ಅಭಿಪ್ರಾಯ / ಸಲಹೆಗಳು

Crime report in Mangalore East PS

ದಿನಾಂಕ: 06-06-2022 ರಂದು ಮಂಗಳೂರು ನಗರದ ಬೆಂದೋರ್ ವೆಲ್ ಜಂಕ್ಷನ್ ಬಳಿಯಿರುವ ಭೂಮಿಕಾ ಟವರ್ಸ್ ಎಂಬ ಕಟ್ಟಡದ ನೆಲ ಮಹಡಿಯಲ್ಲಿರುವ ವಿನ್ನರ್ಸ್ ರಿಕ್ರಿಯೇಷನ್ ಕ್ಲಬ್ ಎಂಬಲ್ಲಿ ಅದೃಷ್ಟದ ಇಸ್ಪೀಟ್ ಜೂಜಾಟದ ಅಂದರ್ ಬಾಹರ್ ಆಟವನ್ನು ಆಟವಾಡುತ್ತಿದ್ದಾರೆ ಎಂಬ ಮಾಹಿತಿಯು ಬಂದ ಮೇರೆಗೆ Rajendra ಪಿಎಸ್ಐ ಸಿಸಿಬಿ ಮತ್ತು ಸಿಬ್ಬಂದಿಯವರು 19-10  ಗಂಟೆಗೆ ಧಾಳಿ ಮಾಡಿ ಇಸ್ಪೀಟು ಎಲೆಗಳನ್ನು ಉಪಯೋಗಿಸಿಕೊಂಡು ಅಂದರ್ ಬಾಹರ್ ಎಂಬಅದೃಷ್ಟದ ಇಸ್ಪೀಟ್ ಜೂಜಾಟವನ್ನು  ಹಣವನ್ನು ಪಣವಾಗಿಟ್ಟುಕೊಂಡು ಆಡುತ್ತಿದ್ದ ಹತ್ತೊಂಬತ್ತು ಜನ Srinivas, Ashok Kumar, Harish Poojary, Mohammed Ismail, PUNITH K Rao, Neerikshith, Pradeep, Shravan Kumar, Pradeep Salian, Devraj Shetty, Ganesh M, Charan Kumar, Hussain Umar, Sadashiva, Jayanth, Mohammed Sharif, VIJITH, Keerthi, Dheeraj ಆಪಾದಿತರನ್ನು ವಶಕ್ಕೆ ಪಡೆದುಕೊಂಡು ಈ ಅದೃಷ್ಟದ ಆಟಕ್ಕೆ ಉಪಯೋಗಿಸಿದ 52 ಇಸ್ಪೀಟು ಎಲೆಗಳು, ಹಣ ರೂ. 13,010/- ವಶಕ್ಕೆ ಪಡೆದು ಪ್ರಕರಣ ದಾಖಲಿಸಿತ್ತಿರುವುದಾಗಿದೆ ಎಂಬಿತ್ಯಾದಿ.

Mangalore North PS

ಪಿರ್ಯಾದಿ SWATHI NAYAK SUJIR ಮಂಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಸುಜೀರ್ಕರ್ ಬ್ರದರ್ಸ್ ಕಛೇರಿಯಲ್ಲಿ  ಇಟ್ಟಿದ್ದ ಕಂದು ಬಣ್ಣದ ಲೆನೋವೊ ಕಂಪನಿಯ ಸುಮಾರು 52,000/- ರೂ ಮೌಲ್ಯದ ಲ್ಯಾಪ್ ಟಾಪ್ ಅನ್ನು ದಿನಾಂಕ 06.06.2023 ರಂದು ಬೆಳಿಗ್ಗೆ 10.20 ಗಂಟೆಗೆ ಕಛೇರಿಯ ಸಿಬ್ಬಂದಿಗಳು ಕೆಳಗೆ ದಾಖಲಾತಿ ತೆಗೆದುಕೊಳ್ಳಲು ಬಂದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸದ್ರಿ ಲ್ಯಾಪ್ ಟಾಪ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾನೆ. ಕೂಡಲೇ ಕಛೇರಿ ಸಿಬ್ಬಂದಿ ಎಲ್ಲ ಕಡೆ ಹುಡುಕಾಲಾಗಿ ಸದ್ರಿ ವ್ಯಕ್ತಿಯು ಸಿಕ್ಕಿರುವುದಿಲ್ಲ. ಸದ್ರಿ ಲ್ಯಾಪ್ ಟಾಪ್ ಕಳವಾದ  ದೃಶ್ಯ ಹಾಗೂ ಅಪರಿಚಿತ ವ್ಯಕ್ತಿಯ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿರುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಳವಾದ  ಲ್ಯಾಪ್ ಟಾಪ್ ನ್ನು  ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ ದೂರಿನ ಸಾರಾಂಶ.

Traffic North Police Station                   

ಪಿರ್ಯಾದಿ Husainabba ತಮ್ಮನಾದ ಉಮ್ಮರಬ್ಬ ಬಶೀರ್ ಅಹಮದ್ (55 ವರ್ಷ) ಎಂಬುವರು ನಿನ್ನೆ ದಿನ ದಿನಾಂಕ: 06-06-2023 ರಂದು ಅವರ ಬಾಬ್ತು KA-20-EZ-1269 ನಂಬ್ರದ ಸ್ಕೂಟರಿನಲ್ಲಿ ಮಸುದಾ ಮತ್ತು ಆಕೆಯ ಮಕ್ಕಳಾದ ಅಶ್ಮಿಲ್ (7 ವರ್ಷ) ಮತ್ತು ಮರಿಯಂ ಅಮ್ರ (4 ವರ್ಷ) ಎಂಬುವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೂಳುರಿನಿಂದ ಸುರತ್ಕಲ್ ಕಡೆಗೆ ಬರುತ್ತಿದ್ದ ಸಮಯ ಸಂಜೆ ಸುಮಾರು 6:00 ಗಂಟೆಗೆ ಮುಕ್ಕಾ ವೇ ಬ್ರಿಡ್ಜ್ ಬಳಿ ತಲುಪಿದಾಗ ಪಿರ್ಯಾದಿದಾರರ ತಮ್ಮ ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ನಾಯಿಯೊಂದು ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಸ್ಕೂಟರ್ ಸ್ಕಿಡ್ ಆಗಿ ಡಾಮಾರು ರಸ್ತೆಗೆ ಬಿದ್ದಿದ್ದು ಪರಿಣಾಮ ಸ್ಕೂಟರ್ ಸವಾರನಿಗೆ ಎಡಕಣ್ಣಿನ ಹುಬ್ಬಿನ ಹತ್ತಿರ ಮತ್ತು ಎರಡೂ ಕಾಲು ಹಾಗೂ ಎರಡೂ ಕೈಗಳಿಗೆ ತರಚಿದ ರೀತಿಯ ಗಾಯ ಮತ್ತು ತಲೆಗೆ ಗುದ್ದಿದ ರೀತಿಯ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರು ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಹಾಗೂ ಸಹಸವಾರರಾಗಿದ್ದ ಮಸೂದಾ ಮತ್ತು ಆಕೆಯ ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Moodabidre PS

