ಅಭಿಪ್ರಾಯ / ಸಲಹೆಗಳು

Crime Report in  : Traffic South Police Station           

ದಿನಾಂಕ: 06-11-2023 ರಂದು ಫಿರ್ಯಾದಿ JAYASHREE ದಾರರು ಮತ್ತು ಅವರ ಸಂಬಂಧಿ ಪ್ರಜ್ವಲ್ ಎಂಬವರು ಬಾಬ್ತು KA-19-HM-6980 ನೇ ನಂಬ್ರದ ಸ್ಕೂಟರ್ ನಲ್ಲಿ ಪ್ರಜ್ವಲ್ ರವರ ಜೊತೆ ಸಹಸವಾರಳಾಗಿ ಕುಳಿತುಕೊಂಡು ಕುಲಶೇಖರ ಮಿಲ್ಕ್ ಡೈರಿ ಕಡೆಯಿಂದ ಕುಲಶೇಖರದ ಕಡೆಗೆ ಹೋಗುತ್ತಿದ್ದ ಸಮಯ ಸುಮಾರು 20-00 ಗಂಟೆಗೆ  ಕುಲಶೇಖರದ ವೀರನಾರಾಯಣ ದೇವಸ್ಥಾನದ ರಸ್ತೆಯ ಕಡೆಗೆ ತಿರುಗಲು ಸ್ಕೂಟರ್ ಸವಾರ  ಪ್ರಜ್ವಲ್ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸ್ಕೂಟರನ್ನು ಬಲಕ್ಕೆ ತಿರುಗಿಸುತ್ತಿದ್ದಂತೆ ಫಿರ್ಯಾದಿದಾರರ ಮುಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ನೀರುಮಾರ್ಗದ ಕಡೆಗೆ KA-19-EF-0660 ನೇ ನಂಬ್ರದ ಸ್ಕೂಟರ್ ಸವಾರ ಸಂಜೋಶ್ ಎಂಬಾತನು ಸಹ ಸವಾರಳನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸ್ಕೂಟರನ್ನು ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಸ್ಕೂಟರ್ ನವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಸೊಂಟಕ್ಕೆ ಮತ್ತು ಕಾಲಿಗೆ ಗುದ್ದಿದ ಗಾಯ, ಅಪಘಾತ ಪಡಿಸಿದ ಸ್ಕೂಟರ್ ನ ಸಹಸವಾರಳಾದ ಸುಜಾತರವರಿಗೆ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಮನೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ಚರ್ಚಿಸಿ ದೂರು ನೀಡುವಾಗ ವಿಳಂಬವಾಗಿರುತ್ತದೆ ಎಂಬಿತ್ಯಾದಿ.

