ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Barke PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:09.02.2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ರವರು  ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳೂರು ಬಳಿ ತಲುಪಿದಾಗ ಜಿತೇಶ್ ಡಿ ಅಂಚನ್ ಪ್ರಾಯ 25 ವರ್ಷ ತಂದೆ:ದಿನೇಶ್, ವಾಸ:25-24-1720/22, ಜೆಪ್ಪು, ಬಪ್ಪಾಲ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ, ಕಂಕನಾಡಿ ಪೋಸ್ಟ್ ಮಂಗಳೂರು ಎಂಬಾತನು  ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು  ಇವರನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಏ ಜೆ ಆಸ್ಪತ್ರೆಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ. ಕಳುಹಿಸಿಕೊಟ್ಟಲ್ಲಿ  “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನನ್ನು ವರದಿಯೊಂದಿಗೆ ಠಾಣೆಗೆ  ಕರೆ ತಂದು ನೀಡಿ ಆಪಾದಿತನ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

 

 

Mangalore East Traffic PS                 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಜೀವನ್ ಲೋಬೋ ಎಂಬವರ ಸ್ನೇಹಿತನಾದ ಟೆರಸ್ ಡಿ ಸೋಜಾ, ಪ್ರಾಯ-21 ವರ್ಷ ಎಂಬವರು ದಿನಾಂಕ: 08/02/2024 ರಂದು ತನ್ನ ಬಾಬ್ತು KA-19-HN-4144 ನೇ ಸ್ಕೂಟರ್ ನ್ನು  ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ಪಡಿಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 10:40 ಗಂಟೆಗೆ ಆಸ್ಪಿನ್ ವಾಲಾ ಎಂಡ್ ಕಂಪೆನಿಯ ಎದುರುಗಡೆಯಿರುವ ಸರ್ವಿಸ್ ಡಾಮಾರು ರಸ್ತೆಯ ಬಲಬದಿಯಲ್ಲಿ ಅಳವಡಿಸಲಾಗಿದ್ದ ಸಿಮೆಂಟ್ ದಿಂಡೆಗೆ ಡಿಕ್ಕಿಪಡಿಸಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಅಟೋ ರಿಕ್ಷಾವೊಂದರಲ್ಲಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಗಾಯಾಳು ಟೆರೆನ್ಸ್ ರವರನ್ನು ಅವರ ತಂದೆಯಾದ ಸ್ಟಾ ನಿ ರವರು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜ್ಯೋತಿ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಟೆರೆನ್ಸ್ ಡಿ ಸೋಜಾರವರು ಈ ದಿನ ದಿನಾಂಕ: 09/02/2024 ರಂದು 01:50 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ ಎಂಬಿತ್ಯಾದಿ

 

Mangalore East Traffic PS                          

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಪಿ ಚಂದ್ರಶೇಖರ ಎಂಬವರ ಅತ್ತೆ ರತ್ನಾ, ಪ್ರಾಯ-78 ವರ್ಷ ಎಂಬವರು ದಿನಾಂಕ: 08/02/2024 ರಂದು ರಾತ್ರಿ 20:00 ಗಂಟೆಗೆ ಸುಬ್ರಮಣ್ಯ ಭಜನಾ ಮಂದಿರಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ಬರುತ್ತಾ ಬಿಕರ್ನಕಟ್ಟೆ ಅಜುವಾ ಡ್ರೈ ಪ್ರುಟ್ಸ್ ಅಂಗಡಿ ಹಾಗೂ ಕಾರ್ ಮ್ಯಾಕ್ಸ್ ಎದುರುಗಡೆ ಕೈಕಂಬ ಕಡೆಯಿಂದ ನಂತೂರು ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟಿ ನಂತೂರು ಕಡೆಯಿಂದ ಕೈಕಂಬ ಕಡೆಗೆ ಹೋಗುವ ರಸ್ತೆಯನ್ನು ದಾಟುವರೇ ಮಸೂದ್ ಎಜುಕೇಷನ್ ಟ್ರಸ್ಟ್ ಎದುರುಗಡೆ ತಲುಪುವಾಗ ಸಮಯ ಸುಮಾರು 21:15 ಗಂಟೆಗೆ ನಂತೂರು ಕಡೆಯಿಂದ ಕೈಕಂಬ ಕಡೆಗೆ ಹಾದು ಹೋಗುವ ರಾ.ಹೆ 73 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ KA-19-ED-5167 ನೇ ಮೋಟಾರು ಸೈಕಲ್ ಸವಾರ ಸ್ಕಂದ ಕುಮಾರ್ ಎಂಬಾತನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಅತ್ತೆ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಸಾರ್ವಜನಿಕರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ತಲೆಗೆ ಗುದ್ದಿದ ನಮೂನೆಯ ಗಾಯ, ಎಡಕೋಲು ಕೈಗೆ ಗುದ್ದಿದ ನಮೂನೆಯ ಗಾಯ ಹಾಗೂ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ  ಎಂಬಿತ್ಯಾದಿ