ದಿನಾಂಕ 02.06.2023 ರಂದು ಪಿರ್ಯಾದಿ ಮಹಮ್ಮದ್ ರೋಜರ್ ರವರು KA-19-EV-1934  ನಂಬ್ರದ ಸ್ಕೂಟರಿನಲ್ಲಿ ಸವಾರನಾಗಿ ಅವರ ತಂದೆಯವರಾದ ಅಬ್ದುಲ್ ರಜಾಕ್ ರವರರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೂಡಬಿದ್ರೆ ಕಡೆಯಿಂದ ವಿದ್ಯಾಗಿರಿ ಕಡೆಗೆ ಹೋಗುತ್ತಾ ಬೆಳಿಗ್ಗೆ 08.30 ಗಂಟೆಗೆ ವಿದ್ಯಾಗಿರಿ ಜಂಕ್ಷನ್ ಬಳಿ ತಲುಪುತಿದ್ದಂತೆ ಅವರ ಎಡ ಬದಿಯಲ್ಲಿ ಹೋಗುತಿದ್ದ KA-19-AA-180ನಂಬ್ರದ ಬಸ್ಸನ್ನು ಅದರ ಚಾಲಕನು ಒಮ್ಮೆಲೆ ಬಲಕ್ಕೆ ತಿರುಗಿಸಿದ ಪರಿಣಾಮ ಬಸ್ಸಿನ ಬಲ ಬದಿ ಪಿರ್ಯಾದಿದಾರರಿದ್ದ ಸ್ಕೂಟರಿಗೆ ತಾಗಿ ಸ್ಕೂಟರಿನಲ್ಲಿದ್ದ ಇಬ್ಬರೂ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಮುಖದ ಎಡ ಭಾಗಕ್ಕೆ ತರಚಿದ ಗಾಯ ಹಾಗೂ ಅಬ್ದುಲ್ ರಜಾಕ್ ರವರ ಎಡ ಕಾಲಿಗೆ ಬಸ್ಸಿನ ಚಕ್ರವು ತಾಗಿ ಅವರ ಎಡ ಕಾಲಿನ ಪಾದಕ್ಕೆ ಮೂಳೆ ಮುರಿತದ ಗಂಭೀರ ರೀತಿಯ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಎಂಬಿತ್ಯಾದಿ.

 

Mangalore West Traffic PS

ಪಿರ್ಯಾದಿ ANIL ACHARYA ದಿನಾಂಕ 05-06-2022 ರಂದು  ಕೆಲಸ ಮುಗಿಸಿ ಸಂಜೆ ಸುಮಾರು 7.30 ಗಂಟೆಗೆ ಜ್ಯೂಸ್ ಕುಡಿಯಲೆಂದು  ಕಾರ್ ಸ್ಟ್ರೀಟ್ ನಲ್ಲಿರುವ ಬಳ್ಳಿ ಎಂಬುವವರ ಅಂಗಡಿಗೆ ಹೋಗಲು ರಸ್ತೆ ದಾಟುತ್ತಿರುವ ಸಮಯ ಬಾಲಾಜಿ ಜಂಕ್ಷನ್ ಕಡೆಯಿಂದ ವೆಂಕಟರಮಣ ದೇವಸ್ಥಾನದ ಕಡೆಗೆ  KA-19-AB-7835  ನೇ ನಂಬ್ರದ  ಆಟೋ ರಿಕ್ಷಾದ ಚಾಲಕ ಬಾಲಕೃಷ್ಣ ಎಂಬಾತನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ಅಜಾಗರೂಕತೆದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲಗಾಲಿಗೆ ಡಿಕ್ಕಿ ಹೊಡೆದು ಪರಿಣಾಮ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಗಾಲಿನ ಮಣಿಗಂಟಿನ ಮೂಳೆ ಮುರಿತದ ಗಾಯವಾಗಿರುತ್ತದೆ  ಎಂಬಿತ್ಯಾದಿ.

 

Mangalore Rural PS   

ದಿನಾಂಕ 06-06-2023 ಸಮಯ 17-೦೦ ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ನೀರುಮಾರ್ಗ ಪೇಟೆಯಲ್ಲಿರುವ ಅಟೋರಿಕ್ಷಾ ನಿಲ್ದಾಣದಲ್ಲಿ ತಿಲಕ್ ರಾಜ್, ಪ್ರಾಯ: 24 ವರ್ಷ,  ವಾಸ: ತಾರಿಗುಡ್ಡೆ ಮನೆ, “ಮಂಜುಶ್ರೀ” ಕ್ಯಾಂಟರಿಂಗ್ ಬಳಿ, ಬೊಂಡಂತಿಲ ಗ್ರಾಮ, ಮಜಲು ಅಂಚೆ, ಮಂಗಳೂರು ತಾಲೂಕು, ಈತನು  ಯಾವುದೋ ಮಾದಕ ಪದಾರ್ಥವನ್ನು ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆ, ಕುಂಟಿಕಾನ, ಮಂಗಳೂರು  ಇಲ್ಲಿ ಪರೀಕ್ಷಿಸಿಗೊಳಪಡಿಸಿದ್ದಲ್ಲಿ  ಆತನು ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ದೃಢಪತ್ರವನ್ನು ನೀಡಿದ ಮೇರೆಗೆ ವೈದ್ಯಕೀಯ ವರದಿಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ.

