ಅಭಿಪ್ರಾಯ / ಸಲಹೆಗಳು

Crime Report in Urva PS

ದಿನಾಂಕ: 07-09-2023 ರಂದು ಪಿರ್ಯಾದಿ ANITHA HB ದಾರರು ಠಾಣೆಯಲ್ಲಿರುವ ಸಮಯ ಸುಮಾರು 08-00 ರ ವೇಳೆಗೆ ಬಾತ್ಮೀದಾರರೊಬ್ಬರು ಕೊಣಾಜೆ ಕಡೆಯಿಂದ  ನಂತೂರು, ಕೊಟ್ಟಾರ ಚೌಕಿ ಮಾರ್ಗವಾಗಿ  KA-19-ME-3856  ಸಿಲ್ವರ್  ಬಣ್ಣದ ALTO 800 ಕಾರಿನಲ್ಲಿ  ಒಬ್ಬ ವ್ಯಕ್ತಿಯು ಅಕ್ರಮವಾಗಿ MDMA ಮಾದಕ ವಸ್ತು ವನ್ನು ವಶದಲ್ಲಿರಿಸಿಕೊಂಡು ಬಂದು ಮಂಗಳೂರಿನ ಅಶೋಕನಗರದ ಕಾಲೇಜು ಪರಿಸರದಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ತರುತ್ತಿರುವುದಾಗಿ ಮಾಹಿತಿ ನೀಡಿದ್ದು, ಮಂಗಳೂರು ತಾಲೂಕು ಬೋಳೂರು  ಗ್ರಾಮದ ಈರಿ ಎಂಬಲ್ಲಿರುವ ಫಲ್ಗುಣಿ ನದಿ ಕಿನಾರೆಗೆ ಹೋಗುವ ಮಣ್ಣು ರಸ್ತೆಯಲ್ಲಿರುವ ಮೈದಾನದ ಬಳಿ  KA -ME-3856  ಸಿಲ್ವರ್ ಬಣ್ಣದ ALTO 800 ಕಾರಿನೊಂದಿಗೆ ಫರಾಜ್ ಪ್ರಾಯ: 26  ವರ್ಷ, ವಿಳಾಸ: ಪ್ಲಾಟ್ ನಂ: #1ಬಿ7, 2 ನೇ ಮಹಡಿ, K2 ಅಪಾರ್ಟಮೆಂಟ್, ಯೆನಪೊಯ  ಆಸ್ವತ್ರೆ ಸಮೀಪ, ಮದನಿ ನಗರ, ದೇರಳಕಟ್ಟೆ. ಮಂಗಳುರು, ದ.ಕ.ಜಿಲ್ಲೆ. ಎಂಬಾತನನ್ನು ಪತ್ತೆ ಮಾಡಿ ಆರೋಪಿತನಿಂದ ನೀಲಿ ಬಣ್ಣದ VIVO ಕಂಪೆನಿಯ VIVO Y  12 G ಹೆಸರಿನ VIVO 2068 ಮೊಡಲ್ ಮೊಬೈಲ್ ಪೋನ್ , ಒಟ್ಟು ತೂಕ ಪ್ಲಾಸ್ಟಿಕ್ ಚೀಲ ಸೇರಿ 11.42 ಗ್ರಾಂ ಬಿಳಿ ಮತ್ತು ಕಂದು ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಬಿಳಿ ಬಣ್ಣದ ಪ್ಲಾಸ್ಟಿಕ್ ಪ್ಯಾಕೆಟ್ -1  ಸಿಲ್ವರ್  ಬಣ್ಣದ ಡಿಜಿಟಲ್ ತೂಕ ಮಾಪನ -1   ಮೌಲ್ಯ ರೂ: 500/- ಬಿಳಿ ಬಣ್ಣದ ಪ್ಲಾಸ್ಟಿಕ್ ಲಕೋಟೆ -1 ಮತ್ತು ಅದರಲ್ಲಿದ್ದ ಪ್ಲಾಸ್ಟಿಕ್ ಲಕೋಟೆಗಳು – 15 ಸದ್ರಿ ಸೊತ್ತುಗಳನ್ನು ಮುಂದಿನ ವ್ಯವಹರಣೆಯ ಬಗ್ಗೆ  ಸ್ವಾದೀನಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ 

