ಅಭಿಪ್ರಾಯ / ಸಲಹೆಗಳು

Traffic South Police Station

ಪಿರ್ಯಾದಿ SHAJEED G M ಹೋಟೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಾದ ಅನಿಲ್ ಕುಮಾರ್ ರವರು ದಿನಾಂಕ: 09-02-2023 ರಂದು ಸ್ಕೂಟರ್ ನಂಬ್ರ : KA-19-HG-1673 ನೇದನ್ನು ಸವಾರಿ ಮಾಡಿಕೊಂಡು ನಾಟೆಕಲ್ ಕಡೆಯಿಂದ ಮಂಜನಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಾತ್ರಿ ಸಮಯ ಸುಮಾರು 11-30 ಗಂಟೆಗೆ ಮಂಜನಾಡಿ ಕಲ್ಕಟ್ಟ ಎಂಬಲ್ಲಿಗೆ ತಲುಪುತ್ತಿದ್ದಂತೆ ಮಂಜನಾಡಿ ಕಡೆಯಿಂದ ಬರುತ್ತಿದ್ದ ಕಾರು ನಂಬ್ರ: KL-46-E-5734 ನೇದನ್ನು ಅದರ ಚಾಲಕ ಅಬೂಬಕ್ಕರ್ ಸಿದ್ದೀಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅನಿಲ್ ಕುಮಾರ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅನಿಲ್ ಕುಮಾರ್ ರವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅನಿಲ್ ಕುಮಾರ್ ರವರು ಅಲ್ಲೇ ರಸ್ತೆ ಬದಿಯ ಕಂಪೌಂಡ್ ಬಳಿ ಬಿದ್ದು ಅವರ ತಲೆಗೆ ಗುದ್ದಿದ ರೀತಿಯ ಗಾಯ,ಮುಖಕ್ಕೆ ರಕ್ತ ಗಾಯ,ಎಡಗಾಲಿನ ತೊಡೆಗೆ ಮೂಳೆ ಮುರಿತದ ರಕ್ತ ಗಾಯ,ಎಡಭುಜಕ್ಕೆ ರಕ್ತ ಗಾಯ,ಎಡಕ್ಕೆ ಮೂಳೆ ಮುರಿತದ ಗಾಯ,ಬಲಗಾಲಿನ ಮಣಿಗಂಟಿಗೆ ರಕ್ತ ಗಾಯ ವಾಗಿದ್ದ ಅವರನ್ನು  ಕೂಡಲೇ ಅಲ್ಲಿ ಸೇರಿದ ಜನರು ವಾಹನವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅನಿಲ್ ಕುಮಾರ್ ರವರಿಗೆ ಪಿರ್ಯಾದಿದಾರರು ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ನಂತರ ಪಿರ್ಯಾದಿದಾರರು ಮತ್ತು  ಅವರ ಪಾಟ್ನರ್ ಹಸನ್ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಅನಿಲ್ ಕುಮಾರ್ ರವರನ್ನು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನಿಲ್ ಕುಮಾರ್ ರವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 01-49 ಗಂಟೆಗೆ ಮೃತ ಪಟ್ಟಿರುತ್ತಾರೆ ಎಂದು ಅಲ್ಲಿನ ವೈದ್ಯರು ತಿಳಿಸಿರುತ್ತಾರೆ  ಎಂಬಿತ್ಯಾದಿ

 

Moodabidre PS

ಪಿರ್ಯಾದಿ PRASAD ಅಕ್ಕ ರಮ್ಯ ರವರು ದಿನಾಂಕ:  06-02-2023 ರಂದು ಅವರ ಬಾಬ್ತು ಹೊಂಡಾ ಅಕ್ಟೀವ್ ನಂ:ಕೆಎ-20-ಇಕ್ಯು-9226 ರಲ್ಲಿ ಸವಾರಳಾಗಿ ತನ್ನ ಅಕ್ಕ ಸುರಕ್ಷಾಳನ್ನು ಸಹಸವಾರಳಾಗಿ ಕುಳ್ಳರಿಸಿಕೊಂಡು ಪಿರ್ಯಾದುದಾರರ ಮನೆಯಾದ ಪುತ್ತಿಗೆಯಿಂದ ಸಂಜೆ 7.00 ಗಂಟೆಗೆ ಸುರಕ್ಷಾಳನ್ನು ಅವಳ ಗಂಡನ ಮನೆಯಾದ ಸಿದ್ದಕಟ್ಟೆ ಎಂಬಲ್ಲಿಗೆ ಬಿಟ್ಟು ಬರುವರೇ ಹೊರಟಿದ್ದು,  ಸಮಯ ರಾತ್ರಿ 7.30 ಗಂಟೆಗೆ ಪುಚ್ಚೇರಿ ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಬರುವ ವಾಹನವೊಂದಕ್ಕೆ ಸೈಡ್ ಕೊಡುವ ಭರದಲ್ಲಿ ರಮ್ಯಳು ರಸ್ತೆಯ ತೀರ ಎಡಬದಿಗೆ ಸ್ಕೂಟರ್ ನ್ನು ಚಲಾಯಿಸಿಕೊಂಡು ಹೋಗಿದ್ದು,  ಅತೀ ವೇಗದಲ್ಲಿದ್ದ ಸ್ಕೂಟರ್ ಅವರ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಸ್ಕೂಟರ್ ಸಮೇತ ಇಬ್ಬರು ಬಿದ್ದಿರುತ್ತಾರೆ.  ಈ ಸಮಯ ಅಲ್ಲಿ ಸೇರಿದ ಜನರು ಅವರಿಬ್ಬರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಅಳ್ವಾಸ್ ಅಸ್ಪತ್ರೆಗೆ ಕರೆ ತಂದಿದ್ದು, ಈ ಅಪಘಾತದ ಪರಿಣಾಮ ಸವಾರಳಾಗಿರುವ ರಮ್ಯ ರವರಿಗೆ ಯಾವುದೇ ತರಹದ ಗಾಯಗಳಾಗಿರುವುದಿಲ್ಲ, ಹಾಗೂ ಸಹ ಸವಾರಳಾಗಿರುವ ಸುರಕ್ಷಾಳಿಗೆ ಎಡ ಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರುಗೆ ಕರೆದು ಕೊಂಡು  ಹೋಗುವಂತೆ ಅಳ್ವಾಸ್ ಅಸ್ಪತ್ರೆಯ ವೈದ್ಯರು ತಿಳಿಸಿದ ಮೇರೆಗೆ ಸುರಕ್ಷಾಳನ್ನು ಅದೇ ದಿನ ಸುರತ್ಕಲ್‌ನ ಅಥರ್ವ ಆಸ್ಪತ್ರಗೆ ಕರೆದು ಕೊಂಡು ಹೋಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-02-2023 05:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080