ಅಭಿಪ್ರಾಯ / ಸಲಹೆಗಳು

Crime Report in :   Mangalore South PS

ಪಿರ್ಯಾದುದಾರರಾದ ಮಂಗಳೂರು ಸಿಸಿಬಿ ಘಟಕದ ಪಿಎಸ್ಐ ಸುದೀಪ್.ಎಮ್.ವಿ ರವರು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮತ್ತು ವಿವಿಧ ಪ್ರಕರಣಗಳಲ್ಲಿ ದಸ್ತಗಿರಿ ವಾರಂಟ್ ಇರುವ ಆರೋಪಿತನಾದ  ಶರಣ್ @ ಶರಣ್ ಪೂಜಾರಿ @ ರೋಹಿದಾಸ ಕೆ  @ ಆಕಾಶಭವನ ಶರಣ್ ಎಂಬಾತನನ್ನು ದಸ್ತಗಿರಿ  ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಬಗ್ಗೆ ವಿಶೇಷ ತಂಡ ರಚಿಸಿ ದಿನಾಂಕ 09-01-2024 ರಂದು ಆರೋಪಿ ಶರಣ್ @ ಶರಣ್ ಪೂಜಾರಿ @ ರೋಹಿದಾಸ ಕೆ  @ ಆಕಾಶಭವನ ಶರಣ್ ಎಂಬಾತನ ಪತ್ತೆ ಕಾರ್ಯದಲ್ಲಿದ್ದ ಸಮಯ ಆರೋಪಿಯು ಉಡುಪಿಯ ತೆಂಕನಿಡಿಯೂರು ಎಂಬಲ್ಲಿ ಇದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿದಾಗ ಪೊಲೀಸರು ಬಂದಿರುವ ಮಾಹಿತಿ ತಿಳಿದ ಆರೋಪಿಯು ಆತನ KA 20 MC 6057  ನೇ ನಂಬ್ರದ ಕಾರಿನಲ್ಲಿ ಮಂಗಳೂರು ಕಡೆಗೆ ಬಂದ ಮಾಹಿತಿ ಮೇರೆಗೆ ಪಿರ್ಯಾದುದಾರರು ಮತ್ತು ಸಿಬ್ಬಂದಿಯವರು ಮಂಗಳೂರು ನಗರದಲ್ಲಿ ಹುಡುಕಾಡುತ್ತಿದ್ದ ಸಮಯ ಆರೋಪಿತನು ಮಂಗಳೂರು ನಗರದ ಜೆಪ್ಪಿನಮೊಗೆರು ಕುಡ್ಪಪಾಡಿ ಎಂಬಲ್ಲಿದ್ದಾನೆ ಎಂಬ ಮಾಹಿತಿ ಬಂದ ಮೇರೆಗೆ ಪಿರ್ಯಾದುದಾರರು ಮತ್ತು ಸಿಸಿಬಿ ಘಟಕದ ಸಿಬ್ಬಂದಿಗಳು ಖಾಸಗಿ ಕಾರುಗಳಲ್ಲಿ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಅಲ್ಲಿ ರೈಲ್ವೇ ಹಳಿಯ ಎದುರಿನಲ್ಲಿ ಸುತ್ತಲೂ ಕಾಂಪೌಂಡ್ ಕಟ್ಟಿರುವ ಒಂದು ಖಾಲಿ ಜಾಗದಲ್ಲಿ ಆರೋಪಿ ಆಕಾಶ ಭವನ ಶರಣ್ ನು KA-20 MC 6057 ಬಿಳಿ ಬಣ್ಣದ ಐ 20 ಕಾರಿನಲ್ಲಿ ಇದ್ದವನನ್ನು ದಸ್ತಗಿರಿ ಮಾಡಲು ಹೋದಾಗ ಆರೋಪಿತನು ಪರಾರಿಯಾಗಲು ಪ್ರಯತ್ನಿಸಿ ಪಿಎಸ್ಐ ಶರಣಪ್ಪ ಭಂಡಾರಿ ರವರು ಇದ್ದ ಕಾರಿನ ಮುಂಭಾಗಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡಿಸಿ ಜಖಂಗೊಳಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಮಯ ಸುಮಾರು ಸಂಜೆ 4-00 ಗಂಟೆಗೆ ಪಿರ್ಯಾದುದಾರರು ಹಾಗೂ ಸಿಬ್ಬಂದಿಯವರು ಆರೋಪಿತನನ್ನು ಸುತ್ತುವರಿದು ಆತನಲ್ಲಿ ಶರಣಾಗುವಂತೆ ತಿಳಿಸಿದಾಗ ಆರೋಪಿಯು ಕೇಳದೆ ಕಾರಿನಿಂದ ಕೆಳಗಿಳಿದು ಚೂರಿಯನ್ನು ಹಿಡಿದುಕೊಂಡು  “ನನ್ನನ್ನು ಬಿಟ್ಟು ಬಿಡಿ ಇಲ್ಲದ್ದಿದ್ದರೆ ಚೂರಿಯಿಂದ ಇರಿದು ನಿಮ್ಮನ್ನು ಕೊಲೆ ಮಾಡುತ್ತೇನೆ" ಎಂದು ಹೇಳಿ ಕೈಯಲ್ಲಿದ್ದ ಚೂರಿಯಿಂದ ಬೀಸುತ್ತಾ ಬಂದಾಗ ಆರೋಪಿಯನ್ನು ಹಿಡಿಯಲು ಹೋದ ಸಿಸಿಬಿ ಘಟಕದ ಪಿಸಿ  ಪ್ರಕಾಶ್ ರವರಿಗೆ ಚೂರಿಯಿಂದ ಎದೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದು, ಪ್ರಕಾಶ್ ರವರು ತಪ್ಪಿಸಿಕೊಂಡಾಗ ಆ ಏಟು ಪ್ರಕಾಶ್ ರವರ ಬಲಕೈ  ತೋಳಿಗೆ ತಾಗಿ ರಕ್ತಗಾಯವಾಗಿರುತ್ತದೆ. ಈ ಸಮಯ ಪಿರ್ಯಾದುದಾರರು ಆತ್ಮ ರಕ್ಷಣೆಗಾಗಿ ತಮ್ಮಲ್ಲಿದ್ದ ಸರ್ವಿಸ್ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ನೀಡಿದರೂ, ಆರೋಪಿಯು ಲೆಕ್ಕಿಸದೇ ಪುನ: ಹಲ್ಲೆ ನಡೆಸಲು ಮುಂದಾದಾಗ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರ ಪ್ರಾಣ ಹಾನಿ ಮಾಡುವುದನ್ನು ತಪ್ಪಿಸಲು ಆತ್ಮರಕ್ಷಣೆಗಾಗಿ ಪಿರ್ಯಾದುದಾರರು ಆರೋಪಿತನ ಕಾಲಿಗೆ ಸರ್ವಿಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿರುತ್ತಾರೆ. ಈ ಘಟನೆಯಲ್ಲಿ ಆರೋಪಿ ಹಲ್ಲೆಯಿಂದ ಸಿಸಿಬಿ ಘಟಕದ ಸಿಬ್ಬಂದಿ ಪಿಸಿ  ಪ್ರಕಾಶ್ ರವರಿಗೆ ರಕ್ತಗಾಯವಾಗಿದ್ದು ಹಾಗೂ ಆರೋಪಿಯ ಎಡಕಾಲಿಗೆ ಗಾಯವಾಗಿರುತ್ತದೆ. ಆರೋಪಿತನು ದಸ್ತಗಿರಿ  ಮಾಡಲು ಹೋದ ವೇಳೆ  ತಪ್ಪಿಸಿ ಕೊಂಡು ಪರಾರಿಯಾಗುವ ಸಲುವಾಗಿ ಕರ್ತವ್ಯ ನಿರತ ಸಿಸಿಬಿ ಘಟಕದ ಪೊಲೀಸರಿಗೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ.

