ಅಭಿಪ್ರಾಯ / ಸಲಹೆಗಳು

Mangalore East Traffic PS       

ಪಿರ್ಯಾದಿದಾರರಾದ ಮನೋಜ್ ಕುಮಾರ, ಪ್ರಾಯ: 26 ವರ್ಷ ಎಂಬುವರು ಈ ದಿನ ದಿನಾಂಕ 07/05/2023 ರಂದು ಮದ್ಯಾಹ್ನ ಕುಲಶೇಖರ ಕಡೆಯಿಂದ ನಂತೂರು ಕಡೆಗೆ ರಾ.ಹೆ 73 ನೇಯದರಲ್ಲಿ ತಮ್ಮ ಬೈಕನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ಸುಮಾರು 1-00 ಗಂಟೆ ವೇಳೆಗೆ ಬಿಕರ್ನಕಟ್ಟೆಯ ದೋಹಾ ಸೂಪರ್ ಬಜಾರ್ ಬಳಿ ತಲುಪುತ್ತಿದ್ದಂತೆ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KL-43-D-0706 ನೇಯದನ್ನು ಅದರ ಸವಾರ ಅಲನ್ ಬಿಜು ಎಂಬಾತನು ದುಡುಕುತನ, ಅಜಾಗರೂಕತೆಯಿಂದ ಚಲಾಯಿಸುತ್ತಾ ಪಿರ್ಯಾದಿದಾರರ ಬೈಕನ್ನು ಎಡ ಭಾಗದಿಂದ ಓವರ್ ಟೇಕ್ ಮಾಡಿ ಸ್ವಲ್ಪ ದೂರ ಮುಂದೆ ತಲುಪುತ್ತಿದ್ದಂತೆ ಸದರಿ ರಸ್ತೆಯ ಡಿವೈಡರ್ ಕಡೆಯಿಂದ ದೋಹಾ ಸೂಪರ್ ಬಜಾರ್ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಾದಾಚಾರಿ ಅಂಟೋನಿ ಕುವೆಲ್ಲೋ ಎಂಬುವರಿಗೆ ಢಿಕ್ಕಿ ಪಡಿಸಿದ ಪಡಿಣಾಮ ಅಂಟೋನಿ ಕುವೆಲ್ಲೋ ರವರು ಮುಂದಕ್ಕೆ ಎಸೆಯಲ್ಲಪಟ್ಟು ರಸ್ತೆ ಪಕ್ಕದಲ್ಲಿರುವ ಇಂಟರ್ ಲಾಕ್ ರಸ್ತೆಗೆ ಬಿದ್ದು ತಲೆಗೆ ಊದಿಕೊಂಡ ಗಾಯ, ಬಲ ಕಾಲಿಗೆ ಆಳವಾದ ರಕ್ತಗಾಯವಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಪಿರ್ಯಾದಿದಾರರು ಅಲ್ಲಿ ಸೇರಿದ ಸಾರ್ವಜನಿಕರೊಂದಿಗೆ ಉಪಚರಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅಂಟೋನಿ ಕುವೆಲ್ಲೋ ರವರಿಗೆ ಬಲ ಕಾಲಿನ ಆ್ಯಂಕಲ್ ಬಳಿ ಮೂಳೆ ಮುರಿತವುಂಟಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲುಮಾಡಿಕೊಂಡಿರುತ್ತಾರೆ,  ಆದುದರಿಂದ ಢಿಕ್ಕಿ ಪಡಿಸಿದ ಬೈಕ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Prakash Kumar Raj Purohith ದಾರರು ದಿನಾಂಕ: 06-05-2023 ರಂದು ಅವರ ಪತ್ನಿಯ ಬಾಬ್ತು ಕೆ-19 ಹೆಚ್ಇ-3729 ನೇ ಟಿ.ವಿ.ಎಸ್ ಸ್ಕೂಟರಿನಲ್ಲಿ ಮೂಡಬಿದ್ರೆ ಕಡೆಗೆ ಹೋಗುವಾಗ ಸುಮಾರು 13-30 ಗಂಟೆಗೆ ಗಂಜಿಮಠ ತಲುಪಿದಾಗ ಮೂಡಬಿದ್ರೆ ಕಡೆಯಿಂದ ಕೆಂಪು ಬಣ್ಣದ ಕಾರನ್ನು ಅದರ ಚಾಲಕನು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ  ಬಂದು ಪಿರ್ಯಾದಿದಾರರು ರಸ್ತೆಯ ಎಡ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲ ಭುಜಕ್ಕೆ ತೀವ್ರ ತರಹದ ಗಾಯವಾಗಿದ್ದು, ಡಿಕ್ಕಿ ಪಡಿಸಿದ ಕಾರನ್ನು ಅದರ ಚಾಲಕನು ನಿಲ್ಲಿಸದೇ ಹೋಗಿದ್ದು, ಸಾವಱಜನಿಕರ ಸಹಾಯದಿಂದ ಕಾರಿನ ನಂಬ್ರ ನೋಡಲಾಗಿ ಕೆಎಲ್-14 ಟಿ-2839 ನೇ ಕೆಂಪು ಬಣ್ಣದ ಕಾರು ಆಗಿದ್ದು, ಗಾಯಗೊಂಡಿದ್ದ ಪಿರ್ಯಾದಿದಾರರನ್ನು ಸಾವಱಜನಿಕರು ಮಂಗಳೂರಿನ ವಿಜಯ ಕ್ಲಿನಿಕ್ ಗೆ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ತನ್ನ ವಾಹನಕ್ಕೆ ಡಿಕ್ಕಿ ಪಡಿಸಿದ ಕೆಎಲ್-14 ಟಿ-2839 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮಕ್ಕಾಗಿ ಪಿರ್ಯಾದಿದಾರರು ನೀಡಿದ ಹೇಳಿಕೆಯ ಮೇಲೆ ದಾಖಲಾದ ಪ್ರಕರಣದ ಸಾರಾಂಶ.

