ಅಭಿಪ್ರಾಯ / ಸಲಹೆಗಳು

Crime Report in  Mangalore North PS        

ದಿನಾಂಕ: 08.10.2023 ರಂದು ಬೆಳಿಗ್ಗೆ ಠಾಣಾ ಸರಹದ್ದಿನ ಕುದ್ರೋಳಿ ಮಂಡಿ ಬಳಿ ಬೆಳಿಗ್ಗೆ ಸುಮಾರು 10:00 ಗಂಟೆಗೆ ತಲುಪಿದಾಗ ರಮ್ಲಾನ್ @ ರಮ್ಲಾನ್ ಮಾಸಾ (27)  ವಾಸ: #3-107/12 ಬಿ, ಪಾಂಡೇಲ್ ಗುಡ್ಡೆ ಮನೆ, ಬಜಾಲ್ ಕಲ್ಲಕಟ್ಟೆ, ಬಜಾಲ್ ಮಂಗಳೂರು  ಎಂಬಾತನು ಅಮಲುಕೋರನಾಗಿ ತೂರಾಡುತ್ತಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಸಿಬ್ಬಂದಿಗಳ  ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದ್ದು, ಎ.ಜೆ. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ರಮ್ಲಾನ್ @ ರಮ್ಲಾನ್ ಮಾಸಾ ಎಂಬಾತನು Tetrahydracannabinoid(Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುವ ಮೇರೆಗೆ ಎನ್.ಡಿ.ಪಿ.ಎಸ್. ಕಾಯ್ದೆರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ ಸಾರಾಂಶ.

 

Ullal PS

ದಿನಾಂಕ: 07-10-2023 ರಂದು ರಾತ್ರಿ ಸುಮಾರು 21:30 ಗಂಟೆ ಸಮಯಕ್ಕೆ ಪಿರ್ಯಾಧಿ Koushik hedge ದಾರರುಹಾಗೂ ಅವರ ಗೆಳೆಯ ದೇವಿ ಕಿರಣ ಎಂಬವರು ಮಂಗಳೂರು ತಲಪಾಡಿಯಲ್ಲಿರುವ ನಿಸರ್ಗ ಬಾರ್ ಆ್ಯಂಡ್ ರೆಸ್ಟೊರೆಂಟ್ ಗೆ ಊಟ ಮಾಡುವರೇ ಪಿರ್ಯಾದಿದಾರರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಹೋಗಿ ಬಾರ್ ಎದುರುಗಡೆ ಬೈಕ್ ನಿಲ್ಲಿಸಿ ಪಾರ್ಕ್ ಮಾಡಿ  ಜೊತೆಯಲ್ಲಿ ಬಂದಿದ್ದ ದೇವಿ ಕಿರಣ ರವರು ಮೂತ್ರ ವಿಸರ್ಜನೆಗೆ ಬಾರ್ ನ ಟಾಯ್ಲೆಟ್ ಗೆ ಹೋಗಿದ್ದು ಪಿರ್ಯಾದಿದಾರರು ಮೋಟಾರ್ ಸೈಕಲ್ ಬಳಿ ಒಬ್ಬನೇ ನಿಂತಿದ್ದಾಗ, ಅದೇ ಸಮಯ ಬಳಿ ಬಂದ ಪರಿಚಯದ ಚದ್ದು @ ಸದಾಶಿವ, ನೆತ್ತಿಲ ಸಂದೇಶ, ಮಹಾಲಿಂಗೇಶ್ವರ ಸಂದೇಶ, ಬೆಜ್ಜ ವಾಸಿ ಭುವನ್ ಹಾಗೂ ಪರಿಚಯ ಇಲ್ಲದ ಇತರ ಇಬ್ಬರು ಅಕ್ರಮಕೂಟ ಸೇರಿ ನನ್ನಲ್ಲಿ “ಬೇವಾರ್ಸಿ, ನೀನು ಪೊಲೀಸರಿಗೆ ಬಾರಿ ಮಾಹಿತಿ ಕೊಡುತ್ತಿಯಾ! ರಂಡೇ ಮಗ“ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಸದಾಶಿವ ಎಂಬವನು ಪಿರ್ಯಾಧಿದಾರರ ಮುಖಕ್ಕೆ, ತಲೆಗೆ ಕೈಗಳಿಂದ ಹೊಡೆದು, ಸದಾಶಿವ ಮತ್ತು ಸಂದೇಶ್ ನೆತ್ತಿಲ ಎಂಬವರುಗಳು ಕೈಗಳಿಂದ ಮುಖಕ್ಕೆ, ಎದೆಗೆ, ಕಾಲಿನಿಂದ ಸೊಂಟಕ್ಕೆ ತುಳಿದ ಪರಿಣಾಮ ಆಯತಪ್ಪಿ ನೆಲಕ್ಕೆ ಬಿದ್ದಾಗಮಹಾಲಿಂಗೇಶ್ವರ ಸಂದೇಶ್ ಕೈಯಲ್ಲಿ ಚೂರಿ ಹಿಡಿದುಕೊಂಡು ಹಾಗೂ ಇತರ ಇಬ್ಬರು ಸೇರಿ ಪಿರ್ಯಾಧಿದಾರರನ್ನುಉದ್ದೇಶಿಸಿ “ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಮರ್ಮಾಂಗಕ್ಕೆ ಕಾಲಿನಿಂದ ತುಳಿದು ಕೊಲೆ ಮಾಡುವ ಉದ್ದೇಶ ದಿಂದಲೇ ಆರೋಪಿಗಳು ಅಕ್ರಮಕೂಟ ಸೇರಿ ಈ ಕೃತ್ಯವೆಸಗಿರುವುದಾಗಿದೆ. ಪಿರ್ಯಾಧಿದಾರರು ಚಿಕಿತ್ಸೆಯ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Bajpe PS

