ಅಭಿಪ್ರಾಯ / ಸಲಹೆಗಳು

Crime report in Bajpe PS

ಪಿರ್ಯಾದಿ sri Gurappa kanthi ದಿನಾಂಕ: 09-06-2023 ರಂದು ಬೆಳಿಗ್ಗೆ 10-15 ಗಂಟೆಗೆ  ರೌಂಡ್ಸ್ ಕರ್ತವ್ಯಕ್ಕೆ ಹೋಗುತ್ತಾ ಸುಮಾರು  11-00 ಗಂಟೆಗೆ ಮಂಗಳೂರು ತಾಲೂಕು  ನಡುಗೋಡು ಗ್ರಾಮದ ಮಿತ್ತಬೈಲು ಎಂಬಲ್ಲಿ ತಲುಪಿದಾಗ  ನಂದಿನಿ ನದಿ ತೀರದಲ್ಲಿ ಟಾಟಾ ಹಿಟಾಚಿಯಲ್ಲಿ ನದಿಯಿಂದ  ಯಾವುದೇ ಪರವಾನಿಗೆ ಇಲ್ಲದೇ ಮರಳುನ್ನು ಅಕ್ರಮವಾಗಿ ತೆಗೆಯುವುದು ಕಂಡು ಬಂದಿದ್ದು ನಮ್ಮನ್ನು  ನೋಡಿ  ಟಾಟಾ ಹಿಟಾಚಿ ಚಾಲಕ ಅಲ್ಲಿಂದ ಓಡಿಹೋಗಿರುತ್ತಾನೆ,  ನಂತರ ಸದ್ರಿ ಸ್ಧಳಕ್ಕೆ ಪಂಚರನ್ನು ಬರಮಾಡಿಕೊಂಡಿದ್ದು ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡಿದ್ದು ಈ ಅಕ್ರಮ ಮರಳುಗಾರಿಕೆಯನ್ನು ಅದೇ ಊರಿನ ನವೀನ್ ಮತ್ತು ಹಿಟಾಚಿಯ ಮಾಲೀಕ, ಚಾಲಕ ಮತ್ತು ಇತರರು ಸೇರಿ ಮರಳನ್ನು ತೆಗೆಯುತ್ತಿರುವುದಾಗಿ ಪಂಚರು ತಿಳಿಸಿರುತ್ತಾರೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕಾಗಿ ಪಿರ್ಯಾದಿದಾರರು ದೂರುನ್ನು ನೀಡಿರುತ್ತಾರೆ ಎಂಬಿತ್ಯಾದಿ.

Kavoor PS

ಪಿರ್ಯಾದಿ ಶ್ರೀ ಮಂಜ ಪ್ರಾಯ 42 ವರ್ಷ ಎಂಬವರು ಮಾರುತಿ ಒಮಿನಿ ಕಾರಿನ ನೋಂದಣಿ ನಂಬ್ರ KA-20-M-3338  ನೇಯದರ ಮಾಲಕನಾಗಿರುತ್ತಾರೆ. ತನ್ನ ಬಾಬ್ತು ಮಾರುತಿ ಒಮಿನಿ ಕಾರನ್ನು ದಿನಾಂಕ: 07-06-2023 ರಂದು ರಾತ್ರಿ ಸುಮಾರು 10.00 ಗಂಟೆಗೆ ಪ್ರವೀಣ್ ಚಂದ್ರ ಕಂಪೌಂಡ್ ನಲ್ಲಿ ನಿಲ್ಲಿಸಿದ್ದು, ಮರುದಿನ ದಿನಾಂಕ: 08-06-2023 ರಂದು ಬೆಳಿಗ್ಗೆ 06.30 ಗಂಟೆಗೆ ನೋಡಿದಾಗ ಫಿರ್ಯಾದಿದಾರರು ನಿಲ್ಲಿಸಿದ್ದ ಮಾರುತಿ ಒಮಿನಿ ಕಾರು ಕಾಣಿಸದೇ ಇದ್ದು,  ಯಾರೋ ಕಳ್ಳರು ದಿನಾಂಕ 07-06-2023 ರಂದು ರಾತ್ರಿ ಸುಮಾರು 10.00  ಗಂಟೆಯಿಂದ  ದಿನಾಂಕ 08-06-2023 ರಂದು ಬೆಳಿಗ್ಗೆ 06.30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮಾರುತಿ ಒಮಿನಿ ಕಾರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮಾರುತಿ ಒಮಿನಿ ಕಾರಿನ ಅಂದಾಜು ಮೌಲ್ಯ ರೂ 40,000/- ಆಗಿದ್ದು, ಇದರ CHASSIS NO: ST91IN188743 ಮತ್ತು ENGINE NO: F8BIN1444198 ಆಗಿರುತ್ತದೆ. ಎಂಬಿತ್ಯಾದಿ.

