ಅಭಿಪ್ರಾಯ / ಸಲಹೆಗಳು

Mangalore East Traffic PS                        

ಪಿರ್ಯಾದಿದಾರರಾದ ಲೋಕೇಶ್ ರವರು ದಿನಾಂಕ 09-03-2023 ರಂದು ರಾತ್ರಿ 8.00 ಗಂಟೆಗೆ ತನ್ನ ಸ್ನೇಹಿತ ವಿನೀತ್ ಡಿ ಸೋಜಾ ರವರೊಂದಿಗೆ KA-20-EX-7460 ನಂಬ್ರದ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಸ್ನೇಹಿತ ವಿನೀತ್ ಡಿ ಸೋಜಾ ರವರು ಸ್ಕೂಟರನ್ನು ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ಕಡೆಯಿಂದ ಬಿಜೈ ಜಂಕ್ಷನ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಚಲಾಯಿಸುತ್ತಾ ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಬಾಟಾ ಶೋ ರೂಮ್ ಎದುರುಗಡೆ ತೆರೆದ ಡಿವೈಡರ್ ಬಳಿ ತಲುಪಿದಾಗ KA-21-P-7436 ನಂಬ್ರದ ಕಾರನ್ನು ಅದರ ಚಾಲಕಿ ಶ್ರೀನಿಧಿ ಎಂಬಾಕೆಯು ಬಿಜೈ ಜಂಕ್ಷನ್ ಜಂಕ್ಷನ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ತೆರೆದ ಡಿವೈಡರ್ ಬಳಿ ಯು ಟರ್ನ್ ತೆಗೆದುಕೊಳ್ಳಲು ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರು ಮತ್ತು ಅವರ ಸ್ನೇಹಿತ ವಿನೀತ್ ಡಿ ಸೋಜಾ ರವರು ಸವಾರರಾಗಿದ್ದು, ಸ್ಕೂಟರಿನ ಬಲ ಬದಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಸ್ನೇಹಿತ ವಿನೀತ್ ಡಿ ಸೋಜಾ ರವರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ವಿನೀತ್ ಡಿ ಸೋಜಾ ರವರಿಗೆ ಬಲ ಭುಜಕ್ಕೆ ಮೂಳೆ ಜೋಡಣೆ ಬಿಟ್ಟ ಮತ್ತು ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಪಿರ್ಯಾದಿದಾರರಿಗೆ ಕಾಲಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಗಾಯಾಳು ವಿನೀತ್ ಡಿ ಸೋಜಾ ರವರು ಒಳರೋಗಿಯಾಗಿ ಎ.ಜೆ. ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Mangalore East PS

