ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

CEN Crime PS.

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ SOORYANARAYANA VALPADI ಇವರಿಗೆ ದಿನಾಂಕ:02-02-2024 ರಿಂದ 91-8793874672 ನಂಬರಿನ  ವಾಟ್ಸ್ ಆ್ಯಪ್ ಗ್ರೂಪನಲ್ಲಿ ಜಾಯಿನ್ ಆಗಿದ್ದು ಸದ್ರಿ ಗ್ರೂಪ್ ನಲ್ಲಿ  KKRCA SECURITIES ಕಂಪೆನಿಯ ಬಗ್ಗೆ ಮಾಹಿತಿ ನೀಡಿದ್ದು ಈ ಕಂಪೆನಿಯಲ್ಲಿ ಷೇರು ಮಾರುಕಟ್ಟೆ ಬಗ್ಗೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಪ್ಲೇ ಸ್ಟೋರ್ ನಲ್ಲಿ KKR ಪ್ರೋ ಎಂಬ ಆ್ಯಪ್ಲಿಕೇಷನ್ ನನ್ನು ಇನ್ ಸ್ಟಾಲ್ ಮಾಡಿಕೊಂಡಿದ್ದು ನಂತರ ಪಿರ್ಯಾದಿದಾರರು  ತಮ್ಮ ಹೆಂಡತಿ ಅಕ್ಷತಾ ರವರ ಹೆಸರಿನಲ್ಲಿ  ರಿಜಿಸ್ಟರ್ ಆಗಿ ಮೊದಲಿಗೆ ಪಿರ್ಯಾದಾರರ ಪತ್ನಿ ಅಕ್ಷತಾ ರವರ INDUSIND ಬ್ಯಾಂಕ್ ಖಾತೆ ಯಿಂದ ರೂ. 5,000/- ಗಳನ್ನು ಹೂಡಿಕೆ ಮಾಡಿದ್ದು ನಂತರ ಅದೇ ಖಾತೆಯಿಂದ ರೂ.95,000/- ಗಳನ್ನು ಹೂಡಿಕೆ ಮಾಡಿರುತ್ತಾರೆ. ಹಾಗೂ ನಂತರ INDUSIND ಖಾತೆಯಿಂದ ಹಂತ ಹಂತವಾಗಿ ಒಟ್ಟು 20,00,000/- ರೂಗಳನ್ನು ಹೂಡಿಕೆ ಮಾಡಿರುತ್ತಾರೆ. ಪಿರ್ಯಾದಿದಾರರು ತಮ್ಮ ICICI ಖಾತೆ ಯಿಂದ ರೂ. 5,00,017./- ಹಾಗೂ ICICI ಖಾತೆ ಯಿಂದ 1,00,000/- ಹಣವನ್ನು ಹೂಡಿಕೆ ಮಾಡಿರುತ್ತಾರೆ. ದಿನಾಂಕ:13-02-2024 ರಂದು ರೂ.1.5 ಲಕ್ಷ ಹಾಗೂ ದಿನಾಂಕ 16-02-2024 ರಂದು 1.5 ಲಕ್ಷ ರೂ ಗಳಂತೆ ಒಟ್ಟು 3,00,000/- ರೂಗಳನ್ನು ಪಿರ್ಯಾದಿದಾರರು ತಮ್ಮ ಹಣವನ್ನು ವಾಪಾಸ್ಸು ಪಡೆದಿದ್ದು, ದಿನಾಂಕ:29-02-2024 ರಂದು ಉಳಿದ ಹಣವನ್ನು ವಾಪಾಸ್ಸು ಪಡೆಯಲು ಪ್ರಯತ್ನಿಸಿದಾಗಪಿರ್ಯಾದಿದಾರರ ಕೋರಿಕೆಯನ್ನು ರಿಜೆಕ್ಟ್ ಮಾಡಿದದ್ದು 20% ಹಣವನ್ನು ಪಾವತಿಸುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ICICI ಖಾತೆ ಯಿಂಧ 50,000/-ಗಳನ್ನು ಪಾವತಿಸಿ 2.5 ಲಕ್ಷ ರೂ ಗಳನ್ನು ನೀಡುವಂತೆ ಕೋರಿದ್ದು ಅದನ್ನು ರಿಜೆಕ್ಟ ಮಾಡಿ ಪುನಃ 20% ಹಣವನ್ನು ಪಾವತಿಸುವಂತೆ ತಿಳಿಸಿದ್ದು, ಈ ರೀತಿಯಾಗಿ ಯಾರೋ ಅಪರಿಚಿತರು ಆನ್ ಲೇನ್ ಷೇರು ಮಾರುಕಟ್ಟೆ ಹೆಸರಿನಲ್ಲಿ ಮೋಸಗೊಳಿಸಿ ಪಿರ್ಯಾದಿದಾರರಿಂದ ದಿನಾಂಕ 02-02-2024 ರಿಂದ 01-03-2024 ರವರೆಗೆ ಒಟ್ಟು ರೂ 23,50,000/- ರೂ ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿದೆ ಎಂಬಿತ್ಯಾದಿ