Mangalore West Traffic PS

ಪಿರ್ಯಾದಿ SHREYASH K B ತಂದೆಯವರಾದ ಬಿ.ಕೃಷ್ಣಪ್ರಸಾದ್ [62] ರವರು ದಿನಾಂಕ:06-06-2023 ರಂದು ಕೆಲಸಕ್ಕೆಂದು ಮನೆಯಿಂದ ಹೊರಟು ಕಾರ್ ಸ್ಟ್ರೀಟ್  ಭವಂತಿ ರಸ್ತೆಯಲ್ಲಿರುವ ಹನುಮ ಹೋಟೇಲ್ ಬಳಿ ರಸ್ತೆ ದಾಟುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 9-00 ಗಂಟೆಗೆ ಕಾರ್ ಸ್ಟ್ರೀಟ್ ಕಡೆಯಿಂದ KA-19-R-9416ನೇ ನಂಬ್ರದ ಮೋಟಾರು ಸೈಕಲ್ ನ ಸವಾರನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ತಂದೆ ರಸ್ತೆ ಬಿದ್ದು ಹಣೆಗೆ, ತುಟಿ, ಮೂಗು ಹಾಗೂ ಕಾಲಿಗೆ ರಕ್ತಗಾಯವಾಗಿ ಯೆನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

Mangalore East Traffic PS

ಪಿರ್ಯಾದಿ COLIN CASTELINO ತಂದೆ ಜೇರೂಮ್ ಕ್ಯಾಸ್ಟೋಲಿನೋ ರವರು ಈ ದಿನ ದಿನಾಂಕ: 08-06-2023 ರಂದು ಬೆಳಿಗ್ಗೆ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-EM-8367 ನೇಯದನ್ನು ಚಲಾಯಿಸಿಕೊಂಡು ಕೆ.ಪಿ.ಟಿ ಕಡೆಯಿಂದ ಪದವು ಕಡೆಗೆ ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 7-20 ಗಂಟೆಗೆ ಪದವು ಜಂಕ್ಷನ್ ಬಳಿ ಇರುವ ಹಂಪ್ಸ್ ಬಳಿ ತಲುಪುತ್ತಿದ್ದಂತೆ ಅವರ ಹಿಂಭಾಗದಲ್ಲಿದ್ದ ಕಾರು ನೊಂದಣಿ ಸಂಖ್ಯೆ: KA-01-ML-5357 ನೇಯದನ್ನು ಅದರ ಚಾಲಕನು ಸ್ಕೂಟರನ್ನು ಬಲ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಸದ್ರಿ ಕಾರಿನ ಎಡ ಭಾಗದ ಸೈಡ್ ಮಿರರ್ ಜೇರೂಮ್ ಕ್ಯಾಸ್ಟೋಲಿನೋ ರವರ ಕೈಗೆ ಢಿಕ್ಕಿಯಾಗಿ ಜೇರೂಮ್ ಕ್ಯಾಸ್ಟೋಲಿನೋ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತಗಾಯವಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಸಾರ್ವಜನಿಕರು ಉಪಚರಿಸಿ ಢಿಕ್ಕಿ ಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆಗಾಗಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಎಂಬಿತ್ಯಾದಿ.