 

Traffic North Police Station              

ಪಿರ್ಯಾದಿದಾರರಾದ ನಾಗೇಶ್ ದೀಕ್ಷೀತ್ (60 ವರ್ಷ) ರವರು ಈ ದಿನ ದಿನಾಂಕ: 07-05-2023 ರಂದು ತಾವು ಚಾಲಕನಾಗಿ ಕೆಲಸ ಮಾಡುವ KA-03-MH-2329 ನಂಬ್ರದ ಕಾರಿನಲ್ಲಿ ಮನೆಯಾದ ಕಾಪುವಿನಿಂದ ಮಂಗಳೂರಿನ ಉಳ್ಳಾಲಕ್ಕೆ ಹೋಗಿ ವಾಪಾಸು ಮನೆಯಾದ ಉಡುಪಿಯ ಕಾಪು ಕಡೆಗೆ ಹೊಗುತ್ತಾ ಸಮಯ ಸುಮಾರು ಮದ್ಯಾಹ್ನ ಸಮಯ ಸುಮಾರು 01:30 ಗಂಟೆಗೆ ಪಣಂಬೂರು ಜಂಕ್ಷನ್ ತಲುಪಿದಾಗ ಅಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸರು ವಾಹನಗಳನ್ನು ನಿಲ್ಲಿಸುವ ಸೂಚನೆ ನೀಡಿದ್ದು ಅದರಂತೆ ಪಿರ್ಯಾದಿದಾರರು ಕಾರನ್ನು ನಿಲ್ಲಿಸಿದ್ದ ಸಮಯ ಪಿರ್ಯಾದಿದಾರರ ಕಾರಿನ ಹಿಂದಿನಿಂದ KA-19-MF-5870 ನಂಬ್ರದ ಕಾರನ್ನು ಅದರ ಚಾಲಕ ಮಹಮ್ಮದ್ ಮೋಬಿನ್ ಎಂಬಾತನು ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿ ಸಂಪೂರ್ಣ ಜಖಂ ಆಗಿರುತ್ತದೆ ಹಾಗೂ ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

 

 

ಇತ್ತೀಚಿನ ನವೀಕರಣ​ : 21-08-2023 12:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080