ಅಭಿಪ್ರಾಯ / ಸಲಹೆಗಳು

Crime Report in  : CEN Crime PS

ದಿನಾಂಕ 04-11-2023 ರಂದು ಪಿರ್ಯಾದಿದಾರರ ವಾಟ್ಸಾಪ್ ನಂಬರ್ ಗೆ +84334590184 ನಂಬ್ರದಿಂದ ಮೇಸೆಜ್ ಬಂದಿದ್ದು, ಸದ್ರಿ ಮೇಸೆಜ್ ನಲ್ಲಿದ್ದ https://t.me/khkf021 ಎಂಬ ಲಿಂಕ್ ನ್ನು ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ ನಲ್ಲಿ ಒಂದು ಗ್ರೂಪ್ ಗೆ ಸೇರಿಸಲಾಗಿರುತ್ತದೆ. ನಂತರ ಪಿರ್ಯಾದಿದಾರರಿಗೆ ಸ್ಟಾರ್ ರೇಟಿಂಗ್ ಎಂಬ ಟಾಸ್ಕ್ ನ್ನು ನೀಡಲಾಗಿದ್ದು, ಅದನ್ನು ಪಿರ್ಯಾದಿದಾರರು ಮೊದಲು 5,000/- ಹಣವನ್ನು ಹಾಕಿದ್ದು, ನಂತರ ಪಿರ್ಯಾದಿದಾರರ ಖಾತೆಗೆ 6,500/- ರೂ ಹಣವನ್ನು ಜಮಾ ಮಾಡಿರುತ್ತಾರೆ. ನಂತರ ಗ್ರೂಪ್ ಮರ್ಚೆಂಟ್ ಟಾಸ್ಕ್ ಎನ್ನುವ ಮಿಷನ್ ನ್ನು ಪೂರ್ಣಗೊಳಿಸಬೇಕು ಇದಕ್ಕೆ ಹಣ ಸಂದಾಯ ಮಾಡಬೇಕೆಂದು ಹೇಳಿ ಪಿರ್ಯಾದಿದಾರರಿಂದ ಹಂತ-ಹಂತವಾಗಿ ದಿನಾಂಕ 04-11-2023 ರಿಂದ 07-11-2023 ರವರೆಗೆ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರ ಖಾತೆಯಿಂದ ಹಂತ ಹಂತವಾಗಿ ಒಟ್ಟು 21,51,000/- ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

Traffic South Police Station                                                       

ಫಿರ್ಯಾದಿದಾರರು ದಿನಾಂಕ: 20-10-2023 ರಂದು KA-19-EQ-6023 ನೇ ನಂಬ್ರದ ಮೊಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ತನ್ನ ಮನೆಯಾದ ರಾಜೀವ ನಗರದಿಂದ ನಂತೂರು ಕಡೆಗೆ ಹೋಗಲು ಕಾರ್ಮಿಕ ಕಾಲೋನಿ ಬಳಿ ಇರುವ ಬಸ್ ಸ್ಟಾಂಡ್ ಎದುರು ತಲುಪುತ್ತಿದ್ದಂತೆ ಫಿರ್ಯಾದಿದಾರರ ಎದುರಿನಿಂದ ಅಂದರೆ ಬಿಕರ್ಣಕಟ್ಟೆ ಕಡೆಯಿಂದ ಬರುತ್ತಿದ್ದ KA-19-EV-6310 ನೇ ಸ್ಕೂಟರ್ ಸವಾರನಾದ ದತ್ತ ಪ್ರಕಾಶ ಎಂಬವರು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಸ್ಕೂಟರ್ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಮೊಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ  ಪರಿಣಾಮ ಫಿರ್ಯಾದಿದಾರರು ಮೊಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಮುಖದ ಬಲ ಭಾಗಕ್ಕೆ ಗುದ್ದಿದ ರಕ್ತ ಗಾಯ, ಬಲಗಾಲು ಗಂಟಿಗೆ  ಹಾಗೂ ಬಲಕೈ ಗಂಟಿಗೆ ಗುದ್ದಿದ ತರಚಿದ ನಮೂನೆಯ ಗಾಯವಾಗಿದ್ದು, ಅಲ್ಲಿ ಸೇರಿದ್ದ ಸಾರ್ವಜನಿಕರು ಅಲ್ಲೆ ಪಕ್ಕದಲ್ಲಿದ್ದ ಗೌತಮ್ ಶೆಟ್ಟಿ ಖಾಸಗಿ ಕ್ಲೀನಿಕ್ ಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದು, ಫಿರ್ಯಾದಿದಾರರು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹೋಗಿರುತ್ತಾರೆ. ದಿನಾಂಕ: 22-10-2023 ರಂದು ಮುಖ ಮತ್ತು ಕಾಲು ಊದಿಕೊಂಡದ್ದರಿಂದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ  ಚಿಕಿತ್ಸೆ ಪಡೆಕೊಂಡಿದ್ದು, ದಿನಾಂಕ: 01-11-2023 ರಂದು ನೋವು ಕಡಿಮೆಯಾಗದ ಕಾರಣ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈಧ್ಯರು ಬಲದವಡೆ ತೀವ್ರವಾಗಿ ಮುರಿದಿರುವುದಾಗಿ ತಿಳಿಸಿದ್ದರಿಂದ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Mangalore East PS