Mangalore East Traffic PS

ದಿನಾಂಕ ;06/06/2023 ರಂದು ರಾತ್ರಿ ಪಿರ್ಯಾದಿ ಹೆಲ್ಗಾ. ಎಲ್ ಸಿಕ್ವೇರಾ ರವರು ತನ್ನ ಅಣ್ಣನ ಮಾಲಿಕತ್ವದ KA-19-MB-7394 ನಂಬ್ರದ ಚೆವರ್ ಲೆಟ್ ಕಾರನ್ನು ಚಲಾಯಿಸಿಕೊಂಡು ತನ್ನ ಮನೆಯಾದ ಕುಲಶೇಖರದಿಂದ TMA PAI ಹಾಲ್ ನಲ್ಲಿ ನಡೆಯುತ್ತಿದ್ದ CA National Conference ಗೆ ಹೋಗಲು ನಂತೂರು ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸುಮಾರು 7-20 ಗಂಟೆಗೆ ಕದ್ರಿ ಶಿವಭಾಗ್ ಸರ್ಕಲ್ ಬಳಿ ಇರುವ  ಕೆ.ಎಫ್.ಸಿ ರೆಸ್ಟೋರೆಂಟ್ ಎದುರುಗಡೆ ತಲುಪಿದಾಗ ಅದೇ ರಸ್ತೆಯಲ್ಲಿ KA-19-AA-9661 ನಂಬ್ರದ ರಾಜಲಕ್ಷ್ಮೀ ಎಂಬ ಹೆಸರಿನ ಬಸ್ಸನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರನ್ನು ಎಡಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಕಾರಿನ ಎಡಭಾಗಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಎಡಬದಿಗೆ ಜಖಂ ಉಂಟಾಗಿರುತ್ತದೆ. ಅಪಘಾತ ಪಡಿಸಿದ ಬಸ್ಸು ಚಾಲಕನಲ್ಲಿ ಪಿರ್ಯಾದಿದಾರರು ಈ ಬಗ್ಗೆ  ವಿಚಾರಿಸಿದ ವೇಳೆ ಆತನು ರಿಪೇರಿ ವೆಚ್ಚವನ್ನು ನೀಡುವುದಾಗಿ ಒಪ್ಪಿ ಪ್ರಸ್ತುತ ನಿರಾಕರಿಸಿದ್ದರಿಂದ ತಡವಾಗಿ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಅಪಘಾತ ಪಡಿಸಿದ ಬಸ್ಸು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Urva PS

ದಿನಾಂಕ 08-06-2023 ರಂದು ಠಾಣಾ ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಫ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ 22-00 ಗಂಟೆಯ ವೇಳೆ ಬಿಜೈ ಆನೆಗುಂಡಿ ಪ್ರೆಶ್ ಫಿಶ್ ಅಂಗಡಿಯ ಬಳಿ ಅನುಮಾನಸ್ಪದವಾಗಿ ನಿಂತುಕೊಂಡಿದ್ದವರನ್ನು ವಿಚಾರಿಸಲಾಗಿ ಹೆಸರು ವಿಳಾಸ ಕೇಳಿದ್ದು,. ಈತನು ಮಾತನಾಡುವಾಗ ನಶೆಯಲ್ಲಿದ್ದಂತೆ ಸೀಗರೇಟ್ ಸೇವನೆ ಮಾಡಿ ವಾಸನೆ ಬರುತ್ತಿದ್ದ ಕಾರಣ ದಿನಾಂಕಃ08-06-2023 ರಂದು ರಾತ್ರಿ 10-00 ಗಂಟೆಯ ವೇಳೆ ಸ್ಥಳದಲ್ಲಿ ವಶಕ್ಕೆ ಪಡೆದುಕೊಂಡು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಡಪಡಿಸುವ ಸಲುವಾಗಿ ಈತನನ್ನು ಮಂಗಳೂರು ಕುಂಟಿಕಾನ .ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯಾಧಿಕಾರಿಯವರು ಜೋಯಿನ್ ಜೋಸೆಪ್ ರವರನ್ನು ಪರೀಕ್ಷಿಸಿ ಗಾಂಜಾ ಸೇವಿಸಿರುವುದಾಗಿ  ನೀಡಿದ ದೃಡ ಪತ್ರವನ್ನು ನೀಡಿದ ಮೇರೆಗೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Traffic North Police Station