Mangalore Rural PS

ದಿನಾಂಕ 06-06-2023 ರಂದು 18.00 ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ಕೆಲ್ ರಾಯ್ ಚರ್ಚ್ ಕಂಪೌಂಡು ಬಳಿ ಭರತ್ ರಾಜ್, ಪ್ರಾಯ: 25 ವರ್ಷ, ವಾಸ: ತಾರಿಗುಡ್ಡೆ ಜುಮ್ಮಾ ಮಸೀದಿ ಬಳಿ ಮನೆ, ಬೊಂಡಂತಿಲ, ನೀರುಮಾರ್ಗ ಅಂಚೆ, ಮಂಗಳೂರು ತಾಲೂಕು. ಈತನು  ಯಾವುದೋ ಮಾದಕ ಪದಾರ್ಥವನ್ನು ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆ, ಕುಂಟಿಕಾನ, ಮಂಗಳೂರು  ಇಲ್ಲಿ ಪರೀಕ್ಷಿಸಿಗೊಳಪಡಿಸಿದ್ದಲ್ಲಿ  ಆತನು ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ದೃಢಪತ್ರವನ್ನು ನೀಡಿದ ಮೇರೆಗೆ ವೈದ್ಯಕೀಯ ವರದಿಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ.

Mangalore Rural PS

ದಿನಾಂಕ 06-06-2023 ರಂದು 19.00 ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ಕೆಲ್ ರಾಯ್ ಚರ್ಚ್ ಕಂಪೌಂಡು ಬಳಿ ಪ್ರೀತಮ್ ಶೆಟ್ಟಿ, ಪ್ರಾಯ: 22 ವರ್ಷ,  ವಾಸ: ಕುಟ್ಟಿಕಳ ಮನೆ, ನೀರುಮಾರ್ಗ ಗ್ರಾಮ ಮತ್ತು ಅಂಚೆ, ಮಂಗಳೂರು ಈತನು  ಯಾವುದೋ ಮಾದಕ ಪದಾರ್ಥವನ್ನು ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆ, ಕುಂಟಿಕಾನ, ಮಂಗಳೂರು  ಇಲ್ಲಿ ಪರೀಕ್ಷಿಸಿಗೊಳಪಡಿಸಿದ್ದಲ್ಲಿ  ಆತನು ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ದೃಢಪತ್ರವನ್ನು ನೀಡಿದ ಮೇರೆಗೆ ವೈದ್ಯಕೀಯ ವರದಿಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ.

