ಅಭಿಪ್ರಾಯ / ಸಲಹೆಗಳು

Crime Report in : Mangalore West Traffic PS     

ದಿನಾಂಕ 08-12-2023 ರಂದು ಪಿರ್ಯಾದಿ Thomas Lobo ಮತ್ತು ಅವರ ಪತ್ನಿ ಫಿಲೋಮಿನಾ ಡಿಸೋಜಾ ಎಂಬವರು ಎಂದಿನಂತೆ ಮಂಗಳೂರು ಕೇಂದ್ರ ಮಾರುಕಟ್ಟೆಯಿಂದ ತರಕಾರಿ ತರಲು ಉರ್ವಾ ಮಾರ್ಕೆಟ್ ನಿಂದ KA-19-AE-3294 ನಂಬ್ರದ  ಆಟೋ ರಿಕ್ಷಾದಲ್ಲಿ ಕಾರ್ ಸ್ಟ್ರೀಟ್ ಮಾರ್ಗವಾಗಿ ಬರುತ್ತಾ ಕೇಂದ್ರ ಮಾರುಕಟ್ಟೆಯ ಕಲ್ಪನಾ ಸ್ವೀಟ್ಸ್ ಬಳಿ ತಲುಪುತ್ತಿದ್ದಂತೆ ಬೀಬೀ  ಅಲಾಬಿ ರಸ್ತೆ ಕಡೆಯಿಂದ ಬಂದಂತಹ KA-18-U-0430 ನಂಬ್ರದ ಬೈಕ್ ಸವಾರನು ಏಕಾ ಏಕಿ ಬೈಕನ್ನು  ನಿರ್ಲಕ್ಷತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾಕ್ಕೆ  ಡಿಕ್ಕಿ ಪಡಿಸಿದ ಪರಿಣಾಮ ರಿಕ್ಷಾವೂ  ಮುಗುಚಿ ಬಿದ್ದು ರಿಕ್ಷಾದಲ್ಲಿದ್ದ ನನ್ನ ಹೆಂಡತಿಗೆ ಬಲ ಕೈ ಹಾಗೂ ಎಡ ಕೈ ಮೊಣಗಂಟಿನ ಬಳಿ ಮೂಳೆ ಮುರಿತದ  ಹಾಗೂ ತಲೆಯ ಹಣೆ ಭಾಗಕ್ಕೆ ಹಾಗೂ ಕಣ್ಣಿನ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ.ಇವರನ್ನು ಪಿರ್ಯಾದಿದಾರರು ಮತ್ತು ಸ್ಥಳದಲ್ಲಿ ಸೇರಿದ ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ಮಂಗಳೂರು ಕೋಡಿಯಾಲ್ ಬೈಲ್ ನಲ್ಲಿರುವ ಯೆನಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಈ ಅಪಘಾತದಿಂದ ಬೈಕಿನಲ್ಲಿದ್ದ ವ್ಯಕ್ತಿಯೊಬ್ಬನಿಗೂ ಕೂಡಾ ಗಾಯವಾಗಿರುತ್ತದೆ. ಈ ಅಪಘಾತವು ಬೆಳಿಗಿನ ಜಾವ 4-45 ಗಂಟೆಗೆ ಆಗಿರುವುದಾಗಿದೆ. ಈ ಅಪಘಾತಕ್ಕೆ KA-18-U-0430 ನಂಬ್ರದ ಬೈಕ್ ಸವಾರ ಕಿರಣ ಥೋಮಸ್ ರವರ ನಿರ್ಲಕ್ಷತವೇ ಕಾರಣವಾಗಿರುತ್ತದೆ. ಎಂಬಿತ್ಯಾದಿ.

