ಅಭಿಪ್ರಾಯ / ಸಲಹೆಗಳು

 

 Crime Report in CEN Crime PS

ದಿನಾಂಕ: 03-08-2023 ರಂದು ರಾತ್ರಿ ವೇಳೆ ಪಿರ್ಯಾದಿದಾರರ ಪರಿಚಯದ ವ್ಯಕ್ತಿಯ ಮಗಳ 25 ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ ಬಗ್ಗೆ ಪಿರ್ಯಾದಿದಾರರು ಹೊಂದಿದ ಈಮೆಲ್ ಐಡಿ ಗೆ  ಪರಿಚಯದ ವ್ಯಕ್ತಿಯ ಈ-ಮೇಲ್ ಐ.ಡಿ ನೇದರಿಂದ ಮೇಸೆಜ್ ಬಂದಿರುತ್ತದೆ. ಪಿರ್ಯಾದಿದಾರರು ಸದ್ರಿ ಮೇಲ್ ನ್ನು ನಿಜವೆಂದು ನಂಬಿ ಈಮೇಲ್ ಗೆ ರಿಪ್ಲೈಯನ್ನು ಮಾಡಿರುತ್ತಾರೆ. ಅದೇ ಸಮಯಕ್ಕೆ ಪರಿಚಯದ ವ್ಯಕ್ತಿಯ   ಈಮೇಲ್ ನಿಂದ ಮದುವೆಯ ವಾರ್ಷಿಕೋತ್ಸವದ ಬಗ್ಗೆ ಗಿಫ್ಟ್ ನೀಡಲು ಹಣದ ಅವಶ್ಯಕತೆ ಇರುವುದಾಗಿ ಮೇಸೆಜ್ ಬಂದಿರುತ್ತದೆ. ಇದನ್ನು ನಂಬಿದ ಪಿರ್ಯಾದಿದಾರರು ಪರಿಚಯದ ವ್ಯಕ್ತಿಯೇ ಮೇಸೆಜ್ ಮಾಡಿರುವುದಾಗಿ ನಂಬಿ ದಿನಾಂಕ 04-08-2023 ರಂದು ರಾತ್ರಿ ವೇಳೆ ರೂ 16,970/- ಆ ಬಳಿಕ 27,000 /-ನ್ನು ಕಳುಹಿಸಿದ್ದರು. ಆದಾದ ಬಳಿಕ ಪಿರ್ಯಾದಿದಾರರಿಗೆ ಅದೇ ಮೇಲ್ ನಿಂದ  ಇನ್ನು ಹಣದ ಅವಶ್ಯಕತೆ ಇರುವುದಾಗಿ ತಿಳಿಸಿದಂತೆ ದಿನಾಂಕ 05-08-2023 ರಂದು ಬೆಳಗ್ಗೆ 9:53 ಗಂಟೆಗೆ 50,000/- ಹಾಗೂ 10:49 ಗಂಟೆಗೆ ಇನ್ನು 22,000/- ರೂ ಹಣವನ್ನು ಕಳುಹಿಸಿರುತ್ತಾರೆ. ಇದಾದ ಬಳಿಕ ಪಿರ್ಯಾದಿದಾರರಿಗೆ ಅದೇ ನಕಲಿ ಈ ಮೇಲ್ ಐಡಿಯಿಂದ ಇನ್ನು ಹಣದ ಅವಶ್ಯಕತೆ ಇರುವುದಾಗಿ ಮೇಸೆಜ್ ಬಂದಿರುವುದರಿಂದ ಪಿರ್ಯಾದಿದಾರರು ಈ ವಿಷಯದಲ್ಲಿ ದಿನಾಂಕ 06-08-2023 ರಂದು ಪರಿಚಯದ ವ್ಯಕ್ತಿಯನ್ನು  ಸ್ವತಃ  ಬೇಟಿಯಾಗಿ ವಿಚಾರಿಸಿದಾಗ ಪಿರ್ಯಾದಿದಾರರು ಮೋಸ ಹೋಗಿರುವುದು ತಿಳಿದುಬಂದಿರುತ್ತದೆ. ಯಾರೋ ಅಪರಿಚಿತ ವ್ಯಕ್ತಿಗಳು ಪರಿಯಯದ ವ್ಯಕ್ತಿಯ  ಈಮೆಲ್ ಐಡಿಯನ್ನು  ನಕಲಿ ಮಾಡಿ ಪಿರ್ಯಾದಿದಾರರ ಈಮೆಲ್ ಗೆ ಮೇಸೆಜ್ ಮಾಡಿ ಪಿರ್ಯಾದಿದಾರರಿಂದ ಹಂತಹಂತವಾಗಿ ಒಟ್ಟು 1,15,970/- ರೂ ಅನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

 

Kankanady Town PS                                     

ಪಿರ್ಯಾದು RAHUL J ದಾರರು ಮಂಗಳೂರಿನ ಪಂಪ್ವೆಲ್ ಬಳಿಯ ಶಾಂತರಾಮ್ ಪೆರ್ಗಡೆ ಕಾಂಪ್ಲೆಕ್ಸ್ ನಲ್ಲಿರುವ ಟಿವಿಎಸ್ ಪಾರ್ಟ್ಸ್ ಮಾರ್ಟ್ ಪ್ರೈವೇಟ್ ಲಿ. ಕಂಪನಿಯಲ್ಲಿ ಸುಮಾರು 6 ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದು. ಈ ಕಂಪನಿಯಲ್ಲಿ ಆರು ಮಂದಿ ಕೆಲಸಗಾರರು ಇದ್ದು, ಇದರ ಮ್ಯಾನೇಜರ್ ದಿವೇಶ್ ಎಂಬವರಾಗಿರುತ್ತಾರೆ. ಈ ಕಂಪನಿಯಲ್ಲಿ ಕೆಲಸಗಾರರ ಉಪಯೋಗಕ್ಕಾಗಿ ಮೂರು ದ್ವಿಚಕ್ರ ವಾಹನಗಳಿದ್ದು. ಈ ವಾಹಗಳನ್ನು ಪಿರ್ಯಾದುದಾರರು ದಿನನಿತ್ಯ ಉಪಯೋಗಿಸಿ ಕೆಲಸ ಮುಗಿಸಿ ಮನೆಗೆ ಹೋಗುವ ಸಮಯ ಕಂಪನಿಯ ಕಟ್ಟಡದ ಬಳಿ ನಿಲ್ಲಿಸಿ ಲಾಕ್ ಮಾಡಿ ಕೀಯನ್ನು ಕಂಪನಿಯ ಕಛೇರಿಯಲ್ಲಿಟ್ಟು ಮನೆಗೆ ಹೋಗುತ್ತಿದ್ದು. ದಿನಾಂಕ: 29.07.2023 ರಂದು ಪಿರ್ಯಾದುದಾರರು ಎಂದಿನಂತೆ ಕಂಪನಿಯ KL-07-BV-5075ನೇ ನಂಬ್ರದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಕೆಲಸದ ಬಗ್ಗೆ ಉಪಯೋಗಿಸಿ ಸಂಜೆ 6:00 ಗಂಟೆ ಸಮಯಕ್ಕೆ ಕಂಪನಿಯ ಕಟ್ಟಡದ ಬಳಿ ಬೈಕನ್ನು ನಿಲ್ಲಿಸಿ ಲಾಕ್ ಮಾಡಿ ಕೀಯನ್ನು ಕಂಪನಿಯ ಕಛೇರಿಯಲ್ಲಿಟ್ಟು ಮನೆಗೆ ಹೋಗಿದ್ದು. ದಿನಾಂಕ: 31.07.2023 ರಂದು ಬೆಳಿಗ್ಗೆ 09:45 ಗಂಟೆ ಸಮಯಕ್ಕೆ ಪಿರ್ಯಾದುದಾರರು ಮತ್ತು ನಿಖಿಲ್ ಹಾಗೂ ದಿಲೀಪ್ ರವರು ಕೆಲಸಕ್ಕೆಂದು ಆಫೀಸಿಗೆ ಬಂದ ಸಮಯ ಕಂಪನಿ ಕಟ್ಟಡದ ಎದುರು ನಿಲ್ಲಿಸಿದ್ದ KL-07-BV-5075ನೇ ನಂಬ್ರದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು ಕಂಪನಿಯ ಸುತ್ತಮುತ್ತ ಹುಡುಕಾಡಿದಲ್ಲಿ ಎಲ್ಲಿಯೂ ಬೈಕ್ ಕಂಡು ಬಂದಿರುವುದಿಲ್ಲ. ದಿನಾಂಕ: 29.07.2023 ರಂದು ಸಂಜೆ 6:00 ಗಂಟೆಯಿಂದ ದಿನಾಂಕ: 31.07.2023 ರಂದು ಬೆಳಿಗ್ಗೆ 09:45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಂಪನಿಯ ಕಟ್ಟಡದ ಬಳಿ ನಿಲ್ಲಿಸಿದ್ದ KL-07-BV-5075ನೇ ನಂಬ್ರದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ. ಮತ್ತು ಕಳ್ಳತನವಾದ ಮೋಟಾರ್ ಸೈಕಲ್ KL-07-BV-5075ನೇ ನಂಬ್ರದ ಕಪ್ಪು ಬಣ್ಣದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಆಗಿದ್ದು, ಇದರ ಇಂಜಿನ್ ನಂಬ್ರ HA10EJCHD38991 ಮತ್ತು ಚಾಸಿಸ್ ನಂಬ್ರ MBLHA10AMCHD36681 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 10,000/- ಆಗಬಹುದು. ಕಳ್ಳತನವಾದ ಬೈಕನ್ನು ಇದುವರೆಗೂ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದರಿಂದ ದೂರು ನೀಡುತ್ತಿರುವುದಾಗಿದೆಎಂಬಿತ್ಯಾದಿಯಾಗಿರುತ್ತದೆ

