ಅಭಿಪ್ರಾಯ / ಸಲಹೆಗಳು

Mangalore South PS

ದಿನಾಂಕ 10-12-2022 ರಂದು 22-30  ಗಂಟೆಯಿಂದ ದಿನಾಂಕ 11-12-2022 ರಂದು ಬೆಳಿಗ್ಗೆ 06-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ, ಬಾಬುಗುಡ್ಡೆ 1ನೇ ಕ್ರಾಸ್ ನಲ್ಲಿರುವ ಪಿರ್ಯಾದಿದಾರರ MEGNESH VENKATESH JADHAV ವಾಸ್ತವ್ಯದ ಅಲೆನ್ ವಿಲ್ಲಾ ಎಂಬ ಹೆಸರಿನ ಕಂಪೌಂಡಿನಲ್ಲಿ ಪಾರ್ಕ್ ಮಾಡಿದ ಪಿರ್ಯಾದುದಾರರ ಆರ್. ಸಿ. ಮಾಲಕತ್ವದ KA 19 HG 7385 U 8637 ನೊಂದಣಿ ಸಂಖ್ಯೆಯ ಸಂಖ್ಯೆಯ, ME4JF914CMG448520 ಚೆಸಿಸ್ ನಂಬ್ರದ, JF91EG1447542 ಇಂಜೀನ್ ನಂಬ್ರದ 2021ನೇ ಮೋಡಲ್ ನ ನೀಲಿ ಬಣ್ಣದ ಅಂದಾಜು ರೂಪಾಯಿ 60,000/- ಬೆಲೆ ಬಾಳುವ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ನಂತರ ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಕಳವಾದ ದ್ಚಿಚಕ್ರ ವಾಹನದ ಡಿಕ್ಕಿಯಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್ .ಸಿ. ಮತ್ತು ಇನ್ಸೂರೆನ್ಸ್ ನ ಮೂಲ ಪ್ರತಿ ಕೂಡ ಇರುತ್ತದೆ.  ಎಂಬಿತ್ಯಾದಿಯಾಗಿರುತ್ತದೆ.

Mangalore South PS                                                 

 ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಮ್ ರವರು ಅಪರಾಧ ಪ್ರಕರಣಗಳಲ್ಲಿ ವಿಚಾರಣೆಗೆ ಬೇಕಾಗಿದ್ದ  ಮಹಮ್ಮದ್ ಅಸ್ಗರ್ ಕರಿನ್ಕಲ್ಲನ್ ಪ್ರಾಯ: 26 ವರ್ಷ, ತಂದೆ: ಮಹಮ್ಮದ್ ಕುಂಞ, ವಾಸ: ಕೆ.ಕೆ ಹೌಸ್, ಬೋಟ್ ಜಟ್ಟಿ ಹತ್ತಿರ, ಅಲಿಕೋಡೆ, ಪ್ಪಿನಿಸ್ಸೇರಿ, ಕಣ್ಣೂರು, ಕೇರಳ ರಾಜ್ಯ  ಎಂಬಾತನನ್ನು ದಿನಾಂಕ 08-03-2023 ರಂದು  ಮಧ್ಯಾಹ್ನ 3-30 ಗಂಟೆಗೆ ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆದು ದಿನಾಂಕ 08-03-2023 ರಂದು ರಾತ್ರಿ 8-30 ಗಂಟೆಗೆ ಮಂಗಳೂರು ತಲುಪಿ ಈತನನ್ನು ಮಾಧಕ ವಸ್ತು ಗಾಂಜಾ ವಸ್ತುವಿನ ಸಾಗಾಟ, ಮಾರಾಟ ಹಾಗೂ ಸೇವನೆ ಬಗ್ಗೆ ವಿಚಾರಿಸಿದಾಗ ಈತನು ದಿನಾಂಕ 06-03-2023 ರಂದು  ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಲ್ಲಿ ಗಾಂಜಾ ಪಡೆದು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುವುದರಿಂದ ಮೊಹಮ್ಮದ್ ಅಸ್ಗರ್ ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈತನು  ಮಾಧಕ ವಸ್ತು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.                       

