ಅಭಿಪ್ರಾಯ / ಸಲಹೆಗಳು

Mulki PS

ದಿನಾಂಕ: 08-03-2023 ರಂದು ಬೆಳಿಗ್ಗೆ 08.00 ಗಂಟೆಗೆ ಪಿರ್ಯಾದಿ  Smt Akshatha Rakesh Devadiga ಅತ್ತೆಯ ಅಣ್ಣನಾದ ಭೋಜ ದೇವಾಡಿಗ ಮತ್ತು ಅವರ ಮಗ ಹರೀಶ್ ದೇವಾಡಿಗ ಎಂಬವರು ಪಿರ್ಯಾದಿದಾರರ ಮನೆಯಾದ ಮುಲ್ಕಿ ತಾಲೂಕು, ಚಿತ್ರಾಪು ಗ್ರಾಮದ ಕೋಲ್ನಾಡು, ಉಮಾ ನಿವಾಸದ ಬಳಿ, ಮೇಲ್ ಮನೆ ಹೌಸ್ ಎಂಬಲ್ಲಿಗೆ ಬಂದು ಭೋಜ ದೇವಾಡಿಗ ರವರು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಮೈಮೇಲೆ ಕೈಹಾಕಿ ಪಿರ್ಯಾದಿದಾರರ ಬಟ್ಟೆಯನ್ನು ಹರಿದು ಹಲ್ಲೆ ಮಾಡಿ, ವಿಕೃತವಾಗಿ ವರ್ತಿಸುತ್ತಿರುವಾಗ, ಬಿಡಿಸಲು ಬಂದ ಪಿರ್ಯಾದಿದಾರರ ಅತ್ತೆಯಾದ ದೇವಕಿರವರಿಗೆ ಕೈಯಿಂದ ಹಲ್ಲೆ ನಡೆಸಿ ಭೋಜ ದೇವಾಡಿಗ ಮತ್ತು ಅವರ ಮಗ ಹರೀಶ್ ದೇವಾಡಿಗ ರವರು ಪಿರ್ಯಾದಿದಾರರಿಗೆ ಮತ್ತು ಅವರ ಗಂಡ ರಾಕೇಶ್ ದೇವಾಡಿಗ ಮತ್ತು ಮಗುವಿಗೆ, ಪಿರ್ಯಾದಿದಾರರ ಅತ್ತೆ ದೇವಕಿ ರವರಿಗೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆ, ಈ ಮನೆ ಮತ್ತು ಜಾಗ ನಮಗೆ ಸೇರಿದ್ದು, ನಿಮ್ಮನ್ನು ಇಲ್ಲಿ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ  ಎಂಬಿತ್ಯಾದಿ.

Mangalore East Traffic PS

ಪಿರ್ಯಾದಿ ಹೆನ್ರಿ ಡಿ ಸಿಲ್ವ ಪ್ರಾಯ-67 ವರ್ಷ ಎಂಬವರು ದಿನಾಂಕ 07-03-2022 ರಂದು ಬೆಳಿಗ್ಗೆ ಸೆಂಟ್ರಲ್ ಮಾರ್ಕೇಟಿಗೆ ಹೋಗಲು ಮನೆಯಿಂದ ನಡೆದುಕೊಂಡು ಹೋಗುತ್ತಾ ಹಂಪನಕಟ್ಟ ಜಂಕ್ಷನ್ ಬಳಿ ತಲುಪಿ ವೆನ್ಲಾಕ್ ಆಸ್ಪತ್ರೆಯ ಬದಿಯಲ್ಲಿ ರಸ್ತೆ ದಾಟುವರೇ  ರಸ್ತೆಯ ತೀರ ಬದಿಯಲ್ಲಿ ನಿಂತುಕೊಂಡಿದ್ದಾಗ  ಬೆಳಿಗ್ಗೆ ಸಮಯ ಸುಮಾರು 11.00 ಗಂಟೆಗೆ ಮಿಲಾಗ್ರೀಸ್ ಕಡೆಯಿಂದ  ಹಂಪನಕಟ್ಟೆ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-EX-4479 ನೊಂದಣಿ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ನಿಕೇಶ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಎಡಕೈಗೆ ಒಳ ನೋವಾಗಿದ್ದು, ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ  ಹಾಗೂ ಸಾರ್ವಜನಿಕರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಎಡಕೈ ಕೋಲು ಕೈಗೆ ಮೂರು ಕಡೆಗಳಲ್ಲಿ ಮೂಳೆ ಮುರಿದ ಗಂಭೀರ ಸ್ವರೂಪದ ಗಾಯವಾಗಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬಂದಿದ್ದು, ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಆದ್ದರಿಂದ ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿದೆ.

