ಅಭಿಪ್ರಾಯ / ಸಲಹೆಗಳು

Crime Report in  Traffic North Police Station     

ದಿನಾಂಕ 04-10-2023 ರಂದು ಪಿರ್ಯಾದಿ Rajesh ದಾರರು KA-20-EH-7777 ನಂಬ್ರದ ಮೋಟಾರ್ ಸೈಕಲಿನಲ್ಲಿ ಸಹ ಸವಾರರಾಗಿ ಹಾಗೂ ದೂರದ ಸಂಬಂಧಿ ಸಂತೋಷ್ ಸವಾರರಾಗಿ ಸವಾರಿ ಮಾಡಿಕೊಂಡು ಕುಂದಾಪುರದಿಂದ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಾ ಮದ್ಯಾಹ್ನ ಸಮಯ ಸುಮಾರು 3:30 ಗಂಟೆಗೆ ಮುಲ್ಕಿ ಕೋಲ್ನಾಡು ಜಂಕ್ಷನ್ ಬಳಿ ತಲುಪಿದಾಗ ಮೋಟಾರ್ ಸೈಕಲ್ ಸವಾರನು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಗೆ ಅಳವಡಿಸಿದ ಬ್ಯಾರಿಕೇಡ್ ಗೆ ಡಿಕ್ಕಿಪಡಿಸಿ, ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ಕೋಲ್ನಾಡು ಜಂಕ್ಷನ್ ಬಳಿ ಯು-ಟರ್ನ್ ಮಾಡುತ್ತಿದ್ದ KA-13-D-2743 ನಂಬ್ರದ ಲಾರಿಯ ಎಡಭಾಗಕ್ಕೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರು ಮತ್ತು ಸವಾರ ಸಂತೋಷ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲ ಕೈ ಅಂಗೈಗೆ ರಕ್ತಗಾಯ, ಬಲ ಕಾಲಿನ ಹೆಬ್ಬರಳಿನ ಬಳಿ ಚರ್ಮ ತರಚಿದ ರೀತಿಯ ರಕ್ತಗಾಯವಾಗಿದ್ದು, ಸವಾರನಾದ ಸಂತೋಷ ರವರಿಗೆ ಎರಡೂ ಕೈ ಮತ್ತು ಎರಡು ಕಾಲಿಗೆ, ಮುಖಕ್ಕೆ ಚರ್ಮ ಹರಿದ ರೀತಿಯ ಗಾಯ ಹಾಗೂ ಹಣೆಗೆ ಗುದ್ದಿದ ರೀತಿಯ ಗಾಯವಾಗಿ ಪಿರ್ಯಾದಿದಾರರು ಮತ್ತು ಸಂತೋಷ ರವರು ಸಮುದಾಯ ಆರೋಗ್ಯ ಕೇಂದ್ರ, ಮುಲ್ಕಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಹೋಗಿದ್ದು, ನಿನ್ನೆ ದಿನ ಸವಾರ ಸಂತೋಷ ರವರ ಗಾಯ ಉಲ್ಬಣಗೊಂಡ ಕಾರಣ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ನ್ಯೂ ಮೇಡಿಕಲ್ ಸೆಂಟರ್ ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Urva PS