CEN Crime PS

ದಿನಾಂಕ 08-12-2023 ರಂದು ಪಾವೂರು ಗ್ರಾಮದ ಕೋಡಿ ಎಂಬಲ್ಲಿಯ ನವಾಜ್ ಮತ್ತು ಪರಂಗಿಪೇಟೆಯ ಅಜರುದ್ದೀನ್  ಎಂಬವರು  ಅಕ್ರಮವಾಗಿ MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು  ಕಪ್ಪು ಬಣ್ಣದ ಸುಜುಕಿ  ಎಕ್ಸಸ್ ಸ್ಕೂಟರ್  ನಂಬ್ರ ಕೆ.ಎ.19.ಹೆಚ್ .ಸಿ 0616 ನೇದರಲ್ಲಿ ಬಂದು ಮಂಗಳೂರು ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಬಿ ಎಸ್ ಎನ್ ಎಲ್ ಕೇಂದ್ರದ ಬಳಿಯಲ್ಲಿ  ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು  ಸಾರ್ವಜನಿಕರಿಗೆ ಮಾರಾಟ ಮಾಡಲು  ಬರುತ್ತಿರುವುದಾಗಿ ಮಾಹಿತಿ ಬಂದಂತೆ ಬೆಳಿಗ್ಗೆ: 09-00 ಗಂಟೆಗೆ   ಮಂಗಳೂರು ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ  ಬಿ ಎಸ್ ಎನ್ ಎಲ್ ಕೇಂದ್ರದ ಬಳಿ ತಲುಪಿ ಸ್ಕೂಟರ್ ಬಳಿಯಲ್ಲಿ ನಿಂತುಕೊಂಡಿದ್ದವರನ್ನು ಖಚಿತ ಪಡಿಸಿಕೊಂಡು ಬೆಳಿಗ್ಗೆ 9-15 ಗಂಟೆಗೆ ದಾಳಿ ಮಾಡಿ ಆಪಾದಿತರಾದ (1) ನವಾಜ್  (2) ಅಜರುದ್ದೀನ್ @ ಅಜರ್ ಎಂಬವರನ್ನು  ವಶಕ್ಕೆ ಪಡೆದು ಒಟ್ಟು (1) 120 ಗ್ರಾಂ ಎಂ.ಡಿ.ಎಂ.ಎ, (2)  ನೀಲಿ ಬಣ್ಣದ VIVO ಕಂಪೆನಿಯ VIVO Y 12s ಹೆಸರಿನ V2069 ಮೊಡಲ್ ನ ಮೊಬೈಲ್ ಪೋನ್ -1 (3) ನೇರಳೆ ಬಣ್ಣದ VIVO ಕಂಪೆನಿಯ VIVO 1915 ಮೊಡಲ್ ನ ಮೊಬೈಲ್ ಪೋನ್ -1, (4) ಸುಮಾರು 70 ಗ್ರಾಂ ತೂಕದ ಕಂದು ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಜಿಪ್ ಲಾಕ್ ಪ್ಲಾಸ್ಟಿಕ್ ಪ್ಯಾಕೆಟ್ -1  (5) ನಗದು ಹಣ: ರೂ: 1610/-  (6 )ಮೆಟ್ಯಾಲಿಕ್ ನೀಲಿ ಬಣ್ಣದ OPPO ಕಂಪೆನಿಯ OPPO A54 ಹೆಸರಿನ CPH2239 ಮೊಡಲ್ ನ ಮೊಬೈಲ್ ಪೋನ್ - 1   (7) ಕಪ್ಪು ಬಣ್ಣದ ಪೌಚ್-1 (8) ನಗದು ಹಣ: ರೂ: 1110/- (9) ಸಿಲ್ವರ್ ಬಣ್ಣದ ಡಿಜಿಟಲ್ ತೂಕ ಮಾಪನ -1 (10) ಸಣ್ಣ ಸಣ್ಣ ಖಾಲಿ  ಜಿಪ್ ಪ್ಲಾಸ್ಟಿಕ್ ಲಕೋಟೆಗಳು -90 (11) ಸ್ಟೀಲ್ ಚಮಚ -1 (12) KA-19-HC-0616 ನೇ ಕಪ್ಪು  ಬಣ್ಣದ ಸುಜುಕಿ ಕಂಪೆನಿಯ ಆಕ್ಸೆಸ್ 125 ಸ್ಕೂಟರ್ ಮತ್ತು ಕೀ ಒಟ್ಟು ರೂ 6,83220/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆಪಾದಿತರು ನಿಷೇಧಿತ ಮಾದಕವಸ್ತುವಾದ ಎಂ.ಡಿ.ಎಂ.ಎ ಯನ್ನು ಮಾರಾಟಕ್ಕಾಗಿ ಸಾಗಾಟ ಮಾಡಿರುವುದು ದೃಢಪಟ್ಟಂತೆ ಆಪಾದಿತರ ಮೇಲೆ NDPS Act 1985 ರಂತೆ ಪ್ರ.ವ. ವರದಿಯನ್ನು ದಾಖಲಿಸಿಕೊಂಡಿರುತ್ತೇನೆ.

