ಅಭಿಪ್ರಾಯ / ಸಲಹೆಗಳು

Crime Report in :Mangalore West Traffic PS      

 ಪಿರ್ಯಾದಿ HUSSAIN SHAHID ಜೋಮೋಟೋ ಎಂಬ ಹೆಸರಿನ ಕಂಪೆನಿಯಲ್ಲಿ ಆಹಾರ ಪೂರೈಕೆಯ ಕೆಲಸ ಮಾಡುತ್ತಿದ್ದವರು ದಿನಾಂಕ:08-09-2023 ರಂದು ಆಹಾರವನ್ನು ತಲುಪಿಸುವ ಬಗ್ಗೆ ಬಿಜೈ ಕಡೆಯಿಂದ ಎಂ.ಜಿ ರಸ್ತೆಯ ಮೂಲಕ ಪಿರ್ಯಾದಿದಾರರ ಮಗನ ಬಾಬ್ತು KA-70-H-7677ನೇ ದ್ವಿ ಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದು ಪಿ.ವಿ,ಎಸ್ ಕಲಾಕುಂಜ ಕಡೆಗೆ ಹೋಗಲು ಬಿ ಜಿ ಸ್ಕೂಲ್ ಜಂಕ್ಷನ್ ಬಳಿ ತಿರುಗಿಸುವ ಸಮಯ ಸುಮಾರು ಸಂಜೆ 07.45 ಗಂಟೆಗೆ ಪಿ ವಿ ಎಸ್ ಕಡೆಯಿಂದ KL-13-AM-4312ನೇ ಮೋಟಾರು ಸೈಕಲ್ ನ್ನು ಅದರ ಸವಾರ ಸೂರ್ಯ ಕಿರಣ್ ಎಂಬಾತನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿಪಡಿಸಿ ಕಲಾಕುಂಜ ರಸ್ತೆಯಿಂದ ಬೆಸೆಂಟ್ ಸ್ಕೂಲ್ ಜಂಕ್ಷನ್ ಕಡೆಗೆ ಬಂದು ನಿಂತಿದ್ದ KA-19-MH-8202 ನೇ ಕಾರಿಗೆ ಮೋಟಾರು ಸೈಕಲ್ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದರು ಅಲ್ಲದೇ ಮೋಟಾರು ಸೈಕಲ್ ಸವಾರ ಕೂಡ ರಸ್ತೆಗೆ ಬಿದ್ದಿರುತ್ತಾರೆ ಇದರಿಂದ ಪಿರ್ಯಾದಿದಾರರ ಎಡಗಾಲಿನ ಹೆಬ್ಬೆರಳಿಗೆ ರಕ್ತಗಾಯ, ಎದೆಗೆ ಗುದ್ದಿದ ಗಾಯ, ಎಡ ಹಣೆಗೆ ಗುದ್ದಿದ ನಮೂನೆಯ ಗಾಯವಾಗಿರುತ್ತದೆ. ಮೋಟಾರು ಸೈಕಲ್ ಸವಾರನಿಗೆ ಕೂಡ ಎಡ ಕೈಗೆ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಕಾರಿನ ಮುಂಭಾಗ ಜಖಂ ಆಗಿರುತ್ತದೆ. ಗಾಯಗೊಂಡ ಇಬ್ಬರನ್ನು ಸೇರಿದ ಸಾರ್ವಜನಿಕರು ಉಪಚರಿಸಿ ರಿಕ್ಷಾವೊಂದರಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಪಿರ್ಯಾದಿದಾರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ನಲ್ಲಿ ಹೋರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿರುತ್ತಾರೆ ಎಂಬಿತ್ಯಾದಿ.