Panambur PS

ಪಿರ್ಯಾದಿ ದಿನಾಂಕ 18-12-2022 ರಂದು ಸಂಜೆ 4-15 ಗಂಟೆ ಸುಮಾರಿಗೆ ಪಿರ್ಯಾದಿದಾರರ ಗಂಡ ಹಾಗೂ ಮನೆಯವರು ಓಮಿನಿ ಕಾರಿನಲ್ಲಿ ಪಣಂಬೂರು ಬೀಜಿಗೆ ಬಂದಿದ್ದು, ಅಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಓಮಿನಿ ಕಾರನ್ನು ಪಾರ್ಕ್ ಮಾಡಿ ಸಂಜೆ ಸುಮಾರು 5-00 ಗಂಟೆಗೆ ಮನೆಗೆ ವಾಪಾಸು ಹೋಗುವ ಬಗ್ಗೆ ಓಮಿನಿ ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ಬಂದಾಗ ಒಮಿನಿ ಕಾರಿನ ಗಾಜು ತೆರೆದ ಸ್ಥಿತಿಯಲ್ಲಿ ಕಂಡುಬಂದಿದ್ದು  ಕಾರಿನ ಒಳಗಡೆ ನೋಡಿದಾಗ ಕಾರಿನಲ್ಲಿ ಇಟ್ಟು ಹೋಗಿದ್ದ ಬ್ಯಾಗ್ ಕಳವಾಗಿರುವುದು ಗೊತ್ತಾಗಿರುತ್ತದೆ.. ಸದ್ರಿ ಬ್ಯಾಗಿನಲ್ಲಿ 2 ಮೊಬೈಲ್ ಪೋನ್, 2 ಬಂಗಾರದ ಚೈನ್ ಹಾಗೂ ಫರ್ಸ್ ನಲ್ಲಿದ್ದ ರೂ. 8,000/- ಇತ್ತು. ಕಳವಾದ ಸೊತ್ತುಗಳ ವಿವರ ಈ ಕೆಳಗಿನಂತಿದೆ. 1) ವಿವೋ ಸಿ 12 ಆಕಾಶ ನೀಲಿ ಬಣ್ಣದ್ದು ಇದರ ಅಂದಾಜು ಮೌಲ್ಯ ರೂ. 10,000/- 2) ಸ್ಯಾಮ್ಸಂಗ್ ಗ್ಯಾಲಕ್ಷಿ ಎ 22 ಬಿಳಿ ಬಣ್ಣದ್ದು ಇದರ ಅಂದಾಜು ಮೌಲ್ಯ ರೂ. 10,000/- 3) ಬಂಗಾರದ ಚೈನ್ 20 ಗ್ರಾಮ್ ತೂಕದ್ದು ಅಂದಾಜು ಮೌಲ್ಯ ರೂ. 80,000/- 4)  ಬಂಗಾರದ ಚೈನ್ 12 ಗ್ರಾಮ್ ತೂಕದ್ದು ಅಂದಾಜು ಮೌಲ್ಯ ರೂ. 48,000/- 5) ಫರ್ಸ್ ನಲ್ಲಿದ್ದ ನಗದು ರೂ. 8.300/-  ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ. 1,56,300/- ಆಗಿರುತ್ತದೆ. ಕಳವಾದ ಸೊತ್ತನ್ನು ಮತ್ತು ಕಳ್ಳನನ್ನು ಪತ್ತೆ ಹಚ್ಚಿ ಕೊಡಬೇಕಾಗಿ ಎಂಬಿತ್ಯಾದಿ  ಸಾರಾಂಶವಾಗಿರುತ್ತದೆ.