ಪಿರ್ಯಾದಿ Dilip Kumar ದಿನಾಂಕ:07-06-2023 ರಂದು ಅವರ ಅಣ್ಣ ಸತ್ಯರಾಜ್ ರವರ ಬಾಬ್ತು KA-19-HB-0027 ನಂಬ್ರದ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ತನ್ನ ಸ್ನೇಹಿತ ಗಣೇಶ್ ನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಗೋಳಿಜೋರ ತನ್ನ ಮನೆಯಿಂದ ಕೋಲ್ನಾಡಿಗೆ ತೆರಳುತ್ತಾ ಸಂಜೆ ಸಮಯ ಸುಮಾರು 5:30 ಗಂಟೆಗೆ ಕೋಲ್ನಾಡು ಲಿಂಗಪೈಯ ಕಾಡಿನ ಪೊಲೀಸ್ ಕ್ವಾಟ್ರಸ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ರವೀಂದ್ರ ಪ್ರಭು ಲೇನ್ ರಸ್ತೆಯಲ್ಲಿ ನಾಲ್ಕು ರಸ್ತೆ ಸೇರುವ ಜಂಕ್ಷನಿನಲ್ಲಿ ಡಾ|| ಪ್ರವೀಣ್ ಕುಮಾರ್ ರವರ ಕ್ಲೀನಿಕ್ ಕಡೆಯಿಂದ KA-19-HJ-2675 ನಂಬರದ ಸ್ಕೂಟರನ್ನು ಅದರ ಸವಾರನಾದ ಮಂಜುನಾಥ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ  ಮೋಟಾರು ಸೈಕಲಿನ ಎಡಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲಿನ ಸಮೇತ ಸಹ ಸವಾರನೊಂದಿಗೆ ರಸ್ತೆಯ ಬಲಬದಿಯ ಚರಂಡಿಗೆ ಬಿದ್ದು,ಪಿರ್ಯಾದಿದಾರರ ಎಡಕೈಯ ತೋಳಿನ ಭಾಗದಲ್ಲಿ ಮೂಳೆ ಮುರಿತವಾಗಿದ್ದು ಅಲ್ಲದೇ ಅದೇ ಕೈಯ ಮೊಣಗಂಟಿನ ಬಳಿ ಚರ್ಮ ಹರಿದು ರಕ್ತ ಗಾಯ ಮತ್ತು ಎಡಕಾಲಿನ ಕೋಲು ಕಾಲಿಗೆ ತರಚಿದ ಗಾಯವಾಗಿದ್ದು,ಸಹಸವಾರ ಗಣೇಶನಿಗೂ ಸಹ ಬಲಕಾಲಿನ ಪಾದದ ಬಳಿ ಗುದ್ದಿದ ರೀತಿಯ ನೋವಾಗಿದ್ದು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಎಂಬಿತ್ಯಾದಿ.

Kankanady Town PS

ಪಿರ್ಯಾದಿ Naveen Kumar ಅಣ್ಣ ತೇಜ ಕುಮಾರ (26 ವರ್ಷ) ಎಂಬುವರು ಮಂಗಳೂರಿನ “Atrimed Pharmaceuticals Pvt.Ltd.” ಎಂಬ ಕಂಪೆನಿಯಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡು, ಮಂಗಳೂರಿನ ಬಿಕರ್ನಕಟ್ಟೆ ಕಂಡೆಟ್ಟು ಎಂಬಲ್ಲಿ  ವಾಸವಾಗಿರುತ್ತಾರೆ.  ದಿನಾಂಕ:06-06-2023 ರಂದು ಪಿರ್ಯಾದುದಾರರ ಅಣ್ಣ ತೇಜ ಕುಮಾರ್ ರವರು ಅವರ ತಾಯಿಗೆ ಫೋನ್ ಕರೆ ಮಾಡಿ, ಕಂಪೆನಿಯ ಮೀಟಿಂಗ್ ಇರುವುದರಿಂದ ದಿನಾಂಕ:07-06-2023 ರಂದು ರಾತ್ರಿ  ಬೆಂಗಳೂರಿಗೆ ಹೋಗಲು ಇರುವುದಾಗಿ ಹೇಳಿದ್ದು, ಬೆಂಗಳೂರಿಗೆ ಹೋಗದೇ, ಮನೆಗೂ ಬಾರದೇ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡವರನ್ನು ಪಿರ್ಯಾದುದಾರರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇರುವುದರಿಂದ ಕಾಣೆಯಾದವರನ್ನು ಪತ್ತೇ ಮಾಡಿಕೋಡಬೇಕಾಗಿ ಎಂಬಿತ್ಯಾದಿ.

