ಅಭಿಪ್ರಾಯ / ಸಲಹೆಗಳು

Mangalore East Traffic PS                

ಪಿರ್ಯಾದಿದಾರರಾದ ಸುನಿಲ್ ಅಂಚನ್ (42 ವರ್ಷ) ರವರು ದಿನಾಂಕ 08/02/2023 ರಂದು ಸಂಜೆ ಕೆಲಸ ಮುಗಿದ ಬಳಿಕ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-EZ-2880 ನೇಯದರಲ್ಲಿ ಪವನ್ ಎಂಬುವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳರಿಸಿಕೊಂಡು ಪದವು ಕಡೆಯಿಂದ ನಂತೂರು ಮಾರ್ಗವಾಗಿ ಪಂಪವೆಲ್ ಕಡೆಗೆ ಹಾದು ಹೋಗಿರುವ ರಾ.ಹೆ 66 ನೇಯದರಲ್ಲಿ ಹೋಗುತ್ತಿರುವ ವೇಳೆ ನಂತೂರು ಜಂಕ್ಷನ್ನಿನಲ್ಲಿ ಟ್ರಾಪಿಕ್ ಸಿಗ್ನಲ್ ಇದ್ದ ಕಾರಣ ತಮ್ಮ ಸ್ಕೂಟರನ್ನು ನಿಲ್ಲಿಸಿದ್ದು ಸ್ವಲ್ಪ ಸಮಯದ ಬಳಿಕ ಪದವು ಕಡೆಯಿಂದ ನಿಂತಿದ್ದ ವಾಹನಗಳಿಗೆ ಟ್ರಾಫಿಕ್ ಪೊಲೀಸರು ಚಲಿಸುಂತೆ ಸೂಚಿಸಿದ್ದು ಆಗ ಪಿರ್ಯಾದಿದಾರರು ತಮ್ಮ ಸ್ಕೂಟರನ್ನು ಮುಂದಕ್ಕೆ ಚಲಾಯಿಸಬೇಕೆನ್ನುವಷ್ಟರಲ್ಲಿ ಅವರ ತೀರಾ ಹಿಂಬದಿಲ್ಲಿಯೇ ನಿಲ್ಲಿಸಿದ್ದ ಲಾರಿ ನೊಂದಣಿ ಸಂಖ್ಯೆ: KA-19-AD-9586 ನೇಯದನ್ನು ಅದರ ಚಾಲಕ ಮಲ್ಲಪ್ಪ ಎಂಬಾತನು ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಒಮ್ಮೇಲೆ ಏಕಾಏಕಿಯಾಗಿ ಮುಂದಕ್ಕೆ ಚಲಾಯಿಸಿದ್ದರಿಂದ ಲಾರಿಯು ಸ್ಕೂಟರಿಗೆ ಢಿಕ್ಕಿಯಾಗಿ ಸ್ಕೂಟರ್ ಸವಾರ ಹಾಗೂ ಹಿಂಬದಿ ಸವಾರನು ಎಡಕ್ಕೆ ವಾಲಿ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಎಡಕಾಲು ಪಾದದಲ್ಲಿ ಹಾಗೂ ಎಡ ಮೊಣಕಾಲು ಗಂಟಿನಲ್ಲಿ ತರಚಿದ ಗಾಯಗಳಾಗಿದ್ದು ಹಿಂಬದಿ ಸವಾರ ಪವನ್ ರವರ ಬಲ ಕಾಲಿಗೆ ಗುದ್ದಿದ ರೀತಿಯ ಗಾಯಗಳುಂಟಾಗಿರುತ್ತವೆ, ಹಾಗೂ ಪಿರ್ಯಾದಿದಾರರ ಸ್ಕೂಟರ್ ಲಾರಿಯ ಮುಂಭಾಗದ ಬಂಪರ್ ಅಡಿಗೆ ಸಿಲುಕಿಕೊಂಡು ಸ್ವಲ್ಪ ದೂರದ ವರೆಗೆ ರಸ್ತೆಯಲ್ಲಿ ಎಳೆದುಕೊಂಡು ಹೋದ ಪರಿಣಾಮ ಸಂಪೂರ್ಣ ಜಕಂಗೊಂಡಿರುತ್ತದೆ,  ಈ ಅಪಘಾತವು ಸಮಯ ಸಂಜೆ ಸುಮಾರು 6-30 ಗಂಟೆ ಆಗಿರುತ್ತದೆ, ಆದುದರಿಂದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Traffic North Police Station                       

