ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Kavoor PS        

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 07-02-2024 ರಂದು ಮಲ್ಲಿಕಾರ್ಜುನ ಬಿರಾದರ ಪೊಲೀಸ್ ಉಪ ನಿರೀಕ್ಷಕರು ಕಾವೂರು ಪೊಲೀಸ್ ಠಾಣೆ, ಕಾವೂರು, ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ನಗರದ ಬಂಗ್ರ ಕೂಳೂರು ಗ್ರಾಮದ ಗೋಲ್ಡ್ ಪಿಂಚ್ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ  ಸೌರಭ್ ನಾಯಕ್ ಕೆ ಎಸ್ [ 22 ವರ್ಷ] ತಂದೆ :ಸುದಾಕರ್ ನಾಯಕ್, ವಾಸ: 1-106, ನಾಯಕ್ಸ್ ಬಿಲ್ಡಿಂಗ್ ,ಬೀರಿ, ಮಂಗಳೂರು  ಯಾವುದೋ ನಶೆ ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದಿದ್ದು, ಮುಂದಿನ ವೈದ್ಯಕೀಯ ತಪಾಸಣೆ ಬಗ್ಗೆ  ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಮಾದಕ ವಸ್ತು ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುತ್ತಾರೆ, ಎಂಬಿತ್ಯಾದಿ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಮೊಹಮ್ಮದ್ ಹುಸೇನ್ ರವರ ತಂದೆ ನಯಾಜ್ ಅಹಮ್ಮದ್ ಮತ್ತು ತಾಯಿ ಮುಬೀನ್ ಜಾನ್ ರವರು ದಿನಾಂಕ 03-02-2024 ರಂದು ತಮ್ಮ ಬಾಬ್ತು KA 13 W 6901 ನೇ ಹೋಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ಮೂಡಬಿದ್ರೆಯ ಸರಕಾರಿ ಆಸ್ಪತ್ರೆಗೆ ಹೋಗಿ ವಾಪಾಸ್ ಮನೆಗೆ ಹಿಂತಿರುಗುವಾಗ ಸಮಯ ಸುಮಾರು 12.20 ಗಂಟೆಗೆ ಮೂಡಬಿದ್ರೆಯ ಕೃಷ್ಣಕಟ್ಟೆಯ ಬಳಿ ತಲುಪುತ್ತಿದ್ದಂತೆ ನಾಗರಕಟ್ಟೆ ಕಡೆಯಿಂದ ಬಂದ KA 19 MP 0862 ನೇ ಮಾರುತಿ ಎರ್ಟಿಗಾ ಕಾರು ಚಾಲಕ ಯಾವುದೇ ಸೂಚನೆ ಇಲ್ಲದೇ ಮಂಗಳೂರು ಕಡೆಗೆ ತಿರುಗಿಸಿ ಪಿರ್ಯಾದಿದಾರರ ತಂದೆ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಗುದ್ದಿದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ನಂತರ ಸದ್ರಿ ಕಾರಿನ ಚಾಲಕನು ಉಪಚರಿಸದೇ ಕಾರಿನ ಸಮೇತ ಹೋಗಿರುತ್ತಾರೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ತಂದೆಗೆ ಎಡಗೈ ಹಾಗೂ ಬಲಗಾಲಿಗೆ ಗುದ್ದಿದ ಗಾಯಗಳಾಗಿ, ತಾಯಿಗೆ ಬಲಗೈ ಹಾಗೂ ಮೊಣಕೈ ಗಂಟಿಗೆ ತರಚಿದ ಗಾಯಗಳಾಗಿದ್ದು, ನಂತರ ಪಿರ್ಯಾದಿದಾರರುಅವರನ್ನು ಅಲಂಗಾರಿನ ಮೌಂಟ್ ರೋಸಾರಿಯಾ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಂದೆಯವರಿಗೆ ಎಡಗೈಗೆ ಹಾಗೂ ಕಾಲಿಗೆ ಮೂಳೆ ಮುರಿತವಾಗಿರುತ್ತದೆ ಎಂಬುದಾಗಿ ತಿಳಿಸಿದ್ದು, ಕಾರಿನ ಬಗ್ಗೆ ವಿಚಾರಿಸಿದಾಗ ಅದರ ಮಾಲೀಕ ಹಾಗೂ ಚಾಲಕನ ಹೆಸರು ಡೆನ್ಜಿಲ್ ಮೋನಿಸ್ ಎಂಬುದಾಗಿ ತಿಳಿದಿದ್ದಿರುತ್ತದೆ ಎಂಬಿತ್ಯಾದಿ

 