 ದಿನಾಂಕ: 07-11-2023 ರಂದು ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ, ಮಂಗಳೂರು ನಗರ ಪೊಲೀಸ್‌ ಕೇಂದ್ರ ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್‌ ಟಿ ಆರ್ ಪಿಎಸ್‌ಐ ಮಂಗಳೂರು ಉತ್ತರ ಪೊಲೀಸ್ ಠಾಣೆ, Anti Drug Team ನ ಸಿಬ್ಬಂದಿಗಳಾದ ಪೂರ್ವ ಪೊಲೀಸ್ ಠಾಣೆಯ ರಮೇಶ್ ಮತ್ತು  ದೇವರಾಜ ಹರವಿ ಅವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಸಂಜೆ 18.30 ಗಂಟೆಗೆ ಕಂಕನಾಡಿ ಬಳಿ ತಲುಪಿದಾಗ ಒಬ್ಬ ವ್ಯಕ್ತಿಯು ಆಮಲ ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಆತನನ್ನು ಕಂಡು ನಾವು ವಿಚಾರಿಸಲಾಗಿ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಸೇವನೆ ಮಾಡಿದ ವಾಸನೆ ಆತನ ಬಾಯಿಯಿಂದ ಬರುತ್ತಿದ್ದು, ನಾಲಿಗೆ ತೊದಲುತ್ತಾ ತನ್ನ ಹೆಸರು ಶೋನ್ ಜೋಯ್ ಪ್ರಾಯ: 19 ವರ್ಷ ವಾಸ: ಅರಿಕಲ್ ಮನೆ ತೆಂಕರನ್ದುರು ಬೆಳ್ತಂಗಡಿ ತಾಲೂಕ್ ದಕ್ಷಿಣ ಕನ್ನಡ ಎಂಬುದಾಗಿ ತಿಳಿಸಿದ್ದು ಎ.ಜೆ. ಆಸ್ಪತ್ರೆ ಕುಂಟಿಕಾನ ಮಂಗಳೂರು ಇವರ ಮುಂದೆ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಿ ವರದಿ ನೀಡುವಂತೆ ಕಳುಹಿಸಿ ಕೊಟ್ಟಿದ್ದು ವೈದ್ಯಾಧಿಕಾರಿಯವರು ಈತನನ್ನು ಪರೀಕ್ಷಿಸಿ TETRAHYDARCANNABINOID (MARIJUANA) POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಆದುದರಿಂದ ಈತನು ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿರುವುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ರಾತ್ರಿ 21:30 ಗಂಟೆಗೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 08-11-2023 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080