 

Mangalore East Traffic PS                 

ಪಿರ್ಯಾದಿದಾರರಾದ ಕೃತಿ ಪ್ರಾಯ 23 ವರ್ಷ ರವರು ಈ ದಿನ ದಿನಾಂಕ 09-02-2024 ರಂದು ಬೆಳಿಗ್ಗೆ ಸ್ಪೋರ್ಟ್ಸ್ ಪ್ರ್ಯಾಕ್ಟಿಸ್ ಗಾಗಿ ಪದುವ ಶಾಲಾ ಮೈದಾನಕ್ಕೆ ಹೋಗಲು ತನ್ನ ಬಾಬ್ತು ಸ್ಕೂಟರ್ ನೊಂದಣಿ ಸಂಖ್ಯೆ: KA-19-HD-1248 ನೇಯದನ್ನು ಸವಾರಿ ಮಾಡಿಕೊಂಡು ಕೆಪಿಟಿ ಜಂಕ್ಷನ್ ಕಡೆಯಿಂದ ಏರ್ ಪೋರ್ಟ್ ರಸ್ತೆಯ ಮೂಲಕ ಶರ್ಬತ್ ಕಟ್ಟೆ ಜಂಕ್ಷನ್ ವರೆಗೆ ಹೋಗಿ ಅಲ್ಲಿಂದ  ಪದುವ ಕಡೆಗೆ ಹೋಗಲೆಂದು ಶರ್ಬತ್ ಕಟ್ಟೆಯ ತೆರೆದ ಡಿವೈಡರ್ ಬಳಿ ಸ್ಕೂಟರನ್ನು ನಿಲ್ಲಿಸಿಕೊಂಡು ನಿಂತಿದ್ದಾಗ ಬೆಳಿಗ್ಗೆ ಸಮಯ ಸುಮಾರು 6.45 ಗಂಟೆಗೆ ಯೆಯ್ಯಾಡಿ ಕಡೆಯಿಂದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-HN-5129 ನೇಯದನ್ನು ಸವಾರ ಹರಿಕೀರ್ತನ್ ಎಂಬಾತನು ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ಇತರ ವಾಹನಗಳನ್ನು ಓವರ್ ಟೇಕ್ ಮಾಡುವ ಗಡಿಬಿಡಿಯಲ್ಲಿ ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿಪಡಿಸಿದ್ದು, ಈ ಢಿಕ್ಕಿ ರಭಸಕ್ಕೆ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ಎ.ಜೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಎಡಕೋಲು ಕಾಲಿನಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಕೂಡ ಗಾಯಗಳಾಗಿರುತ್ತವೆ

 

Mangalore East Traffic PS               

ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ SMT JYOTHI D SOUZA ರವರ  ಗಂಡ ಸುನೀಲ್ ಡಿ ಸೋಜಾ ಪ್ರಾಯ 54 ವರ್ಷ ಎಂಬವರು ದಿನಾಂಕ : 06-02-2024 ರಂದು ಎಕ್ಕೂರಿನ ಮನೆಯೊಂದರಲ್ಲಿ ಪೈಂಟಿಂಗ್ ಕೆಲಸ ಮುಗಿಸಿಕೊಂಡು ತನ್ನ ಮನೆಯ ಕಡೆಗೆ  ಪಂಪ್ ವೆಲ್ ಪ್ಲೈ ಓವರ್  ರಸ್ತೆಯ ಮೂಲಕ KA-19-HE-9840 ನಂಬ್ರದ ಸ್ಕೂಟರಿನಲ್ಲಿ ಹೋಗುತ್ತಾ ಕರ್ನಾಟಕ ಬ್ಯಾಂಕ್ ಕಟ್ಟಡ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸಾಯಂಕಾಲ ಸುಮಾರು 5:00 ಗಂಟೆಗೆ KA-19-AB-7753 ನಂಬ್ರದ ಬೊಲೆರೊ ಪಿಕ್ಅಪ್ ವಾಹನವನ್ನು ಅದರ ಚಾಲಕನಾದ ಮನ್ಸೂರ್ ಎಂಬಾತನು ಎಕ್ಕೂರು ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುನೀಲ್ ಡಿ ಸೋಜಾ ರವರ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಪಿಕ್ಅಪ್ ವಾಹನದ ಹಿಂದಿನ ಎಡಬದಿ ಬಾಡಿಯು ಸುನೀಲ್ ಡಿ ಸೋಜಾ ರವರ ಸ್ಕೂಟರಿನ ಬಲಭಾಗಕ್ಕೆ ಢಿಕ್ಕಿಪಡಿಸಿದ ಪರಿಣಾಮ ಸುನೀಲ್ ಡಿ ಸೋಜಾ ರವರು ಸ್ಕೂಟರ್ ಸಮೇತ ರಾಷ್ಟ್ರೀಯ ಹೆದ್ದಾರಿ 66ನೇ ಡಾಮಾರು  ರಸ್ತೆಗೆ ಬಿದ್ದು, ಎಡಕಾಲಿನ ಮಣಿಗಂಟಿಗೆ ಮೂಳೆ ಬಿರುಕು ಬಿಟ್ಟ ಗಂಭೀರ ಸ್ವರೂಪದ ಗಾಯಗೊಂಡಿದ್ದು, ಚಿಕಿತ್ಸೆ ಬಗ್ಗೆ ಮೊದಲಿಗೆ ಎ.ಜೆ. ಆಸ್ಪತ್ರೆಗೆ ಸಾಗಿಸಲ್ಪಟ್ಟು ಬಳಿಕ ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ತದನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೊಲಾಸೋ ಆಸ್ಪತ್ರೆಗೆ ಸಾಗಿಸಲ್ಪಟ್ಟು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬಿತ್ಯಾದಿ.

