ಅಭಿಪ್ರಾಯ / ಸಲಹೆಗಳು

Crime Report in :Traffic North Police Station                             

ದಿನಾಂಕ 08-01-2024 ರಂದು ಪಿರ್ಯಾದಿ Sathya Vijaya Sharma ದಾರರ ತಂದೆ ರಾಮ್ ಸಮಾಜ್ ಆರ್. ಶರ್ಮಾ (53) ಎಂಬವರು ಅವರ ಬಾಬ್ತು ಸ್ಕೂಟರ್ ನಂಬ್ರ KA-19HE-6407 ರಲ್ಲಿ ಮಂಗಳೂರಿನಿಂದ ಹೊಸಬೆಟ್ಟುವಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಪಣಂಬೂರು ಜಂಕ್ಷನ್ ನಿಂದ ಸ್ವಲ್ಪ ಮುಂದೆ IOC ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆಯೇ ಫೋನ್ ಕರೆ ಬಂದಂತೆ ಸ್ಕೂಟರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಾತನಾಡುತ್ತಿರುವಾಗ ಹಿಂಬದಿಯಿಂದ ಕಾರು ನಂಬ್ರ  KA-19MG-8675 ನೇಯದನ್ನು ಅದರ ಚಾಲಕ ಚಿತ್ತರಂಜರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಾಮ್ ಸಮಾಜ್ ಆರ್. ಶರ್ಮಾರವರ ಬಲಬದಿ ಹಣೆಗೆ, ಮೂಗಿಗೆ, ಮೇಲ್ತುಟಿಗೆ ಹಾಗೂ ಮುಖದಲ್ಲಿ ತರಚಿದ ಗಾಯ, ನಾಲಿಗೆಗೆ ಮತ್ತು ಬಲಕೈ ಅಂಗೈಗೆ ಗೀರಿದ ಗಾಯ, ಎರಡೂ ಕೈ ಮತ್ತು ಕಾಲಿನ ಮೊಣಗಂಟಿನ ಬಳಿ ಬೆರಳುಗಳಲ್ಲಿ ತರಚಿದ ರಕ್ತ ಗಾಯವಾಗಿದ್ದು, ಅಪಘಾತ ಪಡಿಸಿದ ಕಾರು ಚಾಲಕನು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಬಳಿಕ  ಚಿತ್ತರಂಜನ್ ರವರು ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸದೇ ಆಸ್ಪತ್ರೆಯಿಂದ ಕಾರು ಸಮೇತ ಪರಾರಿಯಾಗಿರುತ್ತಾರೆ ಎಂಬಿತ್ಯಾದಿ.

Konaje PS

ದಿನಾಂಕ:08-01-2024 ರಂದು ಬೆಳಗ್ಗೆ 10.50 ಗಂಟೆಗೆ ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ನವಗ್ರಾಮ ಸೈಟ್ ಮೈದಾನದ ಬಳಿಗೆ ತಲುಪಿದಾಗ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಸಂತೋಷ್, ಪ್ರಾಯ: 38 ವರ್ಷ,  ವಾಸ:ನವ ಗ್ರಾಮ ಸೈಟ್ ನಡುಪದವು ಕೈರಂಗಳ, ಉಳ್ಳಾಲ ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಸಂಜೆ 11.00 ಗಂಟೆಗೆ ವಶಕ್ಕೆ ಪಡೆದುಕೊಂಡು ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು MARIJUANA(THC) ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