 

2) ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ಕುಮಾರ್ ಮನೋಹರ ಮಾಗಿಶೆಟ್ಟರವರು KA-22-EP-8299ನೇ ನಂಬ್ರದ ಹೀರೋ ಕಂಪನಿಯ ಹೆಚ್.ಎಫ್ ಡಿಲಕ್ಸ್ ಮೋಟಾರ್ ಸೈಕಲ್ ನ್ನು ಉಪಯೋಗಿಸಿಕೊಂಡಿದ್ದು, ಈ ಬೈಕ್ ನ್ನು ದಿನಾಂಕ 04.08.2023 ರಂದು ಕೆಲಸ ಮುಗಿಸಿ 6:00 ಗಂಟೆಗೆ ವಾಸವಿರುವ ಬಾಡಿಗೆ ಮನೆಯ ಎದುರು ಇರುವ ಎ.ಜೆ ಇಂಜಿನೀಯರಿಂಗ್ ವರ್ಕ್ಸ್ ಕಟ್ಟಡದ ಮುಂದೆ ಪಾರ್ಕ್ ಮಾಡಿ ಕೆಲಸದ ನಿಮಿತ್ತ ಮೂಡಬಿದ್ರೆಗೆ ಹೋಗಿದ್ದು, ದಿನಾಂಕ: 06.08.2023 ರಂದು ಬೆಳಿಗ್ಗೆ 09:30 ಗಂಟೆ ಸಮಯಕ್ಕೆ ಪಿರ್ಯಾದಿದಾರರ  ಬಾಡಿಗೆಗೆ ಮನೆಯ ಮಾಲಕರಾದ ಎ.ಜೆ ಪಿಂಟೋ ರವರು ಕರೆಮಾಡಿ ಪಿರ್ಯಾದಿದಾರರಿಗೆ ಮೋಟಾರ್ ಸೈಕಲ್ ಕಳ್ಳತನವಾಗಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದಿದಾರರು ಮೂಡಬಿದಿರೆಯಿಂದ ಹೊರಟು ಬೆಳಿಗ್ಗೆ ಸುಮಾರು 11:00 ಗಂಟೆಗೆ ಗೋರಿಗುಡ್ಡೆಯ ಮನೆಗೆ ಬಂದು ನೋಡಿದಲ್ಲಿ ಪಿರ್ಯಾದಿದಾರರು ಬಂದು  ಬೈಕ್ ನ್ನು ನೋಡಿದಾಗ  ಕಾಣದೇ ಇದ್ದು, ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದಲ್ಲಿ ಬೈಕ್ ಪತ್ತೆಯಾಗಿರುವುದಿಲ್ಲ, ಕಳ್ಳತನವಾದ ಮೋಟಾರ್ ಸೈಕಲ್ KA-22-EP-8299ನೇ ನಂಬ್ರದ ನೀಲಿ ಬಣ್ಣದ ಹೀರೋ ಕಂಪನಿಯ ಹೆಚ್.ಎಫ್ ಡಿಲಕ್ಸ್ ಮೋಟಾರ್ ಸೈಕಲ್ ಆಗಿದ್ದು, ಇದರ ಇಂಜಿನ್ ನಂಬ್ರ HA11EFE9068983 ಮತ್ತು ಚಾಸಿಸ್ ನಂಬ್ರ MBLHA11AEE9D58950 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 15,000/- ಆಗಬಹುದು ಎಂಬಿತ್ಯಾದಿ.