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 08-02-2024 ರಂದು ಫಿರ್ಯಾದಿ RANJEETH KUMAR ಇವರು ತನ್ನ ಬಾಬ್ತು ಮೊಟಾರ್ ಸೈಕಲ್ ನಂಬರ್ KA-21-EB-6099 ನೇದರಲ್ಲಿ ವಿಜಯ್ (19 ವರ್ಷ) ರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಳ್ಳಾಲದಿಂದ ಸಮ್ಮರ್ ಸೆಂಟ್ ರೆಸರ್ಟ್ ಕಡೆ ಹೊರಟು ಸದ್ರಿ ರೆಸರ್ಟ್ ಬಳಿ ಬಲಕ್ಕೆ ತಿರುವು ಪಡೆಯಲು ಇಂಡಿಕೇಟರ್ ಹಾಕಿ ನಿಧಾನಿಸುತ್ತಿದ್ದಂತೆ ಎದುರಿನಿಂದ ಅಂದರೆ ಸೋಮೇಶ್ವರ ಮುಖಚರಿ ಕಡೆಯಿಂದ ಬಂದ KA-19-HQ-0844 ನೇ ಸ್ಕೂಟರ್ ಸವಾರ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟರ್ ಸೈಕಲ್ ನ ಮುಂಭಾಗದ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸವಾರರಿಬ್ಬರು ಮೊಟಾರು ಸೈಕಲ್ ಸಮೇತ ರಸ್ತೆ ಬದಿಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಎಡಕಾಲಿನ ಪಾದದ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತಗಾಯವಾದವರನ್ನು ಸಾರ್ವಜನಿಕರು ಉಪಚರಿಸಿ ಸಹರಾ ಆಸ್ಪತ್ರೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾದವರನ್ನು ಪರೀಕ್ಷಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

 

Mangalore South PS

 ದಿನಾಂಕ 08-02-2024 ರಂದು ಬೆಳಿಗ್ಗೆ 07-00 ಗಂಟೆಯಿಂದ ಬೆಳಿಗ್ಗೆ 9-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಕ್ಲಾರ್ಕ್ ಟವರ್ ಬಳಿ ರಾಜಾಜಿ ಪಾರ್ಕ್ ನ ಉತ್ತರ ಬದಿಯ ಗೇಟಿನ ಹತ್ತಿರ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದುದಾರರಾದ Hirya Naik  Lamani ರವರ  ಆರ್. ಸಿ. ಮಾಲಕತ್ವದ KA 19 S 5414 ನೊಂದಣಿ ಸಂಖ್ಯೆಯ, 04J16F06858  ಚೆಸಿಸ್ ನಂಬ್ರದ, 04J15E06268  ಇಂಜೀನ್ ನಂಬ್ರದ 2004 ನೇ ಮೋಡಲ್ ನ Black-Purple ಬಣ್ಣದ ಅಂದಾಜು ರೂಪಾಯಿ 40,000/- ಬೆಲೆ ಬಾಳುವ ಸ್ಲೈಂಡರ್ ಪ್ಲಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 10-02-2024 08:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080