ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore West Traffic PS        

ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ: 10-02-2024 ರಂದು ಪಿರ್ಯಾದು K UMESH KAMATH ಇವರು  KA19ME9204 ನೇ ಕಾರನ್ನು  ಮನೆಯಿಂದ ಆಫೀಸ್ ಗೆ  ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ  ಸಮಯ ಸುಮಾರು 11:15 ಗಂಟೆಯ ವೇಳೆಗೆ ಪುಡ್ ಲ್ಯಾಂಡ್ ಹೊಟೇಲ್ ಬಳಿ ತಲುಪುವಾಗ ಲಾಲ್ ಬಾಗ್ ಕಡೆಯಿಂದ MH12 VF 8826 ನೇದರ ಬಸ್ಸಿನ ಚಾಲಕ ದುಡುಕುತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ರಸ್ತೆಯ ಮದ್ಯದಲ್ಲಿರುವ ಡಿವೈಡರ್  ಮೇಲೆ ಹತ್ತಿ ಕಾರಿನ ಎಡ ಬದಿಯ ,ಹಿಂಬದಿಯ ಡೋರ್ ಹಾಗೂ ಮುಂಭಾಗ ಬಂಫರ್ ಟೈರ್ ಜಖಂಗೊಂಡಿರುವುದಾಗಿದೆ 

 

Mangalore East Traffic PS                 

ಪಿರ್ಯಾದಿದಾರರಾದ ಕೀರ್ತನ್, ಪ್ರಾಯ-20 ವರ್ಷ ಎಂಬವರು ದಿನಾಂಕ: 08/02/2024 ರಂದು ತನ್ನ ಬಾಬ್ತು KA-19-EN-7990 ನೇ ಮೋಟಾರು ಸೈಕಲ್ ನಲ್ಲಿ ಕೊಟ್ಟಾರ ಕಡೆಯಿಂದ ಕೆಪಿಟಿ ಯೆಯ್ಯಾಡಿ ರಸ್ತೆಯಿಂದಾಗಿ ಸವಾರಿ ಮಾಡಿಕೊಂಡು ಹೋಗುತ್ತಾ ಕೆಪಿಟಿ ಬಾಯ್ಸ್ ಹಾಸ್ಟೇಲ್ ಎದುರುಗಡೆ ತೆರೆದ ಡಿವೈಡರ್ ಬಳಿ ತಲುಪುವಾಗ ಪಿರ್ಯಾದಿದಾರರ ಎದುರುಗಡೆಯಿಂದ ಹೋಗುತ್ತಿದ್ದ KA-19-AA-7472 ನಂಬ್ರದ ಪಿಕ್ಅಪ್ ವಾಹನವನ್ನು ಅದರ ಚಾಲಕ ಅಭಿಷೇಕ್ ಎಂಬವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ ರಸ್ತೆಯ ಇನ್ನೊಂದು ಕಡೆಗೆ ಅಂದರೆ ಯೆಯ್ಯಾಡಿ ಕಡೆಯಿಂದ ಕೆಪಿಟಿ ಕಡೆಗೆ ಹಾದು ಹೋಗುವ ರಸ್ತೆಗೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರು ಸೈಕಲ್ ಪಿಕ್ಅಪ್ ವಾಹನಕ್ಕೆ ಡಿಕ್ಕಿಯಾಗಿ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದವರನ್ನು ಪಿಕ್ಅಪ್ ವಾಹನದ ಚಾಲಕನು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ಎಡಕೈಯ ತೋಳಿನಲ್ಲಿ ರಕ್ತಗಾಯ ಹಾಗೂ ಎಡ ತೋಳು ಕಾಲಿನಲ್ಲಿ ಮೂಳೆ ಮುರಿತದ ಗಾಯವಾಗಿರುವುದಾಗಿ ತಿಳಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ ಈ ಅಪಘಾತದಿಂದ ಅಪಘಾತಕ್ಕೊಳಗಾದ ಮೋಟಾರು ಸೈಕಲ್ ಕೂಡಾ ಜಖಂ ಆಗಿರುತ್ತದೆ ಎಂಬಿತ್ಯಾದಿ.

 

Mangalore East Traffic PS                 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಪುರಂದರ ಶೆಟ್ಟಿ, ಎಂಬವರು ನಿನ್ನೆ ದಿನ ದಿನಾಂಕ: 09/02/2024 ರಂದು ತನ್ನ ಬಾಬ್ತು KA-21-U-4976 ನೇ ಸ್ಕೂಟರ್ ನಲ್ಲಿ ಪಡೀಲ್ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ರಾ.ಹೆ 73 ನೇ ಸಾರ್ವಜನಿಕ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮದ್ಯಾಹ್ನ ಕುಲಶೇಖರ ಪ್ಲೈ ಓವರ್ ಪ್ರಾರಂಭದ ಸಮೀಪ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎಡಭಾಗದಲ್ಲಿ ಬರುತ್ತಿದ್ದ NL-01-AB-0475 ನೇ ಕಂಟೈನರ್ ಲಾರಿಯೊಂದನ್ನು ಅದರ ಚಾಲಕನು ಏಕಾಎಕಿಯಾಗಿ ಅಜಾಗರೂಕತೆಯಿಂದ ಬಲಬದಿಗೆ ಚಲಾಯಿಸಿಕೊಂಡು ಬಂದ ಕಾರಣ ಕಂಟೈನರ್ ನ ಬಲಭಾಗದ ಬಾಡಿಯು ಪಿರ್ಯಾದಿದಾರರ ಸ್ಕೂಟರ್ ಗೆ ಢಿಕ್ಕಿಯಾಗಿ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಎ ಜೆ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಲಾರಿ ಚಾಲಕನು ಆಸ್ಪತ್ರೆಯ ವೆಚ್ಚ ಹಾಗೂ ಸ್ಕೂಟರ್ ರಿಪೇರಿಯ ಖರ್ಚನ್ನು ಕೊಡುವುದಾಗಿ ಹೇಳಿ ಲಾರಿಯನ್ನು ಬದಿಗೆ ನಿಲ್ಲಿಸುವಂತೆ ನಟಿಸಿ ಲಾರಿ ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ

 

Traffic South Police

ಫಿರ್ಯಾದಿ SMT GAYATHRI ಇವರ ಮಗ ಮೋಕ್ಷಿತ್ (12 ವರ್ಷ) ಶಾರದಾ ಗಣಪತಿ ವಿದ್ಯಾ ಕೇಂದ್ರ, ಕೈರಂಗಳ ನಂದನ ಪಡ್ಪು ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಈ ದಿನ ದಿನಾಂಕ: 10-02-2024 ರಂದು ಶಾಲೆಗೆ ತೆರಳಿದ ಮೋಕ್ಷಿತನು ಶಾಲೆ ಮುಗಿಸಿ ಮನೆಗೆ ತೆರಳುವರೇ ಮಧ್ಯಾಹ್ನ ಶಾಲೆಯ ಮುಂಭಾಗದಲ್ಲಿ ಮುಡಿಪು ಕಡೆಯಿಂದ ಕೈರಂಗಳ ಕಡೆಗೆ ಹಾದು ಹೋಗಿರುವ ರಸ್ತೆಯನ್ನು ದಾಟುತ್ತಿದ್ದಾಗ ಮುಡಿಪು ಕಡೆಯಿಂದ KA-19-HF-3151 ನೇ ನಂಬ್ರದ ಮೊಟಾರ್ ಸೈಕಲ್ ಸವಾರ ಪ್ರದೀಪ್ ಎಂಬಾತನು ತನ್ನ ಮೊಟಾರು ಸೈಕಲನ್ನು ದುಡುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ಮೋಕ್ಷಿತ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬಾಲಕನು ರಸ್ತೆಗೆ ಎಸೆಯಲ್ಪಟ್ಟವನನ್ನು ಶಾಲಾ ಶಿಕ್ಷಕರು ಮತ್ತು ಅಲ್ಲಿದ್ದವರು ಉಪಚರಿಸಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ಮೋಕ್ಷಿತ್ ನಿಗೆ ಬಲಕಾಲಿನ ಕೋಲು ಕಾಲಿಗೆ, ಎಡಕೈಗೆ ಮೂಳೆಮುರಿತದ ಗಾಯ, ಮತ್ತು ಮೂಗಿಗೆ ತರಚಿದ ರಕ್ತಗಾಯ ಆಗಿರುವುದಾಗಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

 

Mangalore North PS

ದಿನಾಂಕ: 10-02-2024 ರಂದು ಸಮಯ ಬೆಳಿಗ್ಗೆ 10:30 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ಇವರು ತಮ್ಮ ಸಿಬ್ಬಂದಿ ರವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ  ಹಂಪನಕಟ್ಟೆ ಬಳಿ ತಲುಪಿದಾಗ ಸೂರ್ಯಕಿರಣ (21) ತಂದೆ-ರಘುನಾಥ, ವಾಸ-ಕೊಚುಪರಂಬಿಲ್ ಹೌಸ್, ಕಂಬಲೂರು, ಕಾಸರಗೋಡ್, ಕೇರಳ ಎಂಬುದಾಗಿ ತಿಳಿಸಿದ್ದು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದವನನ್ನು ಕಂಡು ಸದ್ರಿ ಸೂರ್ಯಕಿರಣನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ, ಸೂರ್ಯಕಿರಣ ಎಂಬಾತನು, Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ. ಅದರಂತೆ ಆತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ಈ ಪ್ರಕರಣದ ಸಾರಾಂಶವೇನೆಂದರೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡದ ಅಧಿಕಾರಿ ಪೊಲೀಸ್ ಉಪ ನಿರೀಕ್ಷರಾದ ಪ್ರದೀಪ್ ಟಿ ಆರ್ ಉತ್ತರ ಪೊಲೀಸ್ ಠಾಣೆ ರವರು ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ  ಕದ್ರಿ ಪಾರ್ಕ್  ಬಳಿ ತಲುಪಿದಾಗ  Ashby Geo Santhosh, Age: 21 years, S/o Santhosh Gearge, R/o Parapattu Pathanapuram Po Salempuram, Kollam, Kerala ಎಂಬ ವ್ಯಕ್ತಿಯು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಆತನನ್ನು  ಮುಂದಿನ ಕ್ರಮದ ಬಗ್ಗೆ ಕುಂಟಿಕಾನ ಎ ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು, ಪರೀಕ್ಷಿಸಿದ ವೈದ್ಯರು TETRAHYDARCANNABINOID(MARIJUANA) 50 mg per ml POSITIVE ಎಂಬುದಾಗಿ ವರದಿಯನ್ನು ನೀಡಿರುತ್ತಾರೆ.,  ಅದರಂತೆ ಆತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 12-02-2024 07:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080