ಅಭಿಪ್ರಾಯ / ಸಲಹೆಗಳು

Crime Report in  : Mangalore East Traffic PS

ದಿನಾಂಕ 06-11-2023 ರಂದು ಪ್ರಕರಣದ ಪಿರ್ಯಾದಿದಾರರಾದ ರಾಜೀವ ರವರು ತನ್ನ ಬಾಬ್ತು KA-19-EW-3693 ನೊಂದಣಿ ನಂಬ್ರದ ಸ್ಕೂಟರನ್ನು ನಂತೂರು ಕಡೆಯಿಂದ ಕೆಪಿಟಿ ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ ಸಮಯ ಸುಮಾರು 6.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪದುವ ಬಳಿ ಇರುವ ಕೆ.ಆರ್. ಸರಕಾರಿ ಶಾಲೆಯ ಕಂಪೌಂಡ್ ಎದುರಿನ ರಸ್ತೆಯಲ್ಲಿಗೆ ಬಂದು ತಲುಪಿದ ವೇಳೆ ಅದೇ ರಸ್ತೆಯಲ್ಲಿ ಅಂದರೆ ನಂತೂರು ಕಡೆಯಿಂದ ಕೆಪಿಟಿ ಕಡೆಗೆ   TN-47- AJ-9498 ನಂಬ್ರದ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಬಲಗಡೆಯಿಂದ ಓವರ್ ಟೇಕ್ ಮಾಡಿ ಒಮ್ಮೇಲೆ ರಸ್ತೆಯ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದ ಪರಿಣಾಮ ಲಾರಿಯ ಎಡಹಿಂಬದಿ ಬಾಗವು ಸ್ಕೂಟರಿಗೆ ಢಿಕ್ಕಿಯಾಗಿ ಪಿರ್ಯಾದಿದಾರರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದು, ತಲೆಯ ಭಾಗಕ್ಕೆ ಉಜ್ಜಿದ ಮತ್ತು ಗುದ್ದಿದ ಗಾಯ, ಬಲ ಕೈ ಮೊಣಗಂಟಿಗೆ, ಎಡಕೈ ಬೆರಳುಗಳ ಮೇಲೆ ಚರ್ಮಕಿತ್ತ ಗಾಯವಾದವರನ್ನು ಅಪಘಾತವನ್ನು ಕಂಡು ಅಲ್ಲಿ ನೆರೆದ ಸಾರ್ವಜನಿಕರು ವಾಹನವೊಂದರಲ್ಲಿ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುವುದಾಗಿದೆ. ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿ ವಿಶ್ರಾಂತಿಯಲ್ಲಿದ್ದರಿಂದ ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.        

Urva PS   

ಪಿರ್ಯಾದಿ Shivananda H Y ದಾರರು ಕೆಎ-19-ಹೆಚ್ ಇ- 5377 ಬೈಕ್ ನಲ್ಲಿ. ದಿನಾಂಕ 27-10-2023 ರಂದು ಸಂಜೆ ಕೆಲಸ ಮುಗಿಸಿ ಕುಳಾಯಿ ಯಿಂದ  ಮಂಗಳೂರು ಚಿಲಿಂಬಿಗೆ ಬೇರೆ  ಕೆಲಸ ನಿಮಿತ್ತ ಬೈಕ್ ನಲ್ಲಿ ಬಂದು  ರಾತ್ರಿ 8-15 ವೇಳೆಗೆ ಉರ್ವಾ ಸ್ಟೋರ್ ಮಾರ್ಕೆಟ್ ಎದುರು ಬೈಕನ್ನು ನಿಲ್ಲಿಸಿ, ನಂತರ ಉರ್ವ ಸ್ಟೋರ್ ಬಸ್ ಸ್ಟಾಂಡ್ ನ ರಿಕ್ಷಾ ಪಾರ್ಕ್ ಬಳಿ ಇರುವ ಗೂಡಂಗಡಿಯಲ್ಲಿ ಚರುಮುರಿ ತಿಂದು ವಾಪಾಸ್ಸು ರಾತ್ರಿ 8-45 ರ ವೇಳೆಗೆ ಹೋಗಿ ನಿಲ್ಲಿಸಿದ್ದ ಸ್ಥಳದಲ್ಲಿದ್ದ ಮೊಟಾರ್ ಸೈಕಲ್ ಕಾಣೆಯಾಗಿರುತ್ತದೆ, ನಂತರ ಮೋಟಾರ್ ಸೈಕಲ್ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಗಲ್ಲಿಲ್ಲ,ಮತ್ತು ಸ್ನೇಹಿತರಲ್ಲಿ ಮೊಟಾರ್ ಸೈಕಲ್ ಬಗ್ಗೆ ವಿಚಾರಿಸಿದಾಗ ಎಲ್ಲೂ ಪತ್ತೆಯಾಗದೆಯಿದ್ದು ಈ ದಿನ ಬಂದು ತನ್ನ ಬೈಕ್ ನ್ನು ಯಾರೋ ಕಳವು ಮಾಡಿಕೊಂಡಿರುವುದಾಗಿ ದೂರು ನೀಡಿದ್ದು ಸದ್ರಿ ಬೈಕ್ ಬಜಾಜ್ ಫ್ಲಾಟಿನ ಕಂಪನಿಯ 100 ಸಿಸಿಯ ಕಪ್ಪು ಬಣ್ಣದಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 40,000 ಆಗಬಹದು, ಎಂಬಿತ್ಯಾದಿ.

