ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Mohanraj Kaneeruthota  ಇವರ  ಸಹೋದರ  ದಯಾಳು (48 ವರ್ಷ) ಎಂಬವರು ದಿನಾಂಕ 06-04-2024 ರಂದು ರಾತ್ರಿ ಸಮಯ ಸುಮಾರು 7:45 ಗಂಟೆಗೆ ಮಂಗಳೂರು  ತಾಲೂಕು, ಚಿತ್ರಾಪುರ ದ್ವಾರದ ಬಳಿ ಇರುವ M.R.F. ಟಯರ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಸುರತ್ಕಲ್ ರಸ್ತೆಯನ್ನು ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಸ್ಕೂಟರ್ ಒಂದನ್ನು ಅದರ ಸವಾರನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ  ದಯಾಳುರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ದಯಾಳುರವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗುದ್ದಿದ ಗಾಯ, ಎಡಕಾಲಿನ ಮಣಿಗಂಟಿನ ಬಳಿ, ಎದೆಯ ಬಳಿ  ಗುದ್ದಿದ ಗಾಯ, ಎಡಕೈ ಮಣಿಗಂಟೆಇಗೆ ತರಚಿದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಗಾಯಾಳು ದಯಾಳುರವರನ್ನು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಫಘಾತ ಪಡಿಸಿದ ಸ್ಕೂಟರ್ ಸವಾರನು ಅಪಘಾತ ಪಡಿಸಿದ ಬಳಿಕ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಸ್ಕೂಟರ್ ಸಮೇತ ಪರಾರಿಯಾಗಿರುತ್ತಾನೆ  ಎಂಬಿತ್ಯಾದಿ

 

Barke PS          

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:07-04-2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ ಐ ಮಂಗಳೂರು ಉತ್ತರ    ಸಿಬ್ಬಂದಿಯರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬಳ್ಳಾಲ್ ಭಾಗ್ ಬಳಿ ತಲುಪಿದಾಗ ಅಶ್ವಿತ್ 24 ವರ್ಷ ತಂದೆ: ದಿ| ದಾಮೋದರ್ ವಾಸ: 10/12 ಬಂದಲೆ ನೆಜಿಗುರಿ ಬೋಂದೆಲ್ ಮಂಗಳೂರು  ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಮುಂದಿನ ಕ್ರಮದ ಬಗ್ಗೆ ಅಶ್ವಿತ್ ರವರನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರುಏ,ಜೆ ಆಸ್ಪತ್ರೆಗೆ ಕಳುಹಿಸಿದ್ದಲ್ಲಿ   ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿರುವುದಾಗಿದೆಂಬಿತ್ಯಾದಿಯಾಗಿರುತ್ತದೆ

 

Traffic South Police Station                                 

ಫಿರ್ಯಾದಿ AJMATH ALI  A ಇವರು ನಿನ್ನೆ ದಿನ ದಿನಾಂಕ:06-04-2024 ರಂದು ತನ್ನ ತಾಯಿಯಾದ ಹಬೀಬ ನಿಶಾ(59) ರವರನ್ನು ದೇರಳಕಟ್ಟೆಯ ಯೆನಾಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ಸು ಮನೆಗೆ ಹೋಗಲು ತನ್ನ ಬಾಬ್ತು KA-19-EE-0509 ನೇ  ನಂಬ್ರದ ಸ್ಕೂಟರ್ ನಲ್ಲಿ  ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಸುಮಾರು 22-30 ಗಂಟೆಗೆ ದೇರಳಕಟ್ಟೆಯ ಪಂಡಿತ್ ಹೌಸ್ ಬಳಿ ತಲುಪಿದಾಗ ಫಿರ್ಯಾದಿದಾರರ ಹಿಂದಿನಿಂದ ಬೈಕ್ ವೊಂದರ ಸವಾರನು ಬೈಕನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿ ಪಡಿಸಿ ಬೈಕ್ ಸಮೇತ ಪರಾರಿಯಾಗಿರುತ್ತಾನೆ. ಇದರ ಪರಿಣಾಮ ಫಿರ್ಯಾದಿದಾರರ ತಾಯಿ ಸ್ಕೂಟರ್ ನಿಂದ ಡಾಮಾರು ರಸ್ತೆಗೆ ಬಿದ್ದವರನ್ನು ಫಿರ್ಯಾದಿದಾರರು ಮತ್ತು ಸಾರ್ವಜನಿಕರು ಉಪಚರಿಸಿ ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ತಲೆಯ ಹಿಂಬದಿಗೆಗುದ್ದಿದ ಗಾಯ, ಬಲ ತೊಡೆಗೆ ಮೂಳೆ ಮುರಿತದ ಗಾಯ ಮತ್ತು ಬಲ ಭುಜದಲ್ಲಿ ಮೂಳೆ ಮುರಿತದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಫಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಎಂಬಿತ್ಯಾದಿ

 

Urva PS   

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ: 07-04-2024  ರಂದು  ವಿನಯಕುಮಾರ್, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಉರ್ವಾ ಪೊಲೀಸ್ ಠಾಣೆ ರವರು ರೌಂಡ್ಸ್, ಕರ್ತವ್ಯದಲ್ಲಿರುವ  ಸಮಯ ಅಶೋಕನಗರದ ರಹಿಮಾನಿಯಾ ಸಾ ಮಿಲ್ ಬಳಿ ತಲುಪಿದಾಗ ಅಲ್ಲಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ಓರ್ವನು ಸೀಗರೇಟ್ ಸೇದುತ್ತಾ ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದು, ಪಿರ್ಯಾದಿದಾರರು ಆತನ ಬಳಿ ಹೋಗಿ  ವಿಚಾರಿಸಲಾಗಿ ಆತನು ತನ್ನ ಹೆಸರು ಅಬೂಬಕ್ಕರ ಸಿದ್ದೀಕ್ @ ಸಮೀರ್, ಪ್ರಾಯ: 21 ವರ್ಷ, ತಂದೆ:ದಿ|| ಅಶ್ರಫ್, ವಾಸ: ಡೋರ್ ನಂಬ್ರ: 5686, ಜೆ ಎಂ ರೋಡ್,  ಜುಮ್ಮಾ ಮಸೀದಿ ಹತ್ತಿರ, ಮುಕ್ಕ, ಮಂಗಳೂರು ಎಂಬುದಾಗಿ ತಿಳಿಸಿದ್ದು, ಈತನು ಮಾತನಾಡುವಾಗ ಮಾತು ತೊದಲುತ್ತಾ ಬಾಯಿಯಿಂದ ಗಾಂಜ ಸೇವನೆ ಮಾಡಿದ ವಾಸನೆ ಬರುತ್ತಿದ್ದರಿಂದ ಮುಂದಿನ ಕ್ರಮದ ಬಗ್ಗೆ  ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಈತನನ್ನು ಪರೀಕ್ಷಿಸಿದ ಅಲ್ಲಿನ ವೈಧ್ಯರು ಗಾಂಜಾ ಸೇವನೆ ಮಾಡಿರುವುದಾಗಿ ದೃಢಪತ್ರ ನೀಡಿರುವುದಾಗಿದೆ

ಇತ್ತೀಚಿನ ನವೀಕರಣ​ : 11-04-2024 10:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080