ಅಭಿಪ್ರಾಯ / ಸಲಹೆಗಳು

 

 Crime Report in Mangalore Rural PS   

 ಪಿರ್ಯಾದಿ Laxman ದಾರರು ಮಂಗಳೂರು-ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ: 169 ಹಾದು ಹೋಗುವ ಗುರುಪುರ ಫಲ್ಗುಣಿ ನದಿಗೆ ದಿಲೀಪ್ ಬಿಲ್ಡ್ ಕಾನ್ ಲಿಮಿಟೆಡ್ ಕಂಪನಿಯ ವತಿಯಿಂದ ನಿರ್ಮಿಸಲಾಗುವ ಸೇತುವೆ ಕಾಮಗಾರಿಯನ್ನು ಸೀನಿಯರ್ ಇಂಜಿನಿಯರ್ ಆಗಿದ್ದು, ಸೇತುವೆ ಕಾಮಗಾರಿಗೆ ಉಪಯೋಗಿಸಲು ISMB Beam, MS Channel, MS Shuttering Plate, ಮುಂತಾದ ಹಳೆಯ ಕಬ್ಬಿಣದ ಸಾಮಾಗ್ರಿಗಳನ್ನು ಮಂಗಳೂರು ತಾಲೂಕು ತಿರುವೈಲು ಗ್ರಾಮದ ಪರಾರಿ ಎಂಬಲ್ಲಿಗೆ ಫಲ್ಗುಣಿ ನದಿಗೆ ಸೇತುವೆ ನಿರ್ಮಾಣ ಮಾಡುವ ಸ್ಥಳದಲ್ಲಿ ಓಪನ್ ಏರಿಯಾದಲ್ಲಿ ಹಾಕಿದ್ದು, ದಿನಾಂಕ: 03-08-2023 ರಂದು ರಾತ್ರಿ ಸುಮಾರು 02-00 ಗಂಟೆಯ ಬಳಿಕ ಯಾರೋ ಕಳ್ಳರು ಬೋಟ್ ಮೂಲಕ ಬಂದು ಸೇತುವೆ ಕಾಮಗಾರಿಗೆ ಬಳಸುವ ಹಳೆಯ ಕಬ್ಬಿಣದ ISMB Beam, MS Channel, MS Shuttering Plate ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ದಿನಾಂಕ: 04-08-2023 ರಂದು ಮೆಟೀರಿಯಲ್ ಚೆಕ್ ಮಾಡುವಾಗ ತಿಳಿದು ಬಂದಿದ್ದು, ಪಿರ್ಯಾದಿದಾರರು ಕಳವಾದ ಸೊತ್ತುಗಳನ್ನು ಪತ್ತೆ ಮಾಡಲು ಬಜಪೆ, ಮೂಡಬಿದ್ರೆ ಹಾಗೂ ಮಂಗಳೂರು ಕಡೆಗಳಲ್ಲಿರುವ ಗುಜಿರಿ ಅಂಗಡಿಗಳಿಗೆ ಭೇಟಿ ನೀಡಿ ಗುಜರಿ ಅಂಗಡಿ ಮಾಲಕರಲ್ಲಿ ವಿಚಾರಿಸಿದರೂ ಪತ್ತೆಯಾಗದೇ ಇರುವುದರಿಂದ ದಿನಾಂಕ: 09-08-2023 ರಂದು ತಡವಾಗಿ ಬಂದು ದೂರು ನೀಡಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ: 30,000-00 ಆಗಬಹುದು ಎಂಬಿತ್ಯಾದಿ