Panambur PS           

RAMAKRISHNA P

ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 08-02-2024 ರಂದು ಪಣಂಬೂರು ಠಾಣಾ ವ್ಯಾಪ್ತಿಯ , ಮಂಗಳೂರು ತಾಲೂಕು ಬೇಂಗ್ರೆ ಗ್ರಾಮದ ಕಸಬ ಬೇಂಗ್ರೆ ಸಲೀಂ ಅಂಗಡಿ ಬಳಿ ತೌಹಿದ್ ಖಾದರ್ @ ತೋಯಿ ಪ್ರಾಯ: 23 ವರ್ಷ ತಂದೆ; ಅನ್ವರ್, ವಾಸ; ತೌಹೀದ್ ಮಂಜಿಲ್ ಎಂ.ಜೆ. ಎಂ. 204, ಸಲೀಂ ಅಂಗಡಿಯ ಹತ್ತಿರ, ಕಸ್ಬಾ ಬೆಂಗ್ರೆ, ಬೇಂಗ್ರೆ ಗ್ರಾಮ, ಮಂಗಳೂರು ತಾಲೂಕು. ಎಂಬಾತನು ಯಾವುದೋ ಮಾದಕ ವಸ್ತು ಸೇವನೆ ಮಾಡಿರುವಂತೆ ಕಂಡುಬರುತ್ತಿದ್ದು ಸದ್ರಿಯವರನ್ನು ವೈದ್ಯಕೀಯ ತಪಾಸಣೆಯ ಬಗ್ಗೆ ಎ.ಜೆ.ಆಸ್ಪತ್ರೆ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿ, ವೈದ್ಯಕೀಯ ಪರೀಕ್ಷಾ ವರದಿಯ ಪ್ರತಿಯನ್ನು ಪಡೆಯಲಾಗಿ “TETRAHYDRACANNABINOID (MARIJUANA) is Positive” ಎಂದು ವರದಿ ಬಂದಿರುವುದರಿಂದ ಸದ್ರಿ ಆಪಾಧಿತರ ವಿರುದ್ದ ಕಲಂ: 27(ಬಿ) ಎನ್.ಡಿ.ಪಿ.ಎಸ್ ಕಾಯ್ದೆ- 1985 ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುವುದಾಗಿದೆ ಎಂಬಿತ್ಯಾದಿ

 

Bajpe PS

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Shivananda ದಾರರು ದಿನಾಂಕ 07.02.2024 ರಂದು ಸಂಜೆ 7.00 ಗಂಟೆಗೆ KA19HF2188 ನೇ ಸ್ಕೂಟರ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಮಯ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಜನತಾ ಹೋಟೆಲ್ ತಲುಪಿದಾಗ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ  ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಕಾರು ನಂ KA20 M 1616 ನೇ ದರ ಚಾಲಕನಾದ ಮನೋಜ್ ಎಂಬುವನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತಿದ್ದ ಸ್ಕೂಟರ್ ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರಿಗೆ ಎಡಕಾಲಿನ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯವಾಗಿದ್ದು ಎಡತೊಡೆಗೆ ಗುದ್ದಿದ್ದ ನೋವು ,ಬಲಕೈ ಯ ಮೊಣ ಗಂಟಿನ ಬಳಿ ತರಚಿದ ಗಾಯವಾಗಿದ್ದು ನಂತರ ಅಲ್ಲಿಸೇರಿದ ಸ್ಥಳೀಯರಾದ ಸಚಿನ್ ಮತ್ತು ಇತರರು ಪಿರ್ಯಾದಿದಾರರನ್ನು ಆಟೋರಿಕ್ಷಾ ಒಂದರಲ್ಲಿ ಮಂಗಳೂರು ಎಜೆ ಆಸ್ಪತ್ರೆಗೆ ತಂದು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

 

Bajpe PS

ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Sanna Basavegowda ಇವರು  ದಿನಾಂಕ 07-02-2024 ರಂದು ಮಧ್ಯಾಹ್ನ ಸುಮಾರು 1.30 ಗಂಟೆಗೆ ತನ್ನ ಗೆಳೆಯನಾದ ರಾಯನ್ ರವರ  ಸ್ಕೂಟರ್ ನಂ KA19 HP 8365 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಬ್ಯಾಂಕ್ ಗೆ ಹೋಗಲು ವಾಮಂಜೂರು ಕಡೆಯಿಂದ ಕೈಕಂಬ ಕಡೆಗೆ ಹೋಗುತಿದ್ದಾಗ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಜಂಕ್ಷನ್ ತಲುಪಿದಾಗ ಪಿರ್ಯಾದಿದಾರರು ಹೋಗುತಿದ್ದ ಸ್ಕೂಟರ್ ಎದುರುಗಡೆಯಿಂದ ಅಂದರೆ ಕೈಕಂಬ ಕಡೆಯಿಂದ ಗುರುಪುರ ಕಡೆಗೆ KA19 D 9403 ನೇ ಆಟೋರಿಕ್ಷಾ ಚಾಲಕನಾದ ಅಬ್ದುಲ್ ರಜಾಕ್ ಎಂಬುವನು ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರು ಹೋಗುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರನಾದ ರಾಯನ್ ಮತ್ತು ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಕೂಡಲೇ ಅಲ್ಲಿದ್ದ ಸಾರ್ವಜನಿಕರು ಸೇರಿ ಉಪಚರಿಸಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಎಡಕೈ ಮೊಣಗಂಟಿನ ಬಳಿ ಮೂಳೆಮುರಿತದ ಗಾಯವಾಗಿದ್ದು ಹಾಗೂ ಬಲಕಾಲಿನ ಬೆರಳಿಗೆ ,ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು ಸ್ಕೂಟರ್ ಸವಾರನಾದ ರಾಯನ್ ರವರಿಗೂ ಕೈಗಳಿಗೆ ಹಾಗೂ ಎರೆಡೂ ಕಾಲುಗಳಿಗೂ ತರಚಿದ ಗಾಯವಾಗಿದ್ದು ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಮತ್ತು ಸವಾರನಾದ ರಾಯನ್ ರವರನ್ನು ಸಾರ್ವಜನಿಕರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 09-02-2024 08:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080