ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Sagar Hullalli ಇವರು ದಿನಾಂಕ 10.03.2024 ರಂದು ತನ್ನ ತಾಯಿ ಶೋಭಾ ಹುಲ್ಲಲ್ಲಿ (53 ವರ್ಷ) ಎಂಬವರನ್ನು ಎಲೆಕ್ಟ್ರಿಕ್ ಸ್ಕೂಟರ್ ನಂಬ್ರ KA-19-HD-1901 ರಲ್ಲಿ ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಮಂಗಳೂರು ನಿಂಧ ತಮ್ಮ ಮನೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಂಜೆ ಸಮಯ ಸುಮಾರು 6:30 ಗಂಟೆಗೆ ಪಣಂಬೂರು ರೈಲ್ವೇ ಗೇಟ್ ದಾಟಿ MCF ಬಳಿ ತಲುಪುತ್ತಿದ್ದಂತಯೆಏ ಹಿಂದಿನಿಂದ ಅಂದರೆ ಕೂಳೂರು ಕಡೆಯಿಂದ ಸುಝುಕಿ ಕಂಪೆನಿಯ ಸ್ಕೂಟರ್ ನಂಬ್ರ KA-19-EV-9312 ನೇಯದನ್ನು ಅದರ ಸವಾರ ಆಶೆಕ್ ಬಿಸ್ವಾಸ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಹಿಂಬದಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಮತ್ತು ಅವರ ತಾಯಿ ಶೋಭಾ ಹುಲ್ಲಲ್ಲಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಶೋಭಾ ಹುಲ್ಲಲ್ಲಿರವರ ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದು ಗಾಯಗೊಂಡ ಶೋಭಾ ಹುಲ್ಲಲ್ಲಿರವರನ್ನು ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಪಿರ್ಯಾದಿ ಮತ್ತು ಅಪಘಾತ ಪಡಿಸಿದ ಸ್ಕೂಟರ್ ಸವಾರ ಆಶೆಕ್ ಬಿಸ್ವಾಸ್ ರವರು ಎ.ಜೆ. ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ  ಎಂಬಿತ್ಯಾದಿ

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ Kumar Poojary ಇವರು  ದಿನಾಂಕ: 09-03-2024 ರಂದು ತನ್ನ ಬಾಬ್ತು KA-19-EW-8066 ನೇ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಮಂಗಳೂರು ನಗರದ ಬೈತುರ್ಲಿ ಪಾಲ್ದನೆ ಕಡೆಯಿಂದ ನೀರುಮಾರ್ಗ ಕಡೆಗೆ ಹೊರಟು ಭಟ್ರಕೋಡಿಯಲ್ಲಿರುವ SS Service Wash and Puncture Works Shop ನಿಂದ ಸ್ವಲ್ಪ ಮೊದಲಿನ ಸಾರ್ವಜನಿಕ ರಸ್ತೆಯನ್ನು ತಲುಪುತ್ತಿದ್ದಂತೆ ಸಮಯ ಸುಮಾರು 18-30 ಗಂಟೆಗೆ  ಎದುರಿನಿಂದ ಅಂದರೆ ನೀರುಮಾರ್ಗ ಕಡೆಯಿಂದ ಪಾಲ್ದನೆ ಬೈತುರ್ಲಿ ಕಡೆಗೆ KA-19-AE-1939 ನೇ ಆಟೋರಿಕ್ಷಾವನ್ನು ಅದ ಚಾಲಕ ಚಾಲಕ ಯಕ್ಷಿತ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಎದುರಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ್ದು, ಫಿರ್ಯಾದಿದಾರರು ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದುದರಿಂದ ಫಿರ್ಯಾದಿದಾರರ ಎಡಕಾಲಿನ ಕೋಲು ಕಾಲಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಹಣೆಯ ಎಡಬದಿಗೆ ತರಚಿದ ನಮೂನೆಯ ರಕ್ತ ಗಾಯಕೆಳ ತುಟಿಗೆ ಚರ್ಮ ಹರಿದ ರಕ್ತ ಗಾಯ, ಎಡಕಣ್ಣಿಕ ಕೆಳಭಾಗದಲ್ಲಿ ಮತ್ತು ಬಲಕಾಲಿನ ಪಾದದ ಬಳಿ ತರಚಿದ ರಕ್ತ ಗಾಯವಾಗಿದ್ದು,ಸದ್ರಿ ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿರುತ್ತವೆ.ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಫಿರ್ಯಾದಿದಾರರನ್ನು ಉಪಚರಿಸಿ ಬೇರೊಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

 