Surathkal PS    

ದಿನಾಂಕ 04-03-2023 ರಂದು ರಾತ್ರಿ ಸಮಯ ಸುಮಾರು 10:30 ಗಂಟೆಗೆ ಪಿರ್ಯಾದಿ Lokesh Bollaje ಕಾಟಿಪಳ್ಳ 1ನೇ ಬ್ಲಾಕ್ ನಲ್ಲಿರುವ ಶೈಲೇಶ್ ರವರನ್ನು ಭೇಟಿ ಮಾಡಲು ಮನೆಯ ಹತ್ತಿರ ಹೋದ ಸಮಯದಲ್ಲಿ ಪರಿಚಯದ ಗಣೇಶ್ ದೇವಾಡಿಗ ಎಂಬವರು ಆಟೋರಿಕ್ಷಾದಲ್ಲಿ ಬಂದು ಪಿರ್ಯಾದಿದಾರರನ್ನು ನೋಡಿದವರೇ ಬೇವರ್ಸಿ ಇಲ್ಲಿಗೆ ಯಾಕೆ ಬಂದಿದ್ದೀಯಾ ಎಂದು ಅವಾಚ್ಯ ಶಬ್ಧಗಳಿಂದ ಬೈಯಲು ಪ್ರಾರಂಭಿಸಿದ್ದು ಪಿರ್ಯಾದಿದಾರರ ಜೊತೆಯಲ್ಲಿದ್ದ ಶಾಂತ ಕುಮಾರ್ ಹಾಗೂ ಜಯ ಕುಮಾರ್ ಇವರುಗಳು ಸಮಾಧಾನ ಮಾಡಲು ಪ್ರಯತ್ನಿಸಿದ್ದು ಅವರ ಮಾತು ಕೇಳದೇ ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಬೇವರ್ಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಈ ಬಗ್ಗೆ ಮೇಲ್ಕಾಣಿಸಿದ ಆರೋಪಿಯ ವಿರುದ್ಧ ಕ್ರಮ ಜರುಗಿಸುವರೇ ಎಂಬಿತ್ಯಾದಿಯಾಗಿರುತ್ತದೆ.

Kankanady Town PS        

ಪಿರ್ಯಾದಿ ಪಿಎಸ್ಐ ಪ್ರತಿಭಾ ಕೆ.ಹೆಚ್  ಮತ್ತು ಠಾಣಾ ಸಿಬ್ಬಂದಿರವರ ಜೊತೆ ದಿನಾಂಕ  08-03-2023 ರಂದು ಠಾಣಾ ವ್ಯಾಪ್ತಿಯಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಕಣ್ಣೂರು ಕೊಡೆಕ್ಕಲ್ ಬಸ್ ನಿಲ್ದಾಣದ ಬಳಿ ಯುವಕನೋರ್ವ ಅನುಮಾನಾಸ್ಪದವಾಗಿ ನಿಂತುಕೊಂಡಿರುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ಸಮಯ ಸುಮಾರು 14:10 ಗಂಟೆಗೆ ಬಂದಾಗ ಕಣ್ಣೂರು ಕೊಡೆಕ್ಕಲ್ ಬಸ್ ನಿಲ್ದಾಣದ ಬಳಿ ನಿಂತುಕೊಂಡಿದ್ದ ಯುವಕನನ್ನು  ಕಂಡು  ಆತನನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ಆತನು ತನ್ನ ಹೆಸರು: ಆಲ್ವಿನ್ ಸಿಕ್ವೇರಾ (37), ವಾಸ: ನಂ. 506 ಎ. ಬ್ಲಾಕ್ ಪ್ಯಾಲೇಸ್ ಗಾರ್ಡನ್, ಆನೆಗುಂಡಿ ಬಿಜೈ, ಮಂಗಳೂರು ತಾಲೂಕು, ದ.ಕ. ಜಿಲ್ಲೆ ಎಂಬುದಾಗಿ ತಿಳಿಸಿದನು. ವಿಚಾರಣೆ ನಡೆಸಿದಾಗ ಆತನು ತಾನು ನಿಷೇದಿತ ಮಾದಕ ಪದಾರ್ಥವನ್ನು ಸೇವಿಸಿರುವುದನ್ನು ಒಪ್ಪಿಕೊಂಡಿರುತ್ತಾನೆ. ನಿಷೇದಿತ ಮಾದಕ ಪದಾರ್ಥ ಸೇವಿಸಿದ ಬಗ್ಗೆ ದೃಡೀಕರಿಸುವರೇ ವೈದ್ಯಾಧಿಕಾರಿಯವರು ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ಕಳುಹಿಸಿಕೊಟ್ಟಲ್ಲಿ  ಆಲ್ವಿನ್ ಸಿಕ್ವೇರಾ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ನಿಷೇದಿತ ಮಾದಕ ಪದಾರ್ಥ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸುವರೇ ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ನಿವೇದಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 09-03-2023 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080