Panambur PS

ಪಿರ್ಯಾದಿ Eshwar  Swami ದಿನಾಂಕ 06-06-2023 ರಂದು  21-35 ಗಂಟೆ ಸುಮಾರಿಗೆ ಹೊಯ್ಸಳ  ಕರ್ತವ್ಯದಲ್ಲಿರುವಾಗ  ಸಾರ್ವಾಜನಿಕರೊಬ್ಬರಿಂದ  ಪಣಂಬೂರು ಭಾರತ್ ಪ್ರೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಲಾರಿಯೊಂದರಲ್ಲಿ ಬಂದಿದ್ದ  ರಾಜಸ್ಥಾನದ ಜೈಪುರ ಕಡೆಯ  ಹಿಂದಿ ಮಾತನಾಡುವ  ಜನರು 2 ಗುಂಪುಗಳಾಗಿ  ಗಲಾಟೆ ಮಾಡಿಕೊಳ್ಳುತ್ತಿದ್ದಾರೆಂಬುವುದಾಗಿ  ಮಾಹಿತಿ ಬಂದ ಮೇರೆಗೆ  ಕೂಡಲೇ  ಅಲ್ಲಿಗೆ  21-40  ಗಂಟೆಗೆ ಸ್ಥಳಕ್ಕೆ ಹೋದಾಗ ಪಣಂಬೂರು ಭಾರತ್ ಪ್ರೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಎರಡು ಗುಂಪಿನ ಜನರು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ  ಅವರ ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ  ಕೈ ಕೈ ಮಿಲಾಯಿಸಿಕೊಂಡು ಪರಸ್ಪರ  ಕೈಗಳಿಂದ ಹೊಡೆದಾಡಿಕೊಳ್ಳುತ್ತಿದ್ದು,  ಅವರಿಗೆ ಸಮಾದಾನ ಪಡಿಸಿದರೂ ಸಮಾದಾನಗೊಳ್ಳದೇ ಮಾತಿಗೆ ಮಾತು ಬೆಳೆಸಿಕೊಂಡು ಹೊಡೆದಾಡಿಕೊಳ್ಳುತ್ತಿದ್ದರು.  ಇವರುಗಳನ್ನು ವಿಚಾರಿಸಲಾಗಿ ಒಂದು ಗುಂಪಿನ 1)  ಮೊಹಮ್ಮದ್ ರಫೀಕ್ ಅಹಮ್ಮದ್  ಪ್ರಾಯ:  52 ವರ್ಷ, ವಾಸ:  ಇನಾಮ್ ಬಡ ಕೆ ಪಾಸ್, ವಾರ್ಡ್ ನಂ: 4, ಕಿಶಾನ್ ಘರ್, ಅಜ್ಮೀರ್, ಮಡನ್ ಗಂಜ್ , ರಾಜಸ್ಥಾನ ಪಿನ ನಂ: 305801  2) ಅಶ್ರಪ್  ಪ್ರಾಯ: 50 ವರ್ಷ, ವಾಸ:  ಇನಾಮ್ ಬಡ ಕೆ ಪಾಸ್, ಕಿಶಾನ್ ಘರ್, ಅಜ್ಮೀರ್, ಮಡನ್ ಗಂಜ್ , ರಾಜಸ್ಥಾನ ಪಿನ ನಂ: 305801   ಹಾಗೂ ಇನ್ನೊಂದು ಗುಂಪಿನ 1) ಮೊಹಮ್ಮದ್ ಸಲೀಂ ಪ್ರಾಯ: 37  ವರ್ಷ, ವಾಸ: ಡೋರ್ ನಂ:# D-5/02, J D A ಪ್ಲಾಟ್   ಜೈಸಿಂಗ್ ಪುರ,  ಶೇಖಾವತನ್,  ಜೈಪುರ್, ರಾಜಸ್ಥಾನ. 2)  ಅಬ್ದುಲ್ ಮಝೀದ್  ಪ್ರಾಯ: 43 ವರ್ಷ, ವಾಸ:  ಜಗನಾಥ್ ಷಾ ರಸ್ತೆ ಚೌಕಿ, ರಾಮಚಂದ್ರಜೀ ಕಿ ರಾಮ್ ಗಂಜ್ ಬಜಾರ್, ಜೈಪುರ್ ರಾಜಸ್ಥಾನ. 302003 3) ಮಹಮ್ಮದ್ ರಾಯಿಸ್ ಪ್ರಾಯ: 43  ವರ್ಷ, ವಾಸ:  # ನಂ: 170  ಕದ ಬಸದಿ, ಆದರ್ಶ ನಗರ,  ರಾಜು ಪಾರ್ಕ್ , ಜವಾಹರ್ ನಗರ ಜೈಪುರ್  ರಾಜಸ್ಥಾನ. 302002 4) ಮಹಮ್ಮದ್ ಪರಖಾನ್ ಪ್ರಾಯ: 48  ವರ್ಷ,  ವಾಸ:  # ಪ್ಲಾಟ್ 60 , ಪೂರ್ವ ಗೋವಿಂದ್ ನಗರ, ಅಮೇರ್  ಜೈಪುರ್  ರಾಜಸ್ಥಾನ. 302002 5) ಶಾರೂಕ್ ನಹಿ ಪ್ರಾಯ: 26 ವರ್ಷ, ವಾಸ:  ಇನಾಮ್ ಬಡ ಕೆ ಪಾಸ್, ವಾರ್ಡ್ ನಂ: 4, ಕಿಶಾನ್ ಘರ್, ಅಜ್ಮೀರ್, ಮಡನ್ ಗಂಜ್ , ರಾಜಸ್ಥಾನ ಪಿನ ನಂ: 305801  6) ಅಬ್ದುಲ್ ವಾಜೀದ್  ಪ್ರಾಯ: 52  ವರ್ಷ, ವಾಸ:  ರಾಮಚಂದ್ರಜೀ ಕಿ ರಾಮ್ ಗಂಜ್ ಬಜಾರ್, ಜೈಪುರ್ ರಾಜಸ್ಥಾನ. 302003 ರವರುಗಳೆಂದು ತಿಳಿದು ಬಂದಿರುತ್ತದೆ.ಸದ್ರಿಯವರುಗಳು ಕುಟುಂಬದ ವಿಚಾರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದುಕೊಂಡು ಸಾರ್ವಜನಿಕ ಶಾಂತಿ ಕದಡುವಂತೆ ಮಾಡಿರುವುದರಿಂದ ಎರಡು ಗುಂಪಿನ ಜನರ ಮೇಲೆ ಸೂಕ್ತ ಕಾನೂನು  ಕ್ರಮಕೈಗೊಳ್ಳಲು ವರದಿ ಎಂಬಿತ್ಯಾದಿಯಾಗಿರುತ್ತದೆ.

Mangalore East PS

ದಿನಾಂಕ: 06-06-2023 ರಂದು 19-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಬೆಂದೂರ್ ವೆಲ್ ಬಳಿಯ ಬಸ್ ಸ್ಟಾಪ್ ನಲ್ಲಿ  ಓರ್ವ ವ್ಯಕ್ತಿ ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ  ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ದಿನಾಂಕ: 06-06-2023 ರಂದು 19-30 ಗಂಟೆ ಸಮಯಕ್ಕೆ ಮಂಗಳೂರು ನಗರದ ಬೆಂದೂರ್ ವೆಲ್ ಬಳಿಯ ಬಸ್ ಸ್ಟಾಪ್ ನಲ್ಲಿ  ಓರ್ವ ವ್ಯಕ್ತಿ ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ದಿನಾಂಕ: 06-06-2023 ರಂದು 20-30 ಗಂಟೆ ಸಮಯಕ್ಕೆ ಮಂಗಳೂರು ನಗರದ ಕದ್ರಿ ಮೈದಾನದ ಬಳಿಯಲ್ಲಿ  ಓರ್ವ ವ್ಯಕ್ತಿ ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ದಿನಾಂಕ: 06-06-2023 ರಂದು 21-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಕುಲಶೇಖರ ಕೈಕಂಬ ಬಳಿಯಲ್ಲಿ  ಓರ್ವ ವ್ಯಕ್ತಿ ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

