯ ಬಳಿ ತಲುಪುತ್ತಿದ್ದಂತೆ KA-70-5438 ನೇ ಲಾರಿ ಚಾಲಕ ವೀಕ್ಷಿತ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷತನದಿಂದ ಲಾರಿಯನ್ನು  ಎಡಭಾಗದಿಂದ ಬಲಭಾಗ ಯು ಟರ್ನ್ ಮಾಡಿದಾಗ ಲಾರಿಯ ಮಧ್ಯ ಭಾಗವು ಫಿರ್ಯಾದಿದಾರರ  ಮೊಟಾರು ಸೈಕಲ್ ನ ಮುಂಭಾಗಕ್ಕೆ  ಡಿಕ್ಕಿಪಡಿಸಿದ್ದು, ಮೊಟಾರು ಸೈಕಲ್ ಲಾರಿಯ ಹಿಂಭಾಗದ ಟಯರ್ ನ ಅಡಿಗೆ ಸಿಲುಕಿಕೊಂಡು  ಪಿರ್ಯಾದಿದಾರರ  ಎಡ ತೊಡೆಯ ಭಾಗ ಕಿತ್ತು ಹೋಗಿ, ಎಡ ಭಾಗದ ಭುಜದಲ್ಲಿ ರಕ್ತಗಾಯ ಗೊಂಡಿದ್ದು   ಪಿರ್ಯಾದಿದಾರರನ್ನು  ಚಿಕಿತ್ಸೆ ಬಗ್ಗೆ ಕೊಲಾಸೋ ಆಸ್ಪತ್ರೆ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ  ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 08-03-2024 04:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080