Traffic South Police Station              

ದಿ.28-10-2023 ರಂದು ಪಿರ್ಯಾದಿದಾರರಾದ ಮಹಮ್ಮದ್ ಅಶ್ರಫ್ ರವರು ತನ್ನ ಬಾಬ್ತು ಮೊಟಾರು ಸೈಕಲ್ ಕೆಎ-19-ಹೆಚ್.ಎಫ್-1480 ನೇ ಟಿ.ವಿ.ಎಸ್. ರೇಡಿಯಂ ಬೈಕ್ ನಲ್ಲಿ ತನ್ನ ಮಗ ಅಬ್ದುಲ್ ರೆಹಮಾನ್ ಔಫ್ (17) ರವರನ್ನು ಸಹವಾರರನ್ನಾಗಿ ಕುಳಿರಿಸಿಕೊಂಡು ತಮ್ಮ ಮುಕ್ಕಚ್ಚೇರಿ ಮನೆಯಿಂದ ಹೊರಟು ಅಬ್ಬಕ್ಕ ಸರ್ಕಲ್ ಕಡೆಗೆ ಸವಾರಿ ಮಾಡಿಕೊಂಡು ಸಂಜೆ 18.50 ಗಂಟೆಗೆ ಬಿ.ಎಂ.ಫಾರೂಕ್ ಗೆಸ್ಟ್ ಹೌಸ್ ಬಳಿ ತಲುಪುತ್ತಿದ್ದಂತೆಯೇ ಅಬ್ಬಕ್ಕ ಸರ್ಕಲ್ ಕಡೆಯಿಂದ ಬಂದ ಆರೋಪಿ ಮಹೇಂದ್ರ ಪಿಕಪ್ ವಾಹನ ಕೆಎ-19-ಎ.ಎ.-6983 ನೇಯದ್ದನ್ನು ಅದರ ಚಾಲಕನು ತೀರ ನಿರ್ಲಕ್ಷತನ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಒಮ್ಮಿಂದೊಮ್ಮೆಲೇ ಬಿ.ಎಂ.ಫಾರೂಕ್ ಗೆಸ್ಟ್ ಹೌಸ್ ಕಡೆಗೆ ತಿರುಗಿಸಿ, ರಸ್ತೆಯ ಎಡಭಾಗದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊಟಾರು ಸೈಕಲ್ ಕೆಎ-19-ಹೆಚ್.ಎಫ್-1480 ನೇಟಿ.ವಿ.ಎಸ್. ರೇಡಿಯಂ ನೇಯದಕ್ಕೆ ಢಿಕ್ಕಿ ಹೊಡೆದು ಸಹ ಸವಾರನಾಗಿದ್ದ ಅಬ್ದುಲ್ ರೆಹಮಾನ್ ಔಫ್ (17) ರವರ ಬಲ ಕಾಲಿಗೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ವಾಹನ ಸವಾರ ಮತ್ತು ಸಹ ಸವಾರರು ಮೊಟಾರು ಸೈಕಲ್ ಸಮೇತವಾಗಿ ರಸ್ತೆಗೆ ಬಿದ್ದಿದ್ದು,ಪಿಕಪ್ ಚಾಲಕ ಫ್ರಾಂಕಿ ಟೆಲ್ಲಿಸ್ ಮತ್ತು ಅಲ್ಲಿದ್ದವರು ಗಾಯ ಗೊಂಡಿದ್ದ ಸಹಸವಾರ ಅಬ್ದುಲ್ ರೆಹಮಾನ್ ಔಫ್ (17) ಮತ್ತು ಸವಾರ ಮಹಮ್ಮದ್ ಅಶ್ರಫ್ ರವರನ್ನು ಉಪಚರಿಸಿ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ,ವೈದ್ಯರ ಸಲಹೆಯಂತೆ ಸಹರಾ ಆಸ್ಪತ್ರೆ ಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಅಬ್ದುಲ್ ರೆಹಮಾನ್ ಔಫ್ (17) ರವರನ್ನು ಒಳರೋಗಿಯಾಗಿ ದಾಖಲಿಸಿರುವುದು ಎಂಬಿತ್ಯಾದಿ.

Ullal PS

ದಿನಾಂಕ 09-11-2023 ರಂದು ಬೆಳಿಗ್ಗೆ 11-00 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು  ಪೆರ್ಮನ್ನೂರು  ಗ್ರಾಮದ  ಚೆಂಬುಗುಡ್ಡೆ ಎಂಬ ಸಾರ್ವಜನಿಕ ಸ್ಥಳದಲ್ಲಿ ಆರೋಪಿ  ನಿಖಿಲ್ ಶೆಟ್ಟಿ, ಪ್ರಾಯ:  27 ವರ್ಷ, ವಾಸ ಸುಲೇಂಜೀರ್ ಗುತ್ತು ಕೋಟೆಕಾರ್ ಬೀರಿ ಪೊಸ್ಟ ಆಫೀಸ್ ಬಳಿ , ಕೋಟೆಕಾರ್  ಗ್ರಾಮ ಮತ್ತು ಉಳ್ಳಾಲ ತಾಲೂಕು ಎಂಬಾತನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪಿಎಸ್ಐ  ಶೀತಲ್ ಆಲಗೂರು  ರವರು ಸಿಬ್ಬಂದಿಯವರ ಜೊತೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೊಳಪಡಿಸಿ  ನಿಖಿಲ್ ಶೆಟ್ಟಿ ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ (ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್) ನೀಡಿರುವುದರಿಂದ  ನಿಖಿಲ್ ಶೆಟ್ಟಿ ವಿರುದ್ಧ ದಿನಾಂಕ.09-11-2023 ರಂದು ದಾಖಲಿಸಿದ ಪ್ರಕರಣ ಎಂಬಿತ್ಯಾದಿ.