Kankanady Town PS

ಪಿರ್ಯಾದು Dharnappa Gowda ದಾರರು ಮತ್ತು 3 ಜನ ತಮ್ಮಂದಿರು, ಒಬ್ಬ ಅಕ್ಕ, 2 ತಂಗಿಯರು Bajal, Mangaluru ಒಂದೇ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ ತಮ್ಮ ದಿನೇಶ್ ಗೌಡ ರವರು (33) ರವರು ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ನನ್ನ ಓರ್ವ ತಮ್ಮ ಉದಯ ಗೌಡ ಎಂಬುವವರು ಪಾಶ್ವವಾಯು ಪೀಡಿತರಾಗಿದ್ದು, ಚಿಕಿತ್ಸೆಗೆಂದು ಮಂಗಳೂರು  ನಲ್ಲಿರುವ ಶಾಫೀ ಕ್ಲಿನಿಕ್ ಪಕ್ಕಲಡ್ಕ  ಎಂಬಲ್ಲಿ ಚಿಕಿತ್ಸೆ ಬಗ್ಗೆ ದಾಖಲು ಮಾಡಿದ್ದು, ನನ್ನ ತಮ್ಮ ದಿನೇಶ್ ಗೌಡ ರವರು ಉದಯ ಗೌಡ ನ ಆರೈಕೆ ಮಾಡಲು ಬಂದಿದ್ದು,  ದಿನಾಂಕ:07.12.2023 ರಂದು ಬೆಳಿಗ್ಗೆ ಸುಮಾರು 08:00 ಗಂಟೆಗೆ ಪಿರ್ಯಾದುದಾರರ ತಮ್ಮ ದಿನೇಶ್ ಗೌಡ ರವರು ಹೊರಗಡೆ ಕ್ಯಾಂಟೀನ್ ಗೆ ಚಾ ಕುಡಿಯಲೆಂದು ಹೋದವರು ವಾಪಸು ಕ್ಲಿನಿಕ್ ಗೂ ಹಾಗೂ ಮನೆಗೆ ಬಾರದೇ ಇರುವುದರಿಂದ ಮೊಬೈಲ್ ಫೋನ್ ನನ್ನು ಶಾಫೀ ಕ್ಲಿನಿಕ್ ನಲ್ಲಿ ಬಿಟ್ಟು ಹೋಗಿರುತ್ತಾರೆ. ದಿನಾಂಕ: 08-12-2023 ರಂದು ಪಿರ್ಯಾದುದಾರರು ಮಂಗಳೂರಿನ ಕೆಲವೊಂದು ಕಡೆಗಳಲ್ಲಿ ಅಲ್ಲದೇ ಅವನ ಬಗ್ಗೆ ಸ್ನೇಹಿತರಲ್ಲಿ, ಪರಿಚಯದವರಲ್ಲಿ, ಸಂಬಂದಿಕರಲ್ಲಿ, ಹುಡುಕಾಡಿ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಇದ್ದು ವರೆಗೂ ಪತ್ತೆಯಾಗದೆ ಇರುವುದರಿಂದ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿರುವುದಾಗಿದೆ. ಆದುದರಿಂದ ಕಾಣೆಯಾದ  ದಿನೇಶ್ ಗೌಡ ರವರನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂಬಿತ್ಯಾದಿ.

