ಅಭಿಪ್ರಾಯ / ಸಲಹೆಗಳು

Crime Report in : Mulki PS

ದಿನಾಂಕ: 05-12-2023 ರಂದು 18-00 ಗಂಟೆಗೆ ಹಳೆಯಂಗಡಿ ಗ್ರಾಮದ ಸಾಗ್ ಕೊಪ್ಪಲ ಬ್ರಿಡ್ಜ್ ಬಳಿ ಮಹಮ್ಮದ್ ರಾಝೀಕ್ ಎಂಬಾತನು ಬತ್ತಿಯೊಂದಿಗೆ ಗಾಂಜವನ್ನು ಸೇರಿಸಿ ಸೇದಿ ಕೊಂಡಿರುವವವನ್ನುವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಕೋರಿಕೆ ಪತ್ರವನ್ನು ತಯಾರಿಸಿ ಎ.ಜೆ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದ್ದು, ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಖಚಿತಪಡಿಸಿಕೊಂಡು  Tetrahydracannabinoid (Marijuana)- Positive ಎಂದು ವರದಿಯ ದೃಢಪತ್ರವನ್ನು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

Urva PS

ದಿನಾಂಕ 05-12-2023 ಬೆಳಿಗ್ಗೆ ಸಮಯ ಸುಮಾರು 10-00 ರ ವೇಳೆಗೆ ಪಿರ್ಯಾದಿ DASHARATHA  ತಮ್ಮ ಮನೆಯ ಅಂಗಳದಲ್ಲಿದ್ದ ಹೂ ಗಿಡಗಳಿಗೆ ನೀರುಣಿಸುತ್ತಿದ್ದ ಸಮಯದಲ್ಲಿ ಪ್ರಕರಣದ ಆರೋಪಿಯಾದ ಶಕುಂತಳಾ ಎಂಬವರು ಪಿರ್ಯಾದಿದಾರರ ಮನೆಯ ಬಳಿಗೆ ಬಂದು ವಿನಾ ಕಾರಣ ಏಕಾಏಕಿ ಪಿರ್ಯಾದಿದಾರರನ್ನು ಉದ್ದೇಶಿಸಿ ಬ್ಯಾವರ್ಸಿ, ರಂಡೇ ಮಗ, ಹೊರಗೆ ಬಾ, ಏನು ನೋಡುತ್ತಿ ಎಂದು ಪಿರ್ಯಾದಿದಾರನ್ನು ಹೊರಗೆ ಕರೆದು ಪಿರ್ಯಾದಿದಾರರು ವಿಚಾರವೇನೆಂದು ತಿಳಿಯಲು ಪ್ರಯತ್ನ ಪಟ್ಟಾಗ ಆರೋಪಿ ಶಕುಂತಳಾರವರು ಒಮ್ಮೆಲೆ ಬಗ್ಗಿ ಸ್ಥಳದಲ್ಲಿದ್ದ ದೊಡ್ಡ ಕಲ್ಲೊಂದನ್ನು ಕೈಗಳಿಂದ ಎತ್ತಿ ಪಿರ್ಯಾದಿದಾರರ ಹಣೆಗೆ ಬಲವಾಗಿ ಹೊಡೆಯಲು ಮುಂದಾದಾಗ ಪಿರ್ಯಾದಿದಾರರು ತಟ್ಟನೆ ಆರೋಪಿತಳ ಕೈಯಲ್ಲಿದ್ದ ಕಲ್ಲನ್ನು ದೂಡಿ ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸದಿದ್ದಲ್ಲಿ ಕಲ್ಲಿನ ಏಟು ಪಿರ್ಯಾದಿದಾರ ತಲೆಗೆ ತಾಗಿ ತೀವ್ರತರದ ಮಾರಣಾಂತಿಕ ಹಲ್ಲೆ ನಡೆಸಿ ಪಿರ್ಯಾದಿದಾರರನ್ನು ಕೊಲ್ಲುವ ಇರಾದೆಯನ್ನು ಹೊಂದಿರುತ್ತಾಳೆ. ಈ ಸಮಯ ಪಿರ್ಯಾದಿದಾರರ ಹೆಂಡತಿ ಶಾಂತಿರವರು ಪಿರ್ಯಾದಿದಾರರ ರಕ್ಷಣೆಗೆ ಬಂದಿದ್ದು ಅವರಿಗೂ ಕೂಡ ಆರೋಪಿತಳು ಅವಾಚ್ಯ ಮತ್ತು ಅಶ್ಲೀಲ ಶಬ್ದಗಳಿಂದ ಬೈದಿರುತ್ತಾರೆ, ಅಲ್ಲದೇ ಜೀವ ಬೆದರಿಕೆಯನ್ನು ಕೂಡ ಒಡ್ಡಿರುತ್ತಾರೆ ಎಂಬಿತ್ಯಾದಿ