Mangalore East Traffic PS            

 ಪಿರ್ಯಾದಿ  ಶ್ರೀಮತಿ ಮಾಲತಿ ಎಂ. ರವರು ದಿನಾಂಕ 08-09-2023 ರಂದು ಸಂಜೆ ಕದ್ರಿ ಮಾರ್ಕೇಟಿಗೆ ಹೋಗಿದ್ದು, ವಾಪಾಸ್ ತನ್ನ ಮಗಳ ಮನೆಯಾದ ಹರ್ಷ ರೆಸಿಡೆನ್ಸಿ ಕಡೆಗೆ ನಡೆದುಕೊಂಡು ಬರುತ್ತಾ ಸಂಜೆ ಸಮಯ ಸುಮಾರು 6.30 ಗಂಟೆಗೆ ಕದ್ರಿ ಮೈದಾನ ಕಡೆಯಿಂದ ಕದ್ರಿ ಕಂಬ್ಳ ಜಂಕ್ಷನ್ ಕಡೆಗೆ ಹಾದು ಹೋಗಿರುವ ಕದ್ರಿ ಕಂಬ್ಳ ರಸ್ತೆಯಲ್ಲಿ ವೀನಸ್ ಮ್ಯಾನರ್ ಅಪಾರ್ಟ್ ಮೆಂಟ್ ಎದುರುಗಡೆ ತಲುಪಿದಾಗ ಅಪಾರ್ಟ್ ಮೆಂಟ್ ಒಳಗಡೆಯಿಂದ KA-19-ML-8660 ನೊಂದಣಿ ನಂಬ್ರದ ಕಾರನ್ನು ಅದರ ಚಾಲಕಿಯಾದ  ವಿದ್ಯಾ ಹೆಗ್ಡೆ ರವರು ಹಿಮ್ಮುಖವಾಗಿ ಮುಖ್ಯ ರಸ್ತೆ ಕಡೆಗೆ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರನ್ನು ಗಮನಿಸದೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬೀಳುವ ವೇಳೆ ಎಡ ಕೈಯನ್ನು ರಸ್ತೆಗೆ ಊರಿದಾಗ ಉಳುಕಿದಂತೆ ಭಾಸವಾಗಿದ್ದು, ಗಾಯಾಳುವನ್ನು ಕಾರು ಚಾಲಕಿ ತನ್ನದೆ ಕಾರಿನಲ್ಲಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ಎಡಕೈ ಮಣಿಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿರುವುದಾಗಿ ತಿಳಿಸಿದ್ದು, ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಗಾಯಾಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದು, ನಂತರ ನೋವು ಜಾಸ್ತಿ ಇದ್ದುದರಿಂದ ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