Mangalore South PS

ಪ್ರಕರಣದ ಪಿರ್ಯಾದಿದಾರರು ದಿನಾಂಕ 07-12-2023 ರಂದು ರಾತ್ರಿ ತನ್ನ ಕುಟುಂಬದ ಸದಸ್ಯರೊಂದಿಗೆ(ತಾಯಿ, ಹೆಂಡತಿ, ಮಗು ಹಾಗೂ ತಂಗಿಯ ಜೊತೆ)  ಮಂಗಳೂರು ನಗರದ ಎಂಫಾಸಿಸ್ ಬಳಿ ಇರುವ ಮಂಗಳೂರು ಕ್ಲಬ್ ಗೆ ಡಿನ್ನರ್ ಗೆ ಹೋದವರು ಡಿನ್ನರ್ ಮುಗಿಸಿಕೊಂಡು ಕಾರಿನಲ್ಲಿ ವಾಪಾಸು ಮನೆಗೆ ಹೊರಡುವಾಗ ರಾತ್ರಿ 10-00 ಗಂಟೆ ಸಮಯಕ್ಕೆ ಎಂಫಾಸಿಸ್ ಬಳಿ KA 19 AA 0358 ನಂಬ್ರದ ಆಟೋರಿಕ್ಷಾದಲ್ಲಿ ಬಂದ ಅಪರಿಚಿತರಿಬ್ಬರು ಪಿರ್ಯಾದಿದಾರರ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ  ಬಲವಂತವಾಗಿ ಕಾರಿನ ಬಾಗಿಲನ್ನು ತೆರೆದು ಪಿರ್ಯಾದಿದಾರರನ್ನು ಕಾರಿನಿಂದ ಹೊರಗಡೆ ಎಳೆದು ಕೈಯಿಂದ ಹಲ್ಲೆ ಮಾಡಿ, ಅಪರಿಚಿತರಿಬ್ಬರು ಪಿರ್ಯಾದುದಾರರ ಕುಟುಂಬದ ಸದಸ್ಯರಿಗೆ ಕೆಟ್ಟ ಶಬ್ದಗಳಿಂದ ಬೈದು ಬಳಿಕ  ಅಪರಿಚಿತರಿಬ್ಬರು ಪಿರ್ಯಾದಿದಾರರು ಕುತ್ತಿಗೆಯಲ್ಲಿ ಧರಿಸಿದ್ದ ಗೋಲ್ಡ್ ಚೈನ್ ಅನ್ನು ಎಳೆಯಲು ಪ್ರಯತ್ನಿಸಿ ಬಳಿಕ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Moodabidre PS    

ಪೊಲೀಸ್ ನಿರೀಕ್ಷಕರು ಸಂದೇಶ್ ಪಿ.ಜಿ  ದಿನಾಂಕ: 08-12-2023 ರಂದು 9.00 ಗಂಟೆಗೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕಿನ ಮಾರ್ಪಾಡಿ ಗ್ರಾಮದ ಅಲಂಗಾರು ಬಳಿಯಲ್ಲಿರುವ ಆಟೋ ನಿಲ್ದಾಣದ ಹತ್ತಿರ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ತಲುಪಿದಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯಲ್ಲಿ ಬರೆಯುತ್ತಾ ಇದು ಬಾಂಬೆ ಕಲ್ಯಾಣಿ ಮಟ್ಕಾ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಅಲ್ಲಿಗೆ ಹೋದಾಗ ಸಾರ್ವಜನಿಕರು ಓಡಿ ಹೋಗಿದ್ದು, ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಪ್ರಮೋದ್, ಪ್ರಾಯ: 40 ವರ್ಷ,  ವಾಸ: 4-220, ಕುಲ್ಲಂಗಾಲು, ದರ್ಖಾಸು, ಪುತ್ತಿಗೆ, ಮೂಡಬಿದರೆ ತಾಲೂಕು ಎಂಬುದಾಗಿ ತಿಳಿಸಿದ್ದು ಆತನನ್ನು ಪ್ರಶ್ನಿಸಲಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ ಸೊನ್ನೆ ಸಂಖ್ಯೆಯಿಂದ 99 ಸಂಖ್ಯೆಯವರೆಗೆ ಯಾವುದಾದರೂ 10 ರೂಪಾಯಿ ಹಾಕಿದಲ್ಲಿ ಸದ್ರಿ ನಂಬ್ರ ಡ್ರಾ ಆದಲ್ಲಿ ಒಂದು ರೂಪಾಯಿಗೆ 700 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದು, ಆರೋಪಿತನ ವಶದಲ್ಲಿದ್ದ ನಗದು ಹಣ 1000/- ರೂ, ಮಟ್ಕಾ ನಂಬರ್ ಬರೆದ ಚೀಟಿ-02 ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ ಒಂದು ಪೆನ್ನನ್ನು  ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಆರೋಪಿತರನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 09-12-2023 03:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080