 

Traffic South Police

ಫಿರ್ಯಾದಿದಾರರಾದ ಅಬೂಬಕ್ಕರ್ ಸಿದ್ಧೀಕ್ ಎಂಬವರು   ದಿನಾಂಕ 08/03/2024 ರಂದು ಮಧ್ಯಾಹ್ನ ಮುಡಿಪು ಸರಕಾರಿ ಪಿ.ಯು. ಕಾಲೇಜು ಬಳಿ ಇರುವ ಕರ್ನಾಟಕ ಬ್ಯಾಂಕಿನ ಎ.ಟಿ.ಎಮ್ ಗೆ ಹೋಗಿ ಹೊರಗಡೆಗೆ ನಿಲ್ಲಿಸಿರುವ ನನ್ನ ಬೈಕ್ ನ ಬಳಿ ಬರುತ್ತಿದ್ದಂತೆ, ಮಧ್ಯಾಹ್ನ ಸಮಯ ಪಿ.ಯು. ಕಾಲೇಜಿನ ಗೇಟಿನ ಕಡೆಯಿಂದ ಸಿದ್ದಿಕ್ ಒಡಿಯೂರ್ ಎಂಬವರು ರಸ್ತೆಯನ್ನು ದಾಟುತ್ತಿದ್ದಾಗ, ಮುಡಿಪು  ಜಂಕ್ಷನ್ ಕಡೆಯಿಂದ ಮಂಗಳೂರು ಕಡೆಗೆ KA-19-AE-1745 ನೇ ನಂಬ್ರದ ಸ್ವಿಪ್ಟ್ ಡಿಸೈರ್ ಕಾರನ್ನು ಅದರ ಚಾಲಕನಾದ ಸೂರಜ್ ನಾಥ್ ಕೆ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಿದ್ದಿಕ್ ಒಡಿಯೂರ್ ರವರಿಗೆ ಡಿಕ್ಕಿ ಹೊಡೆದ  ಪರಿಣಾಮ ಸಿದ್ದಿಕ್ ಒಡಿಯೂರ್ ಮೇಲಕ್ಕೆ ಎಸೆಯಲ್ಪಟ್ಟು ಕಾರಿನ ಮುಂದಿನ ಗ್ಲಾಸ್ ನ ಎಡಭಾಗಕ್ಕೆ ಬಿದ್ದು, ಕಾರಿನ ಎಡಭಾಗದ ರಸ್ತೆಗೆ ಬಿದ್ದವರನ್ನು ಫಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಜನರು ಉಪಚರಿಸಿದ್ದು, ಗಾಯಾಳು ಸಿದ್ದಿಕ್ ಒಡಿಯೂರ್ ರವರು ಪ್ರಜ್ಞಾಹೀನನಾಗಿದ್ದು, ಅವರ ಹಣೆಯ ಎಡಭಾಗಹಾಗೂ ತಲೆಯ ಹಿಂಭಾಗ ಗಂಭೀರ ರಕ್ತ ಗಾಯವಾಗಿದ್ದು, ಹಲ್ಲಿಗೆ ಹಾಗೂ ಎರಡು ಕಾಲುಗಳಿಗೆ ಗಾಯವಾದವರನ್ನು ಫಿರ್ಯಾದಿದಾರು ಅಲ್ಲಿದ್ದ ಇರ್ಫಾನ್ ಎಂಬವನ ಜೊತೆ ಅಪಘಾತ ಪಡಿಸಿದ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ವೈದ್ಯರ ಮುಂದೆ ಹಾಜರುಪಡಿಸಿದ್ದು, ವೈದ್ಯರು ಗಾಯಾಳು  ಸಿದ್ದಿಕ್ ಒಡಿಯೂರ್ ರವರನ್ನು ಪರೀಕ್ಷಿಸಿ ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