Bajpe PS

ದಿನಾಂಕ 09-01-2024  ರಂದು 18.00  ಗಂಟೆಗೆ ಮಂಗಳೂರು ತಾಲೂಕು ಕಿಲೆಂಜಾರು ಗ್ರಾಮದ ಕುಪ್ಪೆಪದವು ಜಂಕ್ಷನ್  ಬಳಿ ಬಂದಾಗ ಅಲ್ಲಿ ಒಬ್ಬ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ವಿಚಾರಿಸಿದಾಗ  ಆತನ ಹೆಸರು ಕೇಳಲಾಗಿ ಆರ್ಯನ್ ಶರ್ಮ (21),  ವಾಸ:ಗ್ರಾಮ್ ಬರ್ವಾನ್ ಖರ್ದು ಗ್ರಾಮ ಮಹಾರಜ್ ಗಂಜ್ ಜಿಲ್ಲೆ ಉತ್ತರ ಪ್ರದೇಶ    ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಿಸಲಾಗಿ ನಾನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ.

Panambur PS

ಪಿರ್ಯಾದಿ PRASAD SHETTY ದಾರರು ದಿನಾಂಕ 06.01.2024 ರಂದು ತನ್ನ ಮನೆಯಾದ ಕುಡುಂಬೂರು ಬಳಿ ಬಂದು ರಾತ್ರಿ ಮನೆಯ ಬಳಿ ಇರುವಾಗ ರಾತ್ರಿ 11:45 ಗಂಟೆಗೆ ಇಬ್ಬರು ಅಪರಿಚಿತ ಯುವಕರು ಬಂದು “ತೋಡ ಕೆ.ಬಿ.ಎಸ್ ತಕ್ ಚೋಡೋ” ಎಂದು ಹಿಂದಿಯಲ್ಲಿ ಹೇಳಿದರು. ಪಿರ್ಯಾದಿದಾರರು ಅದಕ್ಕೆ 150 ಬಾಡಿಗೆಯಾಗುತ್ತದೆ ಎಂದು ಹೇಳಿದಕ್ಕೆ ಅವರು ಕೊಡುತ್ತೇವೆ ಎಂದು ಹೇಳಿ ಅವರು ಹೇಳಿದಂತೆ ಪಿರ್ಯಾದಿದಾರರು ರಿಕ್ಷಾದಲ್ಲಿ ಅವರಿಬ್ಬರನ್ನು ಕರೆದುಕೊಂಡು ಜೋಕಟ್ಟೆಯ ಮಸೀದಿ ಹತ್ತಿರ ಬಿಡಬೇಕೆಂದು ಹೇಳಿದ್ದು, ಹಾಗೆ ಅಲ್ಲಿಗೆ ಕರೆದುಕೊಂಡು ಹೋಗಿ ಇಳಿಸಿದಾಗ, ಸ್ವಲ್ಪ ನಿಲ್ಲಿ ವಾಪಾಸು ಬರುತ್ತೇವೆ, ನಮ್ಮನ್ನು ಅದಾನಿ ಸಮೀಪ ಇರುವ  ಆಪಲ್ ಪ್ಲೈವುಡ್ ಫ್ಯಾಕ್ಟರಿ (ಸಿಸಿಬಿ) ಗೆ ಬಿಡಬೇಕು ಎಂದು ಹೇಳಿ ಇಳಿದು ಹೋದವರು. ವಾಪಾಸು ಬಂದು ಆಪಲ್ ಪ್ಲೈವುಡ್ ಫ್ಯಾಕ್ಟರಿ (ಸಿಸಿಬಿ) ಕಡೆಗೆ ರಿಕ್ಷಾದಲ್ಲಿ ಹೊರಟು ಬರುತ್ತಿದ್ದಾಗ, ಕೆ ಬಿ ಎಸ್ ಜಂಕ್ಷನ್ ನಿಂದ ಕೂಳೂರು ಕಡೆಗೆ ಬರುವಾಗ ಫ್ಲೈಓವರ್ ನಿಂದ ಸ್ವಲ್ಪ ಮುಂದೆ ತಲುಪಿದಾಗ, ಮೂತ್ರ ಮಾಡಲು ಇದೆ, ರಿಕ್ಷಾವನ್ನು ನಿಲ್ಲಿಸುವಂತೆ ಹೇಳಿದರು. ಅದಕ್ಕೆ ಪಿರ್ಯಾದಿದಾರರು ಲೇಟ್ ಆಗುತ್ತದೆ, ನಿಲ್ಲಿಸುವುದಿಲ್ಲ ಎಂದು ಹೇಳಿದ್ದಕ್ಕೆ, ಜೋರು ಮಾಡಿ ರಿಕ್ಷಾವನ್ನು ನಿಲ್ಲಿಸಿದರು. ಅವರಿಬ್ಬರು ರಿಕ್ಷಾದಿಂದ ಕೆಳಗಿಳಿದು ಹೋಗಿ ಮೂತ್ರ ಮಾಡುತ್ತಿದ್ದರು. ಪಿರ್ಯಾದಿದಾರರು ರಿಕ್ಷಾದಲ್ಲೇ ಕುಳಿತ್ತಿದ್ದೆನು. ಸ್ವಲ್ಪ ಹೊತ್ತಿನಲ್ಲಿ ಅವರಿಬ್ಬರು ಪಿರ್ಯಾದಿದಾರರ ರಿಕ್ಷಾದ ಹತ್ತಿರ ಬಂದು ಪಿರ್ಯಾದಿದಾರರ ಕೈ ಮತ್ತು ಕಾಲಿನಲ್ಲಿ ಹಿಡಿದು ಎಳೆದು ಕೆಳಗೆ ಹಾಕಿ, ಸ್ವಲ್ಪ ದೂರದ ತನಕ ನೆಲದಲ್ಲಿ ಎಳೆದುಕೊಂಡು ಹೋಗಿ, ಅಲ್ಲಿ ಪಿರ್ಯಾದಿದಾರಿಗೆ ಕೈಯಿಂದ ಮುಖಕ್ಕೆ ಮತ್ತು ಮೂಗಿಗೆ ಹೊಡೆದು, ಕಾಲುಗಳಿಂದ ತುಳಿದಿರುತ್ತಾರೆ. ಪಿರ್ಯಾದಿದಾರರು ಕಲ್ಲೊಂದನ್ನು ಅವರ ಕಡೆಗೆ ಬೀಸಿದ್ದು ಆಗ ಅವರು ರಿಕ್ಷಾದ ಹತ್ತಿರ ಓಡಿ ಹೋಗಿ ರಿಕ್ಷಾದ ಹ್ಯಾಂಡಲ್ ಪರ್ಸ್ ನಲ್ಲಿ ಇಟ್ಟಿದ್ದ ಪಿರ್ಯಾದಿದಾರರ ವಿವೋ ಕಂಪನಿಯ ಮೊಬೈಲ್ ಫೋನ್  ಮತ್ತು 2,800/- ನಗದು ಹಣ ಮತ್ತು ಅಟೋರಿಕ್ಷಾದ ಕೀ ಯನ್ನು ಆ ಇಬ್ಬರು ತೆಗೆದುಕೊಂಡು ಓಡಿ ಹೋಗಿರುತ್ತಾರೆ ಎಂಬಿತ್ಯಾದಿ ಈ ಘಟನೆಯು ನಡೆಯುವಾಗ ರಾತ್ರಿ 12.15 ಗಂಟೆಯಾಗಬಹುದು ಎಂಬಿತ್ಯಾದಿ