Traffic South Police Station

ದಿನಾಂಕ:08-03-2023 ರಂದು ಪಿರ್ಯಾದಿದಾರ ರಾದ ಸಂಕೋಪ್ಪ ಫೆಬಿಯನ್ ಮೊಂತೆರೋ (45 ವರ್ಷ) ರವರು ಕೆಲಸದ ಬಗ್ಗೆ ಅವರ ನೆರೆಕೆರೆಯ ರಾಜೇಶ್ ಡಿಸೋಜಾರವರ ಸ್ಕೂಟರ್ ನಂಬ್ರ: KA-19-HF-2050 ನೇದರಲ್ಲಿ ಪಿರ್ಯಾದಿದಾರರು ಸವಾರರಾಗಿ ರಾಜೇಶ್ ಕಿರಣ್ ಡಿಸೋಜಾ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ತೊಕ್ಕೊಟ್ಟು ಮಾರ್ಗವಾಗಿ ಯೆಯ್ಯಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳ್ಳಿಗೆ 8-40 ಗಂಟೆಗೆ ಜಪ್ಪಿನಮೊಗೆರು ಮಾನ್ಸುನ್ ಗ್ರಾನೈಟ್ ಶಾಪ್ ನ ಎದುರು ರಾ.ಹೆ-66 ರ ರಸ್ತೆಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ: KA-19—HH-4284 ನೇದರ ಸವಾರ ಕಿಶನ್ ಚಂದ್ರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಸ ಸವಾರ ರಾಜೇಶ್ ಕಿರಣ್ ಡಿಸೋಜಾ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮುಖಕ್ಕೆ,ಕೈಗಳಿಗೆ,ಬಲಕಾಲಿಗೆ ತರಚಿದ ಗಾಯ ಮತ್ತು ಎದೆಗೆ ತೀವ್ರ ತರಹದ ಗುದ್ದಿದ ಗಾಯ ಮತ್ತು ಸಹ ಸವಾರ ರಾಜೇಶ್ ಕಿರಣ್ ಡಿಸೋಜಾ ರವರ ಸೊಂಟಕ್ಕೆ ಗುದ್ದಿದ ಗಾಯ,ಬಲಕಾಲಿಗೆ ತರಚಿದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಲಿಸಿರುತ್ತಾರೆ ಎಂಬಿತ್ಯಾದಿ.

Mangalore East Traffic PS                                                 

ಪಿರ್ಯಾದಿ ಶ್ರೀ ಸಿಧ್ಧಾಂತ್ ಶರತ್ ಶೆಟ್ಟಿ ಪ್ರಾಯ-20 ವರ್ಷ ಎಂಬವರು  ಈ ದಿನ ದಿನಾಂಕ: 07-03-2023 ರಂದು ತನ್ನ ಸಂಬಂಧಿ ಮಧುಕರ್ ಶೇಟ್ಟಿಯವರ ಬಾಬ್ತು KA-19-HC-6335 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ  ಸವಾರನಾಗಿ  ಬೆಸೆಂಟ್ ಜಂಕ್ಷನ್ ಕಡೆಯಿಂದ PIO ಮಾಲ್ ಕಡೆಗೆ ಹಾದು ಹೋಗಿರುವ ಜೈಲ್ ರೋಡ್ ರಸ್ತೆಯಲ್ಲಿ ಹೊಗುತ್ತಾ ಬೆಳಿಗ್ಗೆ ಸಮಯ ಸುಮಾರು 09:00 ಗಂಟೆಗೆ ಕಪುಚಿನ್ ಚರ್ಚ್ ಬಳಿ ತಲುಪಿದಾಗ PIO ಮಾಲ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಗೆ ಹಾದು ಹೋಗಿರುವ ಜೈಲ್ ರಸ್ತೆಯಲ್ಲಿ ನೊಂದಣಿ ಸಂಖ್ಯೆ: KA-19-AB-2453 ನೇ ಟೂರಿಸ್ಟ್ ಕ್ಯಾಬ್ ಕಾರನ್ನು ಅದರ ಚಾಲಕ ಉಗ್ಗಪ್ಪ ಎಂಬುವವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಮುಖಾ ಮುಖಿ ಢಿಕ್ಕಿ ಪಡಿಸಿರುತ್ತಾರೆ, ಈ ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಬೆನ್ನು ಮೂಳೆಗೆ ಬಿರುಕು ಬಿಟ್ಟಂತಹ ಗಂಭೀರ ಸ್ವರೂಪದ ಗಾಯವಾಗಿದ್ದು ಯೆನಪೋಯಾ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯ ಬಗ್ಗೆ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ, ಎಂಬಿತ್ಯಾದಿ.

