ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ: 08-03-2024 ರಂದು ಫಿರ್ಯಾದಿ BASAVARAJ CHINNAGUNDI  ಇವರು ಶ್ರೀ ಪದ್ಮಾಂಭ ಟ್ರಾನ್ಸ್ ಪೊರ್ಟ್  ಕಂಪನಿಯ ಲಾರಿ ನಂ. KA-63-A-2458 ನೇದರಲ್ಲಿ ಕ್ಲೀನರ್ ಆಗಿ ಬುಡ್ಡೆಸಾಬ್ ಎಂಬವರು ಚಾಲಕರಾಗಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೊರಟಿದ್ದು, ತಲಪಾಡಿ ಗಡಿ ಭಾಗದ ಆರ್ ಟಿ ಓ ಚೆಕ್ ಪೋಸ್ಟ್ ಗೆ ವಾಹನ ತಪಾಸಣೆ ಸಲುವಾಗಿ ತಲಪಾಡಿ ಅಬಕಾರಿ ತಪಾಸಣ ಠಾಣೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿದ್ದ ಸಮಯ ಸುಮಾರು 7-50 ಗಂಟೆಗೆ  KA-19-W-7308 ನೇ ನಂಬ್ರದ ಮೊಟಾರು ಸೈಕಲ್ ಸವಾರ ಮೊಹಮ್ಮದ್ ಶಾದ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮೊಟಾರು ಸೈಕಲನ್ನು ಸವಾರಿ ಮಾಡಿಕೊಂಡು ಬಂದು ಲಾರಿಯ ಹಿಂಭಾಗದ ಮಧ್ಯ ಭಾಗಕ್ಕೆ ಡಿಕ್ಕಿಪಡಿಸಿ ಬೈಕ್ ಸಮೇತವಾಗಿ ರಸ್ತೆಗೆ ಬಿದ್ದಿದ್ದು ಆತನ ತಲೆಗೆ ರಕ್ತ ಗಾಯವಾಗಿದ್ದು ಬೈಕ್ ಕೂಡ ಜಖಂಗೊಂಡಿರುತ್ತದೆ. ಕೂಡಲೇ ಗಾಯಾಳುವನ್ನು ಉಪಚರಿಸಿ ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ, ಫಿರ್ಯಾದಿ MAHAMMAD HANEEF  ಇವರು ದಿನಾಂಕ: 08-03-2024 ರಂದು ತನ್ನ ಹೆಂಡತಿ, ಮಕ್ಕಳು ಮತ್ತು ಸಂಬಂಧಿಕರ ಜೊತೆಗೆ ಕಲ್ಲಾಪು ಬಳಿ ಇರುವ ವುಡ್ ಸ್ಟ್ರೀಟ್ ಹೋಟೆಲ್ ನಲ್ಲಿ ತಿಂದು ಬಳಿಕ ಮನೆಯಾದ ದೇರಳಕಟ್ಟೆಗೆ ಹೋಗಲು ತೊಕ್ಕೊಟ್ಟಿನಿಂದ ಮಂಗಳೂರಿಗೆ ಹೋಗುವ ರಾ.ಹೆ. 66 ರನ್ನು ದಾಟಿ ಮಧ್ಯದ ಡಿವೈಡರ್ ತಲುಪಿದಾಗ ತೊಕ್ಕೊಟ್ಟು ಕಡೆಯಿಂದ ಬಂದ ಮೊಟಾರು ಸೈಲಕ್ ನಂ. KA-19-EQ-1333 ನೇದರ ಸವಾರ ಯಶಸ್ಸು ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮೊಟಾರು ಸೈಕಲನ್ನು ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಜೊತೆಗಿದ್ದ ಅವರ ಭಾವನ ಹೆಂಡತಿಯಾದ ಜಮೀಲ (46 ವರ್ಷ) ರವರ ಎಡಕಾಲಿಗೆ ಡಿಕ್ಕಿಪಡಿಸಿದ ಪರಿಣಾಮ ರಸ್ತೆಗೆ ಬಿದ್ದ ಜಮೀಲರವರನ್ನು ಉಪಚರಿಸಿ ಆಟೋರಿಕ್ಷಾವೊಂದರಲ್ಲಿ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈಧ್ಯರು ಜಮೀಳರವರ ಎಡಕಾಲಿನ ಮಣಿಗಂಟಿನ ಕೆಳ ಭಾಗದಲ್ಲಿ ಗುದ್ದಿದ ನಮೂನೆ ಗಾಯ ಹಾಗೂ ತಲೆಗೆ ಗುದ್ದಿದ ಗಾಯವಾದ ಬಗ್ಗೆ ತಿಳಿಸಿದ್ದು, ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 04-03-2024 ರಂದು ಮಹಮ್ಮದ್ ನಿಯಾಲ್ ನು ಶ್ರೀಮತಿ ನೊರ್ ಜಾನ್ (32 ವರ್ಷ) ರವರನ್ನು ದೆಮ್ಮಲೆಗೆ ಬಿಟ್ಟು ಬರಲು KA-19-HP-2486 ನೇ ನಂಬ್ರದ ಮೊಟಾರ್ ಸೈಕಲ್ ನಲ್ಲಿ ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬದ್ರಿಯ ನಗರದಿಂದ ದೆಮ್ಮಲೆಗೆ ಸವಾರಿ ಮಾಡಿಕೊಂಡು ಹೊರಟು ಕರುಣಾಕರ ಶೆಟ್ಟಿಯವರ ಬಾಬ್ತು ಬಸ್ ನಿಲ್ದಾಣ ತಲುಪುತ್ತಿದ್ದಂತೆ ಸಮಯ ಸುಮಾರು 16-00  ಗಂಟೆಗೆ ಮಹಮ್ಮದ್ ನಿಯಾಲ್ ನು ಮೊಟಾರ್ ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನೂರ್ ಜಾನ್ ರವರು ರಸ್ತೆಗೆ ಎಸೆಯಲ್ಪಟ್ಟಿದ್ದು ಸದ್ರಿಯವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ತುಂಬೆ ಆಸ್ಪತ್ರೆಗೆ ಕರೆತಂದಿದ್ದು ಪರೀಕ್ಷಿಸಿದ ವೈಧ್ಯರು ನೂರ್ ಜಾನ್ ರವರಿಗೆ ಮುಖಕ್ಕೆ, ದವಡೆಗೆ ಗುದ್ದಿದ ಗಾಯವಾಗಿರುವುದಾಗಿ, ಮುಂದಿನ ಮೂರು ಹಲ್ಲುಗಳು ಹೋಗಿದ್ದು, ಕೈ ಕಾಲುಗಳಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ. ನೂರ್ ಜಾನ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ನೂರ್ ಜಾನ್ ರವರ ಮನೆಯವರಲ್ಲಿ ಅಪಘಾತದ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ

 

Mangalore North PS

ದಿನಾಂಕ: 09-03-2024 ರಂದು  ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ಇವರು ತಮ್ಮ ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಭಾವುಟಗುಡ್ಡ ಬಳಿ ತಲುಪಿದಾಗ  ಸಚಿನ್ ಎನ್. ಬಿ, ಪ್ರಾಯ: 22 ವರ್ಷ, ತಂದೆ: ನರೇಶ್ ಜಿ ಪಿ,  ವಾಸ: ಬನ್ನೂರ್ ಕಟ್ಟೆ ಹೌಸ್, ಕರ್ಮಳ ಕೆ, ಎಮ್ ಸ್ಟೋರ್ ಎದುರುಗಡೆ, ಕರ್ಮಳ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ  ಎಂಬಾತನು  ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಮುಂದಿನ ಕ್ರಮದ ಬಗ್ಗೆ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿದ್ದು ಆತನವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

 

Kankanady Town PS

ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ Rajakumara P ಇವರು ಮೂಲತಃ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾಗಿದ್ದು,ಪ್ರಸ್ತುತ ಜೆಪ್ಪು ಕುಡ್ಪಾಡಿಯಲ್ಲಿ ವಾಸಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ  ಬಳಿ KL 14 L 3580 ನೇ ನಂಬ್ರದ ಹೀರೋ ಹೋಂಡಾ ಪ್ಯಾಶನ್ ಪ್ರೋ ಮೋಟಾರ್ ಬೈಕ್ ಇದ್ದು,ದಿನಾಂಕ:26-02-2024 ರಂದು ಬೆಳಗ್ಗೆ  ಸುಮಾರು 8.00 ಗಂಟೆಗೆ ಅವರ KL 14 L 3580 ನೇ ನಂಬ್ರದ ಹೀರೋ ಹೋಂಡಾ ಪ್ಯಾಶನ್ ಪ್ರೋ ಮೋಟಾರ್ ಬೈಕ್ ನ್ನು ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿ ಬೈಕ್ ಇಟ್ಟು ಉಪ್ಪಳಕ್ಕೆ ಹೋಗಿದ್ದು ವಾಪಾಸ್ಸು ರಾತ್ರಿ ಸುಮಾರು 9.30 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ ಪಿರ್ಯಾದಿದಾರರು ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ಪಾರ್ಕಿಂಗ್ ಮಾಡಿದ ಸ್ಥಳದ ಸುತ್ತಮುತ್ತ ಹುಡುಕಾಡಿದರೂ ಸ್ಕೂಟರ್ ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 26-02-2024 ರಂದು ಬೆಳಿಗ್ಗೆ 08:30 ಗಂಟೆಯಿಂದ ರಾತ್ರಿ 9:30 ಗಂಟೆಯ ಮಧ್ಯಾವದಿಯಲ್ಲಿ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿ ಲಾಕ್ ಮಾಡಿ ನಿಲ್ಲಿಸಿದ್ದ ನನ್ನ KL 14 L 3580 ನೇ ನಂಬ್ರದ ಹೀರೋ ಹೋಂಡಾ ಪ್ಯಾಶನ್ ಪ್ರೋ ಮೋಟಾರ್ ಬೈಕ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

ಕಳ್ಳತನವಾದ ನನ್ನ ಸ್ಕೂಟರಿನ ವಿವರ:

ನೋಂದಣಿ ಸಂಖ್ಯೆ: KL 14 L 3580, Model- ಹೋಂಡಾ ಪ್ಯಾಶನ್ ಪ್ರೋ Engine No-HA10EDCHA13471 Chassis No- MBLHA10EWCHA13119

 

Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಈ ದಿನ ದಿನಾಂಕ 09-03-2024 ರಂದು  ಕಣ್ಣೂರು ನೇತ್ರಾವತಿ ನದಿ ಕಿನಾರೆ ಬಳಿ ಝಾವೀದ್.ಎ.ಹೆಚ್ ನು ಎಂಬಾತನು ಯಾವುದೋ ಮಾದಕ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು  ಮುಂದಿನ ಕ್ರಮದ ಬಗ್ಗೆ  ಆರೋಪಿಯನ್ನು ಮಂಗಳೂರು ಕೆ.ಎಸ್.ಹೆಗಡೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಿದಾಗ,  ಆರೋಪಿಯು ಮಾದಕ ವಸ್ತು ಗಾಂಜಾ ಹಾಗೂ AMPHETAMINES  ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ವೈಧ್ಯರ ವರದಿಯಿಂದ ದೃಢಪಟ್ಟಿರುತ್ತದೆ, ಎಂಬಿತ್ಯಾದಿಯಾಗಿರುತ್ತದೆ.

 

Kankanady Town PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ 09-03-2024  ಎಕ್ಕೂರು ಮೈದಾನದ ಬಳಿ ಆರೋಪಿ ಅಬೂಬಕ್ಕರ್ ಸಿದ್ಧಿಕ್ ಪ್ರಾಯ:39 ವರ್ಷ ಎಂಬಾತನು ಯಾವುದೋ ಮಾದಕ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು  ಮುಂದಿನ ಕ್ರಮದ ಬಗ್ಗೆ   ಮಂಗಳೂರು ಕೆ.ಎಸ್.ಹೆಗಡೆ ಆಸ್ಪತ್ರೆಯ ವೈಧ್ಯರ ಮುಂದೆ ಹಾಜರುಪಡಿಸಿದಾಗ  ಆರೋಪಿಯು ಮಾದಕ ವಸ್ತು ಗಾಂಜಾ ಹಾಗೂ AMPHETAMINES  ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ವೈಧ್ಯರ ವರದಿಯಿಂದ ದೃಢಪಟ್ಟಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 11-03-2024 09:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080