Surathkal PS

ಪಿರ್ಯಾದಿ Karthik ದಾರರು ದಿನಾಂಕ: 06-09-2023 ರಂದು  ಅವರ ಬಾಬ್ತು KA- 19-EV- 6954 ನೇ ನಂಬ್ರದ ಬಜಾಜ್ ವಿ12  ಬಿ.ಎಸ್-4, ಕಪ್ಪು ಬಣ್ಣದ ಆರೆಂಜ್ ಸ್ಟಿಕ್ಕರ್ ಇರುವ ಮೋಟಾರ್ ಸೈಕಲ್ ನಲ್ಲಿ ಕುಳಾಯಿ ವಿದ್ಯಾನಗರ ತರುಣ ವೃಂದದ ವತಿಯಿಂದ ನಡೆಯುವ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ತನ್ನ ತಂದೆಯವರು ಸೌಂಡ್ಸ್ ಮತ್ತು ಲೈಟ್ಸ್ ಅಳವಡಿಸಿದ್ದು ತನ್ನ ತಂದೆಗೆ ಸಹಾಯಮಾಡಲೆಂದು ಈ ದಿನ ಬೆಳಿಗ್ಗೆ ತನ್ನ ಮನೆಯಿಂದ ಸದ್ರಿ ಮೋಟಾರ್ ಸೈಕಲ್ ನಲ್ಲಿ ಹೊರಟು ಕುಳಾಯಿ ವಿದ್ಯಾನಗರ ಮೊಸರು ಕುಡಿಕೆ ಕಾರ್ಯಕ್ರಮ ನಡೆಯುವ ಸ್ಟೇಜ್ ನ ಹಿಂಬಾಗದಲ್ಲಿ ತನ್ನ ಮೋಟಾರ್ ಸೈಕಲ್ ನ್ನು ಸಮಯ ಸುಮಾರು ಬೆಳಿಗ್ಗೆ 10.30 ಗಂಟೆಗೆ ಪಾರ್ಕಿಂಗ್ ಮಾಡಿದ್ದು ನಂತರ ತನ್ನ ಕೆಲಸ ಮುಗಿಸಿ ರಾತ್ರಿ ಸಮಯ ಸುಮಾರು 8.30 ಗಂಟೆಗೆ ತಾನು ಮೋಟಾರ್ ಸೈಕಲ್ ನ್ನು ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ತನ್ನ ಬಾಬ್ತು ಮೋಟಾರ್ ಸೈಕಲ್ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ನಂತರ ಸುತ್ತಮುತ್ತಲೂ ಹುಡುಕಾಡಿದಾಗ ಎಲ್ಲಿಯೂ ಸಿಕ್ಕಿರುವುದಿಲ್ಲ ಪಿರ್ಯಾದಿದಾರರ ಬಾಬ್ತು ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿರುತ್ತದೆ ಸದ್ರಿ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ25,000/- ಆಗಿರುತ್ತದೆ ಎಂಬಿತ್ಯಾದಿ.

Moodabidre PS

 ದಿನಾಂಕ-05-09-2023 ರಂದು ಸಂಜೆ ಸುಮಾರು 6-30 ಗಂಟೆಗೆ ಮೂಡಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ಮಿತ್ತಬೈಲು ಎಂಬಲ್ಲಿ ಪಿರ್ಯಾದಿ Mrs Shobha ದಾರರ ಗಂಡ ಕೇಶವ ಭಟ್ ಎಂಬವರು ತನ್ನ ಮನೆಯಿಂದ ಕೆಎ-19-ಹೆಚ್.ಡಿ-9935 ನಂಬ್ರದ ಮೋಟಾರ್ ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಗುಡ್ಡೆಯಂಗಡಿ ಕಡೆಗೆ ಹೋಗುವರೇ ತನ್ನ ಮನೆಯ ಬಳಿ ಇರುವ ಮೂಡಬಿದ್ರೆ-ಬೆಳ್ಮಣ್ ಮುಖ್ಯ ರಸ್ತೆಗೆ ಇಂಡಿಕೇಟರ್ ಲೈಟ್ ಹಾಗೂ ಕೈಯಿಂದ ಸೂಚನೆ ನೀಡಿ ತಿರುಗಿಸಿದ ಸಮಯ ಗುಡ್ಡೆಯಂಗಡಿ ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ-20.ಹೆಚ್.ಬಿ-0388 ನಂಬ್ರದ ಮೋಟಾರ್ ಸೈಕಲ್ ನ್ನು ಸವಾರ ಶೇಖರ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಗಂಡನವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡ ಕೇಶವ ಭಟ್ ರವರಿಗೆ ತಲೆಯ ಎದುರು ಭಾಗಕ್ಕೆ ಮತ್ತು ಮೂಗಿನಲ್ಲಿ ರಕ್ತಗಾಯವಾಗಿದ್ದು, ಇವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿರುತ್ತದೆ. ಈ ಅಪಘಾತದಲ್ಲಿ ಆರೋಪಿ ಶೇಖರ್ ರವರಿಗೂ ಕೂಡಾ ಸಣ್ಣಪುಟ್ಟ ಗಾಯಗಳಾಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-09-2023 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080