ಫಿರ್ಯಾದಿ SMT DEVAKI(54) ದಾರರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕು ಮರತನಾಡಿ ಹೌಸ್   ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರ  ಮೂರನೇಯ ಮಗಳಾದ ಕುಮಾರಿ ಜಯಲಕ್ಷ್ಮೀ  ಪ್ರಾಯ:28. ವರ್ಷ ಕಳೆದ 5 ವರ್ಷದಿಂದ ಶ್ರೀ ವೇದಾಮಾಯಾ  ಆಯುರ್ವೇದಿಕ್ ಮಲ್ಟಿ ಸ್ಪೆಶಾಲಿಸ್ಟ್ ಆಸ್ಪತ್ರೆಲ್ಲಿ ನರ್ಸ್ ಆಗಿ  ಕೆಲಸ ಮಾಡಿಕೊಂಡಿದ್ದಳು. ಪಿರ್ಯಾದಿದಾರರ  ಮಗಳು ಆಸ್ಪತ್ರೆಯಿಂದ ರಜೆ ಹಾಕಿ ಪ್ರತಿ ತಿಂಗಳು ಮನೆಗೆ ಬಂದು ಹೋಗಿ ಮಾಡುತ್ತಿದ್ದಳು. ಪಿರ್ಯಾದಿದಾರರ ಮಗಳು ಜಯಲಕ್ಷ್ಮೀ  ಪೋನ್ ಮಾಡದೆ ಮತ್ತು ಮನೆಗೆ ಬಾರದೆ ಇದ್ದದ್ದರಿಂದ ಪಿರ್ಯಾದಿದಾರರು ದಿನಾಂಕ 28/02/2023 ರಂದು ಆಯುರ್ವೇದಿಕ್ ಆಸ್ಪತ್ರೆ ಬಟ್ಟಗುಡ್ಡ ಇಲ್ಲಿ ಮಗಳ ಬಗ್ಗೆ ವಿಚಾರಿಸಿದಲ್ಲಿ, ದಿನಾಂಕ 30/01/2023 ರಂದು ಸಾಯಂಕಾಲ ರಜೆ ಪಡೆದುಕೊಂಡು ಹೋಗಿರುತ್ತಾಳೆ ಮತ್ತು ಈವರೆಗೂ ಆಸ್ಪತ್ರೆಗೆ ಕೆಲಸಕ್ಕೆ ಬರಲಿಲ್ಲ ಎಂಬುದಾಗಿ ತಿಳಿಸಿದರು. ಮಗಳು ಮನೆಗೆ ಬಾರದೆ ಇದ್ದುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ  ಹುಡುಕಾಡಿ  ಹಾಗೂ ನಮ್ಮ ಸಂಬಂಧಿಕರ ಮನೆಗೆ ಕರೆ ಮಾಡಿ ಮಗಳ ಬಗ್ಗೆ ಪೋನ್ ಮುಖಾಂತರ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ಪಿರ್ಯಾದಿದಾರರ ಮಗಳು ಕುಮಾರಿ ಜಯಲಕ್ಷ್ಮೀ ಕೊಯಾರಾ ಇವಳನ್ನುಈ ದಿನವೂ ಸಹ ಎಲ್ಲಾ ಕಡೆಗೆ ಹುಡುಕಾಡಿ ಎಲ್ಲಿಯೂ ಸಿಗದೇ ಇದ್ದುದ್ದರಿಂದ ಕಾಣೆಯಾದ ಮಗಳನ್ನು ಪತ್ತೆ ಮಾಡಿಕೋಡಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.                                                                          

Moodabidre PS

 ಪಿರ್ಯಾದಿ Prajwal ದಾರರ ಸಂಬಂಧಿ ತೋಮ ಪೂಜಾರಿಯವರು ದಿನಾಂಕ: 09-03-2023 ರಂದು ಸಂಜೆ ಇರುವೈಲು ಶ್ರೀ ದುರ್ಗಾ ಪರಮೇಶ್ವರಿ ಜಾತ್ರೆಯಲ್ಲಿದ್ದು ಜಾತ್ರೆಯನ್ನು ಮುಗಿಸಿಕೊಂಡು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಭಟಾರ ಕ್ರಾಸ್ ಎಂಬಲ್ಲಿ ರಾತ್ರಿ ಸಮಯ ಸುಮಾರು 12.00 ಗಂಟೆಗೆ ಜಾತ್ರೆ ಕಡೆಯಿಂದ ಇರುವೈಲ್ ಶಾಲೆ ಕಡೆಗೆ ಹೊರಟಿದ್ದ KA-19-HD-1912 ನೇ ಸ್ಕೂಟರ್ ನ ಸವಾರನಾದ ಪ್ರಜ್ವಲ್ ನು ಸ್ಕೂಟರ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತೋಮ ಪೂಜಾರಿಯವರಿಗೆ ಡಿಕ್ಕಿಪಡಿಸಿದ್ದರಿಂದ ರಸ್ತೆಗೆ ಬಿದ್ದಿದ್ದು ಪರಿಣಾಮ ಮುಖ ಮತ್ತು ತಲೆಯ ಭಾಗಗಳಲ್ಲಿ ಗಂಭೀರ ರೀತಿಯ ಗಾಯಗಳಾದವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು ತೋಮ ಪೂಜಾರಿಯವರು ದಿನಾಂಕ: 10-03-2023 ರಂದು 00.00 ಗಂಟೆಯಿಂದ 00.18 ಗಂಟೆಯ ಮದ್ಯಾವಧಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

Ullal PS   

ದಿನಾಂಕ 10-03-2023 ರಂದು ಸುಮಾರು 11-00 ಗಂಟೆಗೆ ಉಳ್ಳಾಲ ತಾಲಕು, ಪೆರ್ಮನ್ನೂರು ಗ್ರಾಮ, ಮಂಚಿಲ, ಒಳಪೇಟೆ  ಬಳಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಸಾಹಿಲ್ ನನ್ನು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ THC ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-03-2023 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080