ಪಿರ್ಯಾದಿ Vivek Suvarna ದಾರರು ದಿನಾಂಕ 08-02-2023 ರಂದು ತನ್ನ ಬಾಬ್ತು KA-19-HK-2854 ನೇ ನಂಬ್ರದ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಕೊಟ್ಟಾರದಿಂದ  ಸುರತ್ಕಲ್ ಕಡೆಗೆ ರಾ.ಹೆ.66 ರಲ್ಲಿ ಹೋಗುತ್ತಾ ಸುರತ್ಕಲ್ ಶುಭಗಿರಿ ಹಾಲ್ ನಿಂದ ಸ್ವಲ್ಪ ಮುಂದೆ ವಿದ್ಯಾದಾಯಿನಿ ಶಾಲೆಯ ಹತ್ತಿರ ತಲುಪುತ್ತಿದ್ದಂತೆ ರಾತ್ರಿ ಸಮಯ ಸುಮಾರು 11:30 ಗಂಟೆಗೆ ಅವರ ಎದುರಿನಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ KA-19-HE-2789 ನೇ ನಂಬ್ರದ ಸ್ಕೂಟರನ್ನು ಅದರ ಸವಾರನಾದ ಚೇತನ್ ಎಂಬಾತನು ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ, ರಸ್ತೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮವಹಿಸದೇ RJ-20-GB-6231 ನೇ ನಂಬ್ರದ ಲಾರಿಯನ್ನು ಅದರ ಚಾಲಕನಾದ ದೀಪಕ್ ಎಂಬಾತನು ನಿಲ್ಲಿಸಿದ್ದರ ಹಿಂಬದಿ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಸಮೇತ ಡಾಮಾರು ರಸ್ತೆಗೆ ಬಿದ್ದು, ಅವರ ಎಡಕಣ್ಣಿನ ಕೆಳಭಾಗಕ್ಕೆ ಗುದ್ದಿದ ರೀತಿಯ ಗಾಯ,ಎಡತುಟಿ ದವಡೆಗೆ ರಕ್ತಗಾಯ ಮತ್ತು ತಲೆಗೆ ಗುದ್ದಿದ ರೀತಿಯ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ A.J ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Bajpe PS

ದಿನಾಂಕ 01-02-2023 ರಂದು ರಾತ್ರಿ  9-00 ಗಂಟೆಗೆ ಪಿರ್ಯಾದಿ Santhosh ದಾರರ  ಭಾವ ಸುರೇಶ್  ರವರು ಕೆಎ 19 ಹೆಚ್ ಎಫ್ 8854 ನೇ ನಂಬ್ರದ ಸ್ಕೂಟರ್ ನಲ್ಲಿ ತನ್ನ ಹೆಂಡತಿ ಶರ್ಮಿಳಾ ಅಂದರೇ ಪಿರ್ಯಾದುದಾರರ ಅಕ್ಕ ರವರನ್ನು ಸಹ ಸವಾರಳನ್ನಾಗಿ ಕೂರಿಸಿಕೊಂಡು ಕಿನ್ನಿಗೋಳಿಯಿಂದ ಮನೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ರಾತ್ರಿ 9-30 ಗಂಟೆಗೆ ಕೊಂಡೆಮೂಲ ಗ್ರಾಮದ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಇರುವ ಮಣ್ಣು ರಸ್ತೆ ತಲುಪುತ್ತಿದ್ದಂತೆ ಸುರೇಶ್ ರವರು ಸ್ಕೂಟರ್ ನ್ನು ಒಮ್ಮೇಲೆ ರೈಸ್ ಮಾಡಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ನನ್ನ ಭಾವ ಸುರೇಶ್ ಮತ್ತು ಶರ್ಮಿಳ ರವರು ಸ್ಕೂಟರ್ ಸಮೇತ ದಿಬ್ಬದಿಂದ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹಾದು  ಹೋಗಿರುವ ಡಾಮಾರು ರಸ್ತೆಗೆ ಬಿದ್ದಿರುತ್ತಾರೆ.ಈ ಅಪಘಾತದಿಂದ ಪಿರ್ಯಾದುದಾರರ ಅಕ್ಕ ಶರ್ಮಿಳ ರವರ ತಲೆಯ ಮುಂಭಾಗದಲ್ಲಿ ಗಂಬೀರ ಗಾಯ ಉಂಟಾಗಿರುತ್ತದೆ ಮತ್ತು  ಭಾವ ಸುರೇಶ್ ರವರಿಗೆ ತೆರಚಿದ ಗಾಯಗಳಾಗಿರುತ್ತವೆ. ಗಾಯಗೊಂಡಿದ್ದ ಶರ್ಮಿಳರವರು ಜ್ಯೋತಿ ಕೆ ಎಮ್ ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಬಂದಿದ್ದು ಅಲ್ಲಿ ಶರ್ಮಿಳಾ ರವರನ್ನು ಪರೀಕ್ಷಿಸಿದ ವೈದ್ಯರು ತುರ್ತು ವಿಭಾಗದಲ್ಲಿ  ದಾಖಲಿಸಿದ್ದು  ಈ ದಿನ ದಿನಾಂಕ 08-02-2023 ರಂದು ಬೆಳಗ್ಗೆ 08-36 ರಂದು ಚಿಕಿತ್ಸೆ ಫಲಕಾರಿ ಯಾಗದೇ ಮೃತ ಪಟ್ಟಿರುತ್ತಾರೆ.ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 09-02-2023 07:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080