CEN Crime PS

ದಿನಾಂಕ 04-06-2023ರಂದು ರಾತ್ರಿ 11:00 ವೇಳೆಗೆ ಇನ್ ಸ್ಟಾಗ್ರಾಂ ಮೆಸೆಂಜರ್ ನಲ್ಲಿ     @intllforexmining(crypto-binance app) ಬಗ್ಗೆ  ಒಂದು  ಸಂದೇಶ ಬಂದಿದ್ದು  ಅದರಲ್ಲಿದ್ದ ಹಣ ಹೂಡಿಕೆ ಮಾಡುವಂತೆ  ಹಾಗೂ  ಅದಕ್ಕೆ  ಲಾಭಾಂಶ ನೀಡುವುದಾಗಿ ಸಂದೇಶವಿದ್ದು ಅದರೊಂದಿಗೆ ಒಂದು ಲಿಂಕ್ ಇರುತ್ತದೆ.  ಪಿರ್ಯಾದಿದಾರರು ಸದ್ರಿ ಲಿಂಕ್ ನ್ನು   ಕ್ಲಿಕ್ ಮಾಡಿದ್ದು ತದನಂತರ ಒಂದು ಇನ್ ಸ್ಟಾಗ್ರಾಂ   ಖಾತೆಯ  ಪೇಜ್ ತೆರೆದಿದ್ದು ಅದರಲ್ಲಿ  ಮೇಸೆಜ್  ಮುಖೇನ ಸಂಪರ್ಕಿಸಿ  ಪಿರ್ಯಾದಿದಾರರು ಹಣ ಹೂಡಿಕೆ  ಬಗ್ಗೆ  ವಿಚಾರಿಸಿದ್ದಲ್ಲಿ  ಮೊದಲಿಗೆ  ರೂ.50,000/- ಹಣವನ್ನು  ಹೂಡಿಕೆ ಮಾಡಿದರೆ  ರೂ.4,90,000/-ಹಣ ಲಾಭಾಂಶ ಬರುವುದಾಗಿ ಆರೋಪಿತರು ತಿಳಿಸಿದಂತೆ  ಪಿರ್ಯಾದಿದಾರರು ತಮ್ಮ ಕೆನರಾ ಬ್ಯಾಂಕ್ ಕೆದಿಲಾ ಶಾಖೆ ಖಾತೆ ನಂ ನೇದ್ದರಿಂದ ಅವರು ನೀಡಿದ  ಕೆನರಾ ಬ್ಯಾಂಕ್  ಖಾತೆ ನಂ.110118923334  IFSC: CNRB0018515 , NAME: SHUBHAM  BHATT ಈ ಖಾತೆಗೆ  ರೂ.50,000/- ಹಣವನ್ನು ವರ್ಗಾಯಿಸಿರುತ್ತಾರೆ, ತದನಂತರ ಆರೋಪಿತರು 11:19PM ಗೆ ರೂ.6,90,000/-ಹಣವು  BITCOIN ನಲ್ಲಿ  ಬಂದಿರುವುದಾಗಿ  ಮೆಸೆಂಜರ್  ಮುಖೇನ ಸ್ಕ್ರೀನ್ ಶಾಟ್ ಕಳುಹಿಸಿ  ಅದನ್ನು ಪಿರ್ಯಾದಿದಾರರ  ಬ್ಯಾಂಕ್  ಖಾತೆಗೆ  ಜಮೆ ಮಾಡಲು  ಪುನಃ ರೂ.64,000/-ಹಣವನ್ನು   TRADING PAYMENTS  ಮಾಡಲು ತಿಳಿಸಿದಂತೆ  ಪಿರ್ಯಾದಿದಾರರ ರೂ.64,000/-ಹಣವನ್ನು  ವರ್ಗಾಯಿಸಿರುತ್ತಾರೆ. ಪುನಃ ದಿನಾಂಕ:05-06-2023 ರಂದು ಮೆಸೆಂಜರ್ ಮುಖೇನ  ರೂ.6,90,000/-ಹಣವನ್ನು  ಪಿರ್ಯಾದಿದಾರರ ಖಾತೆಗೆ ವರ್ಗಾಯಿಸಲು  ಶೇ.10/-ರಷ್ಟು ಕಮಿಷನ್ ನೀಡಬೇಕಾಗಿ ಅದಕ್ಕಾಗಿ ರೂ.49,000/-ಹಣವನ್ನು   ವರ್ಗಾಯಿಸುವಂತೆ ತಿಳಿಸಿದ್ದು   ಅದನ್ನು  ನಂಬಿದ ಪಿರ್ಯಾದಿದಾರರು  ರೂ.49,000/-ಹಣವನ್ನು  ವರ್ಗಾಯಿಸಿರುತ್ತಾರೆ.ನಂತರ ಸದ್ರಿ  ಹೂಡಿಕೆಯ ಎಲ್ಲಾ ಹಣವನ್ನು  ವರ್ಗಾಯಿಸಲು ಪಿರ್ಯಾದಿದಾರರ ಇನ್ ಸ್ಟಾಗ್ರಾಂ ಖಾತೆಯನ್ನು ಖಾತ್ರಿಗೊಳಿಸುವಂತೆ  ಹೇಳಿ ಅದಕ್ಕಾಗಿ ಪಿರ್ಯಾದಿದಾರರ ಇನ್ ಸ್ಟಾಗ್ರಾಂ ಖಾತೆಯ ಪ್ರೋಪೈಲ್  ಎಡಿಟ್ ಮಾಡಿ  ತಾನು  ನೀಡಿದ  ಇಮೇಲ್  ಐಡಿ paymentconfirmation1137@gamil.com  ಹಾಕುವಂತೆ ತಿಳಿಸಿದ್ದು ಅದೇ ರೀತಿ ಪಿರ್ಯಾದಿದಾರರ   ಮಾಡಿದಂತೆ ಪಿರ್ಯಾದಿದಾರರ ಇನ್ ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿರುತ್ತದೆ. ಸದ್ರಿ ಪಿರ್ಯಾದಿದಾರರ ಇನ್ ಸ್ಟಾಗ್ರಾಂ ಖಾತೆಯನ್ನು ಬಳಸಿ ಪಿರ್ಯಾದಿದಾರರ ಸ್ನೇಹಿತರಿಗೆ  ಹಣ ಹೂಡಿಕೆ ಮಾಡುವಂತೆ ಸಂದೇಶ ಕಳುಹಿಸಿರಯತ್ತಿರುವುದಾಗಿದೆ.     ಈ ರೀತಿ ಪಿರ್ಯಾದಿದಾರರಿಂದ  ಆರೋಪಿಯು ಹಂತ ಹಂತವಾಗಿ  ಒಟ್ಟು ರೂಪಾಯಿ-1,64,000/- ಹಣವನ್ನು  ವರ್ಗಾಯಿಸಿಕೊಂಡು  ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Kavoor PS         