Kankanady Town PS

ಈ  ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ 08-03-2024 ರಂದು ಮಂಗಳೂರು ನಗರದ ಕುಲಶೇಖರ ಚೌಕಿ ಬಳಿ, ಶಕ್ತಿ ನಗರ ಸಾನಿಧ್ಯ ಶಾಲೆ ಎದುರು ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಸ್ಪರ್ ಎಂಬಾತನು  ನಿಷೇದಿತ ಮಾದಕ ವಸ್ತುವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದವರನ್ನು ಮುಂದಿನ ಕ್ರಮದ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗಡೆ ಆಸ್ಪತ್ರೆ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆರೋಪಿ ಅಸ್ಪರ್ AMPHETAMINES ಎಂಬ ನಿಷೇದಿತ ಮಾದಕ ವಸ್ತುವನ್ನು ಸೇವನೆ  ಮಾಡಿರುವುದು ವೈದ್ಯರಿಂದ ದೃಢಪಟ್ಟಿರುತ್ತದೆ. ಆದ್ದರಿಂದ ಆರೋಪಿ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

 

Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶ ವೇನೆಂದರೆ, ಈ ದಿನ ದಿನಾಂಕ 08-03-2024 ರಂದು ಮಂಗಳೂರು ನಗರದ ಮರೋಳಿ ಬಳಿ ರೌಂಡ್ಸ್ ನಲ್ಲಿದ್ದಾಗ,  ಮಂಗಳೂರು ನಗರದ ಪಡೀಲ್ ರೈಲ್ವೆ ಪ್ಲೈ ಓವರ್ ಬ್ರಿಡ್ಜ್ ನ ಬಳಿ ವೀರ ನಗರಕ್ಕೆ ಹೋಗುವ ರಸ್ತೆಯ ಕ್ರಾಸ್ ನ  ಬಳಿ ಆರೋಪಿ ಸೈಯ್ಯದ್ ಸೌಹಾದ್  ನಿಷೇದಿತ ಮಾದಕ ವಸ್ತುಗಳಾದ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು  ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ತ್ತಿದ್ದವರನ್ನು ಮುಂದಿನ ಕ್ರಮದ ಬಗ್ಗೆ  ಕೆ.ಎಸ್.ಹೆಗಡೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಿದಾಗ,  ಆರೋಪಿಯು ಮಾದಕ ವಸ್ತು ಗಾಂಜಾ ಹಾಗೂ AMPHETAMINES  ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು  ವೈಧ್ಯರ ವರದಿಯಿಂದ ದೃಢಪಟ್ಟಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 08-03-2024 ರಂದು ಪಿರ್ಯಾದಿದಾರರಾದ ಶ್ರೀಮತಿ ಸುಜಾತ ರವರು ತನ್ನ ಗಂಡ ರವೀಂದ್ರ ರವರ ಜೊತೆ KA19EN4803 ನಂಬರ್ ನ ಸ್ಕೂಟರಿನಲ್ಲಿ ಸಹ ಸವಾರರಾಗಿ ಮೂಡಬಿದ್ರೆಯಿಂದ ತಮ್ಮ ಮನೆ ಕಡೆಗೆ ಬಂಟ್ವಾಳ ರಸ್ತೆಯಲ್ಲಿ ಹೋಗುತ್ತಾ ಮಧ್ಯಾಹ್ನ ಸುಮಾರು 03.00 ಗಂಟೆ ಸಮಯಕ್ಕೆ ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿಗೆ ತಲುಪುತ್ತಿದ್ದಂತೆ ಬಂಟ್ವಾಳ ಕಡೆಯಿಂದ ಬಂದ KA21N4801 ನೇ ನಂಬರ್ ನ ಕಾರು ಚಾಲಕ ಮನೋಜ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಗಂಡ ರವೀಂದ್ರ ರವರು ಸ್ಕೂಟರ್ ನಿಂದ ಎಸೆಯಲ್ಪಟ್ಟು ರಸ್ತೆಯ ಮೇಲೆ ಬಿದ್ದು, ಪಿರ್ಯಾದಿದಾರರ ಎಡಗಾಲಿಗೆ ಗಂಟಿಗೆ ಹಾಗೂ ಗಂಟಿನ ಕೆಳಭಾಗಕ್ಕೆ ಒಳ ಜಖಂ ಹಾಗೂ ರಕ್ತಗಾಯವಾಗಿದ್ದು ಹಾಗೂ ರವೀಂದ್ರ ರವರ ಎಡಗಾಲಿನ ತೊಡೆಯ ಭಾಗದ ಮೂಳೆ ಮುರಿತವಾಗಿದ್ದು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

Ullal PS

ದಿನಾಂಕ: 08-03-2024 ರಂದು ಉಳ್ಳಾಲ ತಾಲೂಕಿನ  ಸೋಮೇಶ್ವರ ಗ್ರಾಮದ ಮೂರುಕಟ್ಟೆ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳಾದ ಎಡ್ವೀನ್ ರಾಹುಲ್ ಡಿಸೋಜಾ ಯಾನೆ ಪುಚ್ಚೆ ರಾಹುಲ್ (26) ತಂದೆ: ಹೆನ್ರಿ ಡಿ ಸೋಜಾ, ವಾಸ: ಪಿಲಾರ್ ಲಕ್ಷ್ಮೀಗುಡ್ಡೆ ಯೇನೆಪೊಯಾ ಗಾರ್ಡೆನಿಯಾ ಹಾಸ್ಟೇಲ್ ಬಳಿ ಸೋಮೇಶ್ವರ ಗ್ರಾಮ ಉಳ್ಳಾಲ ಮತ್ತು ಕಾರ್ತಿಕ್ (26) ತಂದೆ:ರವೀಂದ್ರ ವಾಸ: ಕುಂಪಲ ಹನುಮಾನ್ ನಗರ ಕುಂಪಲ ಶಾಲೆಯ ಬಳಿ ಸೋಮೇಶ್ವರ ಗ್ರಾಮ ಉಳ್ಳಾಲ ತಾಲ್ಲೂಕು  ಮಂಗಳೂರು ಎಂಬವವರು  ಮಾದಕ ವಸ್ತು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದವರನ್ನು ಮುಂದಿನ ಕ್ರಮದ ಬಗ್ಗೆ  ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಲಾಗಿ, ಅವರನ್ನು ಪರೀಕ್ಷಿಸಿದ  ಆಸ್ಪತ್ರೆಯ ವೈದ್ಯಾಧಿಕಾರಿಯವರು ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ವರದಿ ನೀಡಿದ್ದು, ಅವರ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

 

ಇತ್ತೀಚಿನ ನವೀಕರಣ​ : 11-03-2024 07:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080