ಅಭಿಪ್ರಾಯ / ಸಲಹೆಗಳು

Crime Report in Mangalore Rural PS

ದಿನಾಂಕ 09-08-2023 ರಂದು ಪಿಐ  ಶ್ರೀ ಜಾನ್ಸನ್ ಡಿಸೋಜಾ  ರವರು ಇಲಾಖಾ ವಾಹನದಲ್ಲಿ  ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  ರಾತ್ರಿ 22.೦೦ ಗಂಟೆಗೆ ಮಂಗಳೂರು ತಾಲೂಕು ಮಲ್ಲೂರು ಗ್ರಾಮದ ಬದ್ರಿಯಾ ನಗರದ ಹತ್ತಿರ ಒಬ್ಬ ವ್ಯಕ್ತಿ  ಅಮಲು ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದಿದ್ದು,    ವಿಚಾರಿಸಲಾಗಿ ಆತನು ಮಹಮ್ಮದ್  ತಮೀಮ್(೩೫ ವರ್ಷ), ವಾಸ:  ಬದ್ರಿಯಾನಗರ ಮಲ್ಲೂರು ಪೋಸ್ಟ್,ಮಲ್ಲೂರು ಗ್ರಾಮ ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ಆತ ಗಾಂಜಾ  ಎಂಬ ಅಮಲು ಪದಾರ್ಥ ಸೇವಿಸಿದ ನಶೆಯಲ್ಲಿ ಇರುವಂತೆ ಕಂಡು ಬಂದಿದ್ದರಿಂದ ಆತನನ್ನು ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ವೈದ್ಯಾಧಿಕಾರಿಯವರಲ್ಲಿ ಪರಿಕ್ಷೆಗೆ ಒಳಪಡಿಸಿದ್ದು  ಮಹಮ್ಮದ್  ತಮೀಮ್(35 ವರ್ಷ),ನು ಗಾಂಜ ಎಂಬ ಮಾದಕ ವಸ್ತುವನ್ನು ಸೇವಿಸಿರುತ್ತಾನೆ ಎಂಬುದಾಗಿ ವೈದ್ಯರು ವೈದ್ಯಕೀಯ ವರದಿಯನ್ನು ನೀಡಿದಂತೆ ಪ್ರಕರಣ ದಾಖಲಿಸಲಾಗಿರುತ್ತದೆ

   

2) ದಿನಾಂಕ 09-08-2023 ರಂದು ಪಿಐ  ಶ್ರೀ ಜಾನ್ಸನ್ ಡಿಸೋಜಾ  ರವರು ಇಲಾಖಾ ವಾಹನದಲ್ಲಿ  ಸಿಬ್ಬಂದಿಗಳೊಂದಿಗೆ   ರಾತ್ರಿ 22.30 ಗಂಟೆಗೆ ಮಂಗಳೂರು ತಾಲೂಕು ಮಲ್ಲೂರು ಗ್ರಾಮದ ಬದ್ರಿಯಾ ನಗರದ ಹತ್ತಿರ ಒಬ್ಬ ವ್ಯಕ್ತಿ  ಅಮಲು ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದಿದ್ದು,    ವಿಚಾರಿಸಲಾಗಿ ಆತನು ಮಹಮ್ಮದ್ ಶಾಫಿ @ ಜಾಫಿರ್ (25 ವರ್ಷ), ವಾಸ: ಕಸಬ ಬೆಂಗ್ರೆ ಎಮ್ ಜಿ ಎಮ್-455, ಕೂಳೂರು ಪೋಸ್ಟ್, ಪಣಂಬೂರು ಗ್ರಾಮ ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ಆತ ಗಾಂಜಾ  ಎಂಬ ಅಮಲು ಪದಾರ್ಥ ಸೇವಿಸಿದ ನಶೆಯಲ್ಲಿ ಇರುವಂತೆ ಕಂಡು ಬಂದಿದ್ದರಿಂದ ಆತನನ್ನು ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ವೈದ್ಯಾಧಿಕಾರಿಯವರಲ್ಲಿ ಪರಿಕ್ಷೆಗೆ ಒಳಪಡಿಸಿದ್ದು  ಮಹಮ್ಮದ್ ಶಾಫಿ @ ಜಾಫಿರ್ (25 ವರ್ಷ),ನು ಗಾಂಜ ಎಂಬ ಮಾದಕ ವಸ್ತುವನ್ನು ಸೇವಿಸಿರುತ್ತಾನೆ ಎಂಬುದಾಗಿ ವೈದ್ಯರು ವೈದ್ಯಕೀಯ ವರದಿಯನ್ನು ನೀಡಿದಂತೆ ಪ್ರಕರಣ ದಾಖಲಿಸಲಾಗಿರುತ್ತದೆ

Traffic South Police Station      

ಪಿರ್ಯಾದಿದಾರರಾದ ಪ್ರವೀಣ್ ಅನಿಲ್ ಮೊಂತೆರೋ ಪ್ರಾಯ 43 ವರ್ಷ ರವರು  ದಿನಾಂಕ 09-08-2023 ರಂದು ಕೊಣಜೆ ಕಡೆಯಿಂದ ಯುನಿರ್ವಸಿಟಿಯ ನೇತ್ರಾವತಿ ಗೆಸ್ಟ್ ಹೌಸ್ ಎದುರು ತನ್ನ ಬಾಬ್ತು ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಮಯ ಸುಮಾರು ಮಧ್ಯಾಹ್ನ 3.00 ಗಂಟೆಗೆ ತನ್ನ ಮುಂದಿರುವ KA-19-D-8108 ನೇ ನಂಬ್ರದ ಆಟೋ ರಿಕ್ಷಾ ಚಾಲಕ ಪ್ರೀತಮ್ ನಿಶಾಲ್ ಮೊಂತೆರೋ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಆಟೋರಿಕ್ಷಾ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ ಪ್ರಯಾಣಿಕರ ಸಮೇತ ಡಾಮಾರು ರಸ್ತೆಗೆ ಬಿದ್ದಿರುತ್ತದೆ. ಆಟೋರಿಕ್ಷಾದ ಅಡಿಯಲ್ಲಿ ಬಿದ್ದಿರುವ ಪ್ರಯಾಣಿಕರನ್ನು ಎತ್ತಿ ಉಪಚರಿಸಿ ನೋಡಲಾಗಿ ಅವರು ಆಟೋರಿಕ್ಷಾ ಚಾಲಕನ ಮನೆಯಲ್ಲಿ ಕೆಲಸಕ್ಕಿರುವ ರೋನಾಲ್ಡ್ ಪಿಂಟೋ (61 ವ) ಎಂಬುವವರಾಗಿದ್ದು, ಅವರ ಎಡಕೈಯ ಭುಜಕ್ಕೆ ತರಚಿದ ಹಾಗೂ ಗುದ್ದಿದ ಗಾಯ, ಎಡಕಿವಿಗೆ ರಕ್ತಗಾಯ ಹಾಗೂ ಎಡಕಾಲಿನ ಮೊಣಗಂಟಿಗೆ ರಕ್ತಯಾವಾಗಿರುತ್ತದೆ. ಕೂಡಲೇ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈಧ್ಯರು ಗಾಯಳುವಿಗೆ ಎಡಭುಜದ ಮೂಳೆ ಮುರಿತವಾಗಿರುವುದರಿಂದ  ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 02:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080