ಅಭಿಪ್ರಾಯ / ಸಲಹೆಗಳು

Crime Report in :   Moodabidre PS

ಪಿರ್ಯಾದಿದಾರರಾದ ಶಾಬಾನ್ ಆಲಿ ರವರು ತನ್ನ ತಮ್ಮ ಜಮಾಲುದ್ದೀನ್ ರವರೊಂದಿಗೆ ದಿನಾಂಕ 06-01-2024 ರಂದು ಬೆಳಿಗ್ಗೆ ಮೂಡಬಿದ್ರೆಯಿಂದ ಮಂಗಳೂರಿಗೆ ಕಟ್ಟಡದ ಕೆಲಸ ಮಾಡಲು ಹೋಗಿ ವಾಪಾಸು ಮಂಗಳೂರಿನಿಂದ ಮೂಡಬಿದ್ರೆಗೆ ಕೆ.ಎ-19-ಎ.ಡಿ-1015 ನಿಶ್ಮಿತಾ ಬಸ್ಸಿನಲ್ಲಿ ಬರುತ್ತಿರುವಾಗ ಬಸ್ ಚಾಲಕ ಸುನಿಲ್ ಎಂಬಾತನು ಬಸ್ಸನ್ನು ಅತೀ ವೇಗವಾಗಿ ಚಲಾಯಿಸಿದ ಪರಿಣಾಮ ಸಂಜೆ 7-15 ಗಂಟೆ ಸಮಯಕ್ಕೆ ಬಸ್ಸು ಮೂಡಬಿದ್ರೆಯ ಮಿಜಾರಿನ MITE ಕಾಲೇಜು ಬಸ್ ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ನಿಯಂತ್ರಣಕ್ಕೆ ಸಿಗದೇ ಅದರ ಹಿಂಬದಿಯ ಬಲಬದಿಯ ಟಯರ್ ಒಮ್ಮೆಲೇ ಒಡೆದು ಬಸ್ಸು ರಸ್ತೆ ಬದಿ ನಿಂತಿದ್ದು, ಇದರ ಪರಿಣಾಮ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಜಲಾಲುದ್ದೀನ್ ರವರ ಕಾಲಿಗೆ ರಕ್ತಗಾಯವಾಗಿರುತ್ತದೆ. ಆ ಸಮಯ ಪಿರ್ಯಾದಿದಾರರು, ಬಸ್ಸಿನ ಚಾಲಕ, ಕಂಡೆಕ್ಟರ್ , ಬಸ್ಸಿನಲ್ಲಿದ್ದವರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಜಲಾಲುದ್ದೀನ್ ರವರನ್ನು ಉಪಚರಿಸಿ ಕೂಡಲೇ ವಾಹನವೊಂದರಲ್ಲಿ ಮೂಡಬಿದ್ರೆಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

Mulki PS

 ದಿನಾಂಕ: 07-01-2024 ರಂದು ಬೆಳಗ್ಗೆ ಸುಮಾರು 11-50 ಗಂಟೆಗೆ ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ಎಸ್.ಬಿ.ಐ ಬ್ಯಾಂಕ್ ಬಳಿ ಇರುವ ಲೀಲಾ ಏರ್ ಡ್ರೇಸೆಸ್ ಎಂಬ ಅಂಗಡಿಯ ಬಳಿ ರೂಪೇಶ್ ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ವೇಳೆ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಖಚಿತ ಮಾಹಿತಿಯಂತೆ ಪಂಚರುಗಳ ಸಮಕ್ಷಮ ದಾಳಿ ನಡೆಸಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ 1] ನಗದು ಹಣ 2650/- ರೂಪಾಯಿ, 2) ಬೆಟ್ಟಿಂಗ್ ಚೀಟಿ-1, 3] ಬಾಲ್ ಪಾಯಿಂಟ್ ಪೆನ್-1 ನ್ನು ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿ  ಎಂಬಿತ್ಯಾದಿ.