Ullal PS

ದಿನಾಂಕ.09-01-2024 ರಂದು ಠಾಣಾ ಸರಹದ್ದಿನ ಉಳ್ಳಾಲ ತಾಲೂಕು, ಉಳ್ಳಾಲ ಗ್ರಾಮದ ಉಳ್ಳಾಲ ಬೀಚ್ನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಭಾತ್ಮೀದಾರರಿಂದ ಮಾಹಿತಿ ದೊರೆತ ಮೇರೆಗೆ ಸಂಜೆ 05-00 ಗಂಟೆಯ ಸಮಯಕ್ಕೆ ಮಾಹಿತಿ ದೊರೆತ ಸ್ಥಳಕ್ಕೆ ತಲುಪಿ ನೋಡಿದಾಗ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಅಮಲಿನಲ್ಲಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡು ಕೂಡಲೇ ಆತನ ಬಳಿಗೆ ಹೋಗಿ ಆತನನ್ನು ವಿಚಾರಿಸಲಾಗಿ ಆತನು ನಶೆಯ ಅಮಲಿನಲ್ಲಿ ಉತ್ತರಿಸುತ್ತಿದ್ದವನನ್ನು ಮತ್ತೆ ಮತ್ತೆ ವಿಚಾರಿಸಲಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಆತನ ಹೆಸರು ವಿಳಾಸ ವಿಚಾರಿಸಲಾಗಿ ಗೌತಮ್ ಶೆಟ್ಟಿ (26) ವಾಸ:  ಕದ್ರಿ ಪದ್ಮನಾಭ ಕಂಪೌಂಡ್ ಕದ್ರಿ ಮಲ್ಲಿಕಟ್ಟೆ ಮಂಗಳೂರು ತಾಲೂಕು.. ಎಂಬುದಾಗಿ ತಿಳಿಸಿದ್ದು ವಶಕ್ಕೆ ಪಡೆದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಗಾಂಜಾ ಸೇವನೆಯ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ಗೌತಮ ಶೆಟ್ಟಯು ಮಾದಕ ವಸ್ತು ‘TETRAHYDROCANNABINOL’(THC) ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿದಂತೆ ಈ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Konaje PS