ಪಿರ್ಯಾದಿ Kanaka Suresh  Reddy ದಾರರು ಕರ್ನಾಟಕ ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ:06-10-2023 ರಂದು ಬೆಳಿಗ್ಗೆ 09-00 ಗಂಟೆಗೆ ಮನೆಯಿಂದ  ಬ್ಯಾಂಕಿಗೆ ಹೋಗಿದು, ಅಲ್ಲಿ ಕೆಲಸ ಮುಗಿಸಿಕೊಂಡು ಸಂಜೆ 06-00ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲನ್ನು ಯಾವುದೋ ಬಲವಾದ ಸಾದನದಿಂದ ಬಾಗಿಲನ್ನು ಹೊಡೆದು ಹೋಗಿದ್ದು ಬಾಗಿಲು ತೆರೆದಿರುತ್ತದೆ, ಪಿರ್ಯಾದಿ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಗಿನ ಎಲ್ಲಾ ವಿದ್ಯುತ್ ದೀಪಗಳು ಉರಿಯುತ್ತಿದ್ದು ಹಾಲಿನ ದಕ್ಷಿಣ ಬದಿಯ ಕೋಣೆಯಲ್ಲಿರಿಸಿದ ಸ್ಟೀಲ್ ಕಪಾಟಿನ ಬಾಗಿಲು ತೆರೆದುಕೊಂಡು ಕಪಾಟಿನ ಒಳಗಡೆ ಇರಿಸಿದ್ದ ಬಟ್ಟೆ ಬರೆಗಳನ್ನು ಅಲ್ಲದೇ ಕಪಾಟಿನ ಸೇಪ್ ಲಾಕರ್ ನ್ನು ಕೂಡ ತೆಗೆದು ಬಟ್ಟೆಯ ಮೇಲೆ ಬಿಸಾಡಿದ್ದು ನಾನು ಕಪಾಟನ್ನು ಪರಿಶೀಲಿಸಿದಲ್ಲಿ ಕಪಾಟಿನ ಸೇಪ್ ಲಾಕರ್ ನಲ್ಲಿರಿಸಿದ್ದ ಒಂದು 6.50 ಗ್ರಾಂ ತೂಕದ ಮತ್ತು ಇನ್ನೊಂದು 8.50 ಗ್ರಾಂ ತೂಕದ ಒಟ್ಟು 15 ಗ್ರಾಂ ತೂಕದ ಸುಮಾರು 70000/-ರೂ ಮೌಲ್ಯದ ಚಿನ್ನದ ಎರಡು ಉಂಗುರಗಳನ್ನು ಮತ್ತು ನಗದು 4000/- ರೂ ಕಾಣೆಯಾಗಿದ್ದು ಇದನ್ನು ಯಾರೋ ಕಳ್ಳರು ಈ ದಿನ ಬೆಳಿಗ್ಗೆ 09-00ಗಂಟೆಯಿಂದ ಸಂಜೆ 06-00 ಗಂಟೆಯ ಮದ್ಯೆ ಮನೆಯಲ್ಲಿ ಇಲ್ಲದ ಸಮಯ ಮನೆಯ ಎದುರಿನ ಕಬ್ಬಿಣದ ಬಾಗಿಲ ಕೊಂಡಿಯನ್ನು ಜಖಂಗೊಳಸಿ ಒಳಗೆ ಬಂದು ಮನೆಯ ಮುಖ್ಯ ಬಾಗಿಲನ್ನು ಕೂಡ ಜಖಂ ಗೊಳಿಸಿ ಮನೆಯ ಕಪಾಟಿನಲ್ಲಿರಿಸಿದ್ದ ಚಿನ್ನದ ಉಂಗುರಗಳನ್ನು ಮತ್ತು ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಅದುದ್ದರಿಂದ ಕಳವು ಮಾಡಿದ ವ್ಯಕ್ತಿಗಳ ವಿರುದ್ದ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ ಎಂಬಿತ್ಯಾದಿ.

Kavoor PS

ಪಿರ್ಯಾದಿದಾರರಾದ ಶ್ಯಾವಕ್ಕ ಕರಡೀಗುಡ್ಡ   (47 ವರ್ಷ) ಎಂಬವರು ಸುಮಾರು 6 ವರ್ಷಗಳಿಂದ ಮಂಗಳೂರಿನಲ್ಲಿ ತಮ್ಮ ಕುಂಟುಂಬದೊಂದಿಗೆ  ವಾಸವಾಗಿದ್ದು, ಮೂಲತಃ ಇವರು ಬಾದಾಮಿ(ತಾ) ಬಾಗಲಕೋಟೆಯವರಾಗಿರುತ್ತಾರೆ. ಇವರಿಗೆ ಒಟ್ಟು 4 ಜನ ಮಕ್ಕಳಿದ್ದು, 2 ಗಂಡು, 2 ಹೆಣ್ಣು ಮಕ್ಕಳಿರುತ್ತಾರೆ. ಅವರಲ್ಲಿ ಕೊನೆಯ ಮಗಳಾದ ಯಲ್ಲಮ (24 ವರ್ಷ) ಎಂಬುವವರು ವಿಧ್ಯಾಭ್ಯಾಸ ಮುಗಿಸಿ ಮನೆಯಲ್ಲೇ ಇರುತ್ತಿದ್ದು, ದಿನಾಂಕ: 05- 10-2023 ರಂದು ಸಮಯ ಸುಮಾರು ಬೆಳಗ್ಗೆ 10:15 ಗಂಟೆಗೆ ಮನೆಯಲ್ಲಿ ಯಾರು ಇಲ್ಲದ ಸಮಯ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದು, ವಾಪಾಸ್ಸು ಈವರೆಗೆ ಬರದೆ ಕಾಣೆಯಾಗಿರುತ್ತಾರೆ. ಎಂಬಿತ್ಯಾದಿ.   