Traffic South Police Station              

ಪಿರ್ಯಾದಿ Leelavathi ದಾರರ ಗಂಡ ಯೋಗಾನಂದ ಪ್ರಾಯ 67 ವರ್ಷ ತೊಕ್ಕೊಟ್ಟಿನ ಪೆಡರಲ್ ಬ್ಯಾಂಕ್ನ ಎ,ಟಿ,ಎಮ್ ನಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ಈ  ದಿನ ದಿನಾಂಕ 08-01-2024 ರಂದು ಕೆಲಸ ಮುಗಿಸಿ ಬಸ್ಸಿನಲ್ಲಿ ಬಂದು ಸಾಯಂಕಾಲ 05.45 ಗಂಟೆಗೆ ಅಡಂಕುದ್ರು ನಲ್ಲಿ ಬಸ್ಸ್ ಇಳಿದು ಮನೆಕಡೆ ಹೋಗಲು ತೊಕ್ಕೊಟ್ಟು-ಪಂಪ್ ವೆಲ್ ರಾಷ್ಟ್ರಿಯ ಹೆದ್ದಾರಿ ದಾಟುತ್ತಿರುವಾಗ KA-19-HM-7398 ಸ್ಕೂಟರ್ ಸವಾರ ತಮನ್ ಎಂಬಾತನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಹಿಸಿಕೊಂಡು ಬಂದು  ಪಿರ್ಯಾದಿದಾರರ ಗಂಡನಿಗೆ ಗುದ್ದಿದ್ದು, ಪಿರ್ಯಾದಿದಾರರ ಗಂಡ ಹಾಗೂ ಸ್ಕೂಟರ್ ಸವಾರ ಡಾಮಾರು ರಸ್ತೆಗೆ ಬಿದ್ದು  ಗಾಯಗೊಂಡವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಅಟೋರಿಕ್ಷದಲ್ಲಿ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಿಸಿದ್ದು,ಪಿರ್ಯಾದಿದಾರರ ಗಂಡನಿಗೆ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು, ಮುಖಕ್ಕೆ ಮತ್ತು ದೇಹದ ಇತರ ಭಾಗಕ್ಕೆ ತರಚಿದ ಗಾಯವಾಗಿರುತ್ತದೆ,ಎಂಬಿತ್ಯಾದಿ.