Moodabidre PS

ಮೂಡಬಿದ್ರೆಯಲ್ಲಿರುವ ಅಮರಶ್ರೀ ಚಲನಚಿತ್ರ ಮಂದಿರವು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 04-08-2023 ರಿಂದ ಇಂದಿನ ವರೆಗೆ ಸರ್ಕಾರದ ವಶದಲ್ಲಿದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ಈ ಹಿಂದೆ ಪಿರ್ಯಾದಿದಾರರ ತಂದೆಯ ಕಾಲದಲ್ಲಿ ಚಲನ ಚಿತ್ರ ಮಂದಿರದ ಮ್ಯಾನೇಜ್ ಮೆಂಟ್ ಮಾಡುತ್ತಿದ್ದ ಜೆರಾಲ್ಡ್ ಕುಟಿನ್ಹಾ ಮತ್ತು ಆತನ ಸಹಚರರಾದ ರಾಘವೇಂದ್ರ, ನಿತ್ಯಾನಂದ ಹಾಗೂ ಇನ್ನಿತರರು ಸೇರಿ ದ್ವೇಷ ಸಾದನೆಯ ದುರುದ್ದೇಶದಿಂದ ಚಲನ ಚಿತ್ರ ಮಂದಿರದ ಕಂಪೌಂಡಿನ ಚಿಕ್ಕ ಗೇಟಿನ ಲಾಕ್ ಹಾಗೂ ಚಲನ ಚಿತ್ರ ಮಂದಿರದ ಬಲ ಮತ್ತು ಎಡ ಬದಿಯ ಎರಡೂ ಬಾಗಿಲಿನ ಚಿಲಕವನ್ನು ಮುರಿದು ಅಕ್ರಮವಾಗಿ ಒಳಗೆ ಪ್ರವೇಶಿಸಿ ಚಿತ್ರಮಂದಿರದ ಪರದೆಯನ್ನು ಹರಿತವಾದ ಸಾಧನದಿಂದ ಹರಿದು ಹಾಕಿ, ಒಳಗಿನ ಎಲ್ಲಾ ವಿದ್ಯುತ್ ದೀಪಗಳನ್ನು ಹುಡಿ ಮಾಡಿ, ವಿದ್ಯುತ್ ವೈಯರ್ ಮತ್ತು ಕೇಬಲ್ ಗಳನ್ನು ತುಂಡರಿಸಿ, ಆಂಪ್ಲ್ ಫೈಯರ್‌ನ ವೈಯರ್ ಗಳನ್ನು ತುಂಡರಿಸಿ, ಎಲೆಕ್ಟ್ರಿಕ್ ಬೋರ್‌್ತಗಳನ್ನು ಹೊಡೆದು ಹಾಕಿ ನಷ್ಟ ಉಂಟು ಮಾಡಿದ್ದು, ಚಲನ ಚಿತ್ರ ಮಂದಿರದ ಪ್ರಾಜೆಕ್ಟ್ ಕೋಣೆಯಲ್ಲಿದ್ದ ಬೆಲೆ ಬಾಳುವ ತಾಂತ್ರಿಕ ಸಾಧನಗಳಾದ ಸಿನಿ ಲಿಸ್ಟರ್, ಪ್ರಜೆಕ್ಟರ್-01, ಕಂಪ್ಯೂಟರ್-02, ಲ್ಯಾಪ್‌ಟಾಪ್-02, UPS 3KVA ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

Surathkal PS

ಪಿರ್ಯಾದಿದಾರರಾದ ಮಲ್ಲಿಕಾ ರವರ ಗಂಡ ರಾಮಚಂದ್ರ (58) ಎಂಬವರು ದಿನಾಂಕ: 03-11-2023 ರಂದು ಬೆಳಿಗ್ಗೆ 8-00 ಗಂಟೆಗೆ ತಡಂಬೈಲ್ ನಲ್ಲಿರುವ ಮನೆಯಿಂದ ಎಂದಿನಂತೆ ಮಗಳನ್ನು ಕಾಲೇಜ್ ಗೆ ಹೋಗಲು ತಡಂಬೈಲ್ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋದವರು ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ  ಪಿರ್ಯಾದಿದಾರರು ರಾಮಚಂದ್ರ ರವರಿಗೆ ಪೋನ್ ಕರೆ ಮಾಡಿ ವಿಚಾರಿಸಿದಾಗ ಮರಳು ಬರಲು ಇದ್ದು ಅದಕ್ಕೆ ಕಾಯುತ್ತಿರುವುದಾಗಿ ತಿಳಿಸಿದ್ದು, ಮರುದಿನ ಬೆಳಿಗ್ಗೆ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುವರೇ  ಪಿರ್ಯಾದಿದಾರರು ರಾಮಚಂದ್ರ ರವರಿಗೆ ಕರೆ ಮಾಡಿದಾಗ ಮಗಳು ನಡೆದುಕೊಂಡು ಕಾಲೇಜಿಗೆ ಹೋಗಲಿ ನನಗೆ ಸೆಲೂನ್ ಗೆ ಹೋಗಲು ಇದೆ ಎಂದು ಹೇಳಿದ್ದು, ಬಳಿಕ ಪಿರ್ಯಾದಿದಾರರು ಬೆಳಿಗ್ಗೆ 9-00 ಗಂಟೆಗೆ ವಾಪಾಸು ರಾಮಚಂದ್ರ ರವರ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ರಾಮಚಂದ್ರ ರವರು ಈತನಕ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ, ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 09-11-2023 05:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080