ಅಭಿಪ್ರಾಯ / ಸಲಹೆಗಳು

Crime Report in :Traffic South Police Station     

 ದಿನಾಂಕ 07-09-2023 ರಂದು ಪಿರ್ಯಾದಿ NAMITHESH ತನ್ನ ಬಾಬ್ತು ನಂಬ್ರ KA-19-HJ-2119 ಬೈಕ್ ನಲ್ಲಿ ಸಹ ಸವಾರರಾಗಿ ತನ್ನ ತಾಯಿ ದೇವಕಿಯವರೊಂದಿಗೆ ಸಜೀಪ ಗೆ ಹೋಗಿ ಕಾರ್ಯಕ್ರಮ ಮುಗಿಸಿ ವಾಪಸ್ಸು ಬರುವ ಸಮಯ ಸುಮಾರು 04.30 ಗಂಟೆಗೆ ಚೇಳೂರು ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬೈಕ್ ನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರನ್ನು ಪಿರ್ಯಾದಿದಾರರು ಓವರ್ ಟೇಕ್ ಮಾಡುತ್ತಿದ್ದಂತೆ ಕಾರಿನ ಚಾಲಕನು ಯಾವುದೇ ಸೂಚನೆ ನೀಡದೆ ಅತನ ಬಲಬದಿಗೆ ಅಂದರೆ ರಸ್ತೆ ಮಧ್ಯಕ್ಕೆ ಓಮ್ಮೆಲೆ ಅತಿ ವೇಗದಿಂದ ಅಜಾಗರುಕತೆಯಿಂದ ಕಾರನ್ನು ಚಲಾಯಿಸಿದ್ದು ಪಿರ್ಯಾದಿದಾರ ಬೈಕ್ ಕಾರನ್ನು ಓವರ್ ಟೇಕ್ ಮಾಡುವಷ್ಟರಲ್ಲಿ ಬೈಕ್ ನ ಹ್ಯಾಂಡಲ್ ಗೆ  ಕಾರು ತಾಗಿ ನೆಲಕ್ಕೆ ಬಿದ್ದು ಪಿರ್ಯಾದಿದಾರರಿಗೆ ಎಡಕಾಲಿನ ಹಿಂಬದಿ ಪಾದಕ್ಕೆ ಗುದ್ದಿದ ಗಾಯ ಹಾಗೂ ಸಹ ಸವಾರರಾಗಿದ್ದ ಪಿರ್ಯಾದಿಯ ತಾಯಿಗೆ ಬಲಕಾಲಿನ ಮೊಣಗಂಟು, ಎಡ ಹಣೆಗೆ ಗುದ್ದಿದ ಗಾಯವಾಗಿದ್ದು ನಂತರ ಕಾರಿನ ಚಾಲಕನ್ನು ಉಪಚರಿಸಿ ಕಣಚೂರು ಆಸ್ಪತ್ರೆ ದೇರಳಕಟ್ಟೆಗೆ ಅಟೋರಿಕ್ಷಾದಲ್ಲಿ ಕಳುಹಿಸಿಕೊಟ್ಟು ಅವರು ತೆರಳಿದ್ದು, ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಪಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಪಿರ್ಯಾದಿದಾರರು ಅಪಘಾತ ಪಡಿಸಿದ ಕಾರನ್ನು ಅಪಾಘಾತ ಪಡಿಸಿದ ಸ್ಥಳದಲ್ಲಿ ನೋಡಲಾಗಿ KA-70-M-1829 ನಂಬ್ರ ಆಗಿದ್ದು ಈ ಅಪಾಘಾತಕ್ಕೆ ಕಾರು ಚಾಲಕನ ದುಡುಕುತನ ಮತ್ತು ನಿರ್ಲಕ್ಷತನವೇ ಕಾರಣವಾಗಿರುತ್ತದೆ, ಎಂಬಿತ್ಯಾದಿ.

Traffic South Police Station                      

 ದಿನಾಂಕ 08.09.2023 ರಂದು ಪಿರ್ಯಾದಿ RASHMI RITA DESA  ತಮ್ಮ ಇಬ್ಬರು ಮಕ್ಕಳು ಮತ್ತು ಗಂಡ ಸಂತೋಷ್ ರಾಜೇಶ್ ಫೆರಾವೋ ರೊಂದಿಗೆ KA-19-HF-5545 ನಂಬ್ರದ ಮೋಟರ್ ಸೈಕಲ್ ನಲ್ಲಿ ಕುಳಿತುಕೊಂಡು  ಪಿರ್ಯಾದಿದಾರರ ತನ್ನ ತಾಯಿ ಮನೆಯಿಂದ ಬೋಂದೇಲ್ ಕಡೆಗೆ ಹೋಗುವ ಸಮಯ ಸುಮಾರು 01.30 ಗಂಟೆಗೆ  ಎಲೋಶಿಯಸ್ ಕಾಲೇಜು್ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಬೀರಿ ಕಡೆಯಿಂದ ಮಾಡೂರು ಕಡೆಗೆ ಬರುತ್ತಿದ್ದ KA-19-AD-5453 ನಂಬ್ರದ ಆಟೋ ರಿಕ್ಷಾದ  ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಚಲಾಯಿಸುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು, ಅವರ ಮಕ್ಕಳು ಮತ್ತು ಮೊಟಾರ್ ಸೈಕಲ್ ಸವಾರ ಮೊಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸಹಾಸವಾರರಾದ ಪಿರ್ಯಾದಿದಾರಿಗೆ ಬಲ ಕಾಲಿನ ಗಂಟಿಗೆ, ಎಡ ಕೈ ಗಂಟಿಗೆ ರಕ್ತ ಗಾಯ, ಪಿರ್ಯಾದಿದಾರರ ಗಂಡನಿಗೆ ಬಲಗಾಲಿನ ಗಂಟಿಗೆ, ಪಾದಕ್ಕೆ, ಕಾಲಿನ ಐದು ಬೆರಳಿಗೆ ತೀರ್ವ ರಕ್ತ ಗಾಯವಾಗಿದ್ದು,ಮಕ್ಕಳಿಗೆ ಯಾವುದೇ ಗಾಯವಾಗಿರುವುದಿಲ್ಲ, ನಂತರ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಆಟೋ ರಿಕ್ಷಾ ಚಾಲಕನು ಆಟೋರಿಕ್ಷವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಚಿಕಿತ್ಸೆ ನೀಡಿದ ವೈದ್ಯರು ಪಿರ್ಯಾದಿದಾರರ ಗಂಡನನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