Mangalore East Traffic PS

ಪಿರ್ಯಾದಿ MOHAN SAPALIGA  ದಿನಾಂಕ 07-03-2023 ರಂದು ಆಟೋರಿಕ್ಷಾದ ಬಾಡಿಗೆ ಕೆಲಸ ಮುಗಿಸಿ ಲೇಡಿಗೋಷನ್ ಆಸ್ಪತ್ರೆಕಡೆಯಿಂದ ನಂದಿಗುಡ್ಡ ಕಡೆ ಹೋರಟು ಕ್ಲಾಕ್ ಟವರ್ ಮಾರ್ಗವಾಗಿ ಕೆ.ಬಿ ಕಟ್ಟೆ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಹಂಪನಕಟ್ಟೆಯಿಂದ ಕ್ಲಾಕ್ ಟವರ್ ಕಡೆಗೆ ಹಾದು ಹೋಗಿರುವ ಬಲ ಬದಿಯ ರಸ್ತೆಯಲ್ಲಿ ಮಂಗಳೂರು ಯುನಿವರ್ಸಿಟಿ ಕಾಲೇಜ್ ಗೇಟಿನ ಎದುರು, ಸಮಯ 22:30 ಗಂಟೆಗೆ ರಸ್ತೆಯ ಮದ್ಯದ ಡಿವೈಡರ್  ಕಡಯಿಂದ ಯುನಿವರ್ಸಿಟಿ ಕಾಲೇಜ್ ಎದುರಿನ ಫುಟ್ ಪಾತ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಹಂಪನಕಟ್ಟೆ ಕಡೆಯಿಂದ KA-19-ML-9753 ನೇ  ನಂಬ್ರದ ಕಾರಿನ ಚಾಲಕ ತನ್ನ ಕಾರನ್ನು ದುಡುಕುತನ, ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಡಿಕ್ಕಿ ಪಡಿಸಿದ್ದು, ಢಿಕ್ಕಿಯ ರಭಸಕ್ಕೆ ಪಾದಾಚಾರಿಯು ಮುಂದಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು ಕಾರು ಎಡಕ್ಕೆ ಚಲಿಸಿ ಯುನಿವರ್ಸಿಟಿ ಕಾಲೇಜಿನ ಮುಖ್ಯ ದ್ವಾರದ ಬಳಿಯ ಫುಟ್ ಪಾತ್ ಗೆ ಅಳವಡಿಸಿರುವ  ರೇಲಿಂಗ್ ಗೆ ಢಿಕ್ಕಿಯಾಗಿರುತ್ತದೆ ಈ ಅಪಘಾತದಿಂದ ಪಾದಾಚಾರಿಯ ತಲೆಗೆ ಆಳವಾದ ರಕ್ತ ಗಾಯವಾಗಿದ್ದು, ಬಾಯಿ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿ ಅಪ್ರಜ್ಞಾವಸ್ಥೆಯಲ್ಲಿದ್ದು ಕೂಡಲೆ ಪಿರ್ಯಾದಿದಾರರು ಹಾಗೂ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ  ಆಟೋರಿಕ್ಷಾದಲ್ಲಿ  ಯುನಿಟಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂಬಿತ್ಯಾದಿ.

