ಅಭಿಪ್ರಾಯ / ಸಲಹೆಗಳು

Crime Report in  Traffic North Police Station

ದಿನಾಂಕ 09-10-2023 ರಂದು ಪಿರ್ಯಾದಿ Yahya P Vದಾರರು KL-78-B-0945 ನಂಬ್ರದ ಸ್ಕೂಟರಿನಲ್ಲಿ ಸಹ ಸವಾರರಾಗಿ ಹಾಗೂ  ಅಬ್ಬಾಸ್ ರವರು  ಸವಾರನಾಗಿಯೂ ಮುಕ್ಕಾ ಕಡೆಯಿಂದ ಕೂಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 11:45 ಗಂಟೆಗೆ ರಾ.ಹೆ-66 ರ ಪಣಂಬೂರು ಜಂಕ್ಷನ್ ತಲುಪುತಿದ್ದಂತೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ KA-01-AK-2019 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಸುಬ್ರಮಣಿ ಎಂಬುವರು ಯಾವುದೇ ಸೂಚನೆ ನೀಡದೇ ನಿರ್ಲಕ್ಷ್ಯತನದಿಂದ ಬಲಕ್ಕೆ ಯು-ಟರ್ನ್ ತಗೆದುಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಎದುರುಗಡೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು  ಸ್ಕೂಟರ್ ಸವಾರ ಅಬ್ಬಾಸ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ತಲೆಗೆ ಗುದ್ದಿದ ಮತ್ತು ತರಚಿದ ಗಾಯ, ಎಡ & ಬಲ ಕಣ್ಣುಗಳ ಬಳಿ ತರಚಿದ ಗಾಯ, ಎರಡೂ ಮೊಣಗಂಟಿಗೆ ತರಚಿದ ಗಾಯ & ಎಡಕಿವಿಯಿಂದ ರಕ್ತ ಹೊರ ಬಂದಿದ್ದು, ಅಬ್ಬಾಸ್ ರವರಿಗೆ ತಲೆಗೆ ಗಂಬೀರ ಸ್ವರೂಪದ ರಕ್ತಗಾಯವಾಗಿ, ಮುಖಕ್ಕೆ ಮತ್ತು ದೇಹದ ಇತರ ಭಾಗಗಳಿಗೆ ತರಚಿದ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic South Police Station     

ಪಿರ್ಯಾದಿ AMRITH B KIRANದಾರರು ಈ ದಿನ ದಿನಾಂಕ 09-10-2023 ರಂದು ಕೆಲಸದ ನಿಮಿತ್ತ ರವರ ಬಾಬ್ತು KA-19-MF-3952 ನೇ ಕಾರಿನಲ್ಲಿ ತೊಕ್ಕೊಟ್ಟಿಗೆ ಹೋಗಿ ವಾಪಸ್ಸು ಮಂಗಳೂರಿಗೆ ಬರುವಾಗ ಕಲ್ಲಾಪು ದಾಟಿ ಅಡಂಕುದ್ರು ಎಂಬಲ್ಲಿ ಸಮಯ ಸಂಜೆ 04.55 ಗಂಟೆಗೆ ಕಾರು ನಿಲ್ಲಿಸಿ ರಸ್ತೆಯ ಎಡ ಬದಿಯಿಂದ ಬಲಬದಿಗೆ ರಸ್ತೆ ದಾಟುವಾಗ ಹೈವೇ ಮಧ್ಯದಲ್ಲಿರುವ ಡಿವೈಡರ್ ದಾಟಿ ಕೆಳಗೆ ಇಳಿಯುವಷ್ಟರಲ್ಲಿ ಪಂಪ್ ವೇಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುವ ಬೈಕ್ ಸವಾರನು ತನ್ನ ಬೈಕನ್ನು ಅತಿ ವೇಗದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗುದ್ದಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕಾಲಿನ ಮೊಣಗಂಟು ಮತ್ತು ಮೂಗಿಗೆ ಗುದ್ದಿ ರಕ್ತ ಗಾಯ ಹಾಗೂ ಹಿಂಬದಿ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು, ಕೂಡಲೇ ಬೈಕ್ ಸವಾರನು ಪಿರ್ಯಾದಿದಾರರನ್ನು ಉಪಚರಿಸಿದ್ದು, ನಂತರ ಪಿರ್ಯಾದಿದಾರರು ತನ್ನ ಗಂಡನಿಗೆ ಕರೆ ಮಾಡಿ ಕರೆಸಿಕೊಂಡು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೊಲಾಸೊ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಪಿರ್ಯಾದಿದಾರರು ಅಪಘಾತದ ಸ್ಥಳದಲ್ಲಿ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಬೈಕನ್ನು ನೋಡಲಾಗಿ ಅದರ ನಂಬ್ರ KA-19-EQ-7146 ಆಗಿದ್ದು, ಅದರ ಸವಾರನ ಹೆಸರು ನಾಫಲ್ ತಿಳಿದುಬಂದಿರುತ್ತದೆ.ಎಂಬಿತ್ಯಾದಿ.