ಪಿರ್ಯಾದಿ ಅನ್ಸಾರ್ ಪ್ರಾಯ:42 ವರ್ಷ ರವರು ಕೂಳೂರುನಲ್ಲಿರುವ ಸಂಗೀತ ಹೊಟೇಲ್ ಮಾಲಕರಾಗಿದ್ದು ಈ ಕಟ್ಟಡದ ಒಂದನೇ ಅಂತಸ್ತಿನ ಅಂಗಡಿಯನ್ನು  ಸಿರಾಜ್ ಎಂಬವರಿಗೆ ಬಾಡಿಗೆಗೆ ನೀಡಿದ್ದು ಅವನು ಸರಿಯಾಗಿ ಬಾಡಿಗೆ ನೀಡದೇ ಸತಾಹಿಸುತ್ತಿದ್ದು ದಿನಾಂಕ:04-06-2023 ರಂದು ಸಂಜೆ 04:30 ಗಂಟೆಗೆ ಪಿರ್ಯಾದಿ ಹಾಗೂ ಆತನ ತಂದೆ ಮೂಸಾ.ಪಿ.ಕೆ. ರವರು ಸಿರಾಜ್ ನ ಅಂಗಡಿಗೆ ಹೋಗಿ ಬಾಡಿಗೆ ಕೇಳಿದಾಗ” ನಿನ್ನ ಬಾಡಿಗೆ ಹಣವನ್ನು ನೀಡುವುದಿಲ್ಲ ನೀನು ಕೇಸು ಮಾಡುವುದಾದರೆ ಮಾಡು “ಬೇವರ್ಸಿ ರಂಡೆ ಮಗ “ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಅಂಗಡಿಯ ಟೇಬಲ್ ನಲ್ಲಿದ್ದ ಗ್ಲಾಸಿನ ಬಾಟಲಿಯನ್ನು ಎತ್ತಿಕೊಂಡು ಫಿರ್ಯಾದಿಯ ತಂದೆಯ ಕಡೆಗೆ ಬೀಸಿದಾಗ ಪಿರ್ಯಾದಿಯು ಅಡ್ಡ ಬಂದಿದ್ದು ಬಾಟಲಿಯು ಅಲ್ಲೇ ಇದ್ದ ಟೇಬಲ್ ಗೆ ತಾಗಿ ತುಂಡಾಗಿದ್ದು ಸದ್ರಿ ತುಂಡಾದ ಬಾಟಲಿಯಿಂದ ಫರ್ಯಾದಿದಾರಿಗೆ ಬೀಸಿದಾಗ ಫರ್ಯಾಧಿದಾರರ ಬಲ ಕೈಯ ತೋಳು ಭಾಗಕ್ಕೆ ರಕ್ತ ಬರುವ ಗಾಯವಾಗಿದ್ದು ನಂತರ ಸಿರಾಜ್ ನು ಅವನ ಕೈಯಿಂದ ಪಿರ್ಯಾದಿದಾರರ ಬಲ ಭುಜಕ್ಕೆ ಹೊಡೆದು ನೋವಾಗುವಂತೆ ಮಾಡಿದ್ದು,ಅಲ್ಲದೇ ಈ ವಿಷಯವನ್ನು ಪೊಲೀಸ್ ಠಾಣೆಗೆ ದೂರು ನೀಡಿದರೆ ನಿನ್ನನ್ನು ಮತ್ತು ನಿನ್ನ ತಂದೆಯನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ ಎಂಬಿತ್ಯಾದಿ.

Kavoor PS

ಪಿರ್ಯಾದಿ RANGAPPA BASAPPA PUJAR ತಂದೆ  ಬಸವರಾಜ ಪೂಜಾರ ರವರು ಆಗಿದ್ದು  ಇವರಿಗೆ ಎರಡು ಮದುವೆಯಾಗಿದ್ದು ಮೊದಲನೇ ಹೆಂಡತಿ ಮಲ್ಲವ್ವ ಆಗಿರುತ್ತಾರೆ. ಇವರಿಗೆ ಮೂರು ಜನ ಗಂಡು ಮಕ್ಕಳಿದ್ದು, ಮೊದಲನೆಯ ಮಗ ಹನುಮಂತಪ್ಪ ಬಸವರಾಜ್ ಪೂಜಾರ, ಎರಡನೆಯ ಮಗ ರಂಗಪ್ಪ ಬಸವರಾಜ ಪೂಜಾರ @ ಬಸಪ್ಪ ಪೂಜಾರ ಇವರು ಪ್ರಕರಣದ ಫಿರ್ಯಾದಿದಾರರಾಗಿದ್ದು, ಮೂರನೇಯವನು ಸಂಜೀವ ಬಸವರಾಜ ಪೂಜಾರ ಇವರು ಆಗಿರುತ್ತಾರೆ. ಫಿರ್ಯಾದಿರಾರರ ತಂದೆಯವರಿಗೆ ಎರಡನೆಯ ಮದುವೆಯಾಗಿದ್ದು, ಗಿರಿಜಾ ಎಂಬವರಾಗಿರುತ್ತಾರೆ. ಇವರಿಗೆ ಮಕ್ಕಳಿರುವುದಿಲ್ಲ.