Mangalore North PS

ಈ ದಿನ ದಿನಾಂಕ: 10-03-2024 ರಂದು  ಸಮಯ ಸಂಜೆ 16:30 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ,  ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವ ಸಮಯ, ಭಾವುಟಗುಡ್ಡ ಬಳಿ ತಲುಪಿದಾಗ ಲಿಖಿತ್ ಪ್ರಾಯ: 22 ವರ್ಷ, ತಂದೆ: ಜಯರಾಜ್ ಕರ್ಕೆರಾ, ವಾಸ:2-24, ಶ್ರೀ ನಿವಾಸ ಕೃಪಾ, ಅರ್ಕುಳ ಗ್ರಾಮ, ಫರಂಗಿಪೇಟೆ ಪೋಸ್ಟ್, ಮಂಗಳೂರು 574143 ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು,  ಆತನ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರು ಪಡಿಸಿದ್ದು ಎಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಲಿಖಿತ್ ಎಂಬಾತನು, Tetrahydracannabinoid (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿದ್ದು, ಆತನ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ

 

Panambur PS

ಈ ಪ್ರಕರಣದ ಸಾರಂಶವೇನಂದರೆ ದಿನಾಂಕ 10-03-2024 ರಂದು ಸಮಯ ಬೆಳಗಿನ ಜಾವ 03:30 ಗಂಟೆಗೆ ಮನೆಯಲ್ಲಿ ಮಲಗಿರುವ ಸಮಯ ನಾನು ಸಾಕುತ್ತಿದ್ದ 4 ಆಡುಗಳಲ್ಲಿ ಒಂದು ಆಡನ್ನು ಯಾರೋ ಅಪರಿಚಿತರು ಕದ್ದಕೊಂಡು ಹೋಗುವಾಗ ಆ ಸಮಯ ಆಡು ಕೂಗಿದ ಶಬ್ದವಾಗಿ ನಾವು ಎದ್ದು ಹೊರಗೆ ಬರುವಾಗ ಯಾರೋ 2 ಜನ ಅಪರಿಚಿತರು ಬಂದು ಆಡನ್ನು ಕದ್ದುಕೊಂಡು ಹೋಗಿದ್ದು ಆಡು ಸಮೇತ ಪರಾರಿಯಾಗಿರುತ್ತಾರೆ ಆಡಿನ ಅಂದಾಜು ಮೌಲ್ಯ 25,000/- ಗಿರುತ್ತದೆ ಆದ್ದರಿಂದ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Bajpe PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದಿ Sundara Moolya ಇವರು  ಮತ್ತು ಇವರ ಹೆಂಡತಿ  ವಿಶಾಲಾಕ್ಷಿ ಹಾಗೂ ಪಾಣೆ ಮಂಗಳೂರಿನ ನೆರೆಕೆರಯವರೊಂದಿಗೆ ಪಾಣೆ ಮಂಗಳೂರಿನ ಬೈಪಾಸ್ ಕಲ್ಲುರ್ಟಿ ದೈವಸ್ತಾನದಿಂದ ಕಟೀಲು ಕಡೆಗೆ ಪಾದಯಾತ್ರೆ ಹೋಗುತ್ತಿರುವಾಗ ದಿನಾಂಕ 10-03-2024 ರಂದು ಬೆಳಿಗ್ಗೆ 04: 00 ಗಂಟೆಗೆ  ಎಕ್ಕಾರು ತಲುಪುತ್ತಿದ್ದಂತೆ ಎದರುನಿಂದ ಅಂದರೆ ಕಟೀಲಿನಿಂದ ಬಜಪೆ ಕೆಡೆಗೆ KA-19 AD 2839 ನೇ ನಂಬ್ರದ ಪಿಕಾಪ್ ವಾಹನದ ಚಾಲಕ ದಾವುದ್ ಎಂಬವನು ಅತಿ ವೇಗ ಹಾಗೂ ಅಜಾಗರೂಕೆತೆಯಿಂದ ಚಲಾಯಿಸಿಕೊಂಡು ಬಂದು ವಿಶಾಲಾಕ್ಷಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿದ್ದು, ಅವರನ್ನು ಉಪಚರಿಸಿ ಮೇಲೆತ್ತಿ ನೋಡಿದಾಗ ಎಡ ಕಾಲು ತೊಡೆಯಿಂದ ಕಾಲಿನ ಪಾದವೆರೆಗೆ ಗುದ್ದಿದ ಗಾಯವಾಗಿರುತ್ತದೆ. ನಂತರ ವಿಶಾಲಕ್ಷಿ ರವರನ್ನು ಚಿಕಿತ್ಸೆ ಬಗ್ಗೆ ಕಟೀಲಿನ ದುರ್ಗಾ ಪರಮೇಶ್ವರಿಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ತೋರಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಕೆ.ಎಂ.ಸಿ ಅತ್ತಾವರ ಅಸ್ಪತ್ರೆಗೆ ಕೆರೆದು ಕೊಂಡು ಹೋಗಿ ದಾಖಲಿಸಿರುತ್ತಾರೆ. ಆದುದರಿಂದ ಚಾಲಕನಾದ ದಾವೂದ್ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 11-03-2024 09:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080