Traffic South Police Station              

ಪಿರ್ಯಾದಿ HASSAN KUNCHIದಾರರು ಈ ದಿನ ದಿನಾಂಕ 09-10-2023 ರಂದು ರಾತ್ರಿ ಸಮಯ ಸುಮಾರು 10.30 ಗಂಟೆಗೆ ಪಿರ್ಯಾದಿದಾರರ ತಂಗಿ ಸಕೀನಾ ಮತ್ತು ಅವರ ಮಕ್ಕಳಾದ ಸಪೀನಾ,ಆಯೀಷಾ ರವರನ್ನು KA-19-EC-2900 ಬೈಕ್ ನಲ್ಲಿ ಕುಳಿರಿಸಿಕೊಂಡು ಕಿನ್ಯ ಕಡೆಗೆ ಹೋಗುವಾಗ ಮೊಂಟೆಪದವು ವೀರಮಾರುತಿ ವ್ಯಾಯಮ ಶಾಲೆ ಬಳಿ ತಲುಪಿದಂತೆ ಪಿರ್ಯಾದಿದಾರರ ಕಿಸೆಯಲ್ಲಿದ್ದ ಟೋಪಿಯು ಗಾಳಿಗೆ ಹಾರಿ ಹೋಗಿದ್ದು ಅದನ್ನು ಹೆಕ್ಕಿಕೊಳ್ಳಲು ಪಿರ್ಯಾದಿದಾರರು ಬೈಕನ್ನು ತಿರುಗಿಸಿ ವಾಪಸ್ಸು ಹಿಂದೆಹೋಗಿ ಬೈಕ್ ನಿಲ್ಲಿಸಿದಂತೆ ತೌಡುಗೋಳಿ ಕ್ರಾಸ್ ಕಡೆಯಿಂದ ಬಂದ ಕಾರು ಚಾಲಕನ್ನು ತನ್ನ ಕಾರನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೈಕ್ ನ ಹಿಂಬದಿಗೆ ರಭಸವಾಗಿ ಗುದ್ದಿದ ಪರಿಣಾಮ ಪಿರ್ಯಾದಿದಾರರ ಬೈಕ್ ನಿಯಂತ್ರಣ ಕಳೆದುಕೊಂಡು ಪಿರ್ಯಾದಿದಾರರು ಹಾಗೂ ಸವಾರರಾದ ಸಕೀನಾ,ಸಫೀನಾ, ಮತ್ತು ಆಯಿಷಾ ನೆಲಕ್ಕೆ ಬಿದ್ದ ಪರಿಣಾಮ ಸಕೀನಾ ರವರಿಗೆ ತಲೆಗೆ ಕಾಲಿಗೆ ರಕ್ತ ಗಾಯವಾಗಿದ್ದು, ಆಯಿಷಾ ರವರ ಎಡಗೈಗೆ ಗುದ್ದಿದ ಗಾಯವಾಗಿರುತ್ತದೆ,ನಂತರ ಕಾರಿನ ಚಾಲಕನ್ನು ಅತನ ಕಾರಿನಲ್ಲಿಯೇ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಪಘಾತ ಪಡಿಸಿದ ಕಾರಿನ ನೊಂದಣಿ ಸಂಖ್ಯೆ ನೋಡಲಾಗಿ KA-19-MH-6885 ಆಗಿದ್ದು, ಕಾರಿನ ಚಾಲಕನ ಹೆಸರು ಆಬ್ದುಲ್ ಖಾಸಿಂ ಎಂದು ತಿಳಿದುಬಂದಿರುತ್ತದೆ, ಎಂಬಿತ್ಯಾದಿ.