CEN Crime PS Mangaluru City  

ಪಿರ್ಯಾದಿದಾರರ ಮಗ  ವಿದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ ಅಂತೆಯೇ ದಿನಾಂಕ 08-09-2023 ರಂದು  ಪಿರ್ಯಾದಿದಾರರ ಮಗನು ತನ್ನ  ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಚೆಕ್ ಬುಕ್ ಬ್ಲೂಡಾಟ್ ನಲ್ಲಿ ಕೊರಿಯರ್ ಮುಖಾಂತರ ಬಂದಿರುವುದಾಗಿಯೂ ಹಾಗೂ ಪಿರ್ಯಾದಿದಾರರು ಮನೆಯಲ್ಲಿ ಇರದ ಕಾರಣ ಸದ್ರಿ ಕೊರಿಯರ್ ವಾಪಸು ಅತ್ತಾವರದ ಬ್ಲೂಡಾಟ್ ಕಛೇರಿಗೆ  ಹೋಗಿರುತ್ತದೆ. ಸದ್ರಿ ಕೊರಿಯರ್ ಅನ್ನು ಬ್ಲೂಡಾಟ್ ಕೊರಿಯರ್ ಆಫೀಸ್ ಗೆ ಹೋಗಿ ಕಲೆಕ್ಟ್ ಮಾಡಲು ಪಿರ್ಯಾದಿದಾರರ ಮಗನು ದೂರವಾಣಿ ಮೂಲಕ ತಿಳಿಸಿರುತ್ತಾನೆ,ಅಂತೆಯೇ ಪಿರ್ಯಾದಿದಾರರು ದಿನಾಂಕ 09-09-2023 ರಂದು ಅತ್ತಾವರದ ಬ್ಲೂಡಾಟ್ ಕಛೇರಿಗೆ ಹೋಗದೆ ಮನೆಯಿಂದಲೇ ತಮ್ಮ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ ಬ್ಲೂಡಾಟ್ ನ ಕಸ್ಟಮರ್ ಕೇರ್ ನಂಬ್ರ ಸರ್ಚ್ ಮಾಡಿದಾಗ ಅದರಲ್ಲಿ ಕಸ್ಟಮರ್ ಕೇರ್ ನಂಬ್ರ 8555919651 ಇದ್ದು ಸದ್ರಿ ನಂಬರ್ ಗೆ  ಕರೆ ಮಾಡಿ ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಪಿರ್ಯಾದಿದಾರರ ವಿಳಾಸ ವೆರಿಫಿಕೇಶನ್ ಮಾಡಬೇಕೆಂದು ತಿಳಿಸಿ ಹಾಗೂ ಕೊರಿಯರ್ ಪಿರ್ಯಾದಿದಾರರರಿಗೆ ಮರಳಿ ತಲುಪಬೇಕಾದರೆ 5/- ರೂ ಶುಲ್ಕ ಪಾವತಿಸಬೇಕೆಂದು ತಿಳಿಸಿದನು, ನಂತರ ಸದ್ರಿ ಅಪರಿಚಿತ ವ್ಯಕ್ತಿಯು ಅಂತೆಯೇ ಪೇಟಿಎಂ ವ್ಯಾಲೆಟ್ ಅನ್ನು ತೆರೆಯಲು ತಿಳಿಸಿದನು ಪಿರ್ಯಾದಿದಾರರು ತಮ್ಮ  ಹೆಂಡತಿಯ ಪೇಟಿಎಂ ಆಕೌಂಟ್ ನಂಬ್ರ-ನೇದನ್ನು ಆಕೆಯ ಮೊಬೈಲ್ ನಲ್ಲಿ ತೆರೆದು ಆತನು ತಿಳಿಸಿದಂತೆ ಅಮೌಂಟ್ ಅನ್ನು ನಮೂದಿಸಿರುತ್ತಾರೆ ಹಾಗೂ ಅಪರಿಚಿತ ವ್ಯಕ್ತಯು ನೀಡಿದ ಪಿನ್ ನಂಬ್ರವನ್ನು ನಮೂದಿಸಿರುತ್ತಾರೆ, ಕೂಡಲೇ ಪಿರ್ಯಾದಿದಾರರ ಹೆಂಡತಿಯ ಕೆನರಾ ಬ್ಯಾಂಕ್,ಬಲ್ಮಠ ಶಾಖೆ,ಖಾತೆ ನಂಬ್ರ- ನೇದರಿಂದ ಒಟ್ಟು 99,985/- ರೂಗಳು ಆನ್ ಲೈನ್ ಮೂಲಕ ವರ್ಗಾವಣೆ ಆಗಿರುತ್ತದೆ, ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ  ಪಿರ್ಯಾದಿದಾರರಿಂದ ಮೋಸದಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುತ್ತಾನೆ,ಸದ್ರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿಯಾಗಿದೆ

Traffic North Police Station       

 ದಿನಾಂಕ 09-09-2023 ರಂದು ಪಿರ್ಯಾದಿ Shalini ತನ್ನ ಮನೆಯಿಂದ ತಡಂಬೈಲು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ಅವರ ಬಾಬ್ತು KA-19-HG-6266 ನಂಬ್ರದ ಸ್ಕೂಟರಿನಲ್ಲಿ ಹೋಗಿ, ವಾಪಾಸು ಮನೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 9:15 ಗಂಟೆಗೆ ತಡಂಬೈಲಿನ ಸುಪ್ರೀಂ ಮಹಲ್ ಬಳಿ ತೆರೆದ ಡಿವೈಡರಿನಲ್ಲಿ ಚೆಳ್ಯಾರು ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ಉಡುಪಿ-ಮಂಗಳೂರು ಅಂದರೆ NITK ಕಡೆಯಿಂದ ನೊಂದಣಿ ಸಂಖ್ಯೆ ತಿಳಿಯದ ಸ್ಕೂಟರೊಂದನ್ನು ಅದರ ಸವಾರನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು NH66 ನೇ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕೈಗೆ ಮೂಳೆ ಮುರಿತದ ಗಾಯ, ಎರಡೂ ಕಾಲಿನ ಪಾದದ ಬಳಿ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಅಪಘಾತ ಪಡಿಸಿದ ಸ್ಕೂಟರಿನ ಸವಾರನು ಅಪಘಾತದ ಬಳಿಕ ಅಪಘಾತ ಪಡಿಸಿದ ಸ್ಕೂಟರಿನೊಂದಿಗೆ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