Konaje PS

 ದಿನಾಂಕ 07-11-2023 ರಂದು ಬೆಳಿಗ್ಗೆ ಈ ಪ್ರಕರಣದ ಪಿರ್ಯಾದಿದಾರರು   ಠಾಣಾ ಸಿಬ್ಬಂದಿಯವರೊಂದಿಗೆ  ಠಾಣಾ ಸರಹದ್ದಿನ ಅಸೈಗೋಳಿ, ತಿಪ್ಲೆಪದವು, ದೇರಳ ಕಟ್ಟೆ, ನಾಟೆಕಲ್ ಮುಂತಾದ ಕಡೆಗಳಲ್ಲಿ ಸಂಚರಿಸಿಕೊಂಡು ನಾಟೇಕಲ್ ನ ವಿಜಯನಗರ ಲೇ ಔಟ್ ಗೆ ಹೋಗುವ ಸಾರ್ವಜನಿಕ ರಸ್ತೆಗೆ ತಲುಪಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯ  ಬೆಳಿಗ್ಗೆ 10-00 ಗಂಟೆಗೆ ವಿಜಯನಗರ ಲೇ ಔಟ್ ಕಡೆಯಿಂದ ಕೆಎ19-ಎಎ-1641 ಆಟೋ ರಿಕ್ಷಾ  ಬರುತ್ತಿರುವುದನ್ನು ಕಂಡು ಸಿಬ್ಬಂದಿಯವರ ಮೂಲಕ ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ರಿಕ್ಷಾ ಚಾಲಕನು ಆಟೋ ರಿಕ್ಷಾವನ್ನು ನಿಲ್ಲಿಸದೇ ಮುಂದಕ್ಕೆ ಹೋದವನನ್ನು ಬೆನ್ನಟ್ಟಿ  ಸುತ್ತುವರಿದು ಹಿಡಿದು ಆರೋಪಿ   ಮಹಮ್ಮದ್ ಇಕ್ಬಾಲ್ @ ಇಕ್ಕು ಎಂಬವನಲ್ಲಿ  ಆಟೋರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಆಟೋರಿಕ್ಷಾವನ್ನು ನಿಲ್ಲಿಸದೇ ಪರಾರಿಯಾಗಲು ಪ್ರಯತ್ನಿಸಿದ ಬಗ್ಗೆ ವಿಚಾರಿಸಿದಾಗ  ಆಟೋ ರಿಕ್ಷಾದ ಚಾಲಕನ ಸೀಟ್ ನ ಕೆಳಗೆ  ಮಾದಕ ವಸ್ತುವಾದ ಗಾಂಜಾದ ಪಾಕೇಟ್ ಇದ್ದು,  ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪರಾರಿಯಾಗಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದು, ಆರೋಪಿಯು ಆತನ ವಶದಲ್ಲಿದ್ದ ಗಾಂಜಾವನ್ನು ಆಟೋರಿಕ್ಷಾ ಚಾಲಕನ ಸೀಟಿನ ಅಡಿಯಲ್ಲಿದ್ದ  ರೂ 6500/- ಮೌಲ್ಯದ  200 ಗ್ರಾಂ ತೂಕದ ಗಾಂಜಾ,  ನಗದು ಹಣ ರೂ 520/-, ರೂ 5000/-ಮೌಲ್ಯದ  ಒಪ್ಪೋ ಕಂಪನಿಯ ಮೊಬೈಲ್ ಪೋನ್,   ರೂ. 1000/- ಮೌಲ್ಯದ ಡಿಜಿಟಲ್ ತೂಕ ಮಾಪನ, ಗಾಂಜಾವನ್ನು ತುಂಬಿಸಲು ಬಳಸಿದ ಪ್ಲಾಸ್ಟಿಕ್ ಕವರ್ ಗಳು  ಮತ್ತು ಗಾಂಜಾವನ್ನು ಸಾಗಾಟ ಮಾಡಲು ಉಪಯೋಗಿಸಿದ ರೂ. 