ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

CEN Crime PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ, ದಿನಾಂಕ 01-03-2024 ರಂದು ಪಿರ್ಯಾದಿ NIHALA PARVEEN ಇವರ ಮೊಬೈಲ್ ನ ಟೆಲಿಗ್ರಾಂ ಆಪ್ ನಲ್ಲಿ  ಮನೀಷಾ ಮಣಿ(@mani7658) ಎಂಬ ಟೆಲಿಗ್ರಾಂ ಅಕೌಂಟ್ ನಿಂದ ಪಾರ್ಟ್ ಟೈಂ ಜಾಬ್ ನ ಬಗ್ಗೆ ಮೆಸೇಜ್ ಬಂದಿದ್ದು, https://www.navanbook.com ಎಂಬ ಲಿಂಕ್ ನ್ನು ಕಳುಹಿಸಿ ಅವರು ತಿಳಿಸಿದ ಟಾಸ್ಕ್ ಗಳನ್ನು ಪೂರ್ಣಗೊಳಿಸಿದರೆ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾರೆ. ಸದ್ರಿ ಲಿಂಕ್ ನ್ನು ಒತ್ತಿದಾಗ ಟಾಸ್ಕ್ ಮಾಡುವ ಪೇಜ್ ಓಪನ್ ಆಗಿರುತ್ತದೆ. ಅದರಂತೆ ಪಿರ್ಯಾದಿದಾರರು ಮೊದಲನೇ ಟಾಸ್ಕ್ ಗೆ 10,000/- ರೂ ಹಣ ಹೂಡಿಕೆ ಮಾಡಿದ್ದು, ನಂತರ ಅದರ ಲಾಭವಾಗಿ 11,500/- ರೂ ಹಣ ಬಂದಿರುತ್ತದೆ. ನಂತರ ಇದನ್ನು ನಂಬಿದ ಪಿರ್ಯಾದಿದಾರರು ಹಂತಹಂತವಾಗಿ 10,000/- ,33,476/-, 86,403/-3,12,523/- 1,50,000/-, 2,00,000/-, 75,000/-, 5,74,695/-, 5,00,000/-, 75,000/-, 2,45,950/-, 5,00,000/-, 13,858/-, ರಂತೆ ಒಟ್ಟು 27,76,905/- ಹಣವನ್ನು ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಪಿರ್ಯಾದಿದಾರರ ಎಸ್ ಬಿ ಐ ಬ್ಯಾಂಕ್ ಖಾತೆ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಖಾತೆಯಿಂದ IMPS & RTGS ಮೂಲಕ ಹಣ ಹೂಡಿಕೆ ಮಾಡಿರುತ್ತಾರೆ. ತದನಂತರ ಪಿರ್ಯಾದಿದಾರರು ಲಾಭಾಂಶದ ಹಣ ಸೇರಿ ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ವಿತ್ ಡ್ರಾ ಆಗದೇ ಇರುವಾಗ ಮನೀಷಾ ಮಣಿ(@mani7658) ಎಂಬವರನ್ನು ಸಂಪರ್ಕಿಸಿದಾಗ ಅವರು ಅಭಿಷೇಕ್ ಎಂಬವರ ಮೊಬೈಲ್ ನಂಬ್ರ 9163309348 ನ್ನು ಕೊಟ್ಟಿರುತ್ತಾರೆ. ಸದ್ರಿಯವರನ್ನು ಸಂಪರ್ಕಿಸಿದಾಗ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸಲು ಪುನಃ 13,25,351/- ರೂ ಹಣವನ್ನು ವರ್ಗಾಯಿಸುವಂತೆ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಮೋಸ ಹೋಗಿರುವುದು ತಿಳಿದು ಬಂದಿರುತ್ತದೆ. ಆದ್ದರಿಂದ ಪಿರ್ಯಾದಿದಾರರಿಗೆ ಆನ್ ಲೈನ್ ಮುಖಾಂತರ ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ದಿನಾಂಕ 05-03-2024 ರಿಂದ 05-04-2024 ರವರೆಗೆ ಒಟ್ಟು 27,76,905/-ಹಣವನ್ನು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶ.

