ಅಭಿಪ್ರಾಯ / ಸಲಹೆಗಳು

Crime report in: Mangalore West Traffic PS             

ಪಿರ್ಯಾದಿ RAMESH GOWDA ದಿನಾಂಕ 09-07-2023 ರಂದು  ತಮ್ಮ ಆಟೋ ರಿಕ್ಷಾ ಚಲಾಯಿಸಿಕೊಂಡು  ನವಭಾರತ್ ಸರ್ಕಲ್ ನಿಂದ ಪಿ.ವಿ.ಎಸ್ ಆಗಿ ಬೆಸೆಂಟ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 7-15 ಗಂಟೆಗೆ ಪಿ ವಿ ಎಸ್ ಜಂಕ್ಷನ್ ತಲುಪಿದಾಗ   ಬಂಟ್ಸ್ ಹಾಸ್ಟೇಲ್ ಕಡೆಯಿಂದ ಕೆಎ19-ಎಂಬಿ-6172 ನೇ ನಂಬ್ರದ ಕಾರನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರುಗಡೆಯಿಂದ ಹೋಗುತ್ತಿದ್ದ  ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸೈಕಲ್ ಸವಾರ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಬಿದ್ದವರನ್ನು ಪಿರ್ಯಾದಿದಾರು ಹಾಗೂ ಕಾರಿನ ಚಾಲಕರು ಉಪಚರಿಸಿ,   ತಲೆಯ ಹಿಂಭಾಗಕ್ಕೆ ಗಂಬೀರ ಸ್ವರೂಪದ ಗಾಯಗೊಂಡ ವೆಂಕಟೇಶ್ ಕಾಂಬ್ಳೆ ರವನ್ನು ಅಪಘಾತ ಪಡಿಸಿದ ಕಾರಿನ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ ಎಂಬಿತ್ಯಾದಿ.

CEN Crime PS

ದಿನಾಂಕ: 29/06/2023 ರಂದು ಪಿರ್ಯಾದಿದಾರರ ಟೆಲಿಗ್ರಾಂ ನಂಬ್ರ:  ನೇಯದಕ್ಕೆ @Priyanka_181 ಎಂಬ ಟೆಲಿಗ್ರಾಂ ಅಕೌಂಟ್ ಯಿಂದ ಅಪರಿಚಿತ ವ್ಯಕ್ತಿಯು ಸಂದೇಶ ಕಳುಹಿಸಿ ತಾನು Uber East Agent pvt Ltd.ಯಿಂದ ಎಂಬುದಾಗಿ ತನ್ನನ್ನು ಪರಿಚಯಸಿಕೊಂಡು ಪಾರ್ಟ್ ಟೈಮ್ ಉದ್ಯೋಗ ನೀಡುವುದಾಗಿ ತಿಳಿಸಿ, ಟೆಲಿಗ್ರಾಂ ಮೂಲಕ https://www.u-e-betasystem.com/login ಎಂಬ ಲಿಂಕ್ ಕಳುಹಿಸಿ ಈ ಲಿಂಕ್ ನಲ್ಲಿ ಬರುವ ಐಡಿಗೆ ರಿಜಿಸ್ಟರ್ ಆಗುವಂತೆ ತಿಳಿಸಿದರು.ಅದರಲ್ಲಿ ಬರುವಂತ ಟಾಸ್ಕ್ ಗಳನ್ನು ಆಡಿ ಟಾಸ್ಕ್ ಗಳನ್ನು ಕಂಪ್ಲಿಟ್ ಮಾಡಿದರೆ ನಿಮಗೆ ಹಣ ನೀಡುವುದಾಗಿ ತಿಳಿಸಿರುತ್ತಾರೆ.  ಅದರಂತೆ ಪಿರ್ಯಾದಿದಾರರು ಅವರು ಕಳುಹಿಸಿಕೊಟ್ಟ ಹೋಟೆಲ್ ಬುಕಿಂಗ್ ರೀತಿಯಲ್ಲಿ ಟಾಸ್ಕ್ ಗಳನ್ನು ಆಡಿ ಮೊದಲಿಗೆ 1,237/-ರೂ,ಗಳನ್ನು ಪಿರ್ಯಾದಿದಾರರ SBI ಖಾತೆ ಸಂಖ್ಯೆ ನೇದಕ್ಕೆ ವರ್ಗಾಯಿಸಿರುತ್ತಾರೆ.ನಂತರ ಸದ್ರಿ ಅಪರಿಚಿತ ವ್ಯಕ್ತಿಯು @CS_Hotline113 ಎಂಬ ಟೆಲಿಗ್ರಾಂ ಐಡಿ ಕಳುಹಿಸಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಸದ್ರಿ ಟೆಲಿಗ್ರಾಂ ಖಾತೆದಾರರನ್ನು ಸಂಪರ್ಕಿಸಿದ್ದು ಅವರು ಪಿರ್ಯಾದಿದಾರರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ದಿನಾಂಕ 04-07-2023 ರಿಂದ 08-07-2023 ರವರೆಗೆ ಆರೋಪಿತರು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಾದ 1)ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ:175305500691 IFSC CODE ICIC0000012, 2)ಎಸ್ ಬ್ಯಾಂಕ್ ಖಾತೆ ಸಂಖ್ಯೆ:063363300005331 IFSC CODE YESB0000001, 3)ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ:253905001870 IFSC CODE ICIC0000012, 4)ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಸಂಖ್ಯೆ:2705002100007091 IFSC CODE PUNB0270500, 5)ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ:253905001870 IFSC CODE ICIC0002539, 6)ICICI ಬ್ಯಾಂಕ್ ಖಾತೆ ಸಂಖ್ಯೆ.368805003999 IFSC CODE ICIC0003688,ನೇ ಖಾತೆಗಳಿಗೆ ಪಿರ್ಯಾದಿದಾರರ ಬ್ಯಾಂಕ್ ಖಾತೆ ನೇದ್ದರಿಂದ  ಹೆಚ್ಚಿನ ಹಣ ಗಳಿಸಬಹುದೆಂದು ನಂಬಿ ಅವರು ಟೆಲಿಗ್ರಾಂ ಚಾನೆಲ್ ಮೂಲಕ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ 5,43,151/- ರೂ,ಗಳನ್ನು ವರ್ಗಾಯಿಸಿದ್ದು ತದನಂತರ ಈ ವರೆಗೆ ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ಮರುಪಾವತಿ ಮಾಡದೆ ಮೋಸ ಮಾಡಿರುತ್ತಾರೆ.ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-08-2023 02:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080