  1. ಯಲ್ಲಮ್ಮ (24 ವರ್ಷ) ತಂದೆ: ಭೀಮಪ್ಪ ಕರಡೀಗುಡ್ಡ
  2. ಧರಿಸಿರುವ ಬಟ್ಟೆ: ಕಪ್ಪು ಬಣ್ಣದ ಗೌನ್ ಧರಿಸಿರುತ್ತಾರೆ

 

Bajpe PS

ಪಿರ್ಯಾದಿ Sampath ದಾರರ ತಮ್ಮನಾದ ಸಚಿನ್ ಕುಮಾರ್ ರವರು ಕದ್ರಿಯಲ್ಲಿರುವ HDFC ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ ಪ್ರತಿದಿನ ಕೆಲಸಕ್ಕೆ ತನ್ನ ಬೈಕ್ ನಂ KA-19 EJ 7957 ನೇದರಲ್ಲಿ ಹೋಗಿ ಬರುತಿದ್ದು ದಿನಾಂಕ 06.10.2023 ರಂದು ಪಿರ್ಯಾದಿದಾರರು ಮನೆಯಲ್ಲಿರುವ ಸಮಯ ತಮ್ಮನ ಫೋನ್ ನಿಂದ ಪಿರ್ಯಾದಿದಾರರ ಮೊಬೈಲ್ ಪೋನ್ ಗೆ ಕಾಲ್ ಬಂದಿದ್ದು ಕರೆ ಮಾಡಿದ ವ್ಯಕ್ತಿಯು ಮಂಗಳೂರು ತಾಲೂಕು ಮುಚ್ಚೂರು ಕ್ರಾಸ್ ಬಳಿ ಪಿರ್ಯಾದಿದಾರರ ತಮ್ಮನ ಬೈಕಿಗೆ ಟಿಪ್ಪರ್ ಲಾರಿಯು ಡಿಕ್ಕಿಯಾಗಿ ಗಂಬೀರ ಸ್ವರೂಪದ ಗಾಯವಾಗಿದ್ದು ಗಾಯಾಳುವನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೀರುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ತಮ್ಮ ಬಾವನಾದ ಜಯಂತ್ ಆಚಾರ್ಯರವರು ಕೂಡ ಆಸ್ಪತ್ರೆಗೆ ಬಂದಿದ್ದು ಆಸ್ಪತ್ರೆಯಲ್ಲಿ ಪಿರ್ಯಾದಿದಾರರ ತಮ್ಮ ತಮ್ಮನಾದ ಸಚಿನ್ ಕುಮಾರ್ ರವರನ್ನು ನೋಡಿದಾಗ ತಲೆಗೆ ಗಂಬೀರ ಸ್ವರೂಪದ ಗಾಯವಾಗಿದ್ದು ದೇಹದ ಅಲ್ಲಲ್ಲಿ ರಕ್ತಗಾಯಗಳಾಗಿ ಮೃತಪಟ್ಟಿರುವುದು ಕಂಡು ಬಂದಿದ್ದು ಈ ಅಪಘಾತದ ಬಗ್ಗೆ ಪಿರ್ಯಾದಿದಾರರು ತಮ್ಮ  ತಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ನಿತಿನ್ ಶೆಟ್ಟಿ ಎಂಬುವರಲ್ಲಿ ಅಪಘಾತ ಬಗ್ಗೆ ವಿಚಾರಿಸಿಕೊಂಡಾಗ ಈ ದಿನ ಸಂಜೆ 6.45 ಗಂಟೆಯ ಸಮಯಕ್ಕೆ ಮೂಡಬಿದ್ರೆ ಕಡೆಯಿಂದ ಕೈಕಂಬ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಹೋಗುತಿದ್ದ KA-19 AE-0844 ನೇ ನಂಬ್ರದ ಟಿಪ್ಪರ್ ಲಾರಿಯು ಮುಚ್ಚೂರು ಕ್ರಾಸ್ ಬಳಿ ತಲುಪಿದಾಗ ಮೂಡಬಿದ್ರೆ ಕಡೆಯಿಂದ ಕೈಕಂಬ ಕಡೆಗೆ  ಹೋಗುತಿದ್ದ ಪಿರ್ಯಾದಿದಾರರ ತಮ್ಮನು ಚಲಾಯಿಸುತಿದ್ದ ಬೈಕ್  ನಂ KA-19 EJ-7957 ನೇ ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಬೀರ ಗಾಯಗೊಂಡವನನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಪರೀಕ್ಷಿಸಿದ ವೈದ್ಯರು ಈಗಾಗಲೇ ಗಾಯಾಳು ಪಿರ್ಯಾದಿದಾರರ ತಮ್ಮ ಸಚಿನ್ ಕುಮಾರ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ  ಎಂಬಿತ್ಯಾದಿ

