ಅಭಿಪ್ರಾಯ / ಸಲಹೆಗಳು

Crime Reported in : Mangaluru South PS

ದಕ್ಷಿಣ ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ನಿರೀಕ್ಷಕ ಶೀತಲ್ ಅಗಲೂರು ರವರು ಠಾಣಾ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ನಲಪಾಡ್ ಕುನಿಲ್ ಟವರ್ ಅಪಾರ್ಟ್ ಮೆಂಟ್ ಗೆ ಹೋಗುವ ಒಳ ರಸ್ತೆಯ ಬಳಿಯಲ್ಲಿ ಇಬ್ಬರು ಯುವಕರಾದ  ನದೀಶ್ ಪಿ.ಎನ್, ಪ್ರಾಯ 35 ವರ್ಷ,  ವಿಳಾಸ : ಪಲ್ಲಿತಾರ ಹೌಸ್, ವೈಲಾರ್ ವಿಲೇಜ್, ಪಟ್ಟನಕಾಡು ಅಂಚೆ, ಅಲಫುಜಾ ಜಿಲ್ಲೆ, ಕೇರಳ ರಾಜ್ಯ ರಿಯಾಜ್, ಪ್ರಾಯ 25 ವರ್ಷ,  ವಿಳಾಸ : ಎಮ್.ಜೆ.ಎಮ್-503, ವಾರ್ಡ್ ನಂಬರ್ 60, ಕಸಬಾ ಬೆಂಗ್ರೆ, ಮಂಗಳೂರು ರವರುಗಳು ಅನುಮಾನಾಸ್ಪದವಾಗಿ ಕುಳಿತುಕೊಂಡಿದ್ದು, ಸದ್ರಿ ಯುವಕರುಗಳನ್ನು ವಿಚಾರಿಸಿದಾಗ ಆ ಇಬ್ಬರು ಯುವಕರು ತಮ್ಮ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಿದೇ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರೊಂದಿಗೆ ಉಡಾಫೆ ಮಾಡತನಾಡಿರುತ್ತಾರೆ. ಆ ಇಬ್ಬರು ಯುವಕರು ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿದ ನಶೆಯಲ್ಲಿದ್ದವರಂತೆ ಕಂಡುಬಂದಿದ್ದು, ಮಾದಕ ಸೇವನೆ ಮಾಡಿರುವ ಬಗ್ಗೆ ವಿಚಾರಿಸಿದಾಗ, ಅವರ ಪೈಕಿ ಒಬ್ಬಾತನು ಪಿರ್ಯಾದಿ ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ, ನಿಕ್ಲೇಗ್ ದಾಯೆಗ್ ಪನೊಡುʼ ಎಂದು ಅವಾಚ್ಯ ಶಬ್ದಗಳಿಂದ ಬೈದು, ಸಮವಸ್ತ್ರದಲ್ಲಿದ್ದ ಬಾಸ್ಕರ ರವರನ್ನು ಕೈಯಿಂದ ದೂಡಿರುತ್ತಾನೆ. ಇನ್ನೊಬ್ಬಾತನು ಪಿ.ಸಿ  ರವಿ ಕುಮಾರ್ ರವರನ್ನು ಕೈಯಿಂದ ದೂಡಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನು, 15-10 ಗಂಟೆಗೆ ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 Crime Reported in : Mangaluru South PS

ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸಿ ಹೆಚ್ ಸಿ  ಪುಟ್ಟರಾಮ್  ರವರು ಠಾಣಾ ಸಿಬ್ಬಂದಿ ಪಿ.ಸಿ  ಶಿವಾನಂದ ಬಿರಾದರ ರವರೊಂದಿಗೆ ದಿನಾಂಕ 08-08-2022 ರಂದು  15-35 ಗಂಟೆ ಸುಮಾರಿಗೆ ಠಾಣಾ ವ್ಯಾಪ್ತಿಯ ರೊಸಾರಿಯೋ ಜಂಕ್ಷನ್ ಬಳಿ ಸಮವಸ್ತ್ರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ,  ರೋಸಾರಿಯೋ ರಸ್ತೆಯಲ್ಲಿನ ಅಂಚೆ ಕಚೇರಿಯ ಪಕ್ಕದ ಕಟ್ಟಡದ ಬಳಿ ಮರೆಯಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಸೇವನೆ ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಹೋಗಿ ಆರೋಪಿಗಳಾದ, ಎಮ್.ಶಮೀರ್ ಹಾಗೂ ಬಿ.ಅಹಮ್ಮದ್ ಅಜೀಮ್ ರವರನ್ನು, ಅವರುಗಳ ಇರುವಿಕೆಯ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಸೂಕ್ತ ಕಾರಣಗಳನ್ನು ನೀಡದೆ ಉಡಾಪೆ ಮಾತುಗಳನ್ನಾಡಿದ್ದು, ಪಿರ್ಯಾದಿದಾರರನ್ನು ಉದ್ದೇಶಿಸಿ “ನಾವು ಏನು ಬೇಕಾದರೂ ಏನು ಬೇಕಾದರೂ ಮಾಡುತ್ತೇವೆ, ಎಲ್ಲಿ ಬೇಕಾದರೂ ಇರುತ್ತೇವೆ ಅದನ್ನು ಕೇಳಲು ನೀವು ಯಾರು ಎಂದು ಅವಾಚ್ಯ ಶಬ್ದಗಳಿಂದ ಬೈದು,  ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರನ್ನು ಕೈಯಿಂದ ದೂಡಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಅಪರಾಧ ಎಸಗಿರುವುದರಿಂದ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 Crime Reported in : Mangaluru South PS

 ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಗ್ರೌಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ಷರೀಫ್, ಪ್ರಾಯ: 27 ವರ್ಷ,  ವಾಸ: ನಂದಾವರ ಕೋಟೆ, ಸಜಿಪ ಮನ್ನೂರು ಗ್ರಾಮ, ಪಾಣೆ ಮಂಗಳೂರು ಪೋಸ್ಟ್, ಬಂಟ್ವಾಳ ತಾ, ದ.ಕ.ಜಿಲ್ಲೆ. ಎಂಬ ವ್ಯಕ್ತಿ  ಗಾಂಜಾ ಸೇವನೆ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದವನನ್ನು ಹಿಡಿದು ವಶಕ್ಕೆ ಪಡೆದು, ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

 

 

ಇತ್ತೀಚಿನ ನವೀಕರಣ​ : 09-08-2022 09:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080