 

Mangalore East Traffic PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಶಾಯರ್ ರಝಾಕ್ ರವರ ಸ್ನೇಹಿತ ಮೊಹಮ್ಮದ್ ಅನಸ್ ಪ್ರಾಯ: 22 ರವರು ಈ ದಿನ ದಿನಾಂಕ 08-04-2024 ರಂದು ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KL-10-L-4769 ನೇಯದನ್ನು ಚಲಾಯಿಸಿಕೊಂಡು ಕೆ.ಪಿ.ಟಿ ಕಡೆಯಿಂದ ಕುಂಟಿಕಾನದ ಕಡೆಗೆ ರಾ.ಹೆ. 66 ರಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 11-30 ಗಂಟೆಗೆ ಎಸ್.ಕೆ.ಎಸ್. ಅಪಾರ್ಟಮೆಂಟ್ ಎದುರು ತೆರೆದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಗೂಡ್ಸ್ ಕ್ಯಾರಿಯರ್ ವಾಹನ ನೊಂದಣಿ ಸಂಖ್ಯೆ: KA-15-3138 ನೇಯದನ್ನು ಅದರ ಚಾಲಕ ಶಿವಕುಮಾರ್ ಎಂಬಾತನು ವಾಪಸ್ ಕುಂಟಿಕಾನದ ಕಡೆಗೆ ಹೋಗುವುದಕ್ಕಾಗಿ ಅಜಾಗರೂಕತೆಯಿಂದ ಚಲಾಯಿಸುತ್ತಾ ತೆರೆದ ಡಿವೈಡರ್ನಿಂದ ಯೂ ಟರ್ನ ಮಾಡುವ ಗಡಿಬಿಡಿಯಲ್ಲಿ ಮೊಹಮ್ಮದ್ ಅನಸ್ ರವರ ಬೈಕಿಗೆ ಢಿಕ್ಕಿ ಪಡಿಸಿದ್ದು ಈ ಢಿಕ್ಕಿಯ ಪರಿಣಾಮ ಬೈಕ್ ಸವಾರ ಮೊಹಮ್ಮದ್ ಅನಸ್ ರವರು ರಸ್ತೆಗೆ ಬಿದ್ದು ಗಾಯಗೊಂಡು ಅರೆ ಪ್ರಜ್ಞಾವಸ್ಥೆಗೊಂಡಿರುತ್ತಾರೆ ಎಂಬಿತ್ಯಾದಿ.

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Basavaraj  ಇವರು ದಿನಾಂಕ 06-04-2024 ರಂದು ಸಂಜೆ ಕೆಲಸ ಮುಗಿಸಿ ಕೊಟ್ಟಾರ ಚೌಕಿಯಲ್ಲಿ ವಾಸ ಮಾಡಿಕೊಂಡಿರುವ ತನ್ನ ತಂಗಿಯ ಮನೆಗೆ ಹೋಗುವ ಸಲುವಾಗಿ ಮನೆಯಿಂದ ಹೊರಟು ಬಸ್ಸಿನಲ್ಲಿ ಕೊಟ್ಟಾರ ಚೌಕಿಗೆ ಬಂದು ಬಸ್ಸಿನಿಂದ ಇಳಿದು ಆಕಾಶಭವನ ಕಡೆ ಹೋಗುವ ರಸ್ತೆ ಕಡೆಯಿಂದ ಪ್ಲೈಒವರ್ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ರಾತ್ರಿ ಸಮಯ ಸುಮಾರು ರಾತ್ರಿ 10:00 ಗಂಟೆಗೆ ಕೂಳೂರು ಕಡೆಯಿಂದ KPT ಕಡೆಗೆ KA-19-MK-7934 ನಂಬ್ರದ ಕಾರೊಂದನ್ನು ಅದರ ಚಾಲಕ ಸೀತಾರಾಮ್ ರೈ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಅವರ ಸೊಂಟದ ಬಲಬದಿಗೆ ತರಚಿದ ಹಾಗೂ ಗುದ್ದಿದ ರೀತಿಯ ಗಾಯವಾಗಿದ್ದು, ಅವರು ಎ.ಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸತೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ:08-04-2024 ರಂದು ಪಿರ್ಯಾದಿ Kamala ಇವರು  ಠಾಣಾ ಸರಹದ್ದಿನಲ್ಲಿ ಸಿಬ್ಬಂದಿರವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ 12.00 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಅಡ್ಯಾರ್ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದ  ಅಫ್ರೀದ್ (24 ವ), ತಂದೆ: ಇಸ್ಮಾಯಿಲ್  ವಾಸ: ಮಸೀದಿಯ ಹತ್ತಿರ,ಅಡ್ಯಾರ್ ಪದವು ಗ್ರಾಮ ಮಂಗಳೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಿದ್ದು, ಆರೋಪಿತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Mangalore Rural PS