Urva PS        

ದಿನಾಂಕ 6-3-2023 ರಿಂದ 7-3-2023 ರವರೆಗೆ ಠಾಣಾ ವ್ಯಾಪ್ತಿಯ ಉರ್ವಾ ಶ್ರೀ ಮಾರಿಗುಡಿ ದೇವಸ್ಥಾನದಲ್ಲಿ  ವರ್ಷಾವಧಿ ಜಾತ್ರೋತ್ಸ ಜರಗುತ್ತಿದ್ದು, ಈ ದೇವಸ್ಥಾನದ ಹೊರಭಾಗದ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟುಕೊಂಡು  ಗುಡು ಗುಡು ಎಂಬ ಜೂಜಾಟ ಆಟ ಆಡುತ್ತಿದ್ದಾರೆ ಎಂಬ ಬಗ್ಗೆ ದಿನಾಂಕ 7-3-2023 ರಂದು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿಯ ಮಾಹಿತಿ ಪಡೆದ ಠಾಣಾ  ಸಿಬ್ಬಂದಿ ಪುಷ್ಪರಾಜ್ ರವರು  ನೀಡಿದ ದೂರಿನಂತೆ  ದಾಖಲಿಸಿದ ಪ್ರಕರಣವಾಗಿರುತ್ತದೆ ಎಂಬಿತ್ಯಾದಿ.

Traffic North Police Station   

ಪಿರ್ಯಾದಿ Jamal ಸ್ನೇಹಿತನಾದ ಇರ್ಷಾದ್ ರವರು ಈ ದಿನ ದಿನಾಂಕ 07-03-2023 ರಂದು ತನ್ನ ಬಾಬ್ತು KA-19-HE-3116 ನಂಬ್ರದ ಮೋಟಾರು ಸೈಕಲಿನಲ್ಲಿ ಮಂಗಳೂರಿನಿಂದ ಕೂಳೂರು ಮಾರ್ಗವಾಗಿ ಜೋಕಟ್ಟೆ ಕಡೆಗೆ ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 12:30 ಗಂಟೆಗೆ KIOCL ಜಂಕ್ಷನಿನಿಂದ ಸ್ವಲ್ಪ ಮುಂದೆ KISCO ಸಮೀಪ ತಲುಪುತ್ತಿದ್ದಂತೆಯೆ ರಸ್ತೆಯ ಬದಿಯಲ್ಲಿ ಯಾವುದೇ ಮುನ್ನೆಚ್ಚರಿಕೆಯ ಫಲಕವನ್ನು ಅಳವಡಿಸದೇ NL-01-Q-5132 ನಂಬ್ರದ Indane Gas ಟ್ಯಾಂಕರನ್ನು ಅದರ ಚಾಲಕನಾದ ಮಾದಸಾಮಿ ಎಂಬಾತನು ಪಾರ್ಕ್ ಮಾಡಿ ನಿಲ್ಲಿಸಿದ್ದು, ಸದ್ರಿ ಟ್ಯಾಂಕರಿನ ಹಿಂಭಾಗಕ್ಕೆ ಇರ್ಷಾದನು ಮೋಟಾರು ಸೈಕಲನ್ನು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲಿನ ಸಮೇತ ರಸ್ತೆಗೆ ಬಿದ್ದು ಇರ್ಷಾದನ ಹಣೆಯ ಎಡಬದಿಗೆ ರಕ್ತಗಾಯ,ಕಣ್ಣಿನ ರೆಪ್ಪೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿದ್ದು,ಎಡ ಕಣ್ಣಿನ ಕೆಳಭಾಗ ಮತ್ತು ಕೆಳ ತುಟಿಗೆ ರಕ್ತಗಾಯ ಅಲ್ಲದೇ ಬಲಕೈ ರಿಸ್ಟ್ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 08-03-2023 07:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080