Traffic South Police Station      

 ಪಿರ್ಯಾದಿ DINESH  ದಿನಾಂಕ 09-09-2023 ರಂದು ತನ್ನ ಬಾಬ್ತು ಕಾರ ನಂಬ್ರ KA-19-MJ-0677 ನೇದರಲ್ಲಿ ಕೆಲಸಕ್ಕೆಂದು ತೊಕ್ಕೊಟ್ಟು ಕಡೆಯಿಂದ ಪಣಂಬೂರು ಕಡೆಗೆ ರಾ.ಹೆ.66 ಡಾಮಾರು ರಸ್ತೆಯಲ್ಲಿ  ಹೋಗುತ್ತಿರುವ ಸಮಯ ಸುಮಾರು 12.45 ಗಂಟೆಗೆ ಜಪ್ಪಿನಮೊಗರು ಬಳಿ  ಗ್ಯಾರೇಜ್ ಮಾಲಿಕರ ಸಂಘದ ಎದುರು ತಲುಪುತ್ತಿದ್ದಂತೆ ತನ್ನ ಮುಂದಿನಿಂದ ಹೋಗುತ್ತಿದ್ದ KL-14-AB-5330 ನೇ ನಂಬ್ರದ ಲಾರಿ ಚಾಲಕ ಲೋಹಿತ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗಿ ಲಾರಿಯ ಮುಂದಿನಲ್ಲಿದ್ದ ಕಾರ ನಂಬ್ರ KA-19-MH-4937 ನೇದರ ಕಾರಿಗೆ ಡಿಕ್ಕಿಪಡಿಸಿದ್ದು, ಕೂಡಲೇ ಪಿರ್ಯಾದಿದಾರರು ಕಾರನ್ನು ನಿಧಾನವಾಗಿ ನಿಲ್ಲಿಸುತ್ತಿದ್ದಂತೆ  ಪಿರ್ಯಾದಿದಾರರ ಹಿಂದಿನಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ KL-15-9994 ನೇ ನಂಬ್ರದ ಕೇರಳ ಕೆ.ಎಸ್.ಆರ್.ಟಿ.ಸಿ ಬಸ್ಸ್ ಚಾಲಕ ಅಜೇಶ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿಪಡಿಸಿ ಪಿರ್ಯಾದಿದಾರರ ಕಾರನ್ನು ಸಮೇತ ಮುಂದೆ ನಿಂತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿ & ಮುಂಭಾಗ ಸಂಪೂರ್ಣ ಜಖಂಗೊಂಡು ಪಿರ್ಯಾದಿದಾರರು ಕಾರಿನೊಳಗೆ ಸಿಕ್ಕಿಕೊಂಡಿದ್ದು, ಆ ಸಮಯ ಅಲ್ಲಿ ಸೇರಿದ ಸಾರ್ವನಿಕರು ಪಿರ್ಯಾದಿದಾರರನ್ನು ಕಾರಿನಿಂದ ಹೊರ ತೆಗೆದು ಉಪಚರಿಸಿ ಚಿಕಿತ್ಸೆ ಬಗ್ಗೆ ಆಂಬ್ಯುಲೆನ್ಸ್ ನಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ.ಪಿರ್ಯಾದಿದಾರರು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ.ಎಂ.ಸಿ. ಜ್ಯೋತಿ ಆಸ್ಪತ್ರೆಗೆ ದಾಖಲಾಗಿದ್ದು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಮುಖಕ್ಕೆ ,ಹಣೆಗೆ , ತೆಲೆಗೆ , ಗುದ್ದಿದ ತೀವ್ರ ರಕ್ತ ಗಾಯ, ಕೈಕಾಲುಗಳಿಗೆ ತೆರಚಿದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 11-09-2023 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080