 ಫಿರ್ಯಾದಿ Haris ಇವರು ದಾರರ ಬಾಬ್ತು  ಲಾರಿ ನಂಬ್ರ: RJ- 11- GC- 1729 ನೇದರ     ಚಾಲಕರಾದ  ಅರ್ಷದ್ ಖಾನ್  ಬಿನ್ ಇಸಾಕ್   ಮತ್ತು ಸಾಜಿದ್ ಆಲಿ  ಬಿನ್ ಹಕಮ್ ಆಲಿ  ಎಂಬವರುಗಳು ದಿನಾಂಕ: 24/2/2024 ರಂದು ಮುಂಜಾವ ಅಡ್ಯಾರ್ ನಿಂದ , ಒಟ್ಟು 24,700 ಕೆ.ಜಿ.  (65 ಕೆ.ಜಿ. ತೂಕದ  380  ಚೀಲ) ಅಡಿಕೆ ಲೋಡ್ ನ್ನು  ಸದ್ರಿ ಲಾರಿಯಲ್ಲಿ ಸೂಫಿಯಾನ್ ಟ್ರೇಡಿಂಗ್ ಕಂಪೆನಿ ಶಹಾದರ, ನವದೆಹಲಿ ಎಂಬಲ್ಲಿಗೆ ಕೊಂಡೊಯ್ಯಲು ಹೊರಟವರು, ಸದ್ರಿ ಲೋಡನ್ನು ಅಲ್ಲಿಗೆ ತಲುಪಿಸದೇ  ಅಡಿಕೆ ಲೋಡ್ ಮತ್ತು ಲಾರಿಯನ್ನು ಕಳವು ಮಾಡಿಕೊಂಡು  ಪರಾರಿಯಾಗಿದ್ದು, ಕಳವಾಗಿರುವ ಲಾರಿಯ ಮೌಲ್ಯ  ರೂಪಾಯಿ 40 ಲಕ್ಷ  ಹಾಗೂ ಸದ್ರಿ ಲಾರಿಯಲ್ಲಿದ್ದ ಅಡಿಕೆಯ ಮೌಲ್ಯವು ಇನ್ ವಾಯ್ಸ್ ನಲ್ಲಿರುವಂತೆ ರೂಪಾಯಿ 64,83,750 /-  ಆಗಿರುತ್ತದೆ. ಆದುದರಿಂದ ಸದ್ರಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಕಳವಾಗಿರುವ RJ- 11- GC- 1729 ನಂಬ್ರದ ಲಾರಿಯನ್ನು ಮತ್ತು ಸದ್ರಿ ಲಾರಿಯಲ್ಲಿ ಲೋಡ್ ಮಾಡಿ ಕಳುಹಿಸಿದ್ದ 24,700 ಕೆ.ಜಿ ಅಡಿಕೆ ಲೋಡನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ

 