Kankanady Town PS                               

ಪಿರ್ಯಾದು Shruti Kumari ದಾರರು ತನ್ನ ಕುಟುಂಬದೊಂದಿಗೆ ಕೋಡಿಕಲ್ 6 ನೇ ಅಡ್ಡರಸ್ತೆ ,ಕುರುವಾಂಭ ದೇವಸ್ಥಾನದ ಹತ್ತಿರ,ಮಂಗಳೂರು ಎಂಬಲ್ಲಿ ವಾಸ ಮಾಡಿಕೊಂಡಿದ್ದು,. ಪಿರ್ಯಾದುದಾರರು ಹಾಗೂ  ಗಂಡ ಸುರೇಶ್ (30) ಪಡೀಲ್ ನಲ್ಲಿರುವ ಲೇ-ರಾಯ್ಸ್ ಎಂಬ ಚಾಕಲೇಟ್ ಸೆಂಟರ್ ನಲ್ಲಿ ಸೇಲ್ಸ್ ಮೇನ್ ಆಗಿ  ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 06-10-2023 ರಂದು ಪಿರ್ಯಾದುದಾರರ ಗಂಡನಾದ ಸುರೇಶ್ ರವರು ಪಡೀಲ್ ನಲ್ಲಿರುವ ಲೇ-ರಾಯ್ಸ್ ಸೆಂಟರ್ ನಲ್ಲಿ ಮಧ್ಯಾಹ್ನ 14:30 ಗಂಟೆಗೆ ಕೆಲಸ ಮುಗಿಸಿಕೊಂಡು ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಅವರ ಸ್ನೇಹಿತರಲ್ಲಿ, ಪರಿಚಯದವರಲ್ಲಿ ಸಂಭಂದಿಕರಲ್ಲಿ ವಿಚಾರಿಸಿದ್ದು ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಆದ್ದರಿಂದ ಪಿರ್ಯಾದುದಾರರ ಗಂಡ ಸುರೇಶ್ ರವರನ್ನು .ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಎಂಬಿತ್ಯಾದಿ.

Ullal PS

ಪಿರ್ಯಾದಿದಾರರ ಅಣ್ಣ ಇಬ್ರಾಹಿಂ ಖಲೀಲ್ ರವರು ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದು, ಅವರ ಬಾಬ್ತು  ಕಪ್ಪು ಮತ್ತು ಕೆಂಪು ಬಣ್ಣದ ಬಜಾಜ್ ಪಲ್ಸರ್ ಮೋಟಾರು ಸೈಕಲ್  KA-19HE-6539ನೇ ದ್ದನ್ನು  ಪಿರ್ಯಾದಿದಾರರು ಉಪಯೋಗಿಸುತ್ತಿದ್ದು, ದಿನಾಂಕಃ 28-09-2023 ರಂದು ರಾತ್ರಿ 21-30 ಗಂಟೆಯ ಸಮಯಕ್ಕೆ ಸದ್ರಿ ಮೋಟಾರು ಸೈಕಲನ್ನು ಪಿರ್ಯಾದಿದಾರರ ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದು, ದಿನಾಂಕಃ 29-09-2023 ರಂದು ಬೆಳಿಗ್ಗೆ 07-00 ಗಂಟೆ ಸಮಯಕ್ಕೆ ನೋಡಿದಾಗ ಸದ್ರಿ ಮೋಟಾರು ಸೈಕಲ್ ಕಾಣದೇ ಇದ್ದು, ಯಾರೋ ಕಳ್ಳರು ರಾತ್ರಿ ಸಮಯ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರು ಸೈಕಲನ್ನು ಪತ್ತೆ ಮಾಡುವರೇ ಈ ವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿ

ಕಳವಾದ ಮೋಟಾರು ಸೈಕಲ್ ನ ವಿವರ ಈ ಕೆಳಗಿನಂತಿದೆ.

1)  ಮೋಟಾರು ಸೈಕಲ್ ನಂಬ್ರ – KA-19HE-6539

2)  ಕಂಪೆನಿ            -    Bajaj Pulsor

3)  ಮೋಡೆಲ್        -    2020

4)    ಇಂಜಿನ್ ನಂಬ್ರ -    DHXRLC51206

5) ಚಾಸಿಸ್ ನಂಬ್ರ  -    MD2A11CX4LRC22019

ಇತ್ತೀಚಿನ ನವೀಕರಣ​ : 07-10-2023 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080