Surathkal PS

ದಿನಾಂಕ 07-01-2024 ರಂದು ರಾತ್ರಿ 17:45 ಗಂಟೆಗೆ ಫಿರ್ಯಾಧಿದಾರರಾದ ಠಾಣಾ ಕಾನೂನು ಮತ್ತು ಸುವ್ಯವಸ್ಥೆ -1 ನೇ ರಘು ನಾಯಕ್ ಇವರಿಗೆ ಠಾಣೆಯಲ್ಲಿರುವಾಗ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕಿನ, ಸುರತ್ಕಲ್  ಗ್ರಾಮದ, ಸದಾಶಿವ ದೇವಸ್ಥಾನ ಕಡೆಗೆ ಹೋಗುವ ಸ್ವಾಗತ ಗೋಪುರದ ಉತ್ತರ ಬದಿಯಲ್ಲಿನ ಕಾಡಿನೊಳಗಡೆ   ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಅದೃಷ್ಟ ಆಟ ಜೂಜಾಟ  ನಡೆಯುತ್ತಿರುವ ಬಗ್ಗೆ ಬಾತ್ಮಿದಾರರು ನೀಡಿದ ಮಾಹಿತಿಯಂತೆ ಮೇಲ್ಕಾಣಿಸಿದ ಸ್ಥಳಕ್ಕೆ  18.45 ಗಂಟೆಗೆ ತಲುಪಿ, ಪರಿಶೀಲಿಸಲಾಗಿ ನೆಲದ ಮೇಲೆ ಬೆಡ್ ಸೀಟ್ ನ್ನು ಹಾಕಿ 8 ಜನರು ಸುತ್ತುವರೆದು ಕುಳಿತು ಒಬ್ಬನು ಕೈಯಲ್ಲಿ ಇಸ್ಫೀಟ್  ಎಲೆಗಳನ್ನು ಹಿಡಿದುಕೊಂಡು ಅಂದರ್ -ಬಾಹರ್ ಎಂದು ಹೇಳಿಕೊಂಡು ಇಸ್ಪೀಟ್ ಎಲೆಯನ್ನು ತಿರುಗಿಸಿ ನೆಲದ ಮೇಲೆ ಹಾಕುತ್ತಿದ್ದು  ಪಕ್ಕದಲ್ಲಿ  ನೆಲದ ಮೇಲೆ 10 ಎಂದು ಇರುವ ಹೂವಿನ ಚಿತ್ರವಿರುವ ಇಸ್ಪೀಟ್ ಎಲೆ ಇದ್ದು ಅದರ ಅದರ ಚಿಹ್ನೆ ಮತ್ತು ಅಂಕೆಗಳ ಮೇಲೆ ಕುಳಿತ್ತಿದ್ದ 3 ಜನರ 2 ಟೀಮ್ ಇದ್ದು ಅವರುಗಳು ಕೈಯಲ್ಲಿ ಹಣವನ್ನು ಪಣವಾಗಿ  ಹಿಡಿದುಕೊಂಡು  ಸದ್ರಿ ನೆಲದ ಮೇಲೆ ಹಾಕಿಕೊಂಡು ಅಂದರ್ ರೂ. 100/  ಬಾಹರ್ ರೂ. 100/ ಎಂದು ಹೇಳಿಕೊಂಡು ಅದೃಷ್ಟದ ಜೂಜಾಟ ನಡೆಸುತ್ತಿರುವುದನ್ನು ಅವರು ಉರಿಸಿದ್ದ ಕ್ಯಾಂಡಲ್ ನ ಬೆಳಕಿನ ಸಹಾಯದಿಂದ ನೋಡಿ ಖಚಿತಪಡಿಸಿಕೊಂಡು 18:55 ಗಂಟೆಗೆ ಧಾಳಿ ನಡೆಸಿ ಅಂದರ್ ಬಾಹರ್ ಆಟ ಆಡಿಸುತ್ತಿದ್ದ  1) ಕೃಷ್ಣ ರಂಗಪ್ಪ ಮುದಕವಿ ನಲ್ಲಿ  ಅಂದರ್ ಬಾಹರ್ ಜೂಜಾಟ ನಡೆಸಲು ಪರವಾನಿಗೆ ಕೇಳಿದಲ್ಲಿ ಅದನ್ನು ಪಡೆದಿಲ್ಲವಾಗಿ ತಿಳಿಸಿದನು. ಜೂಜಾಟದಲ್ಲಿ ತೊಡಗಿದ 2) ಭರಮಗೌಡ ಪಾಟೀಲ್ 3) ಮಲ್ಲಪ್ಪ ಹರ್ಲಾಪುರ 4) ರವಿ ಮಾದರ 5) ಚೇತನ 6) ಮಂಜುನಾಥ ಮಕಾನಿ 7) ಹನುಮಂತ ಪುರದ 8) ಶೇಖರ್ ಇವರುಗಳು ಅದೃಷ್ಟದ ಆಟ ಅಂದರ್ ಬಾಹರ್ ಜೂಜಾಟ ಆಡಿದ್ದಾಗಿ ತಪ್ಪೊಪ್ಪಿಕೊಂಡ ಮೇರೆಗೆ ದಸ್ತಗಿರಿಯನ್ನು ಮಾಡಿ ಆರೋಪಿಗಳು ಜುಗಾರಿ ಜೂಜಾಟಕ್ಕೆ ಉಪಯೋಗಿಸಿದ ನೆಲದ ಮೇಲೆ ಇದ್ದ ನಗದು ಹಣ 4,460/-  ರೂ. ( ರೂಪಾಯಿ ಆರು ಸಾವಿರ ಐವತ್ತು ಮಾತ್ರ ) ಹಾಗೂ ಆರೋಪಿಗಳ ಕೈಯಲ್ಲಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 5,540/- , (ರೂಪಾಯಿ ಐದು ಸಾವಿರದ ದು ನೂರು ನಲ್ವತ್ತು ಮಾತ್ರ) ನಗದು ಹಣ ಒಟ್ಟು ರೂ 10,000/- (ರೂಪಾಯಿ ಹತ್ತು ಸಾವಿರ ಮಾತ್ರ), ಹಾಗೂ ಇಸ್ಪೀಟ್ ಎಲೆಗಳು-52 ನ್ನು, ಎರಡು ಉರಿದ ಕ್ಯಾಂಡಲ್ ಗಳು ಹಾಗೂ ನೆಲಕ್ಕೆ ಹಾಸಲಾದ ಬಿಳಿ ಬಣ್ಣದ ಗೋಣಿ ಚೀಲವನ್ನು ಸ್ವಾಧೀನಪಡಿಸಲಾಗಿರುತ್ತದೆ. ಮೇಲ್ಕಾಣಿಸಿದ  ಆರೋಪಿಗಳು ಯಾವುದೇ ಪರವಾನಿಗೆಯನ್ನು ಪಡೆಯದೇ  ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಕ್ರಮವಾಗಿ ಅದೃಷ್ಟದ ಆಟ ಅಂದರ್ ಬಾಹರ್ ಎಂಬ ಹೆಸರಿನ ಜುಗಾರಿ ಆಟವನ್ನು ಸಾರ್ವಜನಿಕ ಸ್ಥಳದ ಬಳಿಯ ಹಾಡಿಯಲ್ಲಿ ಆಡಿದ್ದಾಗಿರುತ್ತದೆ. ಆರೋಪಿಗಳ ವಿರುದ್ದ ಕರ್ನಾಟಕ ಪೊಲೀಸ್ ಕಾಯ್ದೆ   ಅನ್ವಯ ಕಾನೂನು ಕ್ರಮ ಜರಗಿಸಿದ್ದಾಗಿ  ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-01-2024 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080