CEN Crime PS Mangaluru City  

ಪಿರ್ಯಾದಿದಾರರು ದಿನಾಂಕ 01-09-2023 ರಂದು ಮದ್ಯಾಹ್ನ 1:26 ಗಂಟೆಗೆ ತಮ್ಮ ಮೊಬೈಲ್ ನಲ್ಲಿರುವ ಟೆಲಿಗ್ರಾಂ ಆಪ್ ನಲ್ಲಿ ಐ-ಗ್ಲೋಬಲ್ ಕಂಪನಿಯಿಂದ ಏಜೆಂಟ್ ನಿತೀಶ ಸಾವಂತ್ ಎಂಬವರು ಎಸ್ ಎಂ ಎಸ್ ನ್ನು ಪಿರ್ಯಾದಿದಾರರ ಮೊಬೈಲ್ ಗೆ ಕಳುಹಿಸಿದ್ದು, ಅದರಂತೆ ಪ್ರಾಡೆಕ್ಟ್ ಪ್ರಮೋಟಿಂಗ್ ಮಾಡಿದರೆ ಕಮೀಷನ್ ನೀಡುವುದಾಗಿ ಪಿರ್ಯಾದಿದಾರರಿಗೆ ತಿಳಿಸಿ ಯಾರೋ ಅಪರಿಚಿತ ಏಜೆಂಟ್ ಎಂದು ಹೇಳಿಕೊಂಡು ಪಿರ್ಯಾದಿದಾರರಿಗೆ https://platformreview.net ಲಿಂಕ್ ಗೆ ಲಾಗಿನ್ ಆಗುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಲಾಗಿನ್ ಆದಾಗ, ಪಿರ್ಯಾದಿದಾರರನ್ನು ಗ್ರೂಪ್ ಗೆ ಜಾಯಿನ್ ಮಾಡಿಕೊಂಡಿರುತ್ತಾರೆ. ನಂತರ ಸದ್ರಿ ವ್ಯಕ್ತಿಯು ರೂ.10,000/- ಹಣವನ್ನು ಪಾವತಿಸುವಂತೆ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ತಮ್ಮ ಕೆನರಾ ಬ್ಯಾಂಕ್ ಖಾತೆ ನಂಬ್ರ ನೇದರಿಂದ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ಅಪರಿಚಿತ ಖಾತೆಯಿಂದ 16,900/- ರೂ ಹಣ ಜಮಾ ಆಗಿರುತ್ತದೆ.  ಇದೇ ರೀತಿ ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು, ಸತತ 7 ದಿನ ಹೂಡಿಕೆ ಮಾಡಿದರೆ ಏಜೆಂಟ್ ಆಗಬಹುದು ಎಂದು ತಿಳಿಸಿರುತ್ತಾರೆ. ಅದನ್ನು ನಂಬಿದ ಪಿರ್ಯಾದಿದಾರರು ಸದರಿ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಹಂತಹಂತ ವಾಗಿ ತಮ್ಮ ಐಸಿಐಸಿಐ ಬ್ಯಾಂಕ್ ಅಕೌಂಟ್ ನಂಬ್ರ  ನೇದರಿಂದ ಹಾಗೂ ಪೇಟಿಎಂ ಖಾತೆಯಿಂದ ಅಪರಿಚಿತನ ಬ್ಯಾಂಕ್ ಖಾತೆಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ನಂಬ್ರಗಳಾದ 6562002100004895, 4669002100002248, 0963002100015184, 0865002100019514 ಹಾಗೂ ಐಸಿಐಸಿಐ ಬ್ಯಾಂಕ್ 737605000594, 395705004194, 182305500459 ನೇದವುಗಳಿಗೆ ರೂ 7,76,351/- ಹಣವನ್ನು ಆರೋಪಿತರ ವಿವಿಧ ಬ್ಯಾಂಕ್ ಖಾತೆಗಳಿಗೆ  ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ 

 

ಇತ್ತೀಚಿನ ನವೀಕರಣ​ : 11-09-2023 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080