Traffic South Police

ದಿನಾಂಕ:07-04-2024 ರಂದು ಪಿರ್ಯಾದಿ SHEKAPPA NANDHI KESHAVA ಇವರು ದಾರರು ರಾ.ಹೆ-66 ರ ಜೆಪ್ಪಿನಮೊಗೆರು ಮಾಸೂನ್ ಗ್ರಾನೇಟ್ ಎಂಬಲ್ಲಿಯ ವಂಶಿ ಗ್ಯಾರೇಜ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸಮಯ ಸುಮಾರು 11.00 ಗಂಟೆಗೆ ವಂಶಿ ಗ್ಯಾರೇಜ್ ಕಡೆಗೆ ರಾ.ಹೆ-66 ರಸ್ತೆ ಮದ್ಯದ ವಿಭಜಕದಿಂದ ರಸ್ತೆ ದಾಟುತ್ತಿದ್ದ ಅಪರಿಚಿತ ಗಂಡಸಿಗೆ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ KA-19-MM-3197 ನೇ ನಂಬ್ರದ ಬೊಲೆನೋ ಕಾರಿನ ಚಾಲಕ ದಾವೂದ್ ಮಮ್ಮುಂಞ ಬ್ಯಾರಿ ಅವರು ತನ್ನ ಕಾರನ್ನು ದುಡುಕುತರನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಎಸೆಯಲ್ಲಪಟ್ಟು ತಲೆಗೆ, ಕೈ ಕಾಲುಗಳಿಗೆ ಗಾಯಗಳನ್ನುಂಟು ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಲು ಕಾರಣರಾಗಿರುತ್ತಾರೆ, ಗಾಯಳು ಅಪರಿಚಿತ ಗಂಡಸನ್ನು ಆರೋಪಿ ಕಾರಿನ ಚಾಲಕ ದಾವೂದ್ ಮಮ್ಮುಂಞ ಬ್ಯಾರಿ ಮತ್ತು ಪಿರ್ಯಾದಿದಾರರು ಸೇರಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಗ ದಾಖಲಿಸಿದ್ದು ಗಾಯಾಳು ಪ್ರಜ್ಞಾಹೀನ ಸ್ಥಿತಿಯಲ್ಲಿ ವೆನ್ಲಾಕ್ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆಯಲ್ಲಿದ್ದು ಪಿರ್ಯಾದಿದಾರರು ಅಪರಿಚಿತ ಗಂಡಸಿನ ಗುರುತು ಪತ್ತೆಯ ಬಗ್ಗೆ ಶ್ರಮಿಸಿ ಈ ದಿನ ದಿನಾಂಕ:08-04-2024 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ,ಎಂಬಿತ್ಯಾದಿ.

 

Traffic South Police

ಈ ಪ್ರಕರಣದ ಸಾರಾಂಶವೆನೇಂದರೆ ದಿನಾಂಕ:07-04-2024 ರಂದು ಪಿರ್ಯಾದು Mohammad Mustafa Abbas ಇವರ  ತಮ್ಮ ಶಿಹಾಬುದ್ದೀನ್ ರವರು ದಿನಾಂಕ 07-04-2024 ರಂದು ರಾತ್ರಿ ಸಮಯ ಸುಮಾರು 9.30 ಗಂಟೆಗೆ ಚೆಂಬುಗುಡ್ಡೆ ಮಸೀದಿಯಲ್ಲಿ ರಾತ್ರಿ ಪ್ರಾಥನೆ ಮುಗಿಸಿ ಕೊಂಡು ತಮ್ಮ ಭಾವ ಮೊಹಮ್ಮದ್ ಹನೀಫ್ ರವರ ಹೆಸರಿನಲ್ಲಿರುವ ಸ್ಕೂಟರ್ ನಂಬ್ರ KA 19 EN 8083 ಅನ್ನು ಚಲಾಯಿಸಿಕೊಂಡು ಉಳ್ಳಾಲ ಮನೆ ಕಡೆಗೆ ಹೋಗಲು ಮಸೀದಿಯ ಮುಂಬದಿಯ ರಸ್ತೆಯಲ್ಲಿ ಹೋಗುತ್ತಿರುವಾಗ ದೇರಳಕಟ್ಟೆಯಿಂದ ತೊಕ್ಕೋಟ್ಟು ಕಡೆಗೆ ಹೋಗುತ್ತಿದ್ದ KA-19-HM-2648 ನೇ ಬೈಕ್ ಸವಾರನಾದ ಅಂಕಿತ್ ಕುಂಪಲ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರ ತಮ್ಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಬೆನ್ನು ಹುರಿಯು (SPINAL CORD) ಮುರಿತದ ಗಾಯವಾಗಿರುತ್ತದೆ. ನಂತರ ಅಲ್ಲೆ ಇದ್ದ ಸಾರ್ವಜನಿಕರು ಆಟೋರಿಕ್ಷಾವೊಂದರಲ್ಲಿ  ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಫಳ್ನೀರಿನಲ್ಲಿರುವ ಇಂದಿರಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 11-04-2024 10:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080