Urva PS   

ಪಿರ್ಯಾದಿ B SHAKUNTHALA ದಿನಾಂಕ 05-12-2023 ರಂದು ಬೆಳಿಗ್ಗೆ ಉರ್ವ ಸ್ಟೋರ್ ನ ಕೃಷ್ಣ ವಿಲಾಸ ಹೊಟೇಲ್ ನಿಂದ ಮನೆಗೆ ತಿಂಡಿಯನ್ನು ತೆಗೆದುಕೊಂಡು ತನ್ನ ಮನೆಯಾದ ದಡ್ಡಲಕಾಡ್ ಹೈವೆ ರೋಡ್ ಕಡೆಗೆ ನಡೆದುಕೊಂಡು, ಹೋಗುತ್ತಿರುವಾಗ ದಡ್ಡಲಕಾಡ್ ನಿಂದ ಹೈವೆಗೆ ಹೋಗುವ ಅಡ್ಡರಸ್ತೆಗೆ ತಲುಪಿದಾಗ ಸಮಯ ಸುಮಾರು 12-00 ವೇಳೆಗೆ ಪಿರ್ಯಾದಿಯ ಸಂಬಂಧಿಯಾದ ದಶರಥನು  ಆತನ ಮನೆಯ ಬಳಿ ನಿಂತು, ಪಿರ್ಯಾದಿದಾರರನ್ನು ಗುರಾಯಿಸಿ, ನೋಡುತ್ತಿದ್ದು, ಆಗ ಪಿರ್ಯಾದಿದಾರರು  “ನೀನು ಯಾಕೆ ಹಾಗೆ ನೋಡುತ್ತಿ” ಎಂದು ಕೇಳಿ ತನ್ನ ಪಾಡಿಗೆ ನಡೆಯುತ್ತಾ ಹೋದಾಗ ಆತನು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು  ಪಿರ್ಯಾದಿದಾರರ ತಲೆ ಕೂದಲಿನ ಜಡೆಯನ್ನು ಹಿಡಿದು, ಎಳೆದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಕೈಯಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದು, ರಸ್ತೆಗೆ ತಳ್ಳಿ, ನೆಲದ ಮೇಲೆ ಬಿದ್ದ ಪಿರ್ಯಾದಿದಾರರ ಸೊಂಟಕ್ಕೆ ಕಾಲಿನಿಂದ ತುಳಿದಿರುತ್ತಾನೆ. ಆಗ ಪಿರ್ಯಾದಿದಾರರು ನೋವಿನಿಂದ ಜೋರಾಗಿ ಬೊಬ್ಬೆ ಹೊಡೆದಾಗ, ಬೊಬ್ಬೆ ಕೇಳಿ ಅಲ್ಲಿನ ಹತ್ತಿರದ ಮನೆಯವರು ಬರುವುದನ್ನು ನೋಡಿದ ಆತನು “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂಬುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-12-2023 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080