Kankanady Town PS                

ದಿನಾಂಕ 27-09-2023 ರಂದು ಪಿರ್ಯಾದಿದಾರರ ಈಮೇಲ್ ವಿಳಾಸವಾದ ನೇದಕ್ಕೆ info@indeedrecruits.com  ನಿಂದ ಕತ್ತಾರ್ ದೇಶದಲ್ಲಿರುವ QAPCO Qatar Petrochemical Company ಯಲ್ಲಿ  manufacturing Engineer (chemical) ನಲ್ಲಿ ಉದ್ಯೋಗದ ಬಗ್ಗೆ ಇಂಟರ್ ವ್ಯೂ ನಡೆಯುತ್ತಿರುವ  ಬಗ್ಗೆ ಈ ಮೇಲ್ ಬಂದಿದ್ದು,  ಅದರಂತೆ ಪಿರ್ಯಾದಿದಾರರು ಸದ್ರಿ ಕೆಲಸಕ್ಕೆ ಅಪ್ಲೈ ಮಾಡಲು ನಿರ್ಧರಿಸಿರುತ್ತಾರೆ. ದಿನಾಂಕ 28-09-2023 ರಂದು  +91 7453037396  ನಂಬ್ರದಿಂದ ಕರೆ ಮಾಡಿದ ಆರೋಪಿತರಾದ ರೋಹನ್ ಶರ್ಮ ಮತ್ತು ಆಲಿ ರವರು ತಿಳಿಸಿದಂತೆ, ಪಿರ್ಯಾದಿದಾರರು ಉದ್ಯೋಗದ ಬಗ್ಗೆ  ಅವರ ಅಂಕಪಟ್ಟಿ, ರೆಸ್ಯೂಮ್, ಸ್ಯಾಲರಿ ಸ್ಲಿಪ್, ಪಾಸ್ ಪೋರ್ಟ್ ಪ್ರತಿ, ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ನ್ನು ಈ ಮೇಲ್ ಮೂಲಕ ಕಳುಹಿಸಿಕೊಟ್ಟದ್ದಲ್ಲದೇ, ಆರೋಪಿತರ IDBI BANK A/C NO 0279104000166973, IFSC CODE IBKL000279  ನೇದಕ್ಕೆ, ಪಿರ್ಯಾದಿದಾರರ ಖಾತೆ ನೇದರಿಂದ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು 2,50,325/-ರೂ ಹಣವನ್ನು ವರ್ಗಾಯಿಸಿಕೊಂಡು, ಉದ್ಯೋಗ ಕೊಡದೆ, ಹಣವನ್ನು ಹಿಂತಿರುಗಿಸದೇ ಪಿರ್ಯಾದಿದಾರರಿಗೆ  ವಂಚನೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

Moodabidre PS

ದಿನಾಂಕ 09-10.2023 ರಂದು ಪಿರ್ಯಾದಿದಾರರಾದ ಇಮ್ರಾನ್ ರವರು ತನ್ನ ಬಾಬ್ತು KA-19-AD-7750 ನಂಬ್ರದ ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿ ಅಲಿಮಮ್ಮ, ಪ್ರಾಯ: 76 ವರ್ಷ,   ಭಿಪಾತುಮ್ಮ ಪ್ರಾಯ: 60 ವರ್ಷ, ಆಯಿಷಾ ಪ್ರಾಯ: 55 ವರ್ಷ ಎಂಬವರನ್ನು ಕುಳ್ಳಿರಿಸಿಕೊಂಡು ಸುರತ್ಕಲ್ ನ ಕಾಟಿಪಳ್ಳದಿಂದ ಮೂಡಬಿದ್ರೆಯ ತೋಡಾರು ಎಂಬಲ್ಲಿಗೆ ಹೊರಟು ಬರುತ್ತಾ ಮಧ್ಯಾಹ್ನ 1:30 ಗಂಟೆ ಸಮಯಕ್ಕೆ ಮೂಡಬಿದ್ರೆಯ ಪುತ್ತಿಗೆ ಎಂಬಲ್ಲಿಗೆ ತಲುಪುತಿದ್ದಂತೆ ಮೂಡಬಿದ್ರೆ ಕಡೆಯಿಂದ ಪುತ್ತಿಗೆ ಕಡೆಗೆ KA-19-AD-7234 ನಂಬ್ರದ ಬಸ್ಸನ್ನು ಅದರ ಚಾಲಕ ಸಂದೇಶ್ ಎಂಬಾತನು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಪಿರ್ಯಾಧಿದಾರು ಚಲಾಯಿಸುತಿದ್ದ ಆಟೋರಿಕ್ಷಾದ ಬಲ ಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಧಿದಾರರಾದ ಇಮ್ರಾನ್ ರವರ ಹಣೆಗೆ, ಎಡ ಕೈ ಹೆಬ್ಬೆರಳಿಗೆ, ಎಡ ಭುಜಕ್ಕೆ ಗುದ್ದಿದ ಗಾಯ, ಭಿಫಾತುಮ್ಮರವರಿಗೆ ಎಡ ಕೈಗೆ ಗುದ್ದಿದ ಗಂಭೀರ ರೀತಿಯ ಗಾಯ, ಆಯಿಷಾರವರಿಗೆ ಸೊಂಟಕ್ಕೆ ಭುಜಕ್ಕೆ ಗುದ್ದಿದ ಗಾಯ ವಾಗಿದ್ದು, ಅಲಿಮಮ್ಮರವರ ತಲೆಗೆ ಗಂಭೀರ ರೀತಿಯ ಗುದ್ದಿದ ಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-10-2023 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080