Kankanady Town PS

ಪಿರ್ಯಾದಿದಾರರು ದಿನಾಂಕ: 04-01-2024 ರಂಧು ಮದ್ಯಾಹ್ನ 2-00 ಗಂಟೆ ಸುಮಾರಿಗೆ ತಮ್ಮ ಮೊಬೈಲ್ ನಲ್ಲಿ ಫೇಸ್ ಬುಕ್ ನಲ್ಲಿ ರೀಲ್ಸ್ ನೋಡುತ್ತಿದ್ದಾಗ, work  from home, get extra income ಎಂಬ ಜಾಹಿರಾತು ಬಂದಿದ್ದು, ಅದರಲ್ಲಿದ್ದ ವಾಟ್ಸಾಪ್ ಲಿಂಕ್ ನಂಬ್ರ 9874314784 ನೇಯದಕ್ಕೆ  ಕ್ಲಿಕ್ ಮಾಡಿ, ತಮ್ಮ ವಾಟ್ಸಾಪ್ ನಂಬ್ರ  ನೇದರ ಮೂಲಕ  ಚಾಟ್ ಮಾಡಿ ಉದ್ಯೋಗದ ಬಗ್ಗೆ  ವಿಚಾರಿಸಿದಾಗ, ಆರೋಪಿಗಳು ಅಮೇಜಾನ್ ನಲ್ಲಿ  ಪಾರ್ಟ್ ಟೈಮ್ ಕೆಲಸ ನೀಡಿ, ಪ್ರತಿ  ದಿನ 3,000 ದಿಂದ 8,000 ರೂ  ಹಣವನ್ನು ನೀಡುವುದಾಗಿ ತಿಳಿಸಿ, ಪಿರ್ಯಾದಿದಾರರ ವಾಟ್ಸಾಪ್ ಗೆ https//amazonwork.in/registar?invite_code=26dfd0 ಎಂಬ ಹೆಸರಿನ ಲಿಂಕ್ ಕಳುಹಿಸಿ ಐ.ಡಿ ಕ್ರಿಯೇಟ್ ಮಾಡಲು ತಿಳಿಸಿದಂತೆ, ಪಿರ್ಯಾದಿದಾರರು ಸದ್ರಿ ಲಿಂಕ್ ನಲ್ಲಿ ತಮ್ಮ ವಿವಗಳನ್ನು ನಮೂದಿಸಿ Abdul khaddar (User name: 9844255015) ಎಂಬ ಹೆಸರಿನ ಅಮೆಜಾನ್ ಐ.ಡಿ ಕ್ರಿಯೆಟ್ ಮಾಡಿದಾಗ, ಆರೋಪಿಗಳು ಸದ್ರಿ ಅಮೇಜಾನ್ ಐ.ಡಿ ಗೆ 80  ರೂ ಹಣವನ್ನು ಜಮಾ ಮಾಡಿರುತ್ತಾರೆ.  ನಂತರ ಮುಂದಿನ ಹಂತಕ್ಕೆ ತಲುಪಲು ಪಿರ್ಯಾದಿದಾರರಿಗೆ ಅಮೇಜಾನ್ ಐ.ಡಿ ಮೂಲಕ 120 ರೂ ರೀಚಾರ್ಜ್ ಮಾಡುವಂತೆ ತಿಳಿಸಿದಾಗ, ಪಿರ್ಯಾದಿದಾರರು ತಮ್ಮ ಗೂಗಲ್ ಪೇ ನಂಬ್ರ   ನೇದರ ಮೂಲಕ ರೀಚಾರ್ಜ್ ಮಾಡಿದಂತೆ, ಆರೋಪಿಗಳು ಪಿರ್ಯಾದಿದಾರರ ಅಮೇಜಾನ್ ಐ.ಡಿ ಗೆ 300 ರೂ ಹಣವನ್ನು ಜಮಾ ಮಾಡಿ, ಆ ಹಣವನ್ನು  ವಿಥ್ ಡ್ರಾ ಮಾಡುವ ಬಗ್ಗೆ ಪಿರ್ಯಾದಿದಾರರ ಬ್ಯಾಂಕ್ ಅಕೌಂಟ್ ವಿವರಗಳನ್ನು @Professional99tutor  ಎಂಬ ಟೆಲಿಗ್ರಾಮ್ ಅಕೌಂಟ್  ಗೆ ಕಳುಹಿಸಿಕೊಡಲು ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು  ತಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಕಳುಹಿಸಿಕೊಟ್ಟು, 300 ರೂ ಹಣವನ್ನು ವಿಥ್ ಡ್ರಾ ಮಾಡಿರುತ್ತಾರೆ. ನಂತರ ಆರೋಪಿಗಳು  ಪಿರ್ಯಾದಿದಾರರಿಗೆ, 500 ರೂಪಾಯಿಗೆ 700 ರೂಪಾಯಿಗಳನ್ನು ಹಾಗೂ 1000 ರೂಪಾಯಿಗೆ 1200 ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದು, ಪಿರ್ಯಾದಿದಾರರು 500 ರೂಪಾಯಿಗೆ  700 ರೂಪಾಯಿ ನೀಡುವುದನ್ನು ಆಯ್ಕೆ ಮಾಡಿ, ತಮ್ಮ ಅಮೇಜಾನ್ ಐ.ಡಿ ಯಲ್ಲಿ 500 ರೂ ಹಣವನ್ನು ರೀಚಾರ್ಜ್ ಮಾಡಿದಾಗ,  ಆರೋಪಿಗಳು ಮತ್ತೊಂದು ಟಾಸ್ಕ್ ನೀಡಿ 1100 ರೂ ಹಣವನ್ನು ರಿಚಾರ್ಜ್ ಮಾಡಲು ತಿಳಿಸಿದಂತೆ, ಪಿರ್ಯಾದಿದಾರರು 1100 ಹಣವನ್ನು ರಿಚಾರ್ಜ್ ಮಾಡಿರುತ್ತಾರೆ. ಆರೋಪಿಗಳು ಮುಂದಿನ ಟಾಸ್ಕ್ ಬಗ್ಗೆ 3000 ರೂ ರೀಚಾರ್ಜ್ ಮಾಡಲು ತಿಳಿಸಿದ್ದು, ಅಮೇಜಾನ್ ಐ.ಡಿಯಲ್ಲಿ ರೀಚಾರ್ಜ್ ಮಾಡಲು ಸಾಧ್ಯವಾಗಿರುವುದಿಲ್ಲ. ಇದೇ ರೀತಿ ಮುಂದುವರೆದು ದಿನಾಂಕ 04-01-2024 ರಿಂದ ದಿನಾಂಕ 06-01-2024 ರವರೆಗೆ ಆರೋಪಿಗಳು ಪಿರ್ಯಾದಿದಾರರಿಗೆ ಟಾಸ್ಕ್ ಗಳನ್ನು ನೀಡಿದಂತೆ, ಪಿರ್ಯಾದಿದಾರರು ಆರೋಪಿಗಳು ತಿಳಿಸಿದ ಬೇರೆ ಬೇರೆ UPI ಐ.ಡಿ ಗಳಿಗೆ ತಮ್ಮ ಕೆನರಾ ಬ್ಯಾಂಕ್ ನ ಖಾತೆ ನಂಬ್ರ ನೇದರಿಂದ ಹಾಗೂ ಆಕ್ಸಿಸ್ ಬ್ಯಾಂಕ್ ನ ಖಾತೆ ನಂಬ್ರ ನೇದರಿಂದ ಗೂಗಲ್ ಪೇ ಮುಖಾಂತರ  ಒಟ್ಟು 1,06,020/- ರೂಪಾಯಿಗಳನ್ನು ವರ್ಗಾವಣೆ ಮಾಡಿ ಆರೋಪಿಗಳಿಂದ ಹಣದ ವಂಚನೆಗೆ ಒಳಗಾಗಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 09-01-2024 03:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080