ಅಭಿಪ್ರಾಯ / ಸಲಹೆಗಳು

Crime report in Mangalore North PS

ದಿನಾಂಕ 10-06-2023 ಮಧ್ಯಾಹ್ನ 12.30 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ  ಬೀಟ್ ಸಿಬ್ಬಂದಿ ಮಧು ಎಂ.ಡಿ  ರವರಿಗೆ  ಗಸ್ತು ವ್ಯಾಪ್ತಿಯ ಲೇಡಿಗೋಷನ್ ಆಸ್ಪತ್ರೆಯ ಎದುರುಗಡೆ ಇರುವ ಲಿಂಕಿಂಗ್ ಟವರ್ ಬಿಲ್ಡಿಂಗ್ ನಲ್ಲಿರುವ ನವದೀಪ ಹೋಟೆಲ್ ನ ಬಳಿ  ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕರಿಂದ ಹಣ ಪಡೆದುಕೊಂಡು ಸಜೀತ್ ಕೆ ಮಂಜೇಶ್ವರ್  ಮತ್ತು ಅಶ್ರಫ್ ವಾಮಂಜೂರು ಎಂಬವರು  ಮಟ್ಕಾ ಜೂಜಾಟ ಆಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ದೊರಕಿರುವುದಾಗಿಯೂ, ಇವರನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿರುತ್ತದೆ ಎಂಬುದಾಗಿ ಠಾಣೆಗೆ ಬಂದು ಲಿಖಿತ ದೂರನ್ನು ನೀಡಿದಂತೆ, ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

Mangalore East PS

ದಿನಾಂಕ: 09-06-2023 ರಂದು ಠಾಣಾ ಎಎಸ್ಐ ಅಶೋಕ್ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಸಂಚರಿಸುತ್ತಾ ಮಧ್ಯಾಹ್ನ 13-30 ಗಂಟೆ ವೇಳೆಗೆ ಮಂಗಳೂರು ತಾಲೂಕು ಕಂಕನಾಡಿ ಗ್ರಾಮದ ಬೆಂದೂರುವೆಲ್ ಎಂಬಲ್ಲಿರುವ ಭೂಮಿಕ ಟವರ್ಸ್ ನ ತಳ ಅಂತಸ್ತಿನಲ್ಲಿರುವ ಕೋಣೆಯೊಳಗಡೆ ಮಟ್ಕಾ ಜುಗಾರಿ ಆಟ ಆಡುತ್ತಿದ್ದಾರೆಂದು ಮಾಹಿತಿ ಸಂಗ್ರಹಿಸಿ, ಹಣ ಸಂಗ್ರಹಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಕ್ರಮ ಕೈಗೊಂಡಿರುವ ಬಗ್ಗೆ.

Bajpe PS

ಪಿರ್ಯಾದಿ NARAYANA POOJARY ದಿನಾಂಕ 09/06/2023 ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ವಾಪಸ್ಸು ಮುಂಡಾರ್ ಬಳಿವಿರುವ ವೈನ್ ಅಂಡ್ ಡೈನ್  ಬಾರ್ ಗೆ ಹೋಗಿ ಮದ್ಯ ಸೇವನೆ ಮಾಡಿ ಬಾರ್ ನಿಂದ ವಾಪಸ್ಸು ಮನೆಗೆ ಹೋಗುತ್ತಿರುವಾಗ ಸಮಯ 19;40 ಗಂಟೆಗೆ ಬಜಪೆ ಗ್ರಾಮದ ತಾರಿಕಂಬ್ಳ ಅಂಗನವಾಡಿ ಹಿಂಬದಿ ರಸ್ತೆಯಲ್ಲಿ ಪಿರ್ಯಾದಿದಾರರು ಚಾಲಾಯಿಸಿಕೊಂಡು ಬರುತ್ತಿದ್ದ ಬೈಕ್ ಗೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮ ಸ್ಕೂಟರ್ ನ್ನು ಪಿರ್ಯಾದಿದಾರರ ಬೈಕ್ ಗೆ ಅಡ್ಡಲಾಗಿ ನಿಲ್ಲಿಸಿ “ಬೇವರ್ಸಿ ನಾಯಿ ನಿಕ್ಕ್ ಭಾರಿ ಅಹಂಕಾರ ಉಂಡು ಪಾಪ ದಕ್ಲೆಗ್ ಹಾಕುವಾನಾ” ಎಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಸ್ಕೂಟರ್ ನಲ್ಲಿದ್ದ ಬಾಟಲಿಯಿಂದ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಪಿರ್ಯಾದಿದಾರರ ತಲೆಗೆ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಿವಿಗೆ, ತಲೆಯ ಬಲಭಾಗಕ್ಕೆ ಹಾಗೂ ಹಿಂಭಾಗಕ್ಕೆ ತೀವ್ರವಾದ ರಕ್ತಗಾಯವಾಗಿರುತ್ತದೆ ಎಂಬಿತ್ಯಾದಿ.