ದಿನಾಂಕ 08-10-2023 ರಂದು ಸಂಜೆ  19-00 ಗಂಟೆಗೆ ಮಂಗಳೂರು ತಾಲೂಕು ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿ   ಮೊಹಮ್ಮದ್ ಶಾಹಿನ್  (24) ವಾಸ:- ಅಮಾನುಲ್ಲಾ ಕಂಪೌಂಡ್ ,ಕೊರ್ದಬ್ಬು ದೈವಸ್ಥಾನದ ಬಳಿ ಕಂದವಾರ ಗ್ರಾಮ ಮಂಗಳೂರು ತಾಲೂಕು  ಎಂಬಾತನು ನಶೆಯಲ್ಲಿದ್ದವನನ್ನು ವಶಕ್ಕೆ ಪಡೆದು   ತಜ್ಞ ವೈದ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವನನ್ನು ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡ ಪತ್ರ ನೀಡಿರುತ್ತಾರೆ. ಆದ್ದರಿಂದ ಗಾಂಜಾ ಸೇವನೆ ಮಾಡುತ್ತಿದ್ದ ಆಪಾಧಿತನ ವಿರುದ್ದ ಠಾಣೆಯಲ್ಲಿ NDPS ಕಾಯ್ದೆ 1985 ಪ್ರಕಾರ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

   

2 ದಿನಾಂಕ 08-10-2023 ರಂದು 18-00 ಗಂಟೆಗೆ ಕೊಳಂಬೆ ಗ್ರಾಮದ ಪನಾ ಕಾಲೇಜ್ ಬಳಿ ಇಬ್ಬರು ಯುವಕರು ಸೀಗರೇಟ್ ಸೇದುತ್ತಿದ್ದು ವಿಚಾರಿಸಿದಾಗ 1. ಮುಲ್ಲಾ ಅಬ್ದುಲ್ ಅಮನ್  (20)  ವಾಸ:- ಎಂ ಎಂ & ಸಂನ್ಸ್ ಕಟಿಂಗ್ ಕ್ಲಾಸ್ ಬಳಿ ಗುರುಕಂಬ್ಳ ಅಂಚೆ ಮೂಡುಪೆರೆರಾ ಗ್ರಾಮ ಮಂಗಳೂರು  ತಾಲೂಕು ದ.ಕ ಜಿಲ್ಲೆ 2. ರಾಹಿಶ್ ಮೊಯಿದ್ದೀನ್ ಶರೀಪ್ (28),ವಾಸ:ಎಸ್ ಆರ್ ಕಂಪೌಂಡ್ ಅಸರುದ್ದೀನ್ ರಸ್ತೆ, ಮಸೀದಿಯ ಬಳಿ ಕೈಕಂಬ ಕಿನ್ನಿಕಂಬಳ ಅಂಚೆ ಬಡಗುಳಿಪಾಡಿ ಗ್ರಾಮ ಮಂಗಳೂರು ತಾಲೂಕು  ಎಂದು ತಿಳಿಸಿದ್ದು ಸದ್ರಿಯವರನ್ನು ವಶಕ್ಕೆ ಪಡೆದು ತಜ್ಞ ವೈದ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡ ಪತ್ರ ನೀಡಿರುವ ಮೇರೆಗೆ ಆಪಾಧಿತರ ವಿರುದ್ದ NDPS ಕಾಯ್ದೆ 1985 ಪ್ರಕಾರ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

                               

ಇತ್ತೀಚಿನ ನವೀಕರಣ​ : 09-10-2023 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080