ಅಭಿಪ್ರಾಯ / ಸಲಹೆಗಳು

Crime Reports in: Mangalore West Traffic PS

ಪಿರ್ಯಾದಿ KRISHNA ದಿನಾಂಕ 08-06-2022 ರಂದು ಪತ್ನಿ ಉಮಾವತಿರವರ ಬಾಬ್ತು KA-19-AC-6507  ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಕರಾದ ಶ್ರೀಮತಿ ಲತಾ ಜಿ ನಾಯಕ್ ಹಾಗೂ ಗೋಪಾಲ ಕೃಷ್ಣ  ನಾಯಕ್ ರವರನ್ನು  ಪದವಿನಂಗಡಿಯಲ್ಲಿ   ಕುಳ್ಳಿರಿಸಿಕೊಂಡು ಲಾಲ್ ಬಾಗ್ ಕಡೆಗೆ  ಹೋಗಲು ಕೆ ಎಸ್ ಆರ್ ಟಿ ಸಿ ಕಡೆಯಿಂದಾಗಿ ಲಾಲ್ ಬಾಗ್ ಜಂಕ್ಷನ್ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 7.45 ಗಂಟೆಗೆ ಲಾಲ್ ಬಾಗ್ ಜಂಕ್ಷನ್ ತಲುಪುತ್ತಿದ್ದಂತೆ ಲೇಡಿ ಹಿಲ್ ಕಡೆಯಿಂದ  ಲಾಲ್ ಬಾಗ್ ಕಡೆಗೆ KA-19-AC-7922  ನೇ ಬಸ್ಸನ್ನು ಅದರ ಚಾಲಕ ಸಂತೋಷ್ ಕುಮಾರ್ ರವರು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋ ರಿಕ್ಷಾದ ಮುಂಭಾಗದ ಬಲಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಸಮೇತ  ರಸ್ತೆಗೆ ಮಗುಚಿ ಬಿದ್ದು ಪಿರ್ಯಾದಿದಾರರಿಗೆ ಎಡಗೈ ಗೆ ಮೂಳೆ ಮೂರಿತದ ಗಾಯವಾಗಿದ್ದು ಹಾಗೂ ಪ್ರಯಾಣಿಕರಾದ  ಶ್ರೀಮತಿ ಲತಾ ರವರಿಗೆ ಬಲಗೈ ಗೆ ರಕ್ತ ಬರುವ ಗಾಯವಾಗಿದ್ದು ಹಾಗೂ ಇನ್ನೊಬ್ಬ ಪ್ರಯಾಣಿಕರಾದ ಗೋಪಾಲ ಕೃಷ್ಣ ನಾಯಕ್ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಗೊಂಡ ಪ್ರಯಾಣಿಕರನ್ನು ಅಲ್ಲಿಯೇ ಬರುತ್ತಿದ್ದ ಆಟೋ ರಿಕ್ಷಾ ದಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರನ್ನು ಬಸ್ಸಿನ ನಿರ್ವಾಹಕ ಚಿಕಿತ್ಸೆಗೆ ಸರಕಾರಿ ಜಿಲ್ಲಾ ವೆನ್  ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು  ಮಾಡಿದ್ದು ಪರೀಕ್ಷೀಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ನಗರದ ಅತ್ತಾವರ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಿರುತ್ತಾರೆ ಎಂಬಿತ್ಯಾದಿ

Traffic North Police Station

ಪಿರ್ಯಾದಿ Trishul Thejasvi K.P ತಮ್ಮ ಪ್ರತ್ಯೂಷ್ ತೇಜಸ್ವಿ ಕೆ.ಪಿ (22 ವರ್ಷ) ಎಂಬವರು ನಿನ್ನೆ ದಿನಾಂಕ:07-06-2023 ರಂದು ತನ್ನ ಬಾಬ್ತು KA-19-EB-0134 ನಂಬ್ರದ ಆ್ಯಕ್ಟಿವಾದಲ್ಲಿ ಕಾವೂರಿಗೆ ಜಿಮ್ ಗೆಂದು ಮನೆಯಿಂದ ಹೋದವರು ಗಾಂಧಿನಗರ ಸರಕಾರಿ ಕಾಲೇಜು ರಸ್ತೆಯಿಂದಾಗಿ ಕಾವೂರು-ಕೂಳೂರು ಮುಖ್ಯ ರಸ್ತೆಗೆ ತಲುಪುವಲ್ಲಿ ತನ್ನ ಆ್ಯಕ್ಟಿವಾವನ್ನು ಕಾವೂರು ಕಡೆಗೆ ಹೋಗುವರೆ ಬಲಕ್ಕೆ ಇಂಡಿಕೇಟರ್ ಹಾಕಿ ನಿಧಾನವಾಗಿ ತಿರುಗಿಸುತ್ತದ್ದಂತೆ ಸಮಯ ರಾತ್ರಿ ಸುಮಾರು 8:00 ಗಂಟೆಗೆ ಕಾವೂರು ಕಡೆಯಿಂದ ಕೂಳೂರು ಕಡೆಗೆ ಬಂದಂತಹ KA-19-HN-0163 ನಂಬ್ರದ ಸ್ಕೂಟರನ್ನು ಅದರ ಚಾಲಕ ಧ್ಯಾನ್ ಎಂಬಾತನು ಹಿಂದುಗಡೆ ಸಹಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಕಾವೂರು ಕಡೆಗೆ ನಿಧಾನವಾಗಿ ತಿರಿಗಿಸುತ್ತಿದ್ದ ಪಿರ್ಯಾದಿದಾರರ ತಮ್ಮನ ಆ್ಯಕ್ಟಿವಾಗೆ  ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ತಮ್ಮ ಪ್ರತ್ಯೂಷ್ ತೇಜಸ್ವಿ ಕೆ.ಪಿ ರವರು ಆ್ಯಕ್ಟಿವಾ ಸಮೇತ ರಸ್ತೆಗೆ ಬಿದ್ದು,ಅವರ ತಲೆಯ ಬಲ ಭಾಗಕ್ಕೆ ಗುದ್ದಿದಂತಹ ಒಳಗಾಯವಾಗಿ ಪ್ರಜ್ನಾಹೀನ ಸ್ಥಿತಿಯಲ್ಲಿದ್ದು, ಅಲ್ಲದೇ ಆತನ ಬಲಕಾಲಿನ ಕೋಲು ಕಾಲಿಗೆ ಗುದ್ದಿದಂತಹ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic North Police Station

ದಿನಾಂಕ 04.06.2023 ರಂದು ಮುಂಜಾನೆ ಸಮಯ ಸುಮಾರು 03:15 ಗಂಟೆಯ ಸಮಯಕ್ಕೆ ಕಾರು ನಂಬ್ರ KA-47M-5244 ನೇಯದನ್ನು ಅದರ ಚಾಲಕ ಸೂರಜ್ ಶೆಟ್ಟಿ ಎಂಬವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಮಂಗಳೂರು ತಾಲೂಕು, ತಡಂಬೈಲ್ ಮಾರಿಗುಡಿ ದೇವಸ್ಥಾನದ ಎದುರಿನಲ್ಲಿರುವ ಅಂದರೆ ಉಡುಪಿ-ಮಂಗಳೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿ S. Venkatarama Rao ಮನೆಗೆ ತಾಗಿಕೊಂಡಿರುವ ಡೋರ್ ನಂಬ್ರ 19-152/1, 19-152/2, 19-152/3, 19-152/4 ಅಂಗಡಿಗೆ ಢಿಕ್ಕಿ ಹೊಡೆದ ಪರಿಣಾಮ ಅಂಗಡಿಯ ಶೆಟರ್ ಗೋಡೆ, ಶೆಟರ್, ಟೈಲ್ಸ್, ತಗಟು ಶೀಟ್, ಬಿಲ್ಡಿಂಗಿನ ಭೀಮ್, ಕಂಪೌಂಡ್, ಟ್ಯಾಂಕಿಯ ಸ್ಟಾಂಡ್ ಜಖಂಗೊಂಡಿದ್ದು ಈ ಅಫಘಾತದಿಂದ ಕಾರು ಚಾಲಕ ಸೂರಜ್ ಶೆಟ್ಟಿ ಮತ್ತು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ ಎಂಬಿತ್ಯಾದಿ.

Urva PS

ದಿನಾಂಕ 07-06-2023 ರಂದು ರಾತ್ರಿ  ಸುಮಾರು 08-45  ಗಂಟೆಗೆ ಉರ್ವಾಸ್ಟೋರ್ ಮಾರ್ಕೆಟ್ ಗ್ರೌಂಡ್ ಬಳಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವನನ್ನು  ವಶಕ್ಕೆ ಪಡೆದು ಗಾಂಜ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಡಿಸುವ ಸಲುವಾಗಿ ಹಿತೇಶ್ ರವರನ್ನು ಮಂಗಳೂರು ಕುಂಟಿಕಾನ ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯಾಧಿಕಾರಿಯವರು ಹಿತೇಶ್ ರವರನ್ನು ಪರೀಕ್ಷಿಸಿ ಗಾಂಜ ಸೇವಿಸಿರುವುದಾಗಿ  ದೃಡ ಪತ್ರವನ್ನು ನೀಡಿರುವುದರ ಮೇರೆಗೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ಪಿರ್ಯಾದಿ ಪ್ರದೀಪ್ ಕುಮಾರ್ ರವರು ಸುಮಾರು 8 ವರ್ಷಗಳಿಂದ ಭಂಡಾರಿ ಬಿಲ್ಡರ್ಸ್ ಕಂಪನಿಯಲ್ಲಿ ಅಕೌಂಟೆಂಟ್ ಕೆಲಸ ಮಾಡಿಕೊಂಡಿರುತ್ತಾರೆ. ಮಂಗಳೂರಿನ ಕದ್ರಿ ಕಂಬಳದಲ್ಲಿ ಭಂಡಾರಿ ವೆರ್ಟಿಕ್ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ನಿರ್ಮಾಣ ಕಟ್ಟಡದಲ್ಲಿ ವಾಹನ ಚಾಲಕನಾಗಿ ಇತ್ತೀಚಿಗೆ ಸುಮಾರು ಎರಡು ತಿಂಗಳಿಂದ ಕೆಲಸ ಮಾಡಿಕೊಂಡಿದ್ದ ಬಾಬು ಎಂಬಾತನು ಪಿರ್ಯಾದಿದಾರರು ಕೆಲಸ ಮಾಡಿಕೊಂಡಿರುವ ಕಂಪನಿಯ ಬಾಬ್ತು ವಾಹನ ಸಂಖ್ಯೆ KA19AA6101 ನೇ ಪಿಕ್ ಅಪ್ ವಾಹನದಲ್ಲಿ ದಿನಾಂಕ 02-06-2023 ರಂದು ಸಮಯ ಸುಮಾರು ಬೆಳಿಗ್ಗೆ 5.30 ಗಂಟೆಗೆ ಕಟ್ಟಡದ ಕಾಮಗಾರಿಗೆ ತಂದಿದ್ದ ಸುಮಾರು ಅಂದಾಜು ಮೌಲ್ಯ 90,000/- ರೂ ಬೆಲೆಬಾಳುವ ಕಬ್ಬಿಣದ ಸರಕುಗಳನ್ನು ಯಾರಿಗೂ ತಿಳಿಸದೇ ತೆಗೆದುಕೊಂಡು ಹೋಗಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವುದರಿಂದ ಸದ್ರಿ ಕಬ್ಬಿಣದ ಸರಕುಗಳನ್ನು ಕಳ್ಳತನ ಮಾಡಿದ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Mangalore North PS

ದಿನಾಂಕ  07-06-2023 ಮಧ್ಯಾಹ್ನ 3-00 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಹೆಚ್.ಸಿ  ಮದನ್.ಸಿ.ಎಂ ರವರಿಗೆ  ಮಂಗಳೂರು ನಗರದ ಹಂಪನಕಟ್ಟೆ  ಇರುವ  ಪೂಂಜಾ  ಹೊಟೇಲ್ ನ  ಎದುರು  ಮಿಲ್ಕ್ ಪಾರ್ಲರ್  ಬಳಿ ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕರಿಂದ ಹಣ ಪಡೆದುಕೊಂಡು ಸಜಿತ್ ಎಂಬಾತನು ಮಟ್ಕಾ ಜೂಜಾಟ ಆಡುತ್ತಿದ್ದಾನೆ ಎಂಬ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ದೊರಕಿರುವುದಾಗಿಯೂ ಹಾಗೂ ಈತನನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂಬುದಾಗಿ ಠಾಣೆಗೆ ಬಂದು ಲಿಖಿತ ದೂರನ್ನು ನೀಡಿದಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

Mangalore North PS

ದಿನಾಂಕ  07-06-2023 ಮಧ್ಯಾಹ್ನ 3-00 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಹೆಚ್.ಸಿ  ಮದನ್ .ಸಿ.ಎಂ ರವರಿಗೆ  ಮಂಗಳೂರು ನಗರ ಹಂಪನಕಟ್ಟೆ ಹಳೆ   ಬಸ್ಸು ನಿಲ್ದಾಣದ ಬಳಿ ಗಣೇಶ್ ಟ್ರಾವೆಲ್ಸ್ ಎದುರುಗಡೆ  ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೇತನ್ ಕುಮಾರ್ ಮಂಜೇಶ್ವರ  ಎಂಬಾತನು ಮಟ್ಕಾ ಜೂಜಾಟ ಆಡುತ್ತಿದ್ದಾನೆ ಎಂಬ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ದೊರಕಿರುವುದಾಗಿಯೂ, ಹಾಗೂ ಈತನನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂಬುದಾಗಿ ಠಾಣೆಗೆ ಬಂದು ಲಿಖಿತ  ದೂರನ್ನು ನೀಡಿದಂತೆ, ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

Bajpe PS

ಪಿರ್ಯಾದಿ CHETHAN SHETTY ದೊಡ್ಡಪ್ಪ ನಾರಾಯಣ ಶೆಟ್ಟಿ(70) ಎಂಬುವರು ದಿನಾಂಕ;05/06/2023 ಬೆಳಿಗ್ಗೆ 11;00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು ಮುತ್ತೂರು ಗ್ರಾಮದ ಹೊಳೆಬದಿ  ಎಂಬಲ್ಲಿಂದ ಹೋದವರು ವಾಪಸ್ಸು ಬಾರದೇ ಇದ್ದು ಸಂಬಂದಿಕರ ಮನೆ ಹಾಗೂ ಇತರ ಕಡೆಗಳಲ್ಲಿ ಹುಡುಕಿ ಎಲ್ಲಿಯೂ ಪತ್ತೇಯಾಗದ ಕಾರಣ ಠಾಣೆಗೆ ಬಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ.

Bajpe PS

ಪಿರ್ಯಾದಿ  NITHIN KUMAR ದಿನಾಂಕ;07/06/2023 ರಂದು ತನ್ನ ಕಾರುನ್ನು ಚಲಾಯಿಸುತ್ತಾ ಮುಂಜಾನೆ ಸುಮಾರು 03-00 ಗಂಟೆಗೆ  ಬಜಪೆ ಪೇಟೆ ತಲುಪುವಾಗ EICHER CANTER KA 20 AB 6513 ವಾಹನವು ಅತಿವೇಗವಾಗಿ ಚಲಾಯಿಸಿಕೊಂಡು ಬಂದು  ಚಾಲಕನ ನಿಯಂತ್ರಣ ತಪ್ಪಿ ಬಜಪೆ ಸೇತುವೆಯ ತಡೆಗೋಡೆ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ EICHER CANTER ಲಾರಿಯಲ್ಲಿ ಎಡ ಬದಿ ಕುಳಿತ್ತಿದ್ದ ಕ್ಲಿನರ್ ನಿಶಾಂತ್ ರವರ ಎಡ ಕಾಲಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಹಾಗೂ  EICHER CANTER  ವಾಹನದ ಎಡಭಾಗವು ಸಂಪೂರ್ಣ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

Traffic North Police Station

ಪಿರ್ಯಾದಿ Smt.Gayathri ಗಂಡ ಬಸವರಾಜು ರವರು ದಿನಾಂಕ:06-06-2023 ರಂದು ರಿಪೇರಿಗಿಟ್ಟಿದ್ದ ಕಾರನ್ನು ತರಲು KIOCL Township ಎದುರಿನ ರಸ್ತೆಯನ್ನು ದಾಟಿ ಕಾವೂರು ಬೋಂದೆಲ್ ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಕಾವೂರು ಕಡೆಗೆ ಹೋಗುತ್ತಿದ್ದ ಸಮಯ ಸಂಜೆ ಸುಮಾರು 5:00 ಗಂಟೆಗೆ ಪೆಟ್ರೋಲ್ ಪಂಪಿನಿಂದ ಸ್ವಲ್ಪ ಹಿಂದೆ ತಲುಪಿದಾಗ KA-19-EV-7561 ನಂಬರಿನ ಸ್ಕೂಟರನ್ನು ಅದರ ಸವಾರ ಶಫೀಉಲ್ಲಾ ರೆಹಮಾನ್ ಎಂಬವರು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಗಂಡ ಬಸವರಾಜು ರವರಿಗೆ ಡಿಕ್ಕಿ ಪಡಿಸಿರುತ್ತಾರೆ. ಈ ಅಪಘಾತದ ಪರಿಣಾಮ ಬಸವರಾಜುರವರ ಎಡಗೈಯ ಮುಂಗೈಯಿಂದ ಮೊಣಕೈ ವರೆಗೆ ತರಚಿದ ಗಾಯ, ಹಣೆ ಮೇಲೆ ತರಚಿದ ಗಾಯ, ತಲೆಯಲ್ಲಿ ರಕ್ತಗಾಯ, ಮೂಗಿನ ಕೆಳಗಿನ ತುಟಿ ಹಾಗೂ ಮೂಗಿನಲ್ಲಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ KMC ಜ್ಯೋತಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಎಂಬಿತ್ಯಾದಿ.

Mangalore South PS

ದಿನಾಂಕ: 07-06-2023 ರಂದು  18-20  ಗಂಟೆ ಸುಮಾರಿಗೆ ಮಂಗಳೂರು ನಗರದ ನೆಹರೂ ಮೈದಾನದ ಕಾರ್ಪೋರೇಶನ್ ಬ್ಯಾಂಕ್ ಪಾರ್ಕ್ ಬಳಿ ಗಾಂಜಾ ಸೇವನೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ, ತಸ್ಲೀಫ್ ಸಿ.ಬಿ, ಪ್ರಾಯ: 23 ವರ್ಷ,  ವಾಸ:  ಇರ್ಫಾನ್ ಮಂಜಿಲ್, ಇಬ್ರಾಹಿಂ ಬಾತೀಶ್ ಮಸೀದಿ ಬಳಿ, ಮೈಮುನ ನಗರ ಕೋಟ ರಸ್ತೆ, ಕುಂಬಳೆ ಅಂಚೆ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂಬಾತನನ್ನು  ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,    ವೈದ್ಯಕೀಯ  ತಪಾಸಣೆಗೆ ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

 

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080