Bajpe PS   

ಪಿರ್ಯಾದಿ Mohammed Razik ದಾರರು HNS Trading Corporation ನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರು ಕೆಲಸ ಮಾಡುವ ಕಂಪನಿಯು ಸುಮಾರು 1 ವರ್ಷದಿಂದ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಸಹರ ಶಾಲೆಯ ಬಳಿಯಿರುವ ಸೈಟ್ ನಲ್ಲಿ  ಕಾಮಗಾರಿ ನೆಡೆಸುತಿದ್ದು ದಿನಾಂಕ 25.07.2023 ರಂದು ರಾತ್ರಿ ಕೆಲಸ ಮುಗಿಸಿ ಅದೇ ದಿನ ಶಾಲೆಯ ಬಳಿ ರುವ ಸೈಟ್ ನಲ್ಲಿ ಟಿಪ್ಪರ್ ಲಾರಿ  ,ಹಿಟಾಚಿ, ಟ್ಯಾಕ್ಟರ್ ಗಳನ್ನು ನಿಲ್ಲಿಸಿ ಹೋಗಿದ್ದು ಮರುದಿನ ಬೆಳಗ್ಗೆ ಅಂದರೆ ದಿನಾಂಕ 26.07.2023 ರಂದು ಬೆಳಗ್ಗೆ ಸುಮಾರು 07.00 ಗಂಟೆಗೆ ಸದ್ರಿ ಸ್ಥಳಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು KA19 AC 8168 ನೇ ಟಿಪ್ಪರ್ ಲಾರಿಯ Amaron Companay 12 VAT  Battary-2, KA19 B 9520 ನೇ ಟಿಪ್ಪರ್ ಲಾರಿಯ Amaron Companay 12 VAT Battary-1, Hyundai 210 ಹಿಟಾಚಿಯ Amaron Companay   12 VAT Battary- 2, KA16TA1450 ಮಹೇಂದ್ರ ಟ್ಯಾಕ್ಟರ್ ನ  Amaron Companay 12Vat  Battary-1  ಒಟ್ಟು 6 ಬ್ಯಾಟರಿಗಳನ್ನು ಯಾರೋ ಕಳ್ಳರು ದಿನಾಂಕ 25.07.2023 ರಂದು ಸಂಜೆ 7.00 ಗಂಟೆಯಿಂದ ದಿನಾಂಕ 26.07.2023 ರಂದು ಬೆಳಗ್ಗೆ 07.00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ ,

Ullal PS

ದಿನಾಂಕ.06.08.2023 ರಂದು ಸಂಜೆ 14:30 ಗಂಟೆಯ ಸಮಯಕ್ಕೆ ಉಳ್ಳಾಲ ತಾಲುಕು  ಸೋಮೇಶ್ವರ ಗ್ರಾಮದ ಕುಂಪಳ ಬಗಂಬಿಲ ಬಿಸ್ಕಿಟ್ ಫ್ಯಾಕ್ಟರಿ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅವಿನಾಶ  ಪ್ರಾಯ: 30 ವರ್ಷ, ವಾಸ: ಚಿತ್ರಾಂಜಲಿ ನಗರ,ನಾಗಕಟ್ಟೆ ಬಳಿ,ಕುಂಪಲ,ಸೋಮೇಶ್ವರ ಗ್ರಾಮ, ಉಳ್ಳಾಲ ತಾಲುಕು ಮಂಗಳೂರು  ನಗರ ಎಂಬಾತನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ ಶೀತಲ್ ಅಲಗೂರು  ರವರು ಸಿಬ್ಬಂದಿಯವರ ಜೊತೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿ ಅವಿನಾಶ್ ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿರುವುದರಿಂದ ಅವಿನಾಶ್   ಎಂಬಾತನ ವಿರುದ್ಧ ದಿನಾಂಕ.06.08.2023 ರಂದು ದಾಖಲಿಸಿದ ಪ್ರಕರಣದ ಸಾರಾಂಶ.

 

 

ಇತ್ತೀಚಿನ ನವೀಕರಣ​ : 21-08-2023 02:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080