     ಪಿರ್ಯಾದಿದಾರರ ತಂದೆ ಮತ್ತು ಚಿಕ್ಕಮ್ಮ ಗಿರಿಜಾ ರವರು ಮಂಗಳೂರಿಗೆ ಕೆಲಸಕ್ಕಾಗಿ ಬಂದವರಾಗಿದ್ದು, ಶ್ರೀಮತಿ ಗಿರಿಜಾ ರವರಿಗೆ ಆಶ್ರಯ ಯೋಜನೆ ಅನ್ವಯ ದಿನಾಂಕ 12.08.1996 ರಲ್ಲಿ ಮಂಗಳೂರು ತಾಲೂಕು ಸುರತ್ಕಲ್ ಹೋಬಳಿ ಕಾವೂರು ಗ್ರಾಮದ ಸರ್ವೆ ನಂ:    ರಲ್ಲಿ ಮನೆ ನಿವೇಶನವನ್ನು ಮಂಗಳೂರು ತಹಶೀಲ್ದಾರ್ ರವರು ನೀಡಿದ್ದು, ಈ ಮನೆಯು ಪಿರ್ಯಾದಿದಾರರ ತಂದೆಯವರ ಹೆಸರಿನಲ್ಲಿ ಮ.ನಂ:  ಎಂದು ನೋಂದಣಿಯಾಗಿರುತ್ತದೆ. ಈ ಮನೆಯಲ್ಲಿ ಆಪಾದಿತರಾದ  ಹನುಮಂತ ಬಿನ್ ಶಿವರಾಯ  ರವರಿಗೂ ಶ್ರೀಮತಿ ಕಸ್ತೂರಿ ಕೋಂ ಹನುಮಂತ, ಪ್ರಕಾಶ್ ರವರೊಂದಿಗೆ ವಾಸ ಮಾಡಲು ಅನುವು ಮಾಡಿಕೊಟ್ಟಿದ್ದು, ನಂತರ ಪಿರ್ಯಾದಿದಾರರ ತಂದೆ ಮತ್ತು ಚಿಕ್ಕಮ್ಮ ಗಿರಿಜಾ ರವರು ವಯೋ ವೃದ್ಧರಾಗಿದ್ದರಿಂದ ಇದರ ಲಾಭ ಪಡೆದು ಹನುಮಂತ ಬಿನ್ ಶಿವರಾಯ  ರವರಿಗೂ ಶ್ರೀಮತಿ ಕಸ್ತೂರಿ ಕೋಂ ಹನುಮಂತ ರವರು ಸೇರಿ ಇವರಿಗೆ ತಿಳಿಯದಂತೆ ಆಸ್ಥಿ ತೆರಿಗೆ ಪುಸ್ತಕಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ತೀರ್ವೆ ತೆರಿಗೆಯನ್ನು ಫಿರ್ಯಾದಿದಾರರ ತಂದೆ ಮತ್ತು ಚಿಕ್ಕಮ್ಮಳ ಅರಿವಿಗೆ ಬಾರದಂತೆ ಬದಲಾಯಿಸಿ ತೆರಿಗೆಯನ್ನು ಕಟ್ಟುತ್ತಿದ್ದು, ನಂತರ ದಿನಾಂಕ 04.05.2014 ರಂದು ಪಿರ್ಯಾದಿದಾರರ ತಂದೆ ಹಾಗೂ ದಿನಾಂಕ 19.03.2019 ರಂದು ಫಿರ್ಯಾದಿದಾರರ ಚಿಕ್ಕಮ್ಮ ಗಿರಿಜಾ ಮೃತ ಪಟ್ಟಿರುತ್ತಾರೆ. ನಂತರದ ದಿನಗಳಲ್ಲಿ ಫಿರ್ಯಾದಿದಾರರು ಮತ್ತು ಮನೆಯವರು ತಮ್ಮ ತಂದೆ ಮತ್ತು ಚಿಕ್ಕಮ್ಮನ ಮನೆಯನ್ನು ತಮ್ಮ ಸ್ವಾಧೀನಕ್ಕೆ ಬಿಟ್ಟುಕೊಡುವಂತೆ ಕೇಳಿಕೊಂಡಾಗ, ಹನುಮಂತ ಬಿನ್ ಶಿವರಾಯ  ರವರು ಮತ್ತು ಶ್ರೀಮತಿ ಕಸ್ತೂರಿ ಕೋಂ ಹನುಮಂತ, ಪ್ರಕಾಶ್ ರವರುಗಳು ಮನೆಯನ್ನು ಖಾಲಿ ಮಾಡಿಕೊಡದೇ, ಏನು  ಬೇಕಾದರೂ ಮಾಡಿಕೊಳ್ಳಿ, ಇದು ನಮ್ಮ ಮನೆ. ಒಂದು ವೇಳೆ ಮನೆಯಿಂದ ನಮ್ಮನ್ನು ಎಬ್ಬಿಸಲು ನೋಡಿದ್ದಲ್ಲಿ ನಿಮ್ಮನ್ನು ಏನು ಮಾಡುತ್ತೇವೆ ಗೊತ್ತಿಲ್ಲ? ಎಂಬುದಾಗಿ ಬೆದರಿಕೆ ಹಾಕಿ ದಿನಾಂಕ 05.06.2023 ರಂದು ಸಾಯಂಕಾಲ 4.00 ಗಂಟೆ ಹೊತ್ತಿಗೆ ಫಿರ್ಯಾದಿದಾರರು ಮತ್ತು ಅವರ ಚಿಕ್ಕಪ್ಪ ನಾಗಪ್ಪ ರವರೊಂದಿಗೆ ಕಾವೂರಿನಲ್ಲಿರುವ ಮುಲ್ಲಕಾಡು ಫಿರ್ಯಾದಿದಾರರ ಹಕ್ಕಿನ ಮನೆ ಸಂಖ್ಯೆ 1 ಕ್ಕೆ ಹೋದಾಗ  ಆರೋಪಿತರುಗಳು ಫಿರ್ಯಾದಿದಾರರಿಗೆ ಮತ್ತು ನಾಗಪ್ಪ ರವರುಗಳಿಗೆ , ನೀವು ಎಂಥ ಹೀನ ಜಾತಿಯವರು? ನಿಮ್ಮ ಜಾತಿ ಗುಣವನ್ನು ನೀವು ಬಿಡುವುದಿಲ್ಲ. ಎಷ್ಟು ಹೇಳಿದರೂ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೆ? ಕೂಡಲೇ ಜಾಗ ಖಾಲಿ ಮಾಡಿ ಎಂದು ಅಶ್ಲೀಲ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ.