Mangalore South PS

ದಿನಾಂಕ 08-06-2023 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಕರಣದ  ಪಿರ್ಯಾದಿದಾರರಾದ ಮಂಗಳೂರು ನಗರ  ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ  ಶ್ರೀ ಸುದೀಪ್.ಎಂ.ವಿ ರವರಿಗೆ,  ಮಂಗಳೂರು ನಗರದ  ಕ್ಲಾಕ್ ಟವರ್ ನಿಂದ ಎ.ಬಿ.ಶೆಟ್ಟಿ  ವೃತ್ತಕ್ಕೆ  ಹೋಗುವ  ಮೈದಾನ ರಸ್ತೆಯಲ್ಲಿ ಪುಟ್ ಬಾಲ್ ಗ್ರೌಂಡ್ ನ ಹೊರಗೆ ರಸ್ತೆ ಬದಿಯಲ್ಲಿ,  ಆರೋಪಿಗಳಾದ ಮಹಮ್ಮದ್ ಅಶ್ರಫ್ @  ಚೋಟಾ ಅಶ್ರಫ್ ಹಾಗೂ ದಾವೂದ್ ಪರ್ವೇಜ್  ಎಂಬುವರುಗಳು, KA-19 MF-6668 ನೇ ಸಿಲ್ವರ್ ಬಣ್ಣದ ಮಾರುತಿ ಬೆಲೆನೋ ಕಾರಿನಲ್ಲಿ ಬಂದು ಅಕ್ರಮವಾಗಿ ಮಾದಕ ವಸ್ತುವಾದ MDMA  ನೇಯದನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ, ಮದ್ಯಾಹ್ನ  12-05 ಗಂಟೆಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು,  ಆರೋಪಿಗಳ ವಶದಿಂದ ಸುಮಾರು 2,77,000/- ರೂಪಾಯಿ ಮೌಲ್ಯದ  55.5 ಗ್ರಾಂ MDMA ಮಾದಕ ವಸ್ತು ಹಾಗೂ 25,000/- ರೂಪಾಯಿ ಮೌಲ್ಯದ  2 ಮೊಬೈಲ್ ಪೋನ್ ಗಳು,  ನಗದು ಹಣ ರೂ 3,230/-, ಗುಲಾಬಿ ಬಣ್ಣದ  ಬಟ್ಟೆಯ ಪೌಚ್-1, ಮಂಡೆ ಕತ್ತಿ-1, ಸುಮಾರು 500 ರೂ ಮೌಲ್ಯದ ಸಿಲ್ವರ್ ಬಣ್ಣದ ಡಿಜಿಟಲ್ ತೂಕ ಮಾಪನ-1, ಖಾಲಿ ಪ್ಲಾಸ್ಟಿಕ್ ಲಕೋಟೆಗಳು-100, ಸ್ಟೀಲ್ ಚಮಚ-1 ಹಾಗೂ ಸುಮಾರು 10,00,000/- ರೂ ಮೌಲ್ಯದ KA-19 MF-6668 ಸಿಲ್ವರ್ ಬಣ್ಣದ ಮಾರುತಿ ಬಲೆನೋ ಕಾರ್ ಸೇರಿ, ಒಟ್ಟು 13,05,730 ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಸದ್ರಿ ಸೊತ್ತುಗಳು, ಆರೋಪಿಗಳು ಹಾಗೂ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಠಾಣೆಗೆ ಹಾಜರಾಗಿ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ನೀಡಿದ ಸಾರಾಂಶವಾಗಿರುತ್ತದೆ.

Ullal PS     Ashok Kumar

ದಿನಾಂಕ: 08.06.2023 ರಂದು ಮದ್ಯಾಹ್ನ 1.00 ಗಂಟೆಯ ಸಮಯಕ್ಕೆ   ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ವಾಮಂಜೂರಿನ ಮುಸ್ತಫಾ ಮತ್ತು ಇತರ ಇಬ್ಬರು ಹಣವನ್ನು ಪಣವಾಗಿಟ್ಟುಕೊಂಡು ಮಟ್ಕ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಮಟ್ಕ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವುದಾಗಿದೆ. ಎಂಬಿತ್ಯಾದಿ

 

 

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080