 ದಿನಾಂಕ 09-01-2024 ರಂದು 16-30 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಬಳಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಚೀಟಿ ಬರೆದು ಕೊಟ್ಟು ಹಣವನ್ನು ಸಂಗ್ರಹಿಸಿಕೊಂಡು ಮಟ್ಕಾ ಎಂಬ ನಸೀಬಿನ ಆಟವನ್ನು ಆಡುತ್ತಿರುವುದಾಗಿ ಠಾಣಾ ಸಿಬ್ಬಂದಿಯಾದ ಪಿಸಿ  ನೇ ಸಂತೋಷ್ ರವರು ಠಾಣೆಗೆ ನೀಡಿದ ಲಿಖಿತ ಮಾಹಿತಿಯಂತೆ,  ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಬಳಿಯ 19-30 ಗಂಟೆಗೆ ಹೋದಾಗ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು ಮಟ್ಕಾ ಆಟವನ್ನು ಆಡಿಸುತ್ತಿದ್ದ ಆರೋಪಿ ತಂಜಿಲ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ ನಗದು ಹಣ ರೂ 1000/-, ಅಂಕೆಗಳನ್ನು ಬರೆದ ಮಟ್ಕಾ ಚೀಟಿ-1, ಪೆನ್-1 ಇವುಗಳನ್ನು ಪಂಚರ ಸಮಕ್ಷಮ ಮಹಜರು ಮೂಖೇನ ಸ್ವಾಧೀನಪಡಿಸಿಕೊಂಡು, ಠಾಣೆಗೆ ಕರೆತಂದು ತಂಜಿಲ್ ಎಂಬಾತನ  ವಿರುದ್ದ ಪ್ರಕರಣ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ.

Kankanady Town PS

ಪಿರ್ಯಾದಿದಾರರಾದ ಶ್ರೀ ಅಶೋಕ ಪಿ ರವರು ಬಲ್ಲಾಳ್ ಬಾಗ್ ನಲ್ಲಿ ಭಾರತ್ ಅಗ್ರೋವೆಟ್ ಇಂಡಸ್ಟ್ರಿಸ್ ಕಂಪೆನಿಯ ಬ್ರಾಂಚ್ ನ ಭಾರತ್ ಪ್ರೇಶ್ ಚಿಕನ್ ಶಾಫ್  ಡೆಲಿವೆರಿ ಭಾಯ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಸದ್ರಿಯವರಿಗೆ ಕಂಪನಿಯ ಕಡೆಯಿಂದ KA-19-HE-6037 ನೇ ಹೊಂಡಾ ಆಕ್ಟೀವಾ ಸ್ಕೂಟರ್ ನ್ನು ಚಿಕನ್ ಡೆಲೆವರಿ ಮಾಡಲು ನೀಡಿದ್ದು,  ಪಿರ್ಯಾದಿದಾರರು ದಿನಾಂಕ: 08-01-2024 ರಂದು ರಾತ್ರಿ 20-20 ಗಂಟೆಗೆ ಪಂಪವೆಲ್ ನಲ್ಲಿರುವ ಭಾರತ್ ಅಗ್ರೋವೆಟ್ ಇಂಡಸ್ಟ್ರಿಸ್ ಕಂಪೆನಿಯ ರೂಮ್ ನಲ್ಲಿ ಊಟ ಮಾಡಲು ಬಂದು,  KA-19-HE-6037 ನೇ ಸ್ಕೂಟರ್ ನ್ನು  ಪಂಪ್ ವೆಲ್ ನ ಭಾರತ್  ಪ್ರೆಶ್ ಚಿಕನ್ ಶಾಪ್ ನ ಎದುರು ಕೀ ಸಮೇತ ಪಾರ್ಕ್ ಮಾಡಿ ಹೋಗಿ,  ಊಟ ಮುಗಿಸಿ ವಾಪಾಸ್ಸು  20-40 ಗಂಟೆಗೆ  ಬಂದು ನೋಡಿದಾಗ  ತಾವು ಪಾರ್ಕ್ ಮಾಡಿದ್ದ ಹೊಂಡಾ ಆಕ್ಟೀವಾ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿದೆ.  ಈ ಸ್ಕೂಟರ್ ನ ಇಂಜಿನ್ ನಂಬರ್: JF91EG0144164, ಚಾಸಿಸ್ ನಂಬರ್: ME4JF913HLG144652, ಬಣ್ಣ: ಗ್ರೇ , ಮೌಲ್ಯ: 46,000/- ಆಗಬಹುದು. ಕಳವಾದ ಸ್ಕೂಟರನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 11-01-2024 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080