Kankanady Town PS

ಪಿರ್ಯಾದಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಘು ನಾಯಕ್ ರವರು ಸಿಬ್ಬಂಧಿಗಳ ಜೊತೆ ದಿನಾಂಕ:09-06-2023 ರಂದು  ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಫೈಸಲ್ ನಗರದಲ್ಲಿ ನೇತ್ರಾವತಿ ನದಿ ತೀರದಲ್ಲಿ  ಒಬ್ಬ ವ್ಯಕ್ತಿಯು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಬೆಳಿಗ್ಗೆ 11-20 ಗಂಟೆಗೆ  ಮಾಹಿತಿ ಬಂದಂತೆ, ಕೂಡಲೇ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ  ರೌಡಿ ಶೀಟರ್  ಮೊಹಮ್ಮದ್  ನಿಜಾಮುದ್ದೀನ್ ಫೈಸಲ್ ನಗರ ನದಿ ತೀರದಲ್ಲಿ ನಿಂತುಕೊಂಡಿದ್ದನು. ಖಚಿತ ಮಾಹಿತಿಯಂತೆ ಆರೋಪಿಯನ್ನು ವಿಚಾರಿಸಿದಾಗ, ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡು  ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿರುವುದರಿಂದ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Mangalore South PS   

ಮಂಗಳೂರು ನಗರದ ಪಾಂಡೇಶ್ವರದಲ್ಲಿ ಶಾಖೆ ಹೊಂದಿರುವ ಡೆಲಿವರಿ ಲಿಮಿಟೆಡ್ ಎಂಬ ಸಂಸ್ಥೆಯ ಸಹಾಯಕ ಸೆಕ್ಯೂರಿಟಿ ಮ್ಯಾನೇಜರ್ ಕೈಲಾಶ್ ಎಸ್ ಶೆಟ್ಟಿರವರು ತಾರೀಕು 09-06-2023 ರಂದು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ, ಮಂಗಳೂರು ನಗರದ ಪಾಂಡೇಶ್ವರ, ಬಿ.ಆರ್. ಕರ್ಕೇರ ರೋಡ್, ಶಾಲಿಮಾರ್ ಹಿಡನ್ ಎಂಬ ಕಟ್ಟಡದಲ್ಲಿ ಶಾಖೆ ಹೊಂದಿರುವ ಡೆಲಿವರಿ ಲಿಮಿಟೆಡ್ ಸಂಸ್ಥೆಯಲ್ಲಿ ಡೆಲಿವಾರಿ ಬಾಯ್/ಪೀಲ್ಡ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುವ ಜೈಸನ್ ಮೊಂತೆರೋ ಎಂಬವರು ದಿನಾಂಕ 05-06-2023 ರಂದು ಗ್ರಾಹಕರಿಗೆ ಡೆಲಿವರಿ ಮಾಡುವರೇ ಸಂಸ್ಥೆಯಿಂದ ಪಡೆದುಕೊಂಡ ಹೋದ 77 ಐಟಂಗಳಲ್ಲಿ ಐದು ಮಂದಿ ಗ್ರಾಹಕರು ಜೈಸನ್ ಮೊಂತೆರೋ ರವರಿಂದ ಐಟಂಗಳನ್ನು ಸ್ವೀಕರಿಸಿ ನೀಡಿದ ನಗದು ಹಣ ರೂಪಾಯಿ 108784/- ನ್ನು ಜೈಸನ್ ಮೊಂತೆರೋರವರು  ಸಂಸ್ಥೆಗೆ ನೀಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ 09-6-2023 ರಂದು ಪ್ರರಕಣದ ಪಿರ್ಯಾದಿ ರವರು ಸಂಜೆಯ ಹೊತ್ತಿಗೆ ಕೆಲಸ ಬಿಟ್ಟು ಮನೆಯ ಕಡೆಗೆ ತಲಪಾಡಿ ಟೋಲ್ಗೇಟ್ನ ಎಡಗಡೆಯ ಕೆಳಗಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಸಂಜೆ 6-20 ಗಂಟೆಯ ಹೊತ್ತಿಗೆ ತಲಪಾಡಿ ಗ್ರಾಮದ ದೊಡ್ಡಮನೆ ರಸ್ತೆಗೆ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಆರೋಪಿ ರಾಮ್ಕೇಶ್ ಸಿಂಗ್ ಎಂಬಾತನು ಪಿರ್ಯಾದಿದಾರರಿಂದ ಮುಂದೆ ಹೋಗಿ ಬದಿಯಲ್ಲಿ ನಿಂತುಕೊಂಡವನು ಪಿರ್ಯಾದಿದಾರರು ಅವರಷ್ಟಕ್ಕೆ ನಡೆದುಕೊಂಡು ಮುಂದೆ ಹೋದಾಗ ಆರೋಪಿತನು ಪಿರ್ಯಾದಿದಾರರ ಹಿಂದಿನಿಂದ ಬಂದವನು ಪಿರ್ಯಾದಿದಾರರ ಕೈ ಹಿಡಿದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಒಮ್ಮೆಲೇ ಅಪ್ಪಿ ಹಿಡಿದು ಆತನ ಕೈಯಿಂದ ಪಿರ್ಯಾದಿದಾರರ ಮುಖಕ್ಕೆ, ಮೂಗಿಗೆ ಬಲವಂತವಾಗಿ ಒತ್ತಿ ಹಿಡಿದು ಉಸಿರಾಡದಂತೆ ಮಾಡಿ ಪಿರ್ಯಾದಿದಾರರನ್ನು ಕೆಳಗೆ ಬೀಳಿಸಿ ಆತನು ಬಲವಂತವಾಗಿ ಪಿರ್ಯಾದಿದಾರರ ಮೈಮೇಲೆ ಮಲಗಿ ಆತನ ತುಟಿಯನ್ನು ಪಿರ್ಯಾದಿದಾರರ ತುಟಿಗೆ ಬಲವಂತವಾಗಿ ತಾಗಿಸಲು ಬಂದಾಗ ಆತನ ಮುಖವನ್ನು ಆಚೆಗೆ ದೂಡಿದಾಗ ಆತನು ಒತ್ತಾಯದಲ್ಲಿ ಆತನ ತುಟಿಯನ್ನು ಪಿರ್ಯಾದಿದಾರರ ಕೆನ್ನೆಗೆ ತಾಗಿಸಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿಯು ಆತನ ಕೈಯನ್ನು ಪಿರ್ಯಾದಿದಾರರ ಬಾಯಿಗೆ ಮತ್ತು ಮೂಗಿಗೆ ಒತ್ತಿ ಹಿಡಿದು ಉಸಿರಾಡದಂತೆ ಮಾಡಿದಲ್ಲದೆ, ಪಿರ್ಯಾದಿದಾರರು ಧರಿಸಿದ್ದ ವಾಚ್ (ಕೈಗಡಿಯಾರ) ನ್ನು ಹಾನಿಗೊಳಿಸಿ ಸುಮಾರು ರೂ.1,500/- ನಷ್ಟ ಉಂಟು ಮಾಡಿರುವುದರಿಂದ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080