40,000/ ಮೌಲ್ಯದ ಕೆಎ19-ಎಎ-1641 ನೇ ನಂಬ್ರದ ಆಟೋರಿಕ್ಷಾವನ್ನು ಸ್ವಾಧೀನಪಡಿಸಿಕೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ: 07-11-2023 ರಂದು ಬೆಳಿಗ್ಗೆ ಸುಮಾರು 10.20 ಗಂಟೆಗೆ ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಬೀರಿ ಜಂಕ್ಷನ್ ಎಂಬಲ್ಲಿ ಒರ್ವ ಯುವಕನು ಯಾವುದೋ ಮಾದಕ ವಸ್ತು  ವನ್ನು ಸೇವಿಸಿ ನಶೆಯಲ್ಲಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಮಾಹಿತಿ ಯ ಮೇರೆಗೆ ಸ್ಥಳಕ್ಕೆ ಹೋಗಿ  ಒರ್ವ ವ್ಯಕ್ತಿಯು ಯಾವೂದೋ ನಿಷೇದಿತ ಮಾದಕ ವಸ್ತು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿವರ್ತಿಸು ತ್ತಿದ್ದವನ ಬಳಿ ಹೋಗಿ ಆತನನ್ನು ವಿಚಾರಿಸಿದಾಗ ತನ್ನ ಹೆಸರು ವಿಷ್ನೇಶ, ಪ್ರಾಯ: 23 ವರ್ಷ,  ವಾಸ: ಅಮ್ಮ ನಿಲಯ, ಕನೀರ್ ತೋಟ, ಕೊಲ್ಯ, ಕೋಟೆಕಾರ್ ಗ್ರಾಮ, ಉಳ್ಳಾಲ ತಾಲೂಕು, ಮಂಗಳೂರು, ಎಂಬುದಾಗಿ ತಿಳಿಸಿರುತ್ತಾನೆ. ಈತನು ಕಾನೂನುಬಾಹಿರ ವಾದ ನಿಷೇದಿತ ಮಾದಕ ದ್ರವ್ಯ ಸೇವನೆ ಯಾ ತಂಬಾಕು ಸೇವನೆ ಮಾಡಿರುವ ಕಾರಣ ಈತನನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ತಪಾಸಣೆ ಯ ಬಗ್ಗೆ ಕೋರಿಕೆ ಪತ್ರದೊಂದಿಗೆ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯ ವರ ಮುಂದೆ ಹಾಜರುಪಡಿಸಿದಲ್ಲಿ ವಿಷ್ನೇಶನು ನಿಷೇದಿತ ಮಾದಕ ವಸ್ತು  ‘Tetrahydrocannabinol’ ಸೇವನೆ ಮಾಡಿರುವುದಾಗಿ ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್ ನೀಡಿರುವುದರಿಂದ ಆರೋಪಿಯ ವಿರುದ್ಧ ಪ್ರಕರಣ ದಾಖಲಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 08-11-2023 03:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080