Mangalore Rural PS                                      

ದಿನಾಂಕ 09-08-2023 ರಂದು ಮಧ್ಯಾಹ್ನ 1.00 ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ಒಳಬೈಲು  ಹತ್ತಿರ ಒಬ್ಬ ವ್ಯಕ್ತಿ  ಅಮಲು ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದಿದ್ದು,    ವಿಚಾರಿಸಲಾಗಿ ಆತನು ಇಮ್ರಾನ್ (28 ವರ್ಷ), ವಾಸ;ಒಳಬೈಲು ಹೌಸ್,  ಕರಾವಳಿ ಕಾಲೇಜು ಬಳಿ, ನೀರುಮಾರ್ಗ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಆತ ಗಾಂಜಾ  ಎಂಬ ಅಮಲು ಪದಾರ್ಥ ಸೇವಿಸಿದ ನಶೆಯಲ್ಲಿ ಇರುವಂತೆ ಕಂಡು ಬಂದಿದ್ದರಿಂದ ಆತನನ್ನು ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ವೈದ್ಯಾಧಿಕಾರಿಯವರಲ್ಲಿ ಪರಿಕ್ಷೆಗೆ ಒಳಪಡಿಸಿದ್ದು  ಇಮ್ರಾನ್ (28 ವರ್ಷ) ನು ಗಾಂಜ ಎಂಬ ಮಾದಕ ವಸ್ತುವನ್ನು ಸೇವಿಸಿರುತ್ತಾನೆ ಎಂಬುದಾಗಿ ವೈದ್ಯರು ವೈದ್ಯಕೀಯ ವರದಿಯನ್ನು ನೀಡಿದಂತೆ ಪ್ರಕರಣ ದಾಖಲಿಸಲಾಗಿರುತ್ತದೆ

        

Urva PS

ಪಿರ್ಯಾಧಿದಾರರು ವಕೀಲ ಹಾಗೂ ಲೆಕ್ಕ ಪರಿಶೋದಕರಾಗಿ  ಮತ್ತು ಅವರ ಹೆಂಡತಿ ಶಿಕ್ಷಕಿಯಾಗಿ ಕೆಲಸದ ನಿಮತ್ತ ಮನೆಯಿಂದ ಹೊರಗಡೆ ಹೋಗುವ ಕಾರಣ ಪಿರ್ಯಾಧಿದಾರರ ತಾಯಿ ಒಬ್ಬರೇ ಮನೆಯಲ್ಲಿ ಇರುವುದಾಗಿದೆ. ಆದುದರಿಂದ ಪಿರ್ಯಾಧಿದಾರರು ಮನೆಯಲ್ಲಿ ಕೆಲಸ ಮಾಡಲು ಕಾಪಿಕಾಡ್ 6ನೇ ಕ್ರಾಸ್ ನ ನಿವಾಸಿ ಸುಜಾತಾ ಎಂಬವರನ್ನು ನೇಮಿಸಿದ್ದು, ಸುಜಾತಾರವರು ದಿನನಿತ್ಯ ಪಿರ್ಯಾಧಿದಾರರ ಮನೆಗೆ ಬಂದು ಮನೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ದಿನಾಂಕ:07-08-2023 ರಂದು ಪಿರ್ಯಾಧಿದಾರರ ಮನೆಯಲ್ಲಿ ಯಾರು ಇಲ್ಲದ ಸಮಯ ಸಂಜೆ ಸಮಯ ಸುಮಾರು 6-50 ವೇಳೆಗೆ ಪಿರ್ಯಾಧಿದಾರರ ಮನೆಯ ಕೆಲಸ ಮಾಡುತ್ತಿದ್ದ ಸುಜಾತಾ ರವರ ಗಂಡ ಮೋಹನ್ ಎಂಬುವರು ಪಿರ್ಯಾಧಿದಾರರ ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಮನೆಯ ಕೆಲಸ ಮಾಡುತ್ತಿದ್ದ, ಕೆಲಸದಾಕೆ ಸುಜಾತಾ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಆಕೆಗೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿ ಹೋಗಿರುತ್ತಾನೆಂದು ಪಿರ್ಯಾಧಿದಾರರು ಮನೆಗೆ ಬಂದಾಗ ಕೆಲಸದಾಕೆ ಸುಜಾತಾ ತಿಳಿಸಿದಂತೆ ಪಿರ್ಯಾಧಿದಾರರು ಆತನಿಗೆ ಕರೆ ಮಾಡಿ ವಿಚಾರಸಿದಲ್ಲಿ ಪಿರ್ಯಾಧಿದಾರರಿಗೂ ಕೂಡ ಬೈದಿರುತ್ತಾನೆ. ಪಿರ್ಯಾಧಿದಾರರು ಮತ್ತು ಅವರ ಮನೆಯವರು ಮನೆಯಲ್ಲಿ ಇಲ್ಲದ ಸಮಯ ಅವರ ಮನೆಯೊಳಗೆ ಯಾವುದೋ ದುರದ್ದೇಶದಿಂದ  ಅಕ್ರಮ ಪ್ರವೇಶ ಮಾಡಿ ಮನೆಯ ಕೆಲಸದಾಕೆಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯನ್ನು ಒಡ್ಡಿರುವಂತಹ ಮೋಹನ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Traffic North Police Station          

ಪಿರ್ಯಾದಿ Smt Savitri Sajjan ದಾರರ ಗಂಡನಾದ ಜಗದೀಶ್ ಎಸ್ ಪೆಟ್ಟಿಮಣಿ ಎಂಬುವರು ದಿನಾಂಕ 08-08-2023 ರಂದು ಸುರತ್ಕಲ್ ಗೋವಿಂದದಾಸ್ ಬಳಿ ಇರುವ ಕಾಮತ್ ಹೋಟೆಲ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ಹೋಗಲು, ರಾತ್ರಿ ಸಮಯ ಸುಮಾರು 8-40 ಗಂಟೆಗೆ ಸುರತ್ಕಲ್ ಗೋವಿಂದದಾಸ್ ಜಂಕ್ಷನ್ ಬಳಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ NH-66 ರಸ್ತೆಯನ್ನು ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಕಾರು ನಂಬ್ರ KA-19-AD-9415 ನೇ ದನ್ನು ಅದರ ಚಾಲಕ ಸಾಬು ಜೋಸೆಫ್ ಎಂಬುವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಜಗದೀಶ್ ರವರಿಗೆ  ಡಿಕ್ಕಿ ಪಡಿಸಿದ ಪರಿಣಾಮ ಜಗದೀಶ್ ರವರು ರಸ್ತೆಗೆ ಬಿದ್ದು, ಅವರ ತಲೆಗೆ ಗುದ್ದಿದ ಗಂಬೀರ ಸ್ವರೂಪದ ಗಾಯವಾಗಿರುತ್ತದೆ. ನಂತರ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Moodabidre PS

ದಿನಾಂಕ 31-07-2023 ರಂದು ಪಿರ್ಯಾದಿ Mahesh Pದಾರರ ಅಣ್ಣನ ಮಗ  ಧೀರಜ್ ರವರು ಪಿ ಜಯಶ್ರೀರವರನ್ನು ಮೂಡಬಿದ್ರೆ ಬಸ್ಸು ತಂಗುದಾಣದಿಂದ ಮನೆಯ ಕಡೆಗೆ ತನ್ನ ಬಾಬ್ತು KA19EY4734 ನಂಬ್ರದ ಮೋಟಾರು ಸೈಕಲಿನಲ್ಲಿ ಸಹ ಸವಾರಳನನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಾ ಸಂಜೆ 5:45 ಗಂಟೆ ಸಮಯಕ್ಕೆ ಪುತ್ತಿಗೆ ದ್ವಾರದ ಬಳಿ ತಲುಪುತಿದ್ದಂತೆ ಧೀರಜ್ ರವರು ಮೋಟಾರು ಸೈಕಲನ್ನು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಪಿ ಜಯಶ್ರೀರವರು ಮೋಟಾರು ಸೈಕಲಿನಿಂದ ಕೆಳಗೆ ಬಿದ್ದಿದ್ದು ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿ ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 08-08-2023 ರಂದು ರಾತ್ರಿ 8:04 ಗಂಟೆಗೆ ಮೃತ ಪಟ್ಟಿರುವುದಾಗಿರುತ್ತದೆ. ಎಂಬಿತ್ಯಾದಿ

                    

ಇತ್ತೀಚಿನ ನವೀಕರಣ​ : 21-08-2023 02:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080