     ಆಪಾದಿತರಾದ ಹನುಮಂತ ಬಿನ್ ಶಿವರಾಯ ರವರು  ಶ್ರೀಮತಿ ಕಸ್ತೂರಿ ಕೋಂ ಹನುಮಂತ, ಮತ್ತು ಪ್ರಕಾಶ್ ರವರುಗಳಿಗೆ ಪಿರ್ಯಾದಿದಾರರ  ತಂದೆಯವರ ಮನೆಯ ಮೇಲೆ ಅಥವಾ ಜಾಗದಲ್ಲಿ ಯಾಗಲೀ ಯಾವುದೇ ತೆರನಾದ ಹಕ್ಕು ಸಂಬಂಧ ಬಾಧ್ಯತೆಗಳು ಇರುವುದಿಲ್ಲ. ಇವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮನೆ ಮತ್ತು ಜಾಗವನ್ನು ಕಬಳಿಸಲು ಪ್ರಯತ್ನಿಸಿ ಪರಿಷ್ಟ ಪಂಗಡ ವಾಲ್ಮೀಕಿ  ಜಾತಿಯವರಾದ ಪಿರ್ಯಾದಿದಾರರ  ಹಕ್ಕಿನ ಮನೆ ಸ್ಥಳವನ್ನು ಕಬಳಿಸಲು ಪ್ತಯತ್ನಿಸಿದವರು ಆಗಿದ್ದು ಈ ವಿಚಾರದಲ್ಲಿ ಮನೆಯನ್ನು ಅಕ್ರಮವಾಗಿ ಅತಿಕ್ರಮಿಸಿ ಮೋಸ ವಂಚನೆಯಿಂದ ಸುಳ್ಳು ದಾಖಲೆ ಸೃಷ್ಟಿಸಿ ಮನೆಗೆ ವಾರಸುದಾರರು ಪ್ರವೇಶಿಸದಂತೆ ತಡೆದು ಜೀವ ಬೆದರಿಕೆ ಹಾಕಿ ಪರಿಶಿಷ್ಟ ಪಂಗಡದವರಾದ ಪಿರ್ಯಾದಿದಾರರ ಮತ್ತು ಸಂಬಂಧಿಕರಿಗೆ ಜಾತಿ ನಿಂದನೆ ಮಾಡಿ ಅಶ್ಲೀಲ ಶಬ್ದಗಳಿಂದ ಬೈದು ಕತ್ತಿಯಿಂದ ಹೊಡೆಯಲು ಬಂದಿರುತ್ತಾರೆ  ಎಂಬಿತ್ಯಾದಿ.

Kavoor PS

ಪಿರ್ಯಾದಿ RAGHU NAYAK ದಿನಾಂಕ: 06/06/2023 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ 21:00 ಗಂಟೆಗೆ ಮೂಡುಶೆಡ್ಡೆ ಕಡೆಗೆ ಹೋಗುತ್ತಿದ್ದಾಗ ಬಾತ್ಮೀದಾರರು ಎದುರುಪದವು ಗ್ರಾಮದ ಎದುರುಪದವು ಹಯಾತುಲ್ಲಾ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ಯುವಕರಿಬ್ಬರು ಗಲಾಟೆ ಮಾಡುತ್ತಿರುವ ಬಗ್ಗೆ ತಿಳಿಸಿದ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ಸಮಯ 21:10 ಗಂಟೆಗೆ ತಲುಪಿದಾಗ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಯಾವುದೋ ಕಾರಣಕ್ಕಾಗಿ ಮೈಮೇಲೆ ಕೈ ಮಾಡಿಕೊಂಡು ದೂಡಾಡಿ, ತಳ್ಳಾಡಿಕೊಂಡು, ಸಾರ್ವಜನಿಕವಾಗಿ ಕಲಹವನ್ನು ಉಂಟು ಮಾಡುತ್ತಿದ್ದರು. ನಾನು ಕೆಎ 19 ಜಿ 549 ನಂಬ್ರದ ಇಲಾಖಾ ವಾಹನ ನಿಲ್ಲಿಸಿ, ಅವರ ಹತ್ತಿರ ಹೋದಾಗ ಫಿರ್ಯಾದಿದಾರರನ್ನು ಕಂಡು ಓಡಿ ಹೋಗಿರುತ್ತಾರೆ. ಅವರುಗಳ ಬಗ್ಗೆ ಸಾರ್ವಜನಿಕರಲ್ಲಿ ವಿಚಾರಿಸಿದಾಗ ಇರ್ಫಾನ್ ಮತ್ತು ಮಹೇಶ್ ಎಂಬುದಾಗಿ ತಿಳಿಸಿರುತ್ತಾರೆ.

 

Kankanady Town PS

ಪಿರ್ಯಾದಿ Dr.Jalaaluddin Akbar ಮಂಗಳೂರು ನಗರದ ಪಂಪವೆಲ್ ನಲ್ಲಿರುವ ಇನ್ಸಟ್ಯೂಟ್ ಆಫ್ ಅಂಕಾಲಜಿ ಆಸ್ಪತ್ರೆಯ ನಿರ್ದೇಶಕರಾಗಿ ಕೆಲಸ ಮಾಡಿಕೊಂಡಿದ್ದು, ಆಸ್ಪತ್ರೆಯು ಕಳೆದ 12 ವರ್ಷಗಳಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಸಲುವಾಗಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತಿರುವುದಾಗಿದೆ. ದಿನಾಂಕ 05-06-2023 ರಂದು ಸಂಜೆ 6:00 ಗಂಟೆ ಸುಮಾರಿಗೆ ಆರೋಪಿತ ತನ್ವೀರ್ ಪೋಕರ್ ಎಂಬಾತನು ಅಮಲು ಪದಾರ್ಥವನ್ನು ಸೇವನೆ ಮಾಡಿಕೊಂಡು ಆಸ್ಪತ್ರೆಯ ಒಳಗಡೆ ಅಕ್ರಮವಾಗಿ ಪ್ರವೇಶಿಸಿ, ಆಸ್ಪತ್ರೆಯ ಸ್ವಾಗತಕಾರಿಣಿರವರೊಂದಿಗೆ ಮತ್ತು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ  ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿ ತೊಂದರೆ ಕೊಟ್ಟು, ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಲು ತೊಂದರೆಯುನ್ನುಂಟು ಮಾಡಿ ಆಸ್ಪತ್ರೆಯ ಸೊತ್ತುಗಳಿಗೆ ಹಾನಿಯುನ್ನುಂಟು ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080