ಅಭಿಪ್ರಾಯ / ಸಲಹೆಗಳು

Crime Report in : Traffic North Police Station    

ಪಿರ್ಯಾದಿ Smt Geetha Salian ದಿನಾಂಕ:07-12-2023 ರಂದು ನಿಗಿದಿತ ಸಮವಸ್ತ್ರ ಧರಿಸಿಕೊಂಡು ಮೂಲ್ಕಿ ಜಂಕ್ಷನಿನ ಪಂಚಮಹಲ್ ಕ್ರಾಸ್ ಬಳಿ NH 66 ನೇ ಡಾಮಾರು ರಸ್ತೆ ಮತ್ತು ಸರ್ವೀಸ್ ರಸ್ತೆಯ ಡಿವೈಡರ್ ಬಳಿ ನಿಂತುಕೊಂಡು ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿಕೊಂಡಿದ್ದಾಗ ಬೆಳಿಗ್ಗೆ ಸಮಯ ಸುಮಾರು 09:30 ಗಂಟೆಗೆ ಬಪ್ಪನಾಡು ಜಂಕ್ಷನ್ ಕಡೆಯಿಂದ KA-19-AC-3423 ನಂಬ್ರದ ಅಶೋಕ್ ಲೆಲ್ಯಾಂಡ್ ಟ್ರಕ್ ವಾಹನವನ್ನು ಅದರ ಚಾಲಕನಾದ ಮಂಜುನಾಥ  ಎಂಬಾತನು ಅಮಲು ಪದಾರ್ಥ ಸೇವನೆ ಮಾಡಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ NH 66ನೇ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವಂತೆ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ದಾರರು ಕರ್ತವ್ಯ ನಿವರ್ಹಿಸಿಕೊಂಡು ನಿಂತಿದ್ದ ಡಿವೈಡರ್ ಮೇಲೆ ಟ್ರಕ್ಕಿನ ಎದುರಿನ ಎಡಬದಿಯ ಚಕ್ರ ಹತ್ತಿ ಮುಂದಕ್ಕೆ ಸಾಗಿ ಸರ್ವೀಸ್ ರಸ್ತೆಯ ಕಡೆಗೆ ಚಲಿಸುವ ವೇಳೆ ಟ್ರಕ್ಕಿನ ಹಿಂದಿನ ಎಡಬದಿ ಬಾಡಿಯು ಪಿರ್ಯಾದಿದಾರರ ಬಲ ಕೈಯ ಮೊಣಗಂಟಿಗೆ ಡಿಕ್ಕಿ ಪಡಿಸಿಕೊಂಡು ಮುಂದಕ್ಕೆ ಹೋಗುತ್ತಾ ಸರ್ವೀಸ್ ಡಾಮಾರು ರಸ್ತೆಯಲ್ಲಿ ವಿಜಯ ಸನ್ನಿದಿ ಕಡೆಗೆ ಸಂಗಪ್ಪ ರವರು ಚಲಾಯಿಸಿಕೊಂಡು ಹೋಗುತ್ತಿದ್ದ KA-09-EQ-3418 ನಂಬ್ರದ ಸ್ಕೂಟರಿನ ಹಿಂಬಾಗಕ್ಕೆ ಡಿಕ್ಕಿ ಪಡಿಸಿಕೊಂಡು ಟ್ರಕ್ ಇನ್ನೂ ಮುಂದಕ್ಕೆ ಎಡಬದಿಗೆ ಚಲಿಸಿ ಸರ್ವೀಸ್ ರಸ್ತೆಯ ಎಡಬದಿಯಲ್ಲಿ ಪಾರ್ಕ್ ಮಾಡಿ ನಿಲ್ಲಿಸಿದ್ದ ಧರ್ಮೇಂದ್ರ ರವರ KA-19-AD-8747 ನಂಬ್ರದ ಅಟೋರಿಕ್ಷಾದ ಹಿಂಬಾಗಕ್ಕೆ ಡಿಕ್ಕಿ ಪಡಿಸಿಕೊಂಡು ಟ್ರಕ್ ಅದೇ ವೇಗದಲ್ಲಿ ಮುಂದಕ್ಕೆ ಬಲಬದಿಗೆ ಚಲಿಸಿ ಪುನಃ ಡಿವೈಡರ್ ಮೇಲೆ ಹತ್ತಿ NH 66ನೇ ಡಾಮಾರು ರಸ್ತೆಗೆ ಚಲಿಸಿ ನಿಂತಿದ್ದು,ಈ ಅಪಘಾತದಿಂದ ಪಿರ್ಯಾದಿದಾರರ ಬಲ ಕೈಯ ಮೊಣಗಂಟಿಗೆ ಚರ್ಮ ಹರಿದ ರಕ್ತಗಾಯವಾಗಿದ್ದು,  ಅಪಘಾತಕ್ಕೊಳಪಟ್ಟ ಸ್ಕೂಟರ್ ಸವಾರ ಸಂಗಪ್ಪ ರವರ ತಲೆಯ ಮೇಲ್ಬಾಗ ನೆತ್ತಿಯಲ್ಲಿ ಚರ್ಮ ಹರಿದ ರಕ್ತ ಗಾಯವಾಗಿ ಎಡ ಕೈ ತೋಳು ಬಾಗದಲ್ಲಿ ಮೂಳೆ ಮುರಿತಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹಾಗೂ ಸ್ಕೂಟರಿನಲ್ಲಿ ಸಹ ಸವಾರೆಯಾಗಿ ಕುಳಿತಿದ್ದ ಸವಿತಾ ರವರ ಬಲಕಣ್ಣಿನ ಕೆಳಬಾಗ ಹಾಗೂ ಹಣೆಯಲ್ಲಿ ಗುದ್ದಿದ ರೀತಿಯ ಗಾಯವಾಗಿದ್ದು ಅಲ್ಲದೇ ಅಪಘಾತಕ್ಕೊಳಪಟ್ಟ ಅಟೋ ರಿಕ್ಷಾದ ಚಾಲಕ ದರ್ಮೇಂದ್ರ ರವರಿಗೆ ಮೈ ಕೈಗೆ ಗುದ್ದಿದ ನೋವು ಆಗಿದ್ದು, ಗಾಯಾಳುಗಳ ಪೈಕಿ ಸಂಗಪ್ಪ ಹಾಗೂ ಸವಿತಾ ರವರು ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿಯೂ, ಪಿರ್ಯಾದಿದಾರರು ಹಾಗೂ ಆಟೋರಿಕ್ಷಾ ಚಾಲಕ ಧರ್ಮೇಂದ್ರ ರವರು ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

Kankanady Town PS

ಪಿರ್ಯಾದು Swathi ಮತ್ತು ಅವರ ತಂಗಿ ಶೃತಿ, ಹಾಗೂ ಅಣ್ಣ ತಿಲಕರಾಜ್ ರವರು ಜೊತೆಯಲ್ಲಿ ಸುಮಾರು 2 ವರ್ಷಗಳಿಂದ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ ಅಣ್ಣ ಮೀನು ಮಾರಾಟ ಕೆಲಸ ಮಾಡಿಕೊಂಡಿದ್ದರು. ದಿನಾಂಕ:06.12.2023 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಪಿರ್ಯಾದುದಾರರ ಅಣ್ಣ ತಿಲಕರಾಜ್ ರವರು ಪಿರ್ಯಾದುದಾರರ ತಂಗಿ ಶೃತಿ ಹತ್ತಿರ ತಿಲಕರಾಜ್ ಮದುವೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ನಂತರ ಸೂಟರ್ ಪೆಟೆಯಲ್ಲಿರುವ ಪಿರ್ಯಾದುದಾರರ ಅತ್ತೆ ಶಶಿರೇಖಾ ಎಂಬುವರ ಮನೆಗೆ ಹೋಗಿ ಅಲ್ಲಿಂದ ತರುಣ್ ಎಂಬುವರಿಂದ ಸ್ಕೂಟರ್ ನಲ್ಲಿ ಗೋರಿಗುಡ್ಡೆ ಪೆಟ್ರೊಲ್ ಪಂಪ್ ವರೆಗೆ ಡ್ರಾಪ್ ಪಡೆದುಕೊಂಡು ಅವರಲ್ಲಿ ತಿಲಕರಾಜ್ ಮದುವೆಗೆ ಕಟೀಲಿಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ಆತನು ಮನೆಯಲ್ಲಿ ತನ್ನ ಬಾಬ್ತುಗಳಾದ ಮೊಬೈಲ್ ಪೋನ್, ಪರ್ಸ್, ಬಿಟ್ಟು ಹೋಗಿರುತ್ತಾನೆ. ಪಿರ್ಯಾದುದಾರರು ಮಂಗಳೂರಿನ ಕೆಲವೊಂದು ಕಡೆಗಳಲ್ಲಿ ಅಲ್ಲದೇ ಅವನ ಬಗ್ಗೆ ಸ್ನೇಹಿತರಲ್ಲಿ, ಪರಿಚಯದವರಲ್ಲಿ, ಸಂಬಂದಿಕರಲ್ಲಿ, ಹುಡುಕಾಡಿ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಇದ್ದು ವರೆಗೂ ಪತ್ತೆಯಾಗದೆ ಇರುವುದರಿಂದ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿರುವುದಾಗಿದೆ. ಆದುದರಿಂದ ಕಾಣೆಯಾದ  ತಿಲಕರಾಜ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂಬಿತ್ಯಾದಿ.

ಚಹರೆ/ಗುರುತು:

ಹೆಸರು: ತಿಲಕರಾಜ್ ಎಮ್

ಪ್ರಾಯ: 29 ವರ್ಷ

ಗೋದಿ ಮೈಬಣ್ಣ, ದಪ್ಪ ಶರೀರ, ದುಂಡು ಮುಖ

ಧರಿಸಿದ ಬಟ್ಟೆ: ನೀಲಿ ಮತ್ತು ಹಳದಿ ಬಣ್ಣದ ಶರ್ಟ್, ಕೇಸರಿ ಬಣ್ಣದ ಲೂಂಗಿ ಧರಿಸಿರುತ್ತಾರೆ

ಭಾಷೆ: ಕನ್ನಡ, ತುಳು, ಹಿಂದಿ, ಮಲೆಯಾಳಂ

ಎತ್ತರ:5.2 ಅಡಿ ಎತ್ತರ

Moodabidre PS

 ಪಿರ್ಯಾದಿ ರೋಶನ್ ಮಾನ್ವೆಲ್ ಡಿಸೋಜಾ ರವರು ತನ್ನ ಬಾಬ್ತು ಕೆ.ಎ 19 ಎ.ಸಿ 5809 ನೇ ನಂಬರ್ ನ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಚಾಲಕನಾಗಿ ಕಿನ್ನಿಗೋಳಿಯಿಂದ ಬಾಡಿಗೆಗಾಗಿ ಮೂಡಬಿದ್ರೆಯ ಗಂಟಾಲಕಟ್ಟೆಯ ಚರ್ಚಿನ ಮುಂಭಾಗದಲ್ಲಿರುವ ಮನೆಗೆ ಬಿಟ್ಟು ಮರಳಿ ಕಿನ್ನಿಗೋಳಿಗೆ ಹೋಗುವಾಗ ರಾತ್ರಿ ಸುಮಾರು 10.10 ಗಂಟೆಗೆ ಮೂಡಬಿದ್ರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ M.K ಶೆಟ್ಟಿ ಸೆಂಟ್ರಲ್ ಶಾಲೆಗೆ ಹೋಗುವ ರಸ್ತೆ ಬಳಿ ತಲುಪುತ್ತಿದ್ದಂತೆ ಕೆ.ಎ 19 ಇ.ಇ 5095 ಡಿಯೋ ಸ್ಕೂಟರ್ ಸವಾರ ಪ್ರದೀಪ್ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮುಂಭಾಗದಿಂದ ಅಂದರೆ ಮೂಡಬಿದ್ರೆಯಿಂದ ಬೆಳ್ತಂಗಡಿ ಕಡೆಗೆ ಚಲಾಯಿಸುತ್ತಾ ಆತನ ಮುಂಭಾಗದಲ್ಲಿದ್ದ ಬೆಂಗಳೂರು ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲಕ್ಕೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬಿದ್ದಿದ್ದು, ನಂತರ ಪಿರ್ಯಾದಿದಾರರು ಕಾರನ್ನು ನಿಲ್ಲಿಸಿ ಸ್ಥಳೀಯರನ್ನು ಸೇರಿಸಿ ಆತನನ್ನು ಉಪಚರಿಸಿ ಬೇರೊಂದು ಖಾಸಗಿ ಕಾರಿನಲ್ಲಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆ ತಂದು ವೈದ್ಯರು ತೀವ್ರ ನಿಗಾವಣೆಯಲ್ಲಿಟ್ಟು ಪರೀಕ್ಷಿಸಿದ ನಂತರ ಬೈಕ್ ಸವಾರ ಪ್ರದೀಪ್  ನು  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ

Moodabidre PS

ದಿನಾಂಕ 07-12-2023 ರಂದು 19.00 ಗಂಟೆಗೆ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ಬಳಿ ನಿರ್ಜನ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಸೊನೆಟ್ ಪ್ರಾಯ:27 ವರ್ಷ, ವಾಸ:ಕೊಡಂಗಲ್ ಹೌಸ್, ಅಂಗಮಾಲಿ ಅಂಚೆ, ಅಂಗಾಡಿಕಡವು, ಎರ್ನಾಕುಲಂ, ಕೇರಳ. ಎಂಬಾತನನ್ನು 19.15 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಆತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ತಪಾಸಣೆಗೊಳಪಡಿಸಿದಾಗ Tetrahydracannabinoid ಎಂಬ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

CEN Crime PS

 “ರಾಯಲ್ ಟ್ರಾವಂಕೂರ್” ಎಂಬ ಹಣಕಾಸು ಸಂಸ್ಥೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ಆರೋಪಿತ ರಾಯಲ್ ಟ್ರಾವಂಕೂರ್ ಕಂಪೆನಿ ಮತ್ತು ಕಂಪೆನಿಯ ನಿರ್ದೇಶಕರಾದ ರಾಹುಲ್ ಚಕ್ರಪಾಣಿ, ಅನಿಲ್ ಚಕ್ರಪಾಣಿ, ಶ್ರೀಮತಿ ಸಿಂಧು ಚಕ್ರಪಾಣಿ ಎಂಬವರುಗಳು ಪಿರ್ಯಾದಿ JNANESHA ಹಾಗೂ ಇತರ ಸುಮಾರು 600 ಕ್ಕೂ ಅಧಿಕ ಸಾರ್ವಜನಿಕರನ್ನು ನಂಬಿಸಿ, ಮಂಗಳೂರು ಮತ್ತು ತೊಕ್ಕೊಟ್ಟು ಶಾಖೆಯಲ್ಲಿ ಸುಮಾರು ರೂ. 60,00,000/- (ರೂಪಾಯಿ ಆರವತ್ತು ಲಕ್ಷ) ಅಧಿಕ ಹಣವನ್ನು ಠೇವಣಿಯಾಗಿ ಸಂಗ್ರಹಿಸಿ ಹಣಕ್ಕೆ ಪ್ರತಿಫಲವಾಗಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿ, ಗ್ರಾಹಕರಿಗೆ ಯಾವುದೇ ಲಾಭಾಂಶ ಯಾ ಮೂಲ ಬಂಡವಾಳ ನೀಡದೇ ಸಂಪರ್ಕಕ್ಕೂ ಸಿಗದೇ ಗ್ರಾಹಕರಿಗೆ ಮೋಸ ಮತ್ತು ವಂಚನೆ ಮಾಡಿವುದು ಎಂಬಿತ್ಯಾದಿಯಾಗಿರುತ್ತದೆ.

Kavoor PS   

ದಿನಾಂಕ 07-12-2023 ರಂದು ಕಾವೂರು ಪೊಲೀಸ್ ಠಾಣಾ ಅಪರಾಧ ಪ್ರಕರಣದಲ್ಲಿನ ಆರೋಪಿಯಾದ ಶಿವರಾಜ್ @ ಶಿವು (32) ತಂದೆ: ಸುರೇಶ್ ಪೂಜಾರಿ ವಾಸ: ಸ್ಕಂದ ನಿಲಯ ಶ್ರೀನಿವಾಸ ಕೂಳೂರು ಕಂಪೌಂಡ್ ಕೋಟೆಕಾರ್ ಬೀರಿ ಮಾಡೂರು ಮಂಗಳೂರು ಎಂಬಾತನನ್ನು ವಿಚಾರಣೆ ಸಲುವಾಗಿ ಠಾಣೆಗೆ ಬರಮಾಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವ ಸಮಯ ಆತನು ಮಾತನಾಡುವಾಗ ತೊದಲುತ್ತಿದ್ದು ಅವನು ಮಾದಕ ವಸ್ತು ಸೇವನೆ ಮಾಡಿದವನಂತೆ ಕಂಡು ಬಂದಿದ್ದರಿಂದ ಅವನಲ್ಲಿ ಆ ಬಗ್ಗೆ ವಿಚಾರಿಸಲಾಗಿ ನಂತರ ಅವನು ಮಾದಕ ವಸ್ತುವನ್ನು ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿದ್ದು, ಈ ಬಗ್ಗೆ ಶಿವರಾಜ್ @ ಶಿವು ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿದ್ದಾನೆಯೇ ಎಂಬ ಬಗ್ಗೆ ವೈಧ್ಯಕೀಯ ಪರೀಕ್ಚೆ ನಡೆಸಿ ವರದಿ ನೀಡುವಂತೆ ಮಂಗಳೂರು ಎ.ಜೆ ಆಸ್ಪತ್ರೆಯ ಕಾರ್ಯ ನಿರತ ವೈಧ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಿ ವೈಧ್ಯಕೀಯ ಪರೀಕ್ಚೆಗೆ ಒಳಪಡಿಸಿದ ವೈಧ್ಯಾದಿಕಾರಿಯವರು ಶಿವರಾಜ್ @ ಶಿವು ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ . ವೈಧ್ಯಾದಿಕಾರಿಯವರು ನೀಡಿದ ವೈಧ್ಯಕೀಯ ವರದಿಯಂತೆ ಆಪಾದಿತನ ವಿರುದ್ದ  ಎನ್.ಡಿ.ಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿ .

Kavoor PS

ದಿನಾಂಕ 07-12-2023 ರಂದು ಕಾವೂರು ಪೊಲೀಸ್ ಅಪರಾಧ ಪ್ರಕರಣದಲ್ಲಿನ ಆರೋಪಿಯಾದ ಶ್ರೀಜಿತ್ (30) ತಂದೆ: ಪ್ರಭಾಕರ ಬೆಳ್ವಾಡ  ವಾಸ: ಶ್ರೀಜಾ ನಿಲಯ ಕೃಷ್ಣಾನಗರ ಅಂಬರ ನಯಾಬಜಾರ್ ಉಪ್ಪಳ ಕಾಸರಗೋಡು ಕೇರಳ ಎಂಬಾತನನ್ನು ವಿಚಾರಣೆ ಸಲುವಾಗಿ ಠಾಣೆಗೆ ಬರಮಾಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವ ಸಮಯ ಆತನು ಮಾತನಾಡುವಾಗ ತೊದಲುತ್ತಿದ್ದು ಅವನು ಮಾದಕ ವಸ್ತು ಸೇವನೆ ಮಾಡಿದವನಂತೆ ಕಂಡು ಬಂದಿದ್ದರಿಂದ ಅವನಲ್ಲಿ ಆ ಬಗ್ಗೆ ವಿಚಾರಿಸಲಾಗಿ ನಂತರ ಅವನು ಮಾದಕ ವಸ್ತುವನ್ನು ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿದ್ದು, ಈ ಬಗ್ಗೆ ಶ್ರೀಜಿತ್ ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿದ್ದಾನೆಯೇ ಎಂಬ ಬಗ್ಗೆ ವೈಧ್ಯಕೀಯ ಪರೀಕ್ಚೆ ನಡೆಸಿ ವರದಿ ನೀಡುವಂತೆ ಮಂಗಳೂರು ಎ.ಜೆ ಆಸ್ಪತ್ರೆಯ ಕಾರ್ಯ ನಿರತ ವೈಧ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಿ ವೈಧ್ಯಕೀಯ ಪರೀಕ್ಚೆಗೆ ಒಳಪಡಿಸಿದ ವೈಧ್ಯಾದಿಕಾರಿಯವರು ಶ್ರೀಜಿತ್ ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ . ವೈಧ್ಯಾದಿಕಾರಿಯವರು ನೀಡಿದ ವೈಧ್ಯಕೀಯ ವರದಿಯಂತೆ ಆಪಾದಿತನ ವಿರುದ್ದ ಎನ್.ಡಿ.ಪಿಎಸ್ ಕಾಯ್ದೆಯಂತೆ  ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿ .

Mangalore South PS

ಪಿರ್ಯಾದಿದಾರರಾದ ಡಾ. ಅಮರಶ್ರೀ ಅಮರನಾಥ ಶೆಟ್ಟಿ ರವರ ತಂದೆ ದಿವಂಗತ  ಕೆ  ಅಮರನಾಥ ಶೆಟ್ಟಿ ರವರು ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಸರ್ವೆ ನಂಬರ್ 116/21ಎ2 ರಲ್ಲಿ “ಅಮರಶ್ರೀ” ಚಿತ್ರ ಮಂದಿರದ ಮಾಲಕರಾಗಿರುತ್ತಾರೆ. ಪಿರ್ಯಾದಿದಾರರ ತಂದೆಯವರು ಸದ್ರಿ ಚಿತ್ರಮಂದಿರದ ಮ್ಯಾನೇಜ್ ಮೆಂಟ್ ಬಗ್ಗೆ ಕಾರ್ಕಳದ ಜೆರಾಲ್ಡ್ ಕುಟಿನ್ಹೋ ಎಂಬವರನ್ನು ಮ್ಯಾನೇಜರ್ ಆಗಿ ನೇಮಿಸಿರುತ್ತಾರೆ.  ಪಿರ್ಯಾದಿದಾರರ ತಂದೆ ದಿನಾಂಕ : 27-01-2020 ರಂದು ಮೃತಪಟ್ಟಿರುತ್ತಾರೆ. ಆ ಬಳಿಕ ಪಿರ್ಯಾದಿದಾರರು ತಂದೆಯ ಹೆಸರಿನಲ್ಲಿದ್ದ “ಅಮರಶ್ರೀ” ಚಿತ್ರ ಮಂದಿರವನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬೇಕಾಗಿದ್ದರಿಂದ ಹಾಗೂ ಚಿತ್ರಮಂದಿರವು ಶಿಥಿಲಾವಸ್ಥೆಯಲ್ಲಿದ್ದುದ್ದರಿಂದ ದುರಸ್ತಿ ಕೆಲಸಗಳನ್ನು ಮಾಡಿಸಬೇಕಾಗಿದ್ದರಿಂದ ಆ ಸಮಯ    ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ಪರವಾನಿಗೆಯನ್ನು ಪಡೆದಿರುವುದಿಲ್ಲ. ಪಿರ್ಯಾದಿದಾರರು ನವೆಂಬರ್ 2023 ರಲ್ಲಿ ಚಿತ್ರಮಂದಿರದ ದುರಸ್ತಿ ಕೆಲಸಗಳನ್ನು ಪ್ರಾರಂಭಿಸಿ, ಸಿನಿಮಾ ಪ್ರದರ್ಶನದ ಪರವಾನಿಗೆಯನ್ನು ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಹೋದಾಗ, ಆರೋಪಿ ಜೆರಾಲ್ಡ್ ಕುಟಿನ್ನೋ ರವರು ಪಿರ್ಯಾದಿದಾರರ ತಂದೆ ಮರಣವಾದ ಬಳಿಕ, ದಿವಂಗತ ಕೆ  ಅಮರನಾಥ ಶೆಟ್ಟಿ ರವರ ಹೆಸರಿನಲ್ಲಿ ನಕಲಿ ಸಿನಿಮಾ ಪ್ರದರ್ಶನದ ಪರವಾನಿಗೆ ಪಡೆದುಕೊಂಡು ಪಿರ್ಯಾದಿದಾರರಿಗೆ ಮೋಸ ಮಾಡಿ ವಂಚಿಸುವ ಉದ್ದೇಶದಿಂದ, ಸಂಬಂಧಪಟ್ಟ ಇಲಾಖೆಗಳಿಂದ ನಿರಕ್ಷೇಪಣಾ ಪತ್ರವನ್ನು ಪಡೆದುಕೊಳ್ಳುವ ಸಲುವಾಗಿ,  ದಿನಾಂಕ : 07-11-2022 ರಂದು ನಕಲಿ  ಕೋರಿಕೆ ಪತ್ರವನ್ನು ತಯಾರಿಸಿ, ಸದ್ರಿ ದಾಖಲಾತಿಯು ನಕಲಿ ದಾಖಲಾತಿಯೆಂದು ತಿಳಿದಿದ್ದರೂ ಕೂಡಾ ನೈಜವಾದುದೆಂದು ಜಿಲ್ಲಾ ಅಗ್ನಿಶಾಮಕ ಇಲಾಖೆ  ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರ ಮುಂದೆ ಹಾಜರುಪಡಿಸಿ, ನಿರಕ್ಷೇಪಣಾ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-12-2023 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080