ಅಭಿಪ್ರಾಯ / ಸಲಹೆಗಳು

 

 Crime Report in Mulki PS

ದಿನಾಂಕ 08-08-2023 ರಂದು ಬೆಳಿಗ್ಗೆ 11-25 ಗಂಟೆಗೆ  ಮುಲ್ಕಿ ತಾಲೂಕು ಶೀಮಂತೂರು ಗ್ರಾಮದ ಅಂಗಾರಗುಡ್ಡೆ 2ನೇ ಕ್ರಾಸ್ ಬಳಿಯಲ್ಲಿ    ಸಾರ್ಜಜನಿಕ ಸ್ಥಳದಲ್ಲಿ ಆರೋಪಿ  ತಾರಾನಾಥ ದೇವಾಡಿಗ  ಪ್ರಾಯ( 45 ),  ವಾಸ: ರಾಮನಗರ, ಅಂಗಾರಗುಡ್ಡೆ ಶೀಮಂತೂರು ಗ್ರಾಮ   ಎಂಬಾತನು ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್  ಠಾಣಾ ಪಿ.ಎಸ್.ಐ ಶ್ರೀ ಮಾರುತಿ ಪಿ ರವರು ತಮ್ಮ ಸಿಬ್ಬಂದಿಗಳ ದಾಳಿ ನಡೆಸಿ ಆರೋಪಿಯು ಮಟ್ಕಾ ಜೂಜಾಟಕ್ಕಾಗಿ ಸಂಗ್ರಹಿಸುತ್ತಿದ್ದ ನಗದು ಹಣ 1120/-, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ  ಚೀಟಿ- 01, ಮಟ್ಕಾ ಜೂಜಾಟ ಸಂಖ್ಯೆ ಬರೆಯುತ್ತಿದ್ದ ಹಳೆಯ ಪೆನ್ನು 01 ಇವುಗಳನ್ನು  ಸ್ವಾಧೀನ ಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವುದಾಗಿ  ಎಂಬಿತ್ಯಾದಿ.

 

2) ಪಿರ್ಯಾದಿ Smt Jalaja Panara ದಾರರು 08-07-2015 ರಿಂದ 03-02-2020 ರ ತನಕ ಹಳೆಯಂಗಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾಗಿರುತ್ತಾರೆ. ಪಿರ್ಯಾದಿದಾರರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ವೇಳೆ ಬೇರೆಯವರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಕಟ್ಟಡ ಕಟ್ಟಲು ನೀಡಿದ ಅನುಮತಿ ಪತ್ರವನ್ನು ಜೆರಾಕ್ಸ್ ಮಾಡಿ ಅದರಲ್ಲಿ ಆರೋಪಿ 2 ನೇ Smt Savitha Udaya ಯವರು ತನ್ನ ತಾಯಿ 1 ನೇ ಆರೋಪಿತೆ Vimala Mendan ಯ ಹೆಸರನ್ನು ಸೇರಿಸಿ “ ಕಟ್ಟಡ ಅನುಮತಿ ಪತ್ರ ಸಂಖ್ಯೆ:6/2021-22, ಗ್ರಾ.ಪಂ. ನಿರ್ಣಯ ಸಂಖ್ಯೆ: 04-(2)2/24-4-2021 ಮತ್ತು ದಿ: 18-08-2021 ರಂತೆ ನೀಡಿದ್ದೆನ್ನಲಾದ ಸುಳ್ಳು ಅನುಮತಿ ಪತ್ರವನ್ನು ತಯಾರು ಮಾಡಿ ಮೀನುಗಾರಿಕಾ ಇಲಾಖೆಗೆ ಸಲ್ಲಿಸಿ ಮೀನುಗಾರಿಕಾ ಇಲಾಖೆಯಿಂದ ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ 72,000/- ರೂಪಾಯಿ ಹಣವನ್ನು ಪಡೆದು ವಂಚಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.  ಆರೋಪಿತರು ಮೀನುಗಾರಿಕಾ ಇಲಾಖೆಯಿಂದ ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ ರೂಪಾಯಿ 1,20,000/- ರೂಪಾಯಿ ಹಣವನ್ನು ಕಬಳಿಸುವ ದುರುದ್ದೇಶದಿಂದ ಸುಳ್ಳು ಅನುಮತಿ ಪತ್ರವನ್ನು  ತಯಾರು ಮಾಡಿ ಮೀನುಗಾರಿಕಾ ಇಲಾಖೆಗೆ ನೀಡಿ ಮೋಸ, ವಂಚನೆಯಿಂದ ಮೀನುಗಾರಿಕಾ ಇಲಾಖೆಯ ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ 72,000/- ರೂಪಾಯಿ ಹಣವನ್ನು ಪಡೆದುಕೊಂಡಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ.

CEN Crime PS

ದಿನಾಂಕ; 08-08-2023 ರಂದು ಬೆಳಿಗ್ಗೆ:08-00 ಗಂಟೆಗೆ ಮಂಗಳೂರು ನಗರದ ನಗರ ಅಪರಾಧ ವಿಭಾಗ (ಸಿಸಿಬಿ) ದ ಪೊಲೀಸ್ ಉಪ ನಿರೀಕ್ಷಕ ಶರಣಪ್ಪ ಭಂಡಾರಿ  ರವರಿಗೆ ಬಾತ್ಮೀದಾರರೊಬ್ಬರಿಂದ ಬಂದ ಮಾಹಿತಿ ಏನೆಂದರೆ ಉಪ್ಪಳದ ಮೊಹಮ್ಮದ್ ರಫೀಕ್ ಎಂಬಾತನು ಅಕ್ರಮವಾಗಿ MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಬಂದು ಉಳ್ಳಾಲ ತಾಲೂಕು ತಲಪಾಡಿ ಕೆ ಸಿ ರೋಡ್ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು  ಸಾರ್ವಜನಿಕರಿಗೆ ಮಾರಾಟ ಮಾಡಲು  ಬರುತ್ತಿರುವುದಾಗಿ ಮಾಹಿತಿ ಬಂದಂತೆ ಬೆಳಿಗ್ಗೆ: 8-45 ಹೊರಟು ಬೆಳಿಗ್ಗೆ: 09-30 ಗಂಟೆಗೆ   ಉಳ್ಳಾಲ ತಾಲೂಕು ತಲಪಾಡಿ ಕೆ ಸಿ ರೋಡ್ ಗೆ ತಲಪಿ ತಲಪಾಡಿ ಕೆ ಸಿ ರೋಡ್ ನಲ್ಲಿರುವ TA ಮಾರ್ಬಲ್ ಹತ್ತಿರ ಪನ್ವೆಲ್-ಕೊಚ್ಚಿ ರಾಹೆ 66 ರ ಪೂರ್ವ ಬದಿಯಲ್ಲಿರುವ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಪಾದಿತನನ್ನು ಖಚಿತ ಪಡಿಸಿಕೊಂಡು ಬೆಳಿಗ್ಗೆ 9-40 ಗಂಟೆಗೆ ದಾಳಿ ಮಾಡಿ ಆಪಾದಿತ ಮೊಹಮ್ಮದ್ ರಫೀಕ್ ಬಿ, ಪ್ರಾಯ:40 ವರ್ಷ,  ವಾಸ: ಬಲನ್ ಕೂಡ ಹೌಸ್, ಉಪ್ಪಳ ಪೋಸ್ಟ್ ಮತ್ತು ಗ್ರಾಮ, ಕಾಸರಗೋಡು ಜಿಲ್ಲೆ, ಕೇರಳಾ ರಾಜ್ಯ-671322. ಹಾಲಿ ವಿಳಾಸ: ಕೇರ್ ಆಫ್ ಜುಬೇರ್ ರವರ ಬಾಡಿಗೆ ಮನೆ,ಮೊದಲನೇ ಮಹಡಿ, ಬಾಳಿಯೂರು ಅಪಾರ್ಟಮೇಂಟ್, ಉಪ್ಪಳ ರೈಲ್ವೇ ಸ್ಟೇಷನ್ ರೋಡ್, ಉಪ್ಪಳ, ಕಾಸರಗೋಡು, ಕೇರಳ ರಾಜ್ಯ ಎಂಬಾತನನ್ನು ವಶಕ್ಕೆ ಪಡೆದು ಬಳಿಕ ಆತನ ವಶದಲ್ಲಿದ್ದ ಕೃತ್ಯಕ್ಕೆ ಬಳಸಿದ್ದ 1 ಮೊಬೈಲ್ ಪೋನ್, ರೂ 8,000/- ನಗದು ಹಣ, 50 ಗ್ರಾಂ MDMA ಮಾದಕ ವಸ್ತುವಿನ ಪ್ಲಾಸ್ಟಿಕ್ ಕವರು, ಕಪ್ಪು ಬಣ್ಣದ ಪೌಚ್, ಡಿಜಿಟಲ್ ತೂಕ ಮಾಪನ  ಮತ್ತು ಸಣ್ಣ ಸಣ್ಣ ಖಾಲಿ ಜಿಪ್ ಪ್ಲಾಸ್ಟಿಕ್ ಕವರು ಒಟ್ಟು ರೂ 2,68,500/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಬಳಿಕ ಆರೋಪಿ ಹಾಗೂ ಸೊತ್ತಿನೊಂದಿಗೆ ವರದಿ ಸಮೇತ CEN ಕ್ರೈಂ ಪೊಲೀಸ್ ಠಾಣೆಗೆ ಹಾಜರುಪಡಿಸಿದಂತೆ ಆಪಾದಿತನ ಮೇಲೆ ಠಾಣಾ ಅ.ಕ್ರ NDPS Act  ರಂತೆ ಪ್ರ.ವ. ವರದಿಯನ್ನು ದಾಖಲಿಸಿಕೊಂಡಿರುತ್ತೇನೆ.

Mangalore East PS                           

ಪಿರ್ಯಾದಿ Renisha Noronhaದಾರರು ತನ್ನ ಗಂಡನಾದ ಮೊಹಮ್ಮದ್ ಇಲಿಯಾಸ್ ಮತ್ತು ಮಗನೊಂದಿಗೆ ಮಂಗಳೂರು ನಗರದ ಕೆ.ಪಿ.ಟಿ. ವ್ಯಾಸ ನಗರದ ಶಾಂತಲಾ ಆಶಿಯಾನ ಫ್ಲಾಟ್ ನಂ 205 B ಎಂಬಲ್ಲಿ ವಾಸವಿರುವ ಸಮಯ ಪಿರ್ಯಾದಿದಾರರ ಮದುವೆ ಸಮಯದಲ್ಲಿ ತಾಯಿ ಮನೆಯವರು ನೀಡಿದ 25 ಪವನ್ ಚಿನ್ನ,  ತಾನು ದುಡಿದು ಮಾಡಿದ 5 ಪವನ್ ಚಿನ್ನ, ಫಿರ್ಯಾದುದಾರರ ತಾಯಿ ಮನೆಯವರು ಉಡುಗೊರೆಯಾಗಿ ಕೊಟ್ಟ 20 ಪವನ್ ಚಿನ್ನ ಮತ್ತು ಮದುವೆ ಸಮಯದಲ್ಲಿ ಹುಡುಗನ ಮನೆಯವರು ಉಡುಗೊರೆಯಾಗಿ ನೀಡಿದ ಸುಮಾರು 25 ಪವನ್ ಚಿನ್ನವನ್ನು ಹೀಗೆ ಒಟ್ಟು 75 ಪವನ್ ಚಿನ್ನವನ್ನು ಫಿರ್ಯಾದಿದಾರರು ಒಂದು ಲಾಕರ್ ಖರೀದಿಸಿ ಕಪಾಟಿನಲ್ಲಿ ಇಟ್ಟಿದ್ದು. ಸದ್ರಿ ಈ ವಿಷಯ  ಫಿರ್ಯಾದುದಾರರು ಮತ್ತು ಅವರ ಗಂಡನಾದ ಇಲಿಯಾಸ್ ನಿಗೆ ಮಾತ್ರ ತಿಳಿದಿರುತ್ತದೆ. ಸುಮಾರು ಸಮಯ ಲಾಕರ್ ನಲ್ಲಿರುವ ಬಂಗಾರವನ್ನು ಭದ್ರವಾಗಿದೆ ಎಂದು  ಭಾವಿಸಿ ನೋಡಲು ಹೋಗಿರುವುದಿಲ್ಲ. ಇತ್ತೀಚೆಗೆ ಏಫ್ರೀಲ್ ತಿಂಗಳ 2023 ರಲ್ಲಿ ಫಿರ್ಯಾದುದಾರರಿಗೆ ಮತ್ತು ಅವರ ಗಂಡನಿಗೆ ಜಗಳವಾಗಿ ಫಿರ್ಯಾದುದಾರರು ಮನೆಯಿಂದ ಹೊರ ಬಂದು ತಾಯಿ ಮನೆಯಲ್ಲಿ ವಾಸವಿರುವ ಸಮಯ ವಾರಕ್ಕೊಮ್ಮೆ ಸದ್ರಿ ಫ್ಲಾಟ್ ಗೆ ಹೋಗಿ ಬರುತ್ತಿದ್ದು, ಸಮಾರು ಒಂದು ತಿಂಗಳ ನಂತರ ಫ್ಲಾಟ್ ಗೆ ಹೋಗಿ ವಾಚ್ ಮ್ಯಾನ್ ಬಳಿ ವಿಚಾರಿಸಲಾಗಿ  ಗಂಡ ಫ್ಲಾಟ್ ಗೆ ಬಾರದೇ ಒಂದು ವಾರವಾಗಿರುತ್ತದೆ ಎಂದು ತಿಳಿಸಿದಾಗ ಫಿರ್ಯಾದಿಯವರು ಅನುಮಾನಗೊಂಡು ಮನೆಯ ಬಂಗಾರ ಇಟ್ಟ ಲಾಕರ್ ಕಪಾಟಿನಲ್ಲಿ ನೋಡಿದಾಗ ಲಾಕರ್ ಸಮೇತ ಚಿನ್ನ ಇರಲಿಲ್ಲ ಇದರ ಬಗ್ಗೆ ಗಂಡನಿಗೆ ಪದೇ ಪದೆ ಕರೆ ಮಾಡಿ ವಿಚಾರಿಸಲಾಗಿ ಕರೆ ಸ್ವೀಕರಿಸಲಿಲ್ಲ. ಮೂರು ದಿನಗಳ ನಂತರ ಕರೆ ಸ್ವೀಕರಿಸಿ “ ನಾನು ಲಾಕರ್ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿರುತ್ತೇನೆ ನಿನಗೆ ಏನು ಮಾಡಲಾಗುತ್ತದೆ ಎಂದು ಅದನ್ನು ಮಾಡು ಎಂದು ಹೇಳಿರುತ್ತಾರೆ. ಅಲ್ಲದೆ ಸದರಿ ಚಿನ್ನವನ್ನು ಬ್ಯಾಂಕಿನಲ್ಲಿ ಸುಮಾರು 28.5 ಲಕ್ಷಕ್ಕೆ ಅಡವಿಟ್ಟು ಹಣ ಪಡೆದುಕೊಂಡಿರುವುದಾಗಿ ಹಾಗು ಅದಕ್ಕೆ ಬಡ್ಡಿ ಕಟ್ಟಲು ಆಗದೇ ಪ್ರಭಾಕರ್ ಎಂಬವರಿಗೆ ಮೂರು ತಿಂಗಳ ಮಟ್ಟಿಗೆ ಬಡ್ಡಿಯನ್ನು ಕಟ್ಟಲು ಅನುಮತಿ ನೀಡಿರುವುದಾಗಿ ಮತ್ತು ಅಡವಿಟ್ಟ ಚಿನ್ನದಲ್ಲಿ ಪ್ರಭಾಕರನು ಮೂರು ತಿಂಗಳಾಗುವ ಮೊದಲು ಸುಮಾರು 12 ಲಕ್ಷದಷ್ಟು ಚಿನ್ನವನ್ನು ಬಿಡಿಸಿ ಕರಗಿಸಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಆದುದರಿಂದ ಇಲಿಯಾಸ್ ಮತ್ತು ಪ್ರಭಾಕರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಮತ್ತು ಚಿನ್ನವನ್ನು ಹಿಂತಿರುಗಿಸಬೇಕಾಗಿ ಎಂಬಿತ್ಯಾದಿ.

Mangalore North PS ..                                  

ಪಿರ್ಯಾದಿದಾರರಾದ ಶ್ರೀಮತಿ ಶೋಭಾ ರವರಿಗೆ ಸಂಬಂಧಿಸಿದ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದಲ್ಲಿರುವ ಸರ್ವೆ ನಂಬ್ರ 10ಇ4 ರಲ್ಲಿರುವ 5-75 ಸೆಂಟ್ಸ್ ಜಾಗದ ದಾಖಲಾತಿಯನ್ನು ಪಿರ್ಯಾದಿದಾರರ ಗಂಡ ಆನಂದ ಸಾಲ್ಯಾನ್ ರವರು ಹೊಂದಿರುವ ಮಂಗಳೂರು ನಗರದ ಹಂಪನ್ ಕಟ್ಟೆಯಲ್ಲಿರುವ ನಲಪಾಡ್ ಟವರ್ಸ್ ನಲ್ಲಿರುವ  ಕಛೇರಿಯಿಂದ ಕಳವು ಮಾಡಿಕೊಂಡು 1ನೇ ಆರೋಪಿ ಕಾರ್ತಿಕ್ ಶೆಟ್ಟಿ @ ಕಾರ್ತಿಕ್ ಎಂಬವರು ಸುಳ್ಳಾಗಿ ನಕಲಿ ಸಾಮಾನ್ಯ ಅಧಿಕಾರ ಪತ್ರವನ್ನು ಆರೋಪಿಗಳಾದ 2ನೇ ಮನೋಜ್ ಬಿ. ಕೋಟ್ಯಾನ್ ಮತ್ತು 3ನೇ ಆರೋಪಿತಯು. ಧರ್ಮದಾಸ್ ವಕೀಲರು ಇವರುಗಳ ಸಹಾಯದಿಂದ ತಯಾರಿಸಿ 1ನೇ ಆರೋಪಿಯು ನಕಲಿ ಅಧಿಕಾರ ಪತ್ರವನ್ನು ತಯಾರಿಸಿ ಸುಳ್ಳು ದಸ್ತಾವೇಜನ್ನು ಮಂಗಳೂರು ಉನೊಂದಣಿ ಕಛೇರಿಯಲ್ಲಿ ದಿನಾಂಕ: 28-02-2022 ರಂದು ತಯಾರಿಸಿದ್ದು  2ನೇ ಆರೋಪಿಯು  1ನೇ ಆರೋಪಿಯ ಎಲ್ಲಾ ಕೃತ್ಯಗಳಿಗೆ  ಸಹಕಾರ ನೀಡಿದವನಾಗಿದ್ದು, 3ನೇ ಆರೋಪಿಯು ನಕಲಿ ಸಾಮಾನ್ಯ ಅಧಿಕಾರ ಪತ್ರವನ್ನು ಮಾಡಿಕೊಟ್ಟು ಮೂರು ಜನ ಆರೋಪಿತರುಗಳು ಸೇರಿ ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡುವ ಉದ್ದೇಶದಿಂದ ಈ ಸಾಮಾನ್ಯ ಅಧಿಕಾರ ಪತ್ರ ಮತ್ತು ಇತರ ದಾಖಲೆ ಪತ್ರಗಳನ್ನು ಸುಳ್ಳಾಗಿ ಸೃಷ್ಟಿಸಿ ಬೇರೊಂದು ಸಂಸ್ಥೆಯಲ್ಲಿ ಅಡವು ಇಟ್ಟು ಪಿರ್ಯದಿದಾರರಿಗೆ ನಷ್ಟವುಂಟು ಮಾಡಿರುತ್ತಾರೆ ಎಂಬಿತ್ಯಾದಿ

Traffic South Police Station                  

ದಿನಾಂಕ: 07-08-2023 ರಂದು ಫಿರ್ಯಾದಿ THOMAS KOREYA ದಾರರು ತನ್ನ ಪತ್ನಿ ಶ್ರೀಮತಿ ಪ್ಲೇವಿಯ ಹಾಗೂ ಮಗ ರೋಬಿನ್ ಕೊರೆಯ ಜೊತೆ ತೊಕ್ಕೊಟ್ಟು ಹೋಗುವರೇ ಬಬ್ಬುಕಟ್ಟೆ ಶಾಲೆಯ ಬಳಿ ಇರುವ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಸಮಯ ಸುಮಾರು 19-45 ಗಂಟೆಗೆ ಕುತ್ತಾರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುವ KA-19-HE-0194 ನೇ ನಂಬ್ರದ ಡೊಮಿನೋಸ್ ಕಂಪನಿಗೆ ಸೇರಿದ ಮೊಟಾರ್ ಸೈಕಲ್ ಸವಾರ ಧನರಾಜ್ ಎಂಬಾತನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಪತ್ನಿ ಶ್ರೀಮತಿ ಪ್ಲೇವಿಯ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಎಡಕೈ, ಎಡಕಾಲು, ಕಿವಿಗೆ, ಬಲಕೈಯ ಮುಂಗೈಗೆ ತರಚಿದ ಗಾಯ ಮತ್ತು ಗುದ್ದಿದ ಗಾಯ ಹಾಗೂ ಹಣೆಯ ಎಡಬದಿಗೆ ಸೀಳು ಗಾಯವಾಗಿರುತ್ತದೆ. ಫಿರ್ಯಾದಿದಾರರ ಪತ್ನಿಯ ಚಿಕಿತ್ಸಾ ವೆಚ್ಚವು ಜಾಸ್ತಿಯಾಗಿರುವುದರಿಂದ ಪತ್ನಿ ಹಾಗೂ ಮಗನ ಜೊತೆ ಚರ್ಚಿಸಿ ದೂರು ನೀಡಲು ವಿಳಂಬವಾಗಿರುತ್ತದೆ ಎಂಬಿತ್ಯಾದಿ.

Bajpe PS

ದಿನಾಂಕ- 07-08-2023 ರಂದು ಸಂಜೆ 5-00 ಗಂಟೆಗೆ  ಫಿರ್ಯಾದಿ Mahammed Ashraf

ದಾರರು ಸ್ಕೂಟರ್ ನಂಬ್ರ KA 19 HJ 5063 ನೇದರಲ್ಲಿ  ಸಹ ಸವಾರರಾಗಿ ಕುಳಿತುಕೊಂಡು ಕೈಕಂಬದಿಂದ ಅದ್ಯಪಾಡಿ ರಸ್ತೆಯಿಂದಾಗಿ  ಕೆಂಜಾರು ಕಡೆಗೆ ಹೋಗುತ್ತಾ ಸ್ಕೂಟರ್ ಸವಾರ ಮಹಮ್ಮದ್ ಅಲ್ತಾಫ್ ಎಂಬವರು ಮಂಗಳೂರು ತಾಲೂಕಿನ, ಅದ್ಯಪಾಡಿ ಗ್ರಾಮದ ಅದ್ಯಪಾಡಿ ಶಾಲೆಯ ಬಳಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸವಾರನ  ನಿಯಂತ್ರಣ ತಪ್ಪಿ ರಸ್ತೆಯಲ್ಲಿ  ಮಗುಚಿ ಬಿದ್ದ ಪರಿಣಾಮ ಸಹ ಸವಾರರ ಬಲಕಾಲಿನ ಮೊಣ ಗಂಟಿಗೆ ಗುದ್ದಿದ ಗಾಯವಾಗಿರುತ್ತದೆ.  ಸದ್ರಿಯವರು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Ullal PS

ಪಿರ್ಯಾದಿ H Prakash Kolya ದಾರರು ಕೊಲ್ಯ ಶ್ರೀ ಶಾರದಾ ಸೇವಾ ಟ್ರಸ್ಟ್ ನಲ್ಲಿ ಅಧ್ಯಕ್ಷರಾಗಿದ್ದು ಕೊಲ್ಯ ಸೇವಾ ಟ್ರಸ್ಟ್ ನ ನೂತನ ಕಟ್ಟಡದ ಕನ್ ಸ್ಟ್ರಕ್ಷನ್ ಕಾಮಗಾರಿ ನಡೆಯುತ್ತಿದ್ದು ಮೇಲ್ಛಾವಣಿಯ ಕಾಂಕ್ರೀಟ್ ಕೆಲಸದ ನಿಮಿತ್ತ ದಿನಾಂಕ- 07/08/2023 ರಂದು ಸೆಂಟ್ರಿಂಗ್ ಕೆಲಸದ ಬಗ್ಗೆ ಸೆಂಟ್ರಿಂಗ್ ಶೀಟ್ ಗಳನ್ನು ತಂದು ನಿರ್ಮಾಣ ಹಂತದ ಕಟ್ಟಡದ ಎದುರು ಇಟ್ಟಿದ್ದು ಈ ದಿನ ಒಳಗೆ ನೋಡುವಾಗ  ಸೆಂಟ್ರಿಂಗ್ ಕೆಲಸಕ್ಕೆ ತಂದಿದ್ದ ಸುಮಾರು 120 ಕಬ್ಬಿಣದ ಶೀಟ್ ಗಳನ್ನು ಯಾರೋ ಕಳ್ಳರು ದಿನಾಂಕ- 07/08/2023 ರಂದು ಸಾಯಂಕಾಲ 7:00 ಗಂಟೆಯಿಂದ 08/08/2023 ರಂದು ಬೆಳಿಗ್ಗೆ 08:00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ ಕಳುವಾದ ಸೆಂಟ್ರಿಂಗ್ ಶೀಟಿನ ಅಂದಾಜು ಮೌಲ್ಯ 2,50,000/- ಆಗಬಹುದು ಎಂಬುದಾಗಿ ಪಿರ್ಯಾದಿದಾರರ ಸಾರಾಂಶವಾಗಿರುತ್ತದೆ

 

ಇತ್ತೀಚಿನ